ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದ್ದರಿರಬೇಕು ಸಂಸಾರಸುಖದಲ್ಹೀಗೆ ಪದ್ಮಪತ್ರವು ಜಲದೊಳಗಿದ್ಹಾಂಗೆ ಧ್ರುವ ನಡಿನಡಿಯಬೇಕ್ಹೀಂಗೆ ತಡಿಯೊಳರಿಬಿಡದ್ಹಾಂಗೆ ನುಡಿನುಡಿಯಬೇಕು ಹರಿನುಡಿಸಿದ್ಹಾಂಗೆ ಪಡೆದರಿದೇ ಪಡಿಯಬೇಕು ಹರಿ ಒಡಲ ಹುಗುವ್ಹಾಂಗೆ ಅಡಿಗಡಿಗೆ ಹರಿಕೂಡಿ ಬಿಡದಗ್ಹಲದ್ಹಾಂಗೆ 1 ಇಡಗಿ ಇಡಬೇಕ್ಹಿಂಗೆ ಇಡಗರಿಗುಡಿಸಿದ್ಹಾಂಗೆ ತುಡಗಿ ತುಡಬೇಕ್ಹೀಂಗೆ ತುಡಮಾಡಿಸದ್ಹಾಂಗೆ ಉಡಗಿ ಉಡಬೇಕ್ಹೀಂಗೆ ಉಡಿಗರಿಗುಡಿಸಿದ್ಹಾಂಗೆ ಮುಡಗಿ ಮುಡಿಬೇಕ್ಹಾಂಗ್ಹರಿಗೆ ಮುಡಿಸಿದ್ಹಾಂಗೆ 2 ಉಂಡರುಣಬೇಕ್ಹೀಂಗೆ ಉಂಡದರಿಗುಣಸಿದ್ಹಾಂಗೆ ಕೊಂಡುದಕೋ ಹರಿಗೆ ಕೊಡಿಸಿದ್ಹಾಂಗೆ ಮಂಡಣಿಯ ಮಾಡ್ಹೀಂಗೆ ಹರಿಗೆ ಮಂಡಿಸಿದ್ಹಾಂಗೆ ಕೊಂಡು ಕೊಂಬುದು ಹರಿಕಂಡು ಒಲುವ್ಹಾಂಗೆ 3 ಮಲಗಿ ಏಳುವದ್ಹೀಂಗೆ ಮಲಗರಿಗೇಳಿಸಿದ್ಹಾಂಗೆ ತಿಳವು ತಿಳವದು ಹರಿ ತಿಳಿಸಿದ್ಹಾಂಗೆ ಸುಳವು ಸುಳವರು ಹರಿಸುಳಸ್ಯಾಡಿದ್ಹಾಂಗೆ ಒಲವು ಮಾಡುವದ್ಹೀಂಗೆ ಹರಿಯ ಒಲಿವಾದ್ಹಾಂಗೆ 4 ರತಿಪಿಡಿದು ಹೀಂಗೆ ಹರಿಗತಿಯಾಗುವ್ಹಾಂಗೆ ಅತಿಹರುಷ ಬಡು ಹರಿನೋಡುವ್ಹಾಂಗೆ ಸಥಿಯ ಪಡೆದವುದು ಹೀಂಗರಿಯು ಸಥಿನಡಿಸಿದ್ಹಾಂಗೆಸ್ತುತಿಮಾಡುವ ಮಹಿಪತಿ ಪ್ರತಿಗಾಣದ್ಹಾಂಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧೀಂಧೀಂಧೀಂಧಿಂ ಧೀರು | ಮಜರೆ ಸಂಭ್ರಮದ | ಅಂದು ಶ್ರೀಕೃಷ್ಣ ರುಕ್ಮಿಣಿಯ ಪಾಣಿ | ಗ್ರಹಣ | ದಿಂದ ದ್ವಾರಕೆಯ ಹುಗುವ ಸಮಯದಲಿ ಪ ಚಪಳ ವಾಜಿಗಳು | ಬೆರೆಬೆರೆದು ಕುಣಿವಾಟಾದಿಂದಾ ಇಡಿಯೇ | ತೆರೆಹಿಲ್ಲ | ಸಿಂಧು ಗುರಿ ಪತಾಕೆಗಳ ಹೊಳೆವ | ರೂಪಿಯೇ | ಮೆರೆವ ತಮ್ಮಟ ಭೇರಿನಾದ ಕಹಳೆಗಳಿಂದ | ಹರಿಪದದಿ ಪ್ರತಿ ಶಬ್ದವು ನುಡಿಯೇ 1 ಭಟ್ಟರು ಗಾಯಕವಂದಿ ಬಿರುದು ಕೊಂಡಾಡು ತಲಿಹ | ನಟನೆ ದಿವ್ಯಾಂಗ-ನೆಯರಾ ಮುಂದ | ಘಟನೇ ಪುಟುವೆರಸೀ ಸ್ವಸ್ತಿ ವಚನಾದಿಂದ ನಟನುಗ್ರಶೇನ ತಾಯಿ | ತಂದಿ ದಂಪತಿಗಳ ಕುಟಿಲೀರ್ವ ಸಾಂಬ ಕೃತ ವವರ್ಮನಾ | ರ್ಭಟೆಯ ಬಲರಾಮ ನೋಡನೀ ವೃಂದ 2 ಹೃದಯ ಮಧ್ಯದ ಪದಕದಂತೆ ಬರಿತಿಹ ನಡುವೆ ವಧು ಇದಿರು ಗೊಂಬುವ ಸಂಭ್ರಮದ ಪಟ್ಟಣದಲಾರು ತುದಿ ಮೊದಲ ಬಣ್ಣಿಸುವಾ ಸಿರಿಯಾ | ವದಗಿ ಮುಂದಕ ಹೋಗಿ ಮಂಗಳಾರುತಿಗಳನು ಸುದತಿಯರು ತಂದೆ ತ್ತಲು ತ್ವರಿಯು | ಮುದದಿಂದ ಗೃಹ ಪ್ರವೇಶವ ಮಾಡಿದನು ಸರ್ವಾ | ವಿದಿತ ಮಹಿಪತಿ ನಂದನಾ ಧೂರೆಯು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಫುಗಡಿ ಹಾಕಿ ಹೀಂಗ ಸುಗಮದಿಂದ ಬ್ಯಾಗ ತ್ರಿಗುಣ ತಿಗಡತನ ಬಿಟ್ಟು ಮಿಗಿಲಮಿರುವ್ಹಾಂಗ ಧ್ರುವ ಬಿಗಿದ ಗಚ್ಚಿಕಟ್ಟಿ ಜಗದೊಳ್ಹಾಕಿ ಫುಗಡಿ ಬಗೆದು ಸಾಧುಸಂಗದೊಳಾಡಿದಾಕಿ ಸುಗಡಿ ಇಗಡತನ ಬಿಟ್ಟು ನೀಗಿ ನಿಜಗೂಡಿ ದುಗುಡ ಭಾವೆಲ್ಲ ಬಿಟ್ಟು ಫುಗಡಿ ಫೂಯೆಂದಾಡಿ 1 ದೇಹ ಭಾವಮರೆದು ಫುಗಡಿ ಹಾಕಿ ಬ್ಯಾಗೆ ಗುಹ್ಯಗೂಢವಿದೆ ನೋಡಿ ರಾಜಯೋಗ ಸೋಹ್ಯದೋರಿಗೊಡುವ ಸದ್ಗುರು ನಿನ್ನೊಳೀಗ ಬಾಹ್ಯಾಂತ್ರದೊಳು ಭಾಸುತಿಹ್ಯ ಬ್ರಹ್ಮಭೋಗ 2 ಫುಗಡಿ ಇದೇ ನೋಡಿ ಯೋಗಸಾಧನ ಮಾಡಿ ಹುಗುವರಿಯನೇ ಹೋಕು ಜಗದ್ಗುರುವಿನ ಕೂಡಿ ಜಗದೀಶನ ಮಹಿಮೆ ಬಗೆಬಗೆಯ ಕೊಂಡಾಡಿ ಸುಗಮಸಾಧನವೆಂದು ಮಹಿಪತಿ ಬೆರೆದ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು