ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ದೊರೆವುದೋ ಸಂತಸವೆಂತು ದೊರೆವುದೋ ಕಂತುಪಿತನ ಕರುಣವಿಲ್ಲದೆ ಪ ರಣಜಯವು ಹಣಪ್ರಾಪ್ತಿ ವನಿತೆಲಾಭವಿನಿತು ಎಲ್ಲ ವನಜನಾಭನೊಲಿಮೆಯಾಗೋತನಕ ಮಂದಮನುಜನಿಗೆ 1 ಕ್ಷೋಣಿಗೆಲುವ ತ್ರಾಣ ಬಲವು ಮಾಣದಿಹ್ಯ ನಾನಾ ಸೌಖ್ಯ ಜಾನಕೀಶ ಮೆಚ್ಚುವನಕ ಹೀನಭಾಗ್ಯ ಮಾನವನಿಗೆ 2 ಭೂಮಿಜನಕೆ ಬಾಗದಂಥ ಆ ಮಹ ಸುಕ್ಷೇಮ ಲಾಭ ಸ್ವಾಮಿ ಶ್ರೀರಾಮ ಪ್ರೇಮಸದನ ಪ್ರೇಮದೀಯದೆ ಪಾಮರರಿಗೆ 3
--------------
ರಾಮದಾಸರು
ಚಿಂತೆಮಾಡಲಿ ಬೇಡೋ ಮನವೇ ಭ್ರಾಂತಿಪಡಲಿ ಬೇಡೋ ಪ ಚಿಂತೆಭ್ರಾಂತಿಗಳೆಲ್ಲ ಕಂತುಜನಕಗೆಂದು ಸಂತಸವಹಿಸು ನಿನಗೆಲ್ಲಿದೆ ಕೇಡೋ ಅ.ಪ ಮಾನವಮಾನವೆಲ್ಲ ಮನವೆ ಹೀನಭಾಗ್ಯ ಸಕಲ ಧ್ಯಾನದಾಯಕ ಶ್ರೀವೇಣುಗೋಪಾಲಗೆಂದು ಆನಂದ ತಾಳುಮತ್ತ್ಹಾಳು ನಿನಗಿಲ್ಲೋ 1 ದು:ಖ ಸಂಕಟವೆಲ್ಲ ಮನವೆ ಮಿಕ್ಕ ಕಂಟಕವೆಲ್ಲ ಅಖಿಲವ್ಯಾಪಕ ಶ್ರೀಭಕುತಿದಾಯಕಗೆಂದು ಸುಖವಹೊಂದು ಮತ್ತು ದು:ಖ ನಿನಗಿಲ್ಲೋ 2 ಕುಂದು ನಿಂದೆಯೆಲ್ಲ ಮನವೆ ತಾಪ ನಿಖಿಲ ಸಿಂಧುನಿಲಯ ನಮ್ಮ ತಂದೆ ಶ್ರೀರಾಮನಿಗೆಂದು ನಂಬು ಭವಬಂಧ ನಿನಗಿಲ್ಲೋ 3
--------------
ರಾಮದಾಸರು