ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ತಿಳಿವುತದೆ ನಿಮ್ಮಾಟದ ಸುಧ್ಯೇಯ ಧ್ರುವ ನಾಲ್ಕಾರು ಹದಿನೆಂಟು ಮಂದಿಯ ಕೇಳಿದೆ ಸಿಲುಕನೆಂದವರಾಡುದೆ ಮಲಕು ಎಂಬತ್ತು ನಾಲ್ಕು ಲಕ್ಷ ನೂ ಸೋಸಿದೆ ನಿಲುಕಿ ನಿನ್ನ ನೆಲೆ ನಿಜವು ದೋರದೆ 1 ನಾನಾ ಮತ ನಾನಾ ಮಾರ್ಗ ಶೋಧಿಸಿದೆ ಖೂನ ನಿನ್ನದು ತಿಳಿಯದೆ ನಾನು ನಾನೆಂಬವರಿಗೆ ಅನುಸರಿಸಿದೆ ನೀ ನಿಹ ಸ್ಥಳದ ಗಾಳಿಯು ಬೀಸದೆ 2 ಬೀಳದವರ ಕಾಲುಬಿದ್ದು ನಾ ಕೇಳಿದೆ ಸುಳಹು ನಿನ್ನದು ತೋರದೆ ತಲೆ ಕೆಳಗನೆ ಮಾಡಿ ತಪಸವ ಮಾಡಿದೆ ಒಲವು ನಿಮ್ಮದು ಎಂದಿಗೆ ಅಗದೆ 3 ಬಡದ ಬವಣೆ ಬಟ್ಟು ಹುಡುಕದಾ ಹುಡುಕಿದೆ ತುಡಕು ನಿಮ್ಮದು ತಿಳಿಯದೆ ಒಡನೆ ಎನ್ನೊಳು ಬಂದು ಅಡಕವ ಹರಿಸಿದೆ ಬಡವನಾಧಾರೆಂದು ಕೈ ಬಿಡದೆ 4 ಮನೋನ್ಮನವಾಗಿ ಕಂಗಳ ತೆರೆಸಿದೆ ಸ್ವಾನುಭವನೇ ಬೀರಿದೆ ದೀನಮಹಿಪತಿ ಮನೋಹರಣ ಮಾಡಿದೆ ಅನುದಿನ ಘನಸುಖದೊಳಗಿರಿಸಿದೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ದಯಮಾಡಲು ನಾನುದ್ಧಾರಾಗುವೆನು ಏನೇನು ಪರಲೋಕ ನಾನರಿಯೆ ಶ್ರೀಹರಿಯೆ ಪ ಹೀನಸಂಸಾರದೊಳಗೆ ಮುಳುಗಿ ಶ್ವಾನನಂದದಿ ಕರಗಿ ಕೊರಗಿ ಜ್ಞಾನಶೂನ್ಯನಾಗಿ ಬಳಲುವೆ ಜ್ಞಾನಮೂರುತಿ ಅಭಯ ಪಾಲಿಸು ಅ.ಪ ಉದಯದಲ್ಲೇಳುತ ಸದಮಲ ತವಪಾದ ಮುದದಿಂದ ನೆನೆಯದೆ ಅಧಮತನದಿ ವಿಧವಿಧದಿ ಅಧಮಜನರ ಸುದ್ದಿ ವದನದಿಂದಾಡುತ ಮುದಿಕೋಣನಂದದಿ ಮದಮುಚ್ಚಿ ನಡೆದೆ ಎಡಬಿಡದೆ ಕುದಿದೆನನುದಿನ ಪರರ ಮನೆ ಸಂ ಪದವ ನೋಡಿ ಸಹಿಸದವರ ಸದನ ಮುರಿಯುವ ಬುದ್ಧಿ ಹುಡುಕಿದೆ ಪದುಮನಾಭಪರಾಧ ಕ್ಷಮಿಸಿ1 ಒಂದು ನಾನರಿಯದೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿ ನಕ್ಕೆ ದ್ವಂದ್ವಕರ ಬಡಿದು ಬಲು ಜರಿದು ಹಂದ್ಯಮೇದ್ಯಕಂಡಾನಂದಿಪತೆರದನ್ಯ ಸುಂದರಿಯರ ನಯನದಿಂದ ನೋಡಿದೆ ಎವೆಯಿಕ್ಕದೆ ಇಂದಿರೇಶನೆ ನಿಮ್ಮ ಪಾದವ ಒಂದೆ ಮನದಿಂ ಭಜಿಸದೆ ಭವ ದಂದುಗದಲಿ ಬಿದ್ದು ನೊಂದವ ಕಂದನೊಳು ಕೃಪಾದೃಷ್ಟಿಯಿತ್ತು 2 ದಾಸಜನರ ಆವಾಸ ನಾ ಬಯಸದೆ ಈಷಣ ಪ್ರಪಂಚದ್ವಾಸನದಲ್ಲಿ ಬಹು ತೊಳಲಿ ಆಸೆಯೆಂಬುವ ಮಹಪಾಶದಬಲೆಯೊಳು ಘಾಸಿಯಾಗುವೆ ಸಿಲ್ಕಿ ಸೋಸಿ ನೋಡದಲೆ ಮರೆ ಮೋಸದಲಿ ದಾಸ ಬುದ್ಧಿಯಿಂದ ಮಾಡಿದ ಬಲು ದೋಷರಾಶಿಗಳೆಲ್ಲ ನಾಶಿಸಿ ಶ್ರೀಶ ಶ್ರೀರಾಮ ನಿಮ್ಮ ಪಾದ ದಾಸನಿಗೆ ನಿಜಧ್ಯಾಸ ನಿಲ್ಲಿಸು 3
--------------
ರಾಮದಾಸರು