ಒಟ್ಟು 8 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕಾರಣ ಮತಿಯಿಲ್ಲ ಮನವೆ ಪ ಹೀನಾಯವಾಡದಿರು ಪರರ ಗುಣಗಳ ಎಣಿಸಿ ಅ.ಪ ಅವನ ಗೊಡವೆಯೇಕೆ ಅವನಾರು ನೀನಾರು | ಅವನ ಪಾಪಕ್ಕೆ ನೀ ಭಾಗಾದಿಯೆ | ಅವನುತ್ತಮನಾದಡವನೆ ಬದುಕಿದ ಕಾಣೊ ಅವ ಪುಣ್ಯಮಾಡಿದರೆ ಅವನ ಕುಲ ಉದ್ಧಾರ 1 ನಿನಗೆ ಕೊಡುವುದರೊಳಗೆ ಬೇಡ ಬಂದವನಲ್ಲ | ನಿನಗೆ ಅವನಿಗೆ ಏನು ಸಂಬಂಧವೊ | ಮನೆ ಒಡವೆ ವಸ್ತುಗಳ ಹಂಚಿಕೊಂಬುವುದಲ್ಲ | ಕ್ಷಣ ಕ್ಷಣಕೆ ಕ್ಲೇಶವನು ಮಾಡಿಕೊಂಬುದು ಸಲ್ಲ 2 ನಿನ್ನ ಗತಿ ಮಾರ್ಗಕ್ಕೆ ಅವನಡ್ಡ ಬಾಹನೆ | ನಿನ್ನಿಂದ ಪರಲೋಕ ಅವನಿಗುಂಟೆ | ನಿನ್ನೊಳಗೆ ನೀ ತಿಳಿದು ವಿಜಯವಿಠ್ಠಲನ್ನ | ಸನ್ನುತಿಸಿ ಭವರೋಗ ಬನ್ನವನು ಕಳೆಯೊ 3
--------------
ವಿಜಯದಾಸ
ಗರ್ವಿಸುವದು ತರವೆ ಗರ್ವಿಸುವದು ತರವಲ್ಲ ನೀವಿದ ಕೇಳಿ ಸರ್ವೇಶನೊಪ್ಪನೀ ನಡತೆಯ ಕಂಡರೆ ಪತೊಗರಿ :ಬೆಲ್ಲವೆ ಬಾ ನಾನು ತೊಗುರಿಬೇಳೆಯು ನನಗುಲ್ಲಾಸದಿಂದೊಂದು ಯೋಚನೆ ತೋರಿತುಎಲ್ಲರು ಒಬ್ಬಟ್ಟು ಒಳ್ಳಿತೆಂದೆಂಬರುಬಲ್ಲವರಾದರೆ ವಿವರಿಸದಿರುವರೆಸಲ್ಲದ ಮಾತನಾಡಲಿಬೇಡ ಸತ್ಯವನಿಲ್ಲಿ ನನ್ನೊಳು ಪೇಳು ಮತ್ತೆ ನಾಲುವರಿರುವಲ್ಲಿ ನ್ಯಾಯವ ತಿದ್ದಿಕೊಂಬ ನಾವಿಬ್ಬರುಇಲ್ಲದ ಬಳಿಕ ಗೋಧಿಯ ದೆಸೆುಂದೇನುಸಲ್ಲದ ತುಪ್ಪವನೇನ ಮಾಡಲಿಬೇಕುಒಳ್ಳೆಯತನ ನಿನ್ನೊಳು ಇರುವುದಿದನೆಲ್ಲವನೆನಗೆ ಪೇಳು ಸಟೆಯ ಪೇಳಬಲ್ಲೆನೆ ನಾ ನಿನ್ನೊಳು ನಿಮ್ಮೊಳು ನಾನೆಬಲ್ಲಿದನಲ್ಲವೆ ಕೇಳು ನನ್ನನೆ ಯೆಲ್ಲಾಕೊಳ್ಳುವರವನಿಯೊಳು ನೀನೂ ಸ್ವಲ್ಪವಲ್ಲವೆ ನಿಜ ನಮ್ಮೊಳು ಕೋಪಿಸಬೇಡಸಲ್ಲದ ವಸ್ತುಗಳು ಗೋಧಿಯು ಎಣ್ಣೆಯಲ್ಲವೆ ನಿತ್ಯದಲ್ಲೂ ತುಪ್ಪವ ಬಿಡುಪೊಳ್ಳುನುಡಿದರೆನ್ನ ಮಾತೆಲ್ಲ ಪಾಳು 1ಬೆಲ್ಲ :ಏನೆಲೆ ತೊಗುರಿಬೇಳೆಯೆ ನನ್ನ ಸ್ವಲ್ಪವೆಂದೇನು ಕಾರಣವನು ಕಂಡು ನನ್ನೊಡನೀಗನೀನುಸುರಿದೆ ಮಾತು ಹೆಚ್ಚಿ ಬರುತಲಿದೆುೀ ನಡೆ ನಿನ್ನಯ ಶ್ರೇಷ್ಠವದೆನಿಟಷ್ಟೂನಾನಿಲ್ಲದಿರಲು ಸೀಯಾಗುವದೆಂತುರೆನೀನು ಸುಮ್ಮನೆ ಹೇಳಿಕೊಂಬೆ ತನ್ನಯ ಸ್ತುತಿತಾನೆ ಮಾಡಿಕೊಂಬ ಮನುಜಗೆ ನರಕವೆಂಬೀನಿಗದಿಯನರಿತರೆ ಪರನಿಂದೆಯನೀನೆಚ್ಚರಂಗೆಟ್ಟು ಮಾಳ್ಪೆಯ ಇನ್ನಭಿಮಾನವನೀಗ ುರುಯೆನ್ನೆಡೆಯೊಳುನೀನಿರಬೇಡ ಸಾರು ಹೆಚ್ಚುಗೆ ನಿನ್ನದೇನದನೆನಗೆ ತೋರು ದುರ್ಜನರು ತಾವೀನುಡಿ ನಿಜವೆಂಬರು ಸತ್ಪುರುಷರುಮಾನಸದಲಿ ಒಪ್ಪರು ನಿನಗೆ ಅಭಿಮಾನ ಮೊದಲು ಇದ್ದರೂ ಹಾರು ಮುಂದುಜಾಣತನವೆಯಾದರೂ ಹೆದರದಿಪ್ಪೆಹೀನಾಯವೆ ಬಂದರೂ ನಾಲುವರೆನ್ನದೀನಡೆಯೆನ್ನುವರು ಎಂಬುದನೀಗನೀನರಿಯದೆ ಬಂದೆುದು ಪಾಪ ಬೇರು 2ಗೋಧಿ :ಹೋಗಲೆ ತೊಗುರಿ ಬೆಲ್ಲಗಳಿರ ನನ್ನನುಕೂಗಿ ಬೈವಿರಿ ಗೋಧಿ ಯೋಗ್ಯದ ವಸ್ತು ತಾನಾಗದು ಎಂದು ಕೊಬ್ಬಿದ ಮಾತನಾಡುತ ನೀಗಿಕೊಂಬಿರೆ ನಿಮ್ಮ ಮಾನವ ಸದರ ನಿಮಗಾಗಿದೆ ಕೊರಗಿಪರೆ ಮಾತಿನ ಪರಿಯೇಗುವುದೆನಿಸದಿರೆ ನಿಮ್ಮನು ತೃಣಕಾಗಿ ನಾ ಕಾಣುವರೆ ಕಾಣೆನು ಮಾನಹೇಗೆ ನಿಮ್ಮೊಳು ಹೋಗೆ ಯೆನಗೆ ಸಮನಾಗಲು ನೀವು ಬಲ್ಲಿರೆ ುೀ ಯಾಳೆಗೆಹೋಗಿ ನೀವು ಕೊಬ್ಬಿದರೆ ಈಶ್ವರ ಕೃಪೆಯಾಗುವದೆಂತೆನ್ನು ಮರೆಯೊಗಲೊಲ್ಲಿರೆ 3ಎಣ್ಣೆ :ಹರಟಿಕೊಂಬಿರೆ ನೀವೆ ನಿಮ್ಮೊಳು ನನ್ನನುಜರೆಯುತಲೆಣ್ಣೆುಂದೇನೆಂದು ನಾನಿಲ್ಲದಿರಲು ನೀವೆಂತೊಂದು ಗೂಡಿ ಬಾಳುವಿರಿದನರಿಯದೆ ಮುಂಗೆಟ್ಟು ನುಡಿದರೇನಾುತೀಪರಿಯಹಂಕಾರ ಲೇಸಲ್ಲ ಹೀನಾಯವುಬರುವದು ಪರರ ನಿಂದಿಸಿ ಜೀವಿಸುವುದುತರವಲ್ಲ ಸದ್ಗತಿಗೆಟ್ಟು ಕೊನೆಗೆ ಬರದಿರದು ನರಕ ಬೆಂಕಿುಂ ಮೂರುವೇಳೆ ನೀಕೊರಗುವೆ ಬೆಲ್ಲವೆ ಕೇಳು ತೊಗುರಿಯೆ ನೀನಿರದೆ ಸಾರಿಯೊಳು ಬೇಯುವೆ ಗೋಧಿಕೊರಗುವೆ ಕಲ್ಲಿನೊಳು ಚಚ್ಚಿಸಿಕೊಂಡುಇರುವದೆ ನಿಮ್ಮವೊಲು ಕಷ್ಟವದೆಂಬದರಿುರೆ ನೀವು ನನ್ನೊಳು ುಂಥಾ ನಡೆಬರುವುದೆ ಬಹು ಕೇಳಾ ಹೀನಾಯವುಬರದಿರದೀ ಬಾಳು ಯಾತಕೆ ಸುಖಕರ ಮಾರ್ಗ ತಾ ನಿಮ್ಮೊಳು ುಲ್ಲವು ುದನರಿಯದೆ ನಿಮ್ಮಳಲು ಬಿಡದು ನನ್ನಮರೆಯೊಕ್ಕು ಬದುಕುವದಿದು ಬಹುಮೇಲೂ 4ತುಪ್ಪ :ಜಗದೊಳು ನೀವೆ ಬಲ್ಲಿದರೆಂದು ನಿಮ್ಮೊಳುನಿಗದಿಯ ಮಾಡಿಕೊಂಬಿರಿ ಗರ್ವ ಹೆಚ್ಚಿತೆಸುಗುಣವಂತರು ನೀವಾದರೀಪರಿಯಲ್ಲಿಬಗುಳಿಕೊಂಬಿರೆ ತುಪ್ಪವಂ ಬಿಡುಯೆನ್ನುತಮಿಗೆ ಸುರತತಿ ಮೊದಲಾಗಿ ನನ್ನಿಂದಲಿಸೊಗಸಾಗಿ ಕೃಪೆವಡೆವರು ನಾನಿಲ್ಲದೆಮಿಗೆ ಶುದ್ಧರಾಗುವಿರೆಂತು ಬರಿದೆ ನಿಮ್ಮನಿಗದಿಯ ಪೇಳಿಸಿಶಾನಿಗೆ ನನ್ನ ನೀವಗಲಲು ರುಚಿಕರವೆಂತು ನಾನೊಪ್ಪೆನುನಿಗಮದ ಮಾತಿದುವೆ ಸಟೆಯ ಮಾಡಿಸೊಗಸಾಗಿ ಬಾಳಿ ನೀವೆ ಅನ್ಯಾಯಗಳಗಣಿತವಾಗಿುವೆ ನನ್ನಯ ನ್ಯಾಯನಿಗದಿಯಾದರೆ ಹೋಗುವೆ ತಪ್ಪಿದರೆ ಈಜಗದೊಳಗ್ನಿಯ ಪೊಗುವೆ ನಿಮಗೆ ಆಣೆಯಗಲಿದರಿಲ್ಲಿಂದವೆ ಪೋಟಾಟವೆಜಗದೊಳುತ್ತಮ ವಸ್ತುವೆ ನಾನೆಂಬರುಬಗೆುರೆನ್ನನು ನೀವೆ ಮೊಂಡರುಯೆಂದುಖಗವಾಹನಗೆ ಪೇಳುವೆ ಚಿಕ್ಕನಾಗನಗರಕೆ ನಡೆುರಿ ನ್ಯಾಯವ ತಿದ್ದುವೆ 5ಒಟ್ಟಾಗಿ :ದೇವ ಭಕ್ತಾವನ ಪಾವನ ಚರಿತ ಸುರಾವಳಿನುತಪಾದಭಾವಜ ಜನಕ ರಮಾವಲ್ಲಭಾನಂತ ಗೋವಿಂದ ಮಾಧವನೀವರಿಯದೆ ಪೋಗಲಾವಗತಿ ನಮಗೀ ವಸುಧೆಯೊಳ್ಮುನಿಭಾವಿತ ಚರಣನೆಸಾವಧಾನದೊಳು ಪರಾಮರಿಸಿುಂತಪ್ಪದಾವಲ್ಲಿುದ್ದಡಲ್ಲಿಗೆ ತಕ್ಕ ಶಿಕ್ಷೆಯನೇ ವಿರಚಿಸಿ ಗುಣವಿದ್ದಲ್ಲಿ ರಕ್ಷಿಪುದಾವ ಪರಿಯಲಾದರು ಜಗನ್ನಾಥನೆುೀವ್ಯವಹಾರವನು ನಿಗದಿಗೈದುನೀವೊಲಿದೆಮ್ಮುವನು ರಕ್ಷಿಸಬೇಕು ದೇವಾದಿದೇವ ನೀನು ಅನಾಥರ ಕಾವಲ್ಲಿ ದಯಾವಂತನುಸುಜನಪತಿ ಭಾವಿತ ಪಾದಪದ್ಮನು ನೀನೆ ಗತಿನಾವರಿದನ್ಯರನು ಬಾಳುವೆವೆಂತುರಾವಣಾರಿಯೆ ನೀನು ಕೈಪಿಡಿ ಗತಿುವರೆದಿಕ್ಕು ನೀನು ಮಾಡಿನ್ನೇನುಭಾವಿಸೆವನ್ಯರನು ನಮ್ಮಿಂದಲಿಸೇವೆಗೊಳುವ ನೀನಿರಲು ಭಜಿಸದೆ ನಾವು 6ಬರಿದೆ ಜಗಳವಾಡಬೇಡವೀಚೆಗೆ ಬನ್ನಿಒರೆಯುವೆ ಬುದ್ಧಿಯ ಕೇಳಲಿಚ್ಛಿಸಿದರೆತರುಣನಾಗಾಖ್ಯಪುರದ ವೆಂಕಟೇಶನುಗುರುವಾಸುದೇವಾವತಾರವ ತಾಳಿಯೆಕರುಣದಿಂ ತಿಮ್ಮದಾಸನ ಬಹುದೋಷವ ಪರಿದಾಳ್ದನೆಂಬ ಬಿರುದಪೊತ್ತು ನಾನೀಗಮೆರೆಯುವೆನೀವೆಲ್ಲ ಬರಿ ಮಾತ ಮಾಡದೆಶಿರದಲಿ ಹೊತ್ತು ನನ್ನಯ ನುಡಿಗೇಳಲುಬರುವುದು ಕೀರ್ತಿ ಮೂಜಗದೊಳಗದರಿಂದನೆರೆುೀಗ ನೀವೆಲ್ಲರೂ ಒಂದಾಗಿಯೆುರಲು ಸೌಖ್ಯವದೆಂಬರು ವಿಂಗಡದಿ ನೀವಿರಲು ಜನರು ಬೈವರು ಕೂಡಲು ನನ್ನಗುರುದಯ ಬಹುದೆಲ್ಲರು ಹಿಗ್ಗುವರು ಮತ್ತರಿತು ಸಾರವ ಕೊಂಬರು ಬಹಳ ಶ್ರೇಷ್ಠರುವದರಿಯದಿದ್ದರೂ ಹೊಣೆಯ ನೀವೆನೆರೆ ನಿಮ್ಮನೀ ಜನರು ಬೈಯದ ಹಾಗೆಉರು ಶಿಕ್ಷೆಯನೆ ಮಾಳ್ಪರು ಯಾರೆಂಬಿರೆಅರಿುರಿ ಗಂಗಪ್ಪ ಹೊಣೆ ಹೋಗಿನ್ನಾದರು7
--------------
ತಿಮ್ಮಪ್ಪದಾಸರು
ನಾಮತ್ರಯ ನೆನೆಯಿರೊ ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ಪ ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ ದುಶ್ಚರಿತವೆಂಬ ಮಹ ಕಾನನಕ್ಕೆ ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು1 ಅನಂತ ಅನಂತ ಎಂದು ಮನದಲ್ಲಿ ನೆನೆಯೆ ನಾನಾ ಭವಬಂಧ ದುಷ್ಕರ್ಮದಿ ಹೀನಾಯವನು ಕಳೆದು ಹಿತದಿಂದಲಿ ವೊಲಿದು ಆನಂದ ಆನಂದವಾದ ಫಲ ಕೊಡುವುದು. 2 ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ ಗೋವಿಂದ ಕಡೆಹಾಕಿ ಸಾಕುವದು ದೇವೇಶ ಶಿರಪತಿ ವಿಜಯವಿಠ್ಠಲೇಶನ ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು 3
--------------
ವಿಜಯದಾಸ
ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂಉರ್ವಿಯೊಳು ಜನಿಸಿದೆನೊ ಕೃಷ್ಣ ಪ ಕಾರುಣ್ಯನಿಧಿ ಎನ್ನ ಕಾಯಬೇಕಯ್ಯ ಹರಿವಾರಿಜನಾಭನೆ ಮುದ್ದುಕೃಷ್ಣಅ ಪುಟ್ಟಿದಂದಿನಾರಭ್ಯ ಸುಖವೆಂಬುವುದನರಿಯೆಕಷ್ಟ ಪಟ್ಟೆನು ಕೇಳೋ ಕೃಷ್ಣತೊಟ್ಟಿಲ ಶಿಶು ತಾಯ್ಗೆ ಬಾಯ್ಬಿಟ್ಟ ತೆರದಿ ಕಂ-ಗೆಟ್ಟು ಶೋಕಿಪೆನೋ ಕೃಷ್ಣಮುಟ್ಟಲಮ್ಮರು ಎನ್ನ ಬಂಧುಗಳು ಕಂಡರೆಅಟ್ಟಿ ಬಡಿವುತಲಿಹರೊ ಕೃಷ್ಣದಟ್ಟ ದಾರಿದ್ರ್ಯವನು ಪರಿಹರಿಸದಿದ್ದರೆಮುಟ್ಟುವುದು ದೂರು ನಿನಗೆ ಕೃಷ್ಣ1 ಕಾಶಿಯಾ ವಾಸವನು ಬಯಸಿ ಬಹು ದಿನದಿಂದಘಾಸಿ ಪಟ್ಟೆನು ನಾನು ಕೃಷ್ಣಈ ಶರೀರವನಾಂತು ಹೀನಾಯಗೊಂಡೆನುನೀ ಸಲಹಬೇಕಯ್ಯ ಕೃಷ್ಣಹೇಸಿಗೆಯ ಸಂಸಾರದಿ ನೀನಿಂತು ಮಾಯಾಪಾಶದೊಳು ಬಿಗಿವರೇ ಕೃಷ್ಣಘಾಸಿ ಮಾಡದೆ ಎನ್ನ ಪಾಪವನು ಪರಿಹರಿಸೊಸಾಸಿರನಾಮದ ಮುದ್ದುಕೃಷ್ಣ 2 ಲೋಕದೊಳು ಎನ್ನಂಥ ಪಾಪಿಗಳು ಉಂಟೆಂದುನೀ ಕೇಳಿ ಬಲ್ಲೆಯಾ ಕೃಷ್ಣಸಾಕೇಳು ಎನಗೊಂದು ಗತಿಯ ತೋರಿಸಿ ಸದ್ವಿವೇಕಿಯನು ಮಾಡಯ್ಯ ಕೃಷ್ಣರಾಕೇಂದು ಮುಖಿ ದ್ರೌಪದಿಯ ಮಾನವನು ಕಾಯ್ದುಆಕೆಗಕ್ಷಯವಿತ್ತೆ ಕೃಷ್ಣನಾ ಕಾಣುವಂದದಲಿ ಉಡುಪಿಯಾದಿಕೇಶವಏಕೆ ದರಶುನವೀಯೆ ಕೃಷ್ಣ 3
--------------
ಕನಕದಾಸ
ಬಿನ್ನಪವ ಕೇಳು ಜೀಯಾ ಬನ್ನಬಡಿಸುವ ಮಾಯಾ ಬೆನ್ನು ಬೀಳದಂತೆ ಮಾಡು ಎನ್ನ ಕೂಡಾಡು ಪ ಹತ್ತದ ಜನಕೆ ನೀನು ಹತ್ತಿಲಿ ಇದ್ದರೆ ಏನು ಉತ್ತರ ಲಾಲಿಸದಿಪ್ಪ ಉತ್ತಮ ಶ್ಲೋಕಾ ತತ್ವ ಬಲ್ಲವಂಗೆ ದೂರತ್ತಲಿದ್ದರೇನು ಅವನ ಪತ್ತಿಗೆ ಬಂದೊದಗುವ ಚಿತ್ತಜನಯ್ಯಾ 1 ಇಂದೆ ಕೈವಲ್ಯವ ಕೊಡುವೆ ಒಂದು ಕ್ಷಣ ಮಾಯಿಗಳ ಮಂದಿರದಲ್ಲಿ ಜನಿಸಿ ಎಂದು ನುಡಿದಡೆ ಮಂದರಧರನೆ ಕೇಳು ಎಂದೆಂದಿಗೆ ಎನ್ನ ನರಕ ಬಂಧನದಲ್ಲಿಡು ಅಲ್ಲಿ ಪೊಂದುವರಾರೊ 2 ಸೂಕರ ಗಾರ್ಧಭ ನಾನಾ ಕೆಟ್ಟ ಜಾತಿಯವರ ಯೋನಿಯೊಳು ಕಟ್ಟಿಹಾಕಿ ಹೀನಾಯ ಉಣಸೀ ಅನಂತ ಕಲ್ಪಕ್ಕೆ ಪವಮಾನ ಮತ ಪೊಂದಿಸಿ ನಿರ್ವಾಣವೀವೆನೆಂದರಾಗೆ ನಾನಾದಿ ಬಯಿಪೆ 3 ಗುರುಪ್ರಸಾದದಿಂದಲಿ ಪರಮ ಸದ್ಗತಿ ಎನ ಗರಿದಲ್ಲ್ಯಾವಾಗಾದರು ಸ್ಥಿರವೆ ಸಿದ್ಧ ನಿರಯ ದುರಾತ್ಮಗಿಲ್ಲ ಕರವ ಮುಗಿದು ಒಂದು ವರ ಬೇಡುವೆ 4 ಭಾಗವತರ ಸಹವಾಸ ಭಾಗವತರ ಕಥಾಗುಣ ಭಾಗ ಗುಣಿಸುವ ಮತಿ ಭಾಗೀರಥಿ ಯಾತ್ರೆ ಭಾಗ್ಯವೆ ಪಾಲಿಸು ದುಷ್ಟ ಭಾಗಾದಿಯರೋಡಿಸಿ ಕಡೆ ಭಾಗಕ್ಕೆ ಎನ್ನೆಡಬಲ ಭಾಗದಲಿ ಸುಳಿಯೊ 5 ಕಾಣಿಕಾಣೆ ಙÁ್ಞನವಿಲ್ಲ ತುತಿಪುದಕ್ಕೆ ಧ್ಯಾನವÀರಿಯೆ ನಿನ್ನನೆ ನಿದಾನಿಸಲಿಕ್ಕೆ ನಾನಾಪರಾಧವ ಮಾಡಿದ ಮಾನವನೋ ದೀನಬಂಧೊ ನೀನೊಲಿದು ಎನ್ನ ಮನಕೆ ಆನಂದ ತೋರೋ 6 ರಜತಪೀಠ ಪುರನಿವಾಸಾ ರಜನಿಪತಿ ಸಂಕಾಶಾ ರಜನಿಚರ ವಿನಾಶಾ ಸುಜನಮಾನಸಹಂಸ ರಜದೂರ ಮಂದಹಾಸಾ ವಿಜಯವಿಠ್ಠಲ ಶ್ರೀಶಾ ಭಜಿಪೆ ಲೇಶಾ 7
--------------
ವಿಜಯದಾಸ
ಸುಧಾಮ ಪ್ರಿಯ ವಿಠಲ | ಬದಿಗ ಪೊರೆ ಇವಳಾ ಪ ವಿಧಿ ಭವಾದ್ಯರ ಜನಕ | ಮುದ ಪ್ರದನೆ ದೇವಾ ಅ.ಪ. ಧೀನ ಜನ ಬಂಧೋ |ಹೀನಾಯ ಕಳೆದು ಮುನಿ | ಮಾನಿನಿಯ ಸಲಹಿದೆಯೋ ಜ್ಞಾನಿಜನ ನಿನ್ನ ಕಾ | ರುಣ್ಯ ಸ್ಮರಿಸುವರೋ 1 ಪಥ | ನೀನೆ ತೋರಿರುವೆ 2 ಸಾಧುಜನ ಸಂಗವನು | ನೀದಯದಿ ಕೊಟ್ಟಿವಳಆದಿ ವಿರಹಿತ ಭವದ | ಬಾಧೆ ಪರಿಹರಿಸೋಮೋದ ತೀರ್ಥರ ಮತದಿ | ಉದಿಸಿಹಸುಕಾರಣದಿಭೇದ ಪಂಚಕ ತಿಳಿಸಿ | ಸಾಧನವಗೈಸೋ3 ಕೃತಿ ರಮಣ ದೇವಾ 4 ಆರ್ತಳಾಗಿಹ ಸ | ತ್ಪಾರ್ಥನೆಯ ಕೈಕೊಂಡುಪೂರ್ತಿಗೈ ಆಭೀಷ್ಟ | ಪಾರ್ಥಸಖ ದೇವಾ |ಗೋಪ್ತ ಗುರು ಗೋವಿಂದ | ವಿಠಲ ಮದ್ಬಿನ್ನಪನಸಾರ್ಥಕವ ಮಾಡೆಂದು | ಪ್ರಾರ್ಥಿಸುವೆ ಹರಿಯೇ 5
--------------
ಗುರುಗೋವಿಂದವಿಠಲರು