ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊ. ವಿಶಿಷ್ಟ ಹಾಡುಗಳು ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಸಂಗಡಿಕ್ಕ ಬೇಡ ನೀವು ಭಂಗಬಡುವಿರಿ ಪ ಮುಂಗಡದ ಬಡ್ಡಿಯನು ಮುಂದೆ ಕಳುಹಿಸಿ ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಅ.ಪ ಕೋಲುಗಾರನೊಬ್ಬನಲ್ಲಿ ಹೊರಟನಂತೆ ಬೇಳುವ ಶಂಖದ ಧ್ವನಿಯ ತೋರ್ಪನಂತೆ ಹೀಲಿಯ ಕುಂಚವು ಕಯ್ಯೊಳಿಪ್ಪುದಂತೆ ಮೇಲೆ ಮೂರು ನಾಮ ಧರಿಸಿ ಬಪ್ಪನಂತೆ 1 ಮೂರುಗಡುಬ ಸುಳ್ಳನಾಡಿ ಮೀರಿ ಹೋಯಿತೀ ಸಾರಿ ಬಂದ ದೂತರಿಂಗೆ ಲಂಚ ನಡೆಯದು ಭಾರಿಯಿಕ್ಕಿ ಕೈಗೆ ಚಿಪ್ಪಳೇರಿಸುವರು ಸಾರಿ ಕಂಡು ಬದುಕುವರೆ ದಾರಿವೊಳ್ಳೆದು 2 ಮೊದಲ ಪತ್ರದ್ಹಣವ ಕೊಟ್ಟು ಬದಲು ಪತ್ರವ ಸದರ ಬಡ್ಡಿಯಿಂದ ಬರೆದು ಚದುರತನದಲಿ ಇದಿರು ಬಿದ್ದು ಕೈಯ ಮುಗಿದುವೊದಗಿನಿಂದಲೆ ಗದರಬೇಡ ಬನ್ನಿ ಚಿನ್ನ ವರದನಲ್ಲಿಗೆ 3 ದುಡ್ಡು ಕೊಟ್ಟು ಮಡ್ಡಿಯನ್ನು ತೆಗೆದು ಉಂಬೆವು ಅಡ್ಡಕೊಂಡು ಅತಿರಸವ ತೆಗೆದುಕೊಂಬೆವು ದೊಡ್ಡ ದೋಸೆ ವ್ಯವಹಾರವ ಮಾಡಿಕೊಂಬೆವು ಕಡ್ಡಾಯದ ಸರಕನೆಲ್ಲ ಕಂಡು ಬಿಡುವೆವು 4 ಗಂಧಿಕಾರನಂಗಡಿ ಗೋವಿಂದನಲ್ಲಿ ಚಂದದ ಔಷಧವನ್ನು ತಿಂಬೆವಲ್ಲಿ ಬಂದ ಭವದ ರೋಗ ಕೊಂದೆವಲ್ಲಿ ಆತ ಮಿಂದ ತೀರ್ಥವನ್ನು ಊರಿಗೆಂದೆವಲ್ಲಿ 5 ಸಾಲವನ್ನು ತಿದ್ದಿ ಮುದದ ಸಾಲವನ್ನು ನಾಲಿಗೆಯ ಪತ್ರದಿಂದ ತಂದೆವಿನ್ನು ನೀಲದ ಮಣಿಯನೊಂದ ಕದ್ದುದನ್ನು ಆಲಿಯೊಳಗಿಟ್ಟುಕೊಂಡು ಬಂದುದನ್ನು 6 ಅಂಗಡಿ ಗೋವಿಂದ ಬಹಳ ಅಂಗವುಳ್ಳವ ಮಂಗಳವ ಮಾರುವಲ್ಲಿ ಶೃಂಗಾರವುಳ್ಳವ ಬಂಗಾರ ವ್ಯಾಪಾರದಲ್ಲಿ ತುಂಗ ವಿಕ್ರಮ ಮುಂಗುಡಿಯ ಜನಕೆ ಅಂತರಂಗ ಕೊಡುವವ 7 ದಾಸರಿಗೆ ಧರ್ಮವನ್ನು ಕೊಡುವನಲ್ಲದೆ ಕಾಸು ಹೊರತು ಮೀಸಲನ್ನ ನೀಡಲರಿಯನು ಶೇಷಗಿರಿಯವಾಸನೆಂದು ಹಾಸಿಕೊಂಬನು ಬೇಸರನ್ನು ಕಂಡು ಸಂತೋಷವೀವನು 8 ಸ್ವಾಮಿಯೆಂಬ ತೀರ್ಥದೊಳಗೆ ಮಿಂದೆವಲ್ಲಿ ಭೂಮಿ ವರಾಹತಿಮ್ಮಪ್ಪನ ಧ್ಯಾನದಿಂದಲಿ ಕಾಮಿತ ವ್ಯಾಪಾರವನ್ನು ತಂದೆವಿಲ್ಲಿ ಆ ಮಹಾ ಚಂದ್ರಾರ್ಕವಾಗಿ ಬಾಳುವಲ್ಲಿ 9
--------------
ವರಹತಿಮ್ಮಪ್ಪ
ಎಂದಿಗಾದರು ಒಮ್ಮೆ ಕೊಡು ಕಂಡ್ಯ ಹರಿಯೆ ಪ ಬೃಂದಾವನಪತಿ ದಯದಿಂದಲೆನಗೆ ಅ ಫಲಭಾರಗಳಿಂದ ತಲೆವಾಗಿ ಶುಕಪಿಕಕಲಕಲದೊಳು ನಿನ್ನ ತುತಿಸಿ ತುಂಬೆಗಳಗಳರವದಿಂ ಪಾಡಿ ಅಪ್ಸರರಂತೆ ಪೂ-ಮಳೆಯಗರೆವ ತರುಲತೆಯ ಜನ್ಮವನು1 ಕೊಳಲ ಶೃತಿಯ ಕೇಳಿ ಸುಖದ ಸಂಭ್ರಮದಲಿಹೊಲಬು ತಪ್ಪಿ ತಾವು ಅರೆಗಣ್ಣು ಮುಚ್ಚಿನಳಿನಾಸನದಿ ಮೌನಗೊಂಡು ಪರಮ ಹಂಸಕುಲದಂತೆ ಧ್ಯಾನಿಪ ಹಂಸ ಜನ್ಮವನು 2 ಚಕೋರ ಜನ್ಮವನು3 ಭಾವಜನೈಯನ ಕಡುಚಲ್ವಿಕೆಯನ್ನುಭಾವಿಸಿ ನಿಡುಗಂಗಳಿಂದ ದಣಿದುಂಡುಗೋವಳೇರಂತೆ ಮನೆ ಮಕ್ಕಳ ಹಿಂಗಿ ನಿನ್ನ ಆವಾಗ ಈಕ್ಷಿಸುವ ಗೋವ್ಗಳ ಜನ್ಮವನ್ನು 4 ತೋಳದಂಡಿಗೆಮಾಡಿ ಹೀಲಿಯ ಚಾಮರವಮೇಲೆ ಎತ್ತಿದ ತಾವರೆ ಗೊಂಡೆಯಿಂದಓಲೈಸಿ ನಿನ್ನನು ಒಲಿಸಿ ಮುಕುತರಂತೆನಾಲೋಕ್ಯ ಸುಖವುಂಬ ಗೋಪರ ಜನ್ಮವನು5 ಕೊಳಲ ಧ್ವನಿಯ ಕೇಳಿ ಎದುರುಗೊಳ್ಳುತ ನಿನ್ನನಳಿನನಾಭಾ ಅವಧಾರೆಂದು ಪೊಗಳೇತಳಿಗೆ ಆರತಿಯೆತ್ತಿ ಲಕ್ಷ್ಮಿಯಂತೆ ನಿನ್ನಚೆಲುವ ಸವಿವಂಥ ಗೋಪೇರ ಜನ್ಮವನು 6 ಇಂದಿರೆಯರಸ ಬ್ರಹ್ಮೇಂದ್ರಾದಿ ವಂದಿತಎಂದು ಮೊಸರ ಕಡೆಯುತ್ತಲಿ ನಿನ್ನಅಂದಿನ ಶ್ರುತಿಯೋ ಉಪ್ಪವಡಿಪ ವ್ರಜ-ದಿಂದುಮುಖಿಯರ ಜನ್ಮವ ಸಿರಿಕೃಷ್ಣ7
--------------
ವ್ಯಾಸರಾಯರು
ಸುಳಾದಿಧ್ರುವತಾಳಬಾಲ ಸೂರ್ಯನಿಭಮಣ್ಯಾಂಕಮೌಳಿಹೀಲಿಯ ಪಿಂಛಪ್ರವಾಳಗುಚ್ಛಮ್ಯಾಲಲರದಂಡೆ ಝೇಂಕರಿಪಾಳಿಬಾಲರಯ್ಯನ ಮೊಗದ ಶೋಭೆಭ್ರೂಲತೆ ವಿಲಾಸ ನೋಟದಿಮಕರಕುಂಡಲವಿಶಾಲೇರಿ ಸಿರಿವತ್ಸಕೌಸ್ತುಭನೀಲಮಾಣಿಕ ವಜ್ರವಲಯ ವೈಜಂತಿವನಮಾಲೆ ತುಲಸಿ ಗಂಧ ಮೌಕ್ತಿಕ ಸರಗಳನೀಲನದ ರತುನದಾಮಪೊನ್ನಚೇಲನೂಪುರ ಕಿರುಗೆಜ್ಜೆಯ ಗೋಪಾಲ ಪರಸನ್ನವೆಂಕಟ ಕೃಷ್ಣ ಶಾಮಲಕಾಯ 1ಮಠ್ಯತಾಳನಂದವ್ರಜದ ಗೋವರ ವೃಂದಾಂಬುಧಿಗೆ ಪೂರ್ಣೇಂದು ನÀಂದಸೂನು ಲಾಸ್ಯವಾಡೆಒಂದೊಂದು ಲಯದಗತಿಹೊಂದ್ಯಮರದುಂದುಭಿಗಳ್ದಂ ಧಳಧಂ ಧಂದಳೆನ್ನೆಗಂಧರ್ವ ತುಂಬುರರು ನಾರಂದ ಮಹತೀಗೀತ ಪ್ರಬಂಧ ಹೇಳೆ ನಂದರಸದಿಂದಾಡುತಿರೆ ಗೋವಿಂದ ದಂದಂ ದಂದಂ ಧಿಮಿಕೆನ್ನಲಂದದಿ ಮದ್ದಳೆ ತಾಳಬಂದಿಮೊಗ ? ತುತ್ತುರಿ ಕಹಳೆ ಕಂಬುವೇಣುಗೂಡಿಅಂದಾಡಿದ ಪ್ರಸನ್ವೆಂಕಟ ಕೃಷ್ಣ ನಲವಿಂದ 2ತ್ರಿವಿಡಿ ತಾಳಶ್ರೀಕಮಲ ಭಭೂರ್ವಪಿನಾಕಿವಿಪಾಹಿಪನಾಕಜಾದ್ಯರ ಚೇಷ್ಟಕಶ್ರೀಕರ ಪ್ರಸನ್ನವೆಂಕಟ ಕೃಷ್ಣಆಕಳಕಾವರ ವಶಗ ಹಾಹಾ 3ಅಟ್ಟತಾಳಅನಂತನಿಗಮನಿಕರಕೆ ನಿಲುಕದಅನಂತಾನಂತ ಗುಣಪರಿಪೂರ್ಣಗೆಧÉೀನುಕಾವರ ಪಳ್ಳಿ ಗೋಟಲೆತೀಯಂ ತೀಯಂ ವೈಯ್ಯ ಅಯ್ಯಾಧೇನುಕಾವರ ಪಳ್ಳಿ ಗೋಟಲೆಜ್ಞಾನಿಜನಕೆಮೋದಹಾನಿ ಖಳರ್ಗೀವಜ್ಞಾನಾನಂದ ಬಾಲ ಪ್ರಸನ್ನವೆಂಕಟ ಕೃಷ್ಣಗೆ 4ಏಕತಾಳವೈಕುಂಠ ವಾರಿಜಾಕ್ಷ ಲೋಕರಕ್ಷತೋಕವೇಷಧರಮುರಹರಶ್ರೀಧರಶ್ರೀಕರ ಗುಣನಿಧೆ ಪುರಾಣಪುರುಷ ಹರೇ ಹರೇಗೋಕುಲಪತೆ ಗೋವರ್ಧನಧರಪಾಕಹ ಮದನಿಕಾರಕರ ಪ್ರಸನ್ವೆಂಕಟ ಕೃಷ್ಣನೆಲೊ ಭಕ್ತವತ್ಸಲ 5ಜತೆಶುಭಕೀರ್ತನೆ ಜಿಹ್ವೆಗೆ ಶುಭಕಥೆ ಕಿವಿಗಳಿಗೆಶುಭಮೂರ್ತಿ ಕಣ್ಗೀಯಯ್ಯ ಪ್ರಸನ್ವೆಂಕಟಕೃಷ್ಣಯ್ಯ
--------------
ಪ್ರಸನ್ನವೆಂಕಟದಾಸರು