ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬಾಲಕೃಷ್ಣ ವರ್ಣನೆ) ಕಂಸಾರಿ ಕೃಷ್ಣಾ ಕಾಡದಿರೆನ್ನನು ಪ ಹಳ್ಳದ ತಡಿಯಲ್ಲಿ ಮಳಲು ತೋಡಿ ತೋಡಿ ಗೊಲ್ಲಿತೆರೊಡÀನಾಡಿ ಕಲಿತ್ಯೋ ಬೆಡಗಾ ಅಹಿನೇರಿ ಹುಡುಗಾ ಮಾಡಿದಿ ತುಡುಗಾ 1 ನೀರಿಗ್ಹೋಗುವಾಗ ದಾರಿಗಡ್ಡಕಟ್ಟಿ ನಾರಿ ನೀನಾರೆಂದ್ವಿಚಾರಿಸುವೀ ದೂರದಲ್ಲಿರುವಿ ಬದಿಯಲ್ಲಿ ಬರುವಿ ಬೇರೆ ಕರೆವೆ ಈ ಬುದ್ಧಿ ತರವೆ 2 ವರ ಕದರುಂಡಲಗಿ ಹನುಮಯ್ಯನೊಡೆಯನೆ ನಿನಗೆಣೆಯಿಲ್ಲವೊ ವನಜನಾಭಾ ವನಿತೆಯರೆಲ್ಲಾ ಒಲಿಸಿದೆಯಲ್ಲಾ ಮನುಜನಲ್ಲಾ ಮಾಯದ ಗೊಲ್ಲಾ 3
--------------
ಕದರುಂಡಲಗಿ ಹನುಮಯ್ಯ
ಗುರುರಾಯ ಕರುಣಿಸೊ ಶರಣಾಗತರಂ ಪ ಪರಮಪುರಷನ ದರ್ಶನವೀಯುತೆ ಅ.ಪ ನಾನು ಎಂಬೊ ದುರಭಿಮಾನವ ಖಂಡಿಸು ನೀನೇ ಸರ್ವತ್ರಯೆಂಬ ತತ್ವ ಬೋಧಿಸು 1 ಆರು ಮಂದಿಯ ಹುಡುಗಾಟವು ಹೋಗಲಿಯಿ- ನ್ನಾರುಮಂದಿಯೊಳು ಸ್ನೇಹವು ಬೆಳಿಯಲಿ 2 ಗುರುರಾಮ ವಿಠ್ಠಲನೆ ಸರ್ವೋತ್ತಮನೆಂದು ಇರುಳೂ ಹಗಲು ನೆನೆವ ಭಾಗ್ಯಕೊಡಿಸಿ 3
--------------
ಗುರುರಾಮವಿಠಲ
ಗೋಪಿ ನೋಡಮ್ಮಾ ಗೋಪೆಮ್ಮಾ ಪ. ಗಡಿಗೆಯ ಒಡೆದಾನು ಕೊಡಹಾಲು ಕುಡಿದಾನು ಹುಡುಗರ ಬಡಿದು ಓಡಿ ಪೋದಾನು ನಿಮ್ಮ ಹುಡುಗಾ ಸಿಕ್ಕಿದ ಮೇಲೆ ಭಿಡಿಯಾವಿಲ್ಲದೆ ಗಿಡದಾ ನೆರಳಿಗೆ ಕಟ್ಟುವೆನು ಬೆನ್ನಟ್ಟುವೆನು 1 ನೆಲವಿನಲ್ಲಿದ್ದ ಪಾಲುಮೊಸರು ಬೆಣ್ಣೆ ಕದ್ದಾನು ಬಾಲಕರೊದ್ದನು ಮುದ್ದು ಹೆಣ್ಣು ಬಾಲೆಯರಿಗೆ ಕಣ್ಣುಸನ್ನೆ ಮಾಡಲಿ ಬಂದಾನು ಭಂಡು ಮಾಡಿದಾನು ದುಂಡ ಕುಚವ ಕರದಿ ಪಿಡಿದಾ ಓಡಿ ಪೋದಾ 2 ಹೆಡೆಯ ಸರ್ಪಾವ ಕರದೊಳು ಹಿಡಿದು ಸಂಜೀಯ ಹೊತ್ತಿಲಿ ತಂದಾನು ನಮ್ಮನ್ನಂಜಿಸಲು ಬಂದಾನು ನಾಗಕನ್ನಿಕೆಯರಿಂದ ಸ್ತೋತ್ರ ಮಾಡಿಸಿಕೊಂಡಾನು ಕಾಲಿಮರ್ಧನಕೃಷ್ಣಾನು 3
--------------
ಕಳಸದ ಸುಂದರಮ್ಮ