ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನ ಘನ ತನ್ನೊಳಗೆ ತುಂಬಿಹದು ನಿನ್ನೊಳಗೆ ದ್ರುವ ಓದಿ ಕೇಳಿ ಮರುಳಾದ್ಯೊ ಮನವೆ ಸಾಧಿಸಲಿಲ್ಲ ಸ್ವರೂಪ ವೇದವೋದಿ ವಿವದಕೆ ನೀನು ಸಾಧಿಸಿದೊ ಬಲುಕೋಪ ಭೇದವಿಡಿದು ಬಾಧೆಗೆ ಗುರಿಯಾಗಿ ಆದಿ ನಿನಗೆ ನೀ ಪಾಪ ಘನಗುರು ಕುಲದೀಪ 1 ದೇಹದ ಒಳಗಿನ ದೇವರ ತಿಳಿಯದೆ ಬಾಹ್ಯ ರಂಜನಗೆದೆರದ್ಯೊ ಸೋಹ್ಯವರಿಯದೆ ಶ್ರೀಹರಿ ಭಕ್ತಿಯ ಅಹಂಭಾವದಿ ಮೆರೆದ್ಯೊ ದೇಹಾಭಿಮಾನದಲಿ ಸೋಹಂಭಾವದ ವಾರ್ತೆಯ ಜರಿದ್ಯೊ ಸವಿ ಸುಖವನು ಮರೆದ್ಯೊ 2 ಕನಸುದೋರುವ ಜನ ಪ್ರಪಂಚವ ನೆನೆಸಿ ಬಯಸುವದ್ಯಾಕೆ ಖೂನ ತಿಳಿಯದೆ ಸತ್ತು ಹುಟ್ಟಿ ಜನಿಸಿ ಬಾಹುದು ಯಾಕೆÉ ಹೀನಯೋನಿಯ ಮುಖದಲಿ ಬೀಳುವ ದಣುವಿಕಿ ನಿನಗಿದು ಬೇಕೆ ಅನುದಿನ ನಿನಗಿದು ತಾ ಸಾಕೆ 3 ಹಾದಿತಪ್ಪಿ ನಡೆವದು ವೇದಾಂತದ ಇದು ನಿನಗುಚಿತೆ ಸಾಧು ಸಜ್ಜನರನುಸರಿಸದೆ ತಾ ಇಹುದೊಂದು ಸ್ವಹಿತೆ ಗಾದಿಯ ಮಾತೆ ಬಂದುದು ಪುರುಷಾರ್ಥೆ 4 ಶರಣ್ಹೊಕ್ಕರ ಕರುಣಿಸಿ ನೋಡುವ ಎರಡಿಲ್ಲದೆ ಗುರುನಾಥ ಕರವಿಡಿದು ಪಾರನೆ ದಾಟಿಸುವಾ ಸುರಮುನಿಜನ ಸೇವಿತ ತರಣೋಪಾಯದ ಸಾಧನದೋರುವ ತರಳ ಮಹಿಪತಿ ದಾತ ಮನವೆ ನಿನಗಿದು ಸುಪಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಗೋಪಾಲ ವಿಠಲ | ದಯೆ ತೋರೋ ಇವಗೇ ಪ ನಯ ವಿನಯದಿಂ | ನಿನ್ನ | ದಾಸ್ಯಕಾಂಕ್ಷಿಪಗೇ ಅ.ಪ. ಜ್ಞಾನ ವಿರಹಿತನಾಗಿ | ಅನೇಕ ಜನುಮಗಳುಹೀನಯೋನಿಯ ಪೊಂದಿ | ಜನಿಸಿಹನು ಇವನೂಮಾನನಿಧಿ ಮೋಹನ್ನ | ದಾಸರರೊಲಿಮೆಯಲಿಂದಆನಂದ ಮುನಿ ಮತದಿ | ತನುವ ಪೊತ್ತಿಹನೊ1 ಲೇಸು ಮೋಹನರಾಯ | ದಾಸವಂಶದಿ ಬಂದುಆಶುಗಾಧ್ಯಾತ್ಮರಾ | ಹಸ್ಯ ವರಿಯದಲೇದಾಸ ದೀಕ್ಷೆಯ ನಡೆಯೆ ಆಶಿಸುತ್ತಿಹಗೆ ಉಪದೇಶವಿತ್ತೆ ನಿನ್ನಾ | ದೇಶ ಸುಸ್ತೀಶಾ 2 ಲೌಕಿಕದ ಬಹು ಮೋಹ | ನೀ ಕಳೆದು ಸುಜ್ಞಾನಭಕುತಿ ವೈರಾಗ್ಯಗಳ | ನೀ ಕೊಡುವುದ್ಹರಿಯೇಮಾಕಳತ್ರನೆ ತವಾ | ಲೌಕಿಕಸುಮಹಿಮೆಗಳಸಾಕಷ್ಟು ತಿಳಿಸುತ ಲೋಕದಲಿ ಮೆರೆಸೊ 3 ಸೊಲ್ಲು ಸೊಲ್ಲು ಸಲಿಸುವುದ್ಹರಿಯೆಖುಲ್ಲ ಜನದಲ್ಲಣನೆ | ಗೊಲ್ಲ ಗೋಪಾಲಾ 4 ಬೋವ ಶ್ರೀಹರಿ ಇವನಶೈವಲಾವರಣ ಕಳೆ | ದೀವುದೋಜ್ಞಾನಾಕೈವಲ್ಯದಾತ ಗುರು | ಗೋವಿಂದ ವಿಠ್ಠಲನೆನೀವೊಲಿಯದಿನ್ನಿಲ್ಲ | ದೇವ ದೇವೇಶಾ 5
--------------
ಗುರುಗೋವಿಂದವಿಠಲರು
ಬರುದೆ ಭ್ರಮೆಯಗೊಂಡ್ಯೊ ಮರುಳ ಮನುಜ ನೀನು ಧ್ರುವ ಎರವ್ಹಿನ ಮನೆಯೊಳು ಮರಹು ಮರೆಯಗೊಂಡು ಗರವು ಹಿಡಿದು ನಿನ್ನ ಕುರುಹು ತಿಳಿಯಲಿಲ್ಲ ಹರೆದು ಭ್ರಾಂತಿಗೆ ಬಿದ್ದು ಸೊರಗಿ ದಣಿದೆಲ್ಲ 1 ಏನು ಮರುಳಗೊಂಡ್ಯೊ ಹೀನಯೋನಿಯ ಮುಖಕೆ ಕಾನನದೊಳು ಪೊಕ್ಕು ಖೂನ ತಿಳಿಯದೆ ನಿನ್ನ ಜನುಮಜನುಮ ಬಂದ್ಯೊ ಜ್ಞಾನಶೂನ್ಯದಲಿ 2 ನಾನು ನನ್ನದು ಎಂದು ಏನು ಗಳಿಸಿಕೊಂಡ್ಯೊ ಸ್ವಾನುಭವದ ಸುಖ ಅನುಭವಿಸದೆ ಹೋಗಿ ಸ್ವಾನ ಸೂಕರಯೋನಿ ಮುಖಸೋಸಿದೆಲ್ಲ 3 ಹೊನ್ನು ಹೆಣ್ಣಿನ ಸವಿಯು ಬಣ್ಣಿಸಿ ನೀ ಬಯಸಿದಲ್ಲ ಮಣ್ಣೇ ಮಾಣಿಕವೆಂದು ದಣ್ಣನೆ ದಣುವರೆ ಕಣ್ಣಗೆಟ್ಟರೆ ಬ್ಯಾಡೊ ತನ್ನೊಳರಿಯದೆ 4 ಮುತ್ತಿನಂಥ ಜನುಮ ವ್ಯರ್ಥಗಳಿಯಬ್ಯಾಡ ಪಾದ ಬೆರ್ತು ಮಹಿಪತಿ ಪೂರ್ಣ ಸಾರ್ಥಕ ಮಾಡಿಕೊಳ್ಳೊ ಗುರುತುವರಿತು ನೀ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು