ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ನಾಕಂಡೆ ನಾಕಂಡೆ ಕಾಳಿಂಗನ ಮಂಡೆಯಮೇಲೆ ಕುಣಿವ ಕೃಷ್ಣನ್ನ ಪ ತಕ ತಕ ಧಿಮಿ ಧಿಮ್ಮಿ ಧಿಮ್ಮಿ ಧಿ- ಮ್ಮಿಕೆಂದು ಕುಣಿವ ಕೃಷ್ಣನ್ನ ನಾಕಂಡೆ ಅ.ಪ ಹೆಡೆಯ ಮೇಲೆ ತಾ ಎಡಗಾಲಿರಿಸಿ ಎಡಗೈಯಲಿ ಬಾಲ ಹಿಡಿದವನ ಬಿಡದೆ ಅಭಯಹಸ್ತವ ತೋರೊ ಒಡೆಯ ಕೃಷ್ಣಮೂರುತಿಯ ನಾಕಂಡೆ ಸ್ವಪ್ನದಲಿ ನಾಕಂಡೆ ಕಂಡೇನೊ ಸಂಪನ್ನಮೂರ್ತಿಯ ಕಂಡೇನೊ 1 ಗೋವಲರ ಮನೆಯ ಪಾಲುಂಡವನ ಗೋವುಗಳ ಕಾಯ್ದ ಗೋಪಾಲನ್ನ ಗೋವಿಂದನೆಂಬ ದೇವರದೇವನ್ನ ಓವಂತೆ ನಾನು ಕಂಡೇನು ಕಂಡೇನು ಕುಣಿಯುತ ಬಂದ ಕೃಷ್ಣನ್ನ ತಣಿಯುವ ಹಾಗೆ ನೋಡಿದೆನು 2 ಗೋವಿಂದನಾಗಿ ತಲೆಕಾಯ್ವವನ ಗೋವರ್ಧನವನೆ ಕೊಡೆಯಾದವನ ಗೋವನಿತೆಯರ ಮಾಮಾಯನನ್ನ ಅವ್ವಯ್ಯ ಚೆನ್ನಾಗಿ ಕಣ್ತುಂಬ ಕಂಡೆ ಆ ಮುದ್ದು ಬಾಲಕೃಷ್ಣನ್ನ ಕಂಡೆ ಸಾಮುದ್ರಿಕಾ ಸಿರಿಯನ್ನಕಂಡೆ 3 ಅಸುರ ಕಂಸನ ಅಸುವನ್ನು ನೀಗಿದನ ಬೆಸೆದ ಕುಬ್ಜೆಯ ಡೊಂಕ ತಿದ್ದಿದವನ ಅಸುತೆಗೆಯ ಬಂದವಳ ಅಸುವನೆ ಹೀರಿದನ ಮಿಸುಕದಂತೆ ಕಂಡೆ ನಾಕಂಡೆ ನಾಕಂಡೆ ಜಾಜಿಪುರೀಶನ ಕಂಡು ಧನ್ಯನಾದೆ ಸಾಜದಿ ದಾಸಾನುದಾಸನಾದೆ 4 ಪಾಪಿನಾ ಕರುಣೆಯ ತೋರಿ ಸಲಹೊ ಭಾಪುರೆ ಗಟ್ಟಿಸುವ ಪುಟ್ಟಪಾದವಿಟ್ಟು ಮೋಪಾಗಿ ಮೆರೆವ ದುಷ್ಟರ ಮೆಟ್ಟೊ ಪುಂಡರ ಪುಂಡರಿಗೆ ಪುಂಡನಾದವನೆ ಪುಂಡರೀಕಾಕ್ಷ ಚನ್ನಕೇಶವನೆ 5
--------------
ನಾರಾಯಣಶರ್ಮರು
ಕಾಣೆಯೇನೇ ತಂಗಿ | ಇವನಾ ಕಾಣೆಯೇನೇ ತಂಗಿ ಪ ವೇಣುವನೂದುವ ಮುದ್ದು ಮೋಹನ್ನನ ಅ.ಪ ಪೂತನಿಯಸುವಾ ಹೀರಿದನಿವನು ಮಾತೆಗೆ ಬಾಯಲಿ ಜಗವ ತೋರಿದನು 1 ಬಕ ಶಕಟಾಸುರನಿಕರವ ಸದೆದ ವಿಕಟ ಕಾಳಿಂಗನ ಹೆಡೆಯನು ತುಳಿದ 2 ಬೃಂದಾವನದಾನಂದ ಮುಕುಂದ ನಂದನಕಂದ ಮಾಂಗಿರಿಯ ಗೋವಿಂದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಧರ್ಮವೇ ಜಯವೆಂಬ ದಿವ್ಯ ಮಂತ್ರ |ಮರ್ಮಗಳನೆತ್ತಿದರೆ ಒಳಿತಲಾಕೇಳಿಪ.ವಿಷವನುಣಿಸಿದಗೆ ಷಡುರಸವನುಣಿಸಲುಬೇಕು |ದ್ವೇಷಮಾಡುವನ ಪೋಷಿಸಲು ಬೇಕು ||ಹಸಿದು ಮನೆ ಕೊಂಬವನ ಹಾಡಿಹರಸಲುಬೇಕು |ಅಸುಹೀರಿದನ ಹೆಸರ ಮಗನಿಗಿಡಬೇಕು1ಹಿಂದೆ ನಿಂದಿಸುವರನು ವಂದಿಸುತಲಿರಬೇಕು |ಬಂಧಿಸಿದವನ ಕೂಡ ಬೆರೆಯಬೇಕು ||ನಿಂದ ನಿಲುವಿಗೆ ಸೇರದವನ ಪೊಗಳಲುಬೇಕು |ಕೊಂದವನ ಗೆಳತನವ ಮಾಡಬೇಕಯ್ಯ 2ಕೊಂಡೊಯ್ದು ಕೆಡಿಸುವನ ಕೊಂಡಾಡುತಿರಬೇಕು |ಕಂಡರಾಗದವರ ತಾ ಕರಿಯಬೇಕು ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಅ - |ಖಂಡ ಮಹಿಮೆಯನರಿತು ನೆನೆಯಬೇಕಯ್ಯ 3
--------------
ಪುರಂದರದಾಸರು