ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತನೆ ಗತಿಯೆಂದು ನಂಬಿದೆನೆ ನಾ ನೀತನಂಥ ನಿಷ್ಕರುಣನ ಕಾಣೆ ಪಾತಕಹರ ಅ ನಾಥರಕ್ಷಕ ಮಹದಾತ ಪರಮಭಕ್ತ ಪ್ರೀತನೆಂಬುದ ಕೇಳಿ ಪ ಮರುಳಾಗಿವನ ಬೆನ್ಹತ್ತಿದೆನೆ ಮನೆ ಮಾರುಗಳೆಲ್ಲವ ತೊರೆದೆನೆ ಕರುಣವಿಲ್ಲ ತುಸು ಹೊರಳಿ ನೋಡುವಲ್ಲ ತಿರುತಿರುಗಿ ಮನಕರಗಿ ಸಾಕಾಯಿತು 1 ಜಾತಿಹೀನನೆಂಬುವೆನೇನೆ ಲೋಕ ನಾಥನಿಗೆ ಕುಲ ಅದೇನೆ ಈತನ ಹೊರ್ತು ಮತ್ತಾರಾಸೆನಗಿಲ್ಲ ನೀತಿಯೆ ಈತಗೆ ಜಾತಿಭೇದವೆಂಬ 2 ಹೊಲೆಯರ ಮನೆಯಲ್ಲುಂಡನೆ ಇವ ಗೊಲ್ಲರ ಕುಲದಲ್ಹುಟ್ಟಿದನೆ ಗೊಲ್ಲರ ನಲ್ಲೆಯರಲ್ಲಿ ಹೋಗಿ ಈತ ಗುಲ್ಲುಮಾಡಿ ಬೆಣ್ಣೆಗಳ್ಳನೆನಿಸಿಕೊಂಡ 3 ಪಾತರದವಳಲ್ಲಿಗ್ಹೋದನೆ ತಾ ನೀತಿವಂತನ ಕಟ್ಟೊಡ್ಹೆಸಿದನೆ ನೀತಿವಂತರು ಕೇಳಿರೀತನ ರೀತಿಯ ದಾತ ಜಗನ್ನಾಥ 4 ನಿಲ್ಲದು ಮನ ಘಳಿಗಿವನಲಿ ನಾ ಸಲ್ಲದ್ಹಾಂಗ್ಹೋದೆ ಮತ್ತೆಲ್ಲ್ಹೋಗಲಿ ಬಲ್ಲಿದ ಶ್ರೀರಾಮನೆಲ್ಲ್ಹೋದರು ಬಿಡೆ ಕಲ್ಲೆದೆಯವಗಾಗಿ ಪ್ರಾಣಹೋಗಲಿನ್ನು 5
--------------
ರಾಮದಾಸರು
ಪಾಲಿಸೋ ವೆಂಕಟಗಿರಿ ರಾಯಾ ಲಕ್ಷ್ಮೀ |ಲೋಲನೀಲಾಂಬುದ ಸಮ ಕಾಯಾ ಪಮಾಕಮಲಾಸನವಾಸವ- ಸುರ |ನೀಶ ಕರಾಧ್ಯ ಕೇಶವ ||ಲೋಕೇಶ ಯನ್ನಲ್ಲಿ ವಾಸವ-ಮಾಡಿನೂಕು ತುಚ್ಛತರ ಕ್ಲೇಶವ 1ಹಿಂದಿನ ಜನುಮಗಳೆಣಿಕಿಲ್ಲ - ದಯಾ |ಸಿಂಧುಸಾಧನವೀಗಲಿನಿತೆಲ್ಲಾ ||ಮುಂದಿನ ಗತಿಯೇನೋ ತಿಳಿದಿಲ್ಲ - ಇದ |ರಿಂದಲಂಜುವೆ ಜಾಂಬವತೀ ನಲ್ಲ 2ಬಾಲಕನಾದೆ ಕೆಲವು ದಿನ - ಪ್ರಾಯ |ಕಾಲವೊದಗಲು ಪರಾಂಗನಾ ||ಮೇಲೆ ಅಭಕ್ಷಣೆಯಲಿ ಮನವಿಟ್ಟೆ - ಹೇ |ಳಲೊಂದೆರಡೇ ಯನ್ನವಗುಣ 3ಉದಯ ಸ್ನಾನವು ಸಂಧ್ಯಾವಂದನೆ - ಅಘ್ರ್ಯ |ವಿಧಿಗುರುಹಿರಿಯರ ವಂದನೆ |ಮೊದಲಾಗಿ ಪಿತರಾರಾಧನೆ ಬಿಟ್ಟೆ |ಮದದಿಂದ ಹೀನನೆಂಬುವ ನಾನೇ4ಅನ್ಯರ ಮನೆ ದ್ವಾರ ಕಾಯ್ವೆನೋ - ಸ್ವಾಮಿ |ನಿನ್ನ ಸ್ಮರಣೆಯ ಕ್ಷಣ ಮಾಡೆನೋ ||ಅನ್ನಕ್ಕೆ ಬಹುದೂರ ಪೋಪೆನೋ - ಸಾರೆ |ಪುಣ್ಯಕ್ಷೇತ್ರಗಳಿರೆ ನೋಡೆನೋ 5ಧನಹೀನನಾದ ಕಾರಣದಿಂದ -ಸತಿ|ಮನೆ ಹೊಂದಿಸಳೋ ಪರಮಾನಂದ ||ತನುಜರಶನ ವಸನಗಳಿಂದ ಕಾಡು |ವಣು ಮಾತ್ರ ಸುಖವಿಲ್ಲ ಇದರಿಂದ6ಏಸುಹೇಳಲಿ ಮಾತ ಲಾಲಿಸೋ - ಶ್ರೀ ಪ್ರಾ- |ಣೇಶ ವಿಠ್ಠಲ ನೀನೇ ತಾರಿಸೋ ||ಆ ಸತ್ಕರ್ಮದಿ ಮನ ಪ್ರೇರಿಸೋ - ನಿನ್ನ |ದಾಸವರ್ಗದೊಳೆನ್ನ ಕೂಡಿಸೋ 7
--------------
ಪ್ರಾಣೇಶದಾಸರು