ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿಕಾ ಗೀತೆ ಬಾಲ ಲೀಲೆಯ ಜಗಕೆ ತೋರುತ 1 ಗಾಡಿಗಾರನು ಅವಳ ಹೆಗಲನೇರಿಸಿ 2 ದೀನನಾಥನು ಅದೃಶ್ಯನಾದನು 3 ಅಗರು ಕಸ್ತೂರೀ ಪೂಸಿ ಹೃದಯಕೇ ಮೊಗರು ಕುಚಗಳ ಮುಖದ ಕಮಲವು 4 ಎತ್ತ ಪೋದನೋ ರಂಗ ಎನುತಲಿ ಚಿತ್ತ ಭ್ರಮೆಯಲಿ ಹುಡುಕುತ್ತಿದ್ದರು 5 ಎಲ್ಲಿ ಪೋದನೋ ಕೃಷ್ಣ ಎನುತಲಿ ಮತ್ತೆ ಸಖಿಯರು ಹುಡುಕುತ್ತಿದ್ದರು 6 ಸುತ್ತ ಗೋಕುಲಾದೊಳಗೆ ಸ್ತ್ರೀಯರೂ ಪಾದ ಕಾಣದೇ 7 ಗಿಳಿಯು ಕೋಗಿಲೇ ಹಂಸ ಭೃಂಗನೇ ನಳಿನನಾಭನ ಸುಳಿವು ಕಂಡಿರಾ8 ಕಂದ ಮೂಲವೇ ಜಾಜಿ ವೃಕ್ಷವೇ ಇಂದಿರೇಶನ ಸುಳಿವು ಕಂಡಿರಾ 9 ಇಂದಿರೇಶನು ನಮ್ಮನು ವಂಚಿಸೀ ಮಂದಭಾಗ್ಯರ ಮಾಡಿ ಪೋರನು10 ಶ್ರುತಿಗೆ ಸಿಲುಕದ ದೋಷದೂರನೇ ವ್ರತವ ಕೆಡಿಸಿರೆ ಎಲ್ಲಿಗ್ಹೋಗೋಣ11 ರಂಗರಾಯನು ಬಂದು ಸೇರಿದ 12 ಬಹಳ ಪರಿಯಲಿ ಸ್ತೋತ್ರಮಾಡಲು ಕೃಷ್ಣರಾಯನು ಬಂದು ಸೇರಿದ13 ಮದನನಯ್ಯನಾ ಮುದದಿ ನೆನೆದರೆ ನದಿಯ ತೀರದಿ ವಿಜಯವಿಠ್ಠಲ14 ನದಿಯ ತೀರದ ತೀರ್ಥಪಾದರುಸಲಿಹ ಭಕುತರ ಪಾಲಿಸೂವನು 15
--------------
ವಿಜಯದಾಸ
ಎಲ್ಲಿ ಮಾಯಾವಾದನೆ ರಂಗಯ್ಯನುಎಲ್ಲಿ ಮಾಯಾವಾದನೆಪ ಎಲ್ಲಿ ಮಾಯಾವಾದ ಫುಲ್ಲನಾಭಕೃಷ್ಣಚೆಲ್ಲೆ ಗಂಗಳೆಯರು ಹುಡುಕ ಹೋಗುವ ಬನ್ನಿ ಅ.ಪ. ಮಂದ ಗಮನೆಯರೆಲ್ಲ ಕೃಷ್ಣನ ಕೂಡೆಚೆಂದದಿ ಇದ್ದೆವಲ್ಲಕಂದರ್ಪ ಬಾಧೆಗೆ ಗುರಿಯ ಮಾಡಿದನಲ್ಲಮಂದಮತಿ ನಮಗೆ ಬಂದು ಒದಗಿತಲ್ಲ 1 ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆಸರಸವಾಡುತಲಿದ್ದೆವೆಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿಚರಣ ಸೇವಕರಾದ ತರಳೆಯರನು ಬಿಟ್ಟು 2 ಭಕ್ತವತ್ಸಲ ದೇವನು ತನ್ನವರನ್ನುಅಕ್ಕರದಲಿ ಪೊರೆವನುಸಿಕ್ಕದೆ ಹೋಗನು ಹುಡುಕುತ್ತ ಹೋಗುವಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು 3
--------------
ವ್ಯಾಸರಾಯರು
ಜಯದೇವಿ ಜಯದೇವಿ ಜಯ ಬಗಳಾಮುಖಿಯೇಜಯವೆಂದು ಬೆಳಗುವೆನು ಜಯಭಕ್ತ ಸಖಿಯೇ ಪ ನಿತ್ಯ ಪೀತೋಪಚರಣೆಪೀತಕುಂಡಲ ಹಾರಪೀತ ವರ್ಗಾವರಣೆಪೀತಮೂರ್ತಿಯ ನೆನೆವೆ ಪೀತ ಪ್ರಿಯೆ ಸ್ಮರಣೆ 1 ಬತ್ತೀಸಾಯುಧ ಪಿಡಿದೆ ಭಯಂಕರಿ ಉಗ್ರೇಶತ್ರುನಾಶಕಿ ನೀನು ಭಕುತ ಸಾಹಸ್ರೇಮತ್ತೆ ಹುಡುಕುತ್ತಿರುವೆ ದುಷ್ಟರನು ಶೀಘ್ರೆನಿತ್ಯ ನಾ ಭಜಿಸುತಿಹೆ ಮನವ ಏಕಾಗ್ರೇ 2 ಬ್ರಹ್ಮ ಚಿದಾನಂದ ಬಗಳಾಮುಖಿ ರಾಣಿಹಮ್ಮಳಿದ ಮಹಿಮರಾ ಮೆಚ್ಚಿನ ಕಟ್ಟಾಣಿಬ್ರಹ್ಮರಂಧ್ರದೊಳು ವಾಸಿಸುತಿಹ ದಿನಮಣಿಬಿಮ್ಮನೆ ನಮಗೊಲಿಯೆ ಶೀಘ್ರದಿಂ ಕೃಪಾಣಿ 3
--------------
ಚಿದಾನಂದ ಅವಧೂತರು
ಮತ್ಸ್ಯಾದಿ ದಶಾವತಾರಗಳು ಮತ್ಸ್ಯಾದ್ಯವತಾರವನು ತಾಳ್ದು ನೀ ಪರದೇವ ಮನ್ವಂತರ ಪ್ರಳಯಜಲಧಿಯನು ಪೊಕ್ಕು ಸೂರ್ಯಪುತ್ರನ ಮನುವ ದೋಣಿಯಲ್ಲಿರಿಸಿ ನೀನ್ ನೀರಾಟವಾಡಿದೆಯ ಲೀಲೆಯಿಂದಲಿ ನೀಂ 33 ಮಂದರ ಪೊಕ್ಕೆ ಕೂರ್ಮರೂಪವ ತಾಳ್ದು ಕಡಲಿನಡಿ ಸೇರಿ ದೇವತೆಗಳಿಗೆಯಮೃತ ಕಲಶವನು ತೆತ್ತು ನೀನ್ ದೈತ್ಯರನು ವಂಚಿಸಿದೆ ಮೋಹಿನಿಯದಾಗಿ34 ಸೂಕರದ ರೂಪವನು ತಾಳ್ದು ನೀನ್ ಸಿರಿವರನೆ ಚಿನ್ನ ಕಣ್ಣಿನ ದೈತ್ಯಸೇವಕನ ಕೊಂದು ದೈತ್ಯನಾತ್ಮಜ್ಯೋತಿಯನು ತನ್ನಲಿಯಿರಿಸಿ ವಾರಾಹ ರೂಪದಿಂದಲಿ ಆಟವಾಡ್ದೆ35 ಶಿಲ್ಪಿಯಿಂ ರೂಪುಗೊಂಡಿಹ ಕಂಬದಲಿಯಿದ್ದು ವಿಷ್ಣುವೇ ಪ್ರಹ್ಲಾದ ಮಗುವನುದ್ಧರಿಸೆ ನಂಬಿದೆಡೆಯೆಲ್ಲೆಲ್ಲು ಇರುವೆನೆಂಬುದ ತಿಳಿಸೆ ನರಸಿಂಹ ರೂಪವನು ತಾಳ್ದೆ ಪರಮಾತ್ಮ 36 ಇಂದ್ರಾವರಜನೊಮ್ಮೆ ವಟುವಾಮನನು ಬಂದು ಬಲಿಯ ಯಾಗದ ಸಮಯ ಮೂಹೆಜ್ಜೆ ಬೇಡೆ ರಾಜ ಕೊಡಬಯಸಲದ ಗುರು ಶುಕ್ರತಡೆದಾಗ ದಾನಿ ಬಲಿ ಕೊಟ್ಟವನು ಸಿದ್ಧಿಯನು ಪಡೆದಾ 37 ಸಂಹಾರ ಲೀಲೆಯನು ತೋರಲವ ಪರಮಾತ್ಮ ಪಿತೃವಾಕ್ಯಪಾಲನೆಗೆ ತಾಯ ತಲೆ ಕಡಿದು ಮಾತೆಯನು ಬದುಕಿಸುತ ದುಷ್ಟರಾಜರ ತರಿದು ರಾಜವಂಶವನು ನಿರ್ವಂಶ ಮಾಡಿದನು 38 ಎದೆಯೊಳಿಹ ಸೀತೆಯನು ಕಾಡೆಲ್ಲ ಹುಡುಕುತ್ತ ಜಲಧಿಗೇ ಕಟ್ಟಿ ಸೇತುವೆಯ ಸಿರಿವರನು ಕಪಿ ಸೈನ್ಯದೊಡಗೂಡಿ ಲಂಕೆಯನ್ನೈದುತ್ತ ರಾವಣನ ಕೊಂದು ಸೀತೆಯ ಮರಳಿ ತಂದೆ 39 ಇಬ್ಬರನು ತಾಯಂದಿರನು ರಮಿಸಿ ಮಗುವಾಗಿ ಪದಿನಾರು ಸಾಸಿರದ ಸತಿಯರನು ಒಲಿಸಿ ಏಕಕಾಲದಲಿ ಎಲ್ಲರನು ಮೆಚ್ಚಿಸಿದ ಹರಿ ಆನಂದರೂಪದವ ಪರಮಾತ್ಮ ನಿಜವು 40 ತಾಮಸದ ಜೀವರನಧೋಗತಿಗೆಯಿಳಿಸುತಲಿ ಬುದ್ಧ ರೂಪದಲಿ ತ್ರಿವಿಧ ಜೀವಂಗಳಿಗೆ ಯೋಗ್ಯತೆಗೆ ತಕ್ಕಂತೆ ಗತಿಯಾಗಿಸುವದೆ ನಿನ್ನ ಸಂಕಲ್ಪವದಲಾ 41 ಧರ್ಮವದು ನಶಿಸುತಲಿ ದುಷ್ಟರಾಜರು ತುಂಬೆ ಕಲಿಯುಗದ ಕೊನೆಯಲ್ಲಿ ಕಲ್ಕಿ ರೂಪದಲಿ ಅಶ್ವವನ್ನೇರುತಲಿ ದುಷ್ಟರನು ಸಂಹರಿಸಿ ಕೃತಯುಗವ ಮಾಡಿದೆಯ ಪರಮಾತ್ಮ ನೀನು 42 ಕಾಣದಾ ದೇವರಿಗೆ ಭಕ್ತಿಯಿಂ ಪೂಜಿಸಲು ಹತ್ತು ರೂಪಗಳಿವುಗಳೇ ಮುಖ್ಯವದರಿಂ ಅವತಾರ ರೂಪಗಳ ಪ್ರತಿಮೆಗಳ ಪೂಜಿಸುತ ಸರ್ವಾರ್ಥಸಿದ್ಧಿಗಳ ಪಡೆಯುವರು ಜನರು 43 ವೇದೋಕ್ತ ಪದಗಳಿಗೆ ಮುಖ್ಯಾರ್ಥ ಹರಿಯಿಹನು ಅಗ್ನ್ಯಾದಿ ನಾಮಗಳು ದೇವರಿಗೆಯಿಹವು ದೇವತೆಗಳಿಗೆಲ್ಲ ಅಗ್ರಣಿಯು ತಾನಾಗಿ ಅಗ್ನಿನಾಮವು ನಿನಗೆ ಒಪ್ಪುವುದು ಹರಿಯೆ 44 ಇಂದ್ರಿಯಂಗಳೆ ಕುದುರೆ ಬುದ್ಧಿಯೇ ಸಾರಥಿಯು ಮನವೆಂಬ ಕಡಿವಾಣ ಹಿಡಿದೋಡಿಸುವವನು ಜೀವನೇ ರಥಿಕನವ ವಿಷಯಬೇಟೆಗಳಲ್ಲಿ ಪರಮಾತ್ಮನರಿವೆಂತು ಮೂಡುವುದು ಅವಗೆ 45 ವಾಸದಿಂ ಬೆಳಗಿಸುವ ವಾಸುದೇವನು ತಾನು ವರುಣನಂತರ್ಗತನು ಶಿರದಲ್ಲಿಯಿಹನು ಸಪ್ತರಂಧ್ರಗಳಲ್ಲಿ ವಿದ್ಯುತ್ತ ಹರಿಸುತಲಿ ಜ್ಞಾನವನ್ನೊದಗಿಪನು ಶ್ರೀಕೃಷ್ಣನವನು 46 ವಿಜ್ಞಾನಿ ಭಗವಂತ ಹೃದಯ ಗುಹೆಯಲ್ಲಿಹನು ಅನಿರುದ್ಧ ಯಜ್ಞೇಶ ಮೊದಲಾದ ಪೆಸರಿಂ ಪ್ರಾಣವಾಯುಗಳ ಜೊತೆ ಪಾಕವನು ಗೈಯುತ್ತ ರಕ್ತರೂಪವ ಮಾಡಿ ಪಾಲಿಸುವ ನಮ್ಮ47 ಪ್ರಾಕೃತ ಜ್ಯೋತಿಯಾದೊಡೆ ದೇಹ ಸುಡದಿರದು ಅಪ್ರಾಕೃತ ಜ್ಯೋತಿ ಯಜ್ಞೇಶಗಿಹುದು ಭಕ್ಷ್ಯಭೋಜ್ಯಗಳೆಂಬ ಲೇಹ್ಯಪೇಯಗಳೆಂಬ ನಾಲ್ಕುವಿಧ ವಸ್ತುವಿನ ಪಾಕ ಮಾಡುವನು 48 ವಾಯುವಂತರ್ಗತನು ನೀಲರೂಪದ ದೇವ ಪ್ರದ್ಯುಮ್ನನಾಮಕನು ನಾಭಿಯಲ್ಲಿಹನು ಕಾಮರೂಪಿಯು ಅವನಪಾನಕ್ಕೆ ಒಡೆಯನವ ಪುರುಷರಿಂದಲಿ ಸೃಷ್ಟಿಗವನೆ ಕಾರಣನು 49 ಪೃಥ್ವಿವಿಯಪ್ ತೇಜಸ್ಸು ಮೂರು ದೇಹದ ಮೂಲ ಶ್ರೇಷ್ಠ ವಾಯುವು ಸೇರಿ ದೇಹಕ್ಕೆ ಚಲನೆ ಹೃದಯದಲ್ಲಾಗಸವು ಇರುವ ಕಾರಣದಿಂದ ಪಂಚಭೂತಂಗಳಿವು ದೇಹದಲ್ಲಿಹವು 50 ವಾಯುವಿನ ಜೊತೆಗೂಡಿ ದೇಹಚಾಲಕನು ಯಂತ್ರರೂಪದಲ್ಲಿದ್ದು ಯೋಗ್ಯತೆಗೆ ತಕ್ಕಂತೆ ಕಾರ್ಯವನು ಮಾಡಿಸುತ ಫಲವನ್ನು ಕೊಡುವ 51
--------------
ನಿಡಂಬೂರು ರಾಮದಾಸ
ಯತಿಗಳು ಇರುವರ್ಯತಿಗಳ್ಹನ್ನೆರಡು ಮಂದಿ ರಘುವ(ರ) ಅಕ್ಷೋಭ್ಯತೀರ್ಥರ ನಡುವೆ ಕುಳಿತಿದ್ದಂಥ ಟೀಕೆ ಬರೆದ ಜಯ ಮಹರಾಯರಿವರು ಪಾಲಿಸೆನ್ನನು ಜಯರಾಯ ಪ ಎತ್ತಿನ ಜನ್ಮದಿ ಬಂದು ಶ್ರೀಮದಾನಂದತೀರ್ಥರಲ್ಲಿದ್ದು ಶಿಷ್ಯತ್ವ ವಹಿಸಿಕೊಂಡು ಬಿಟ್ಟು ಹರಿದಿನ ಮೇವು ನೀರನೆ ಪುಸ್ತಕದ ಗಂಟ್ಹೊತ್ತು ತಿರುಗುತ ತತ್ವಜ್ಞಾನವ ತಿಳಿದು ದ್ವಾದಶ ಸ್ತೋತ್ರ ಹೇ ಳುತ ಪ್ರಕಟವಾದರು 1 ಗೋವುಸುತನ ಜನ್ಮ ನೀಗಿ ಮಂಗಳವೇಡಿ ಸಾಹುಕಾರನ ಸುತನಾಗಿ ತೇಜಿಯನೇರಿ ಮಾ(ಮಹಾ?) ನದಿ ಮಧ್ಯದಲಿ ಮಂಡಿಬಾಗಿ ನೀರನು ಕುಡಿಯ- ಲಾಕ್ಷಣ ನೋಡಿ ಕರೆತರಲವರ ಗುರುಗಳ ಪಾದಕÀ್ವಂದನೆ ಮಾಡಿ ನಿಂತರು 2 ಅಕ್ಷೋಭ್ಯತೀರ್ಥರು ಆ ಮಹಿಮರ ನೋಡಿ ಕೊಟ್ಟು ಕಾಯ್ಕರದಲಿ ಜುಟ್ಟು ಜನಿವಾರವನು ಕಿತ್ತೆ ಕಾವಿಶಾಟಿಗಳನು ಉಟ್ಟು ದಂಡ ಕಾಷ್ಠವ್ಹಿಡಿದು ಶ್ರೇಷ್ಠಯತಿ ಆಶ್ರಮದಿ ಕುಳಿತಿರೆ ಹೆತ್ತವರು ಹುಡುಕುತ್ತ ಬಂದರು 3 ಕಂಡಕಂಡಂತೆ ಮಾತುಗಳಾಡಿ ಗುರುಗಳಿಗೆ ಧೋಂಡು ರಘುನಾಥನ ಕರಕೊಂಡು ಹಿಂದಕೆ ಹೋಗಿ ಹೆಂಡತಿ ಸಹಿತೆರೆದು ಪ್ರಸ್ತ ಮಂಡಿಗಿ ಮೃಷ್ಟಾನ್ನ ಉಣಿಸಿ ಚೆಂದದ್ವಸ್ತ್ರಾಭರಣ ಕೊಟ್ಟುರುಟಣೆಯ ಮಾಡಿಸ್ಯಾರತಿಯ ಬೆಳಗೋರು 4 ಸುಪ್ಪತ್ತಿಗೆಯು ಮಂಚ ಕುತ್ತಣಿ ಹಾಸಿಕೆಯಲ್ಲಿ ಇಟ್ಟು ತಾಂಬೂಲ ಬು- ಕ್ಕಿ ್ಹಟ್ಟು ಪರಿಮಳ ಗಂಧ ಸಕ್ಕರೆ ಕ್ಷೀರಗಳು ಲಡ್ಡಿಗೆ ಅಚ್ಚಮಲ್ಲಿಗೆ ಮಾಲೆ ಫಲಗಳು ರತ್ನ ಜ್ಯೋತಿ ಪ್ರಕಾಶದೊಳಗುತ್ತಮರು ಕುಳಿತಿರಲರ್ಥಿಯಿಂದಲಿ 5 ಮಡದಿ ಮಂಚಕೆ ಬಂದ ಸಡಗರವನು ನೋಡಿ ಹೆಡೆಯ ತೆಗೆದು ಕಣ್ಣು ಬಿಡುತ ವಿಷನಾಲಿಗೆಯ ಚಾಚುತಾರ್ಭಟಿಸಿ ಬರುತಿರಲ- ಸಾಧ್ಯಸರ್ಪವು ಕಡಿವುದೆನುತೆದೆ ಒಡೆದು ಕೂಗಲು ಹಡೆದವರು ಬಾಯ್ಬಿಡುತ ಬಂದರು 6 ಹಾವಾಗ್ಹರಿದು ಹುತ್ತವ ಸೇರಿಕೊಂಬುವೋದೀಗ ನಾವು ಮಾಡಿದಪರಾಧ ಕ್ಷಮಿಸಬೇಕೆನುತಲಿ ಬೇಡಿಕೊಂಡಾಕ್ಷಣದಿ ಮಗನ ನೋಡಿ ಕರೆತಂದಾಗ ಅಕ್ಷೋಭ್ಯರಾಯರಂಘ್ರಿಚರಣಕೊಪ್ಪಿಸಿ ನಾವು ಧನ್ಯರಾದೆವೆಂದರು 7 ಅತಿ ಬ್ಯಾಗದಿಂದವರಿಗ್ಯತಿ ಆಶ್ರಮವಕೊಟ್ಟು ದೇ- ವತಾ ಪೂಜೆಗಧಿಕಾರ ಮಾಡಲು ಗುರುಗಳು ಪಾಂಡಿತ್ಯದಿ (ಇ)ವರಿಗೆ ಪ್ರತಿಯು ಇಲ್ಲ- ವೆಂದೆನಿಸಿ ಮೆರೆವರು ಪತಿತರನೆ ಪಾವನವ ಮಾಡಿ ಸದ್ಗತಿಯ ಕೊಡುವ ಸಜ್ಜನ ಶಿರೋಮಣಿ 8 ಮಧ್ವರಾಯರು ಮಾಡಿದಂಥ ಗ್ರಂಥಗಳಿಗೆ ತಿದ್ದಿ ಟೀಕೆ ಟಿಪ್ಪಣಿ ಮಾಡಿ ಪದ್ಮನಾಭ ಭೀಮೇಶಕೃಷ್ಣಗೆ ಪರಮ ಭಕ್ತರೆನಿಸಿ ಮೆರೆವರು ವಿದ್ಯಾರಣ್ಯನ ಗರುವ ಮುರಿದು ಪ್ರಸಿದ್ಧರೆನಿಸೋರು ಸರುವ ಲೋಕದಿ 9
--------------
ಹರಪನಹಳ್ಳಿಭೀಮವ್ವ