ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸ ಸುಜನೋದ್ಧಾರ ಏನು ತಾತ್ಸಾರ ನಾನು ನಿನ್ನ ದಾಸನೆಂದು ಮಾನವರು ನುಡಿದ ಮೇಲೆ ಪ. ಪುಟ್ಟಿದಾಕ್ಷಣಾದಿಯಾಗಿ ದುಷ್ಟಸಂಗಕೊಳಗಾಗಿ ನಷ್ಟಪ್ರಜ್ಞೆಯಿಂದ ಬಹು ಕಷ್ಟಿಯಾದೆನು ಕೃಷ್ಣ ಶಬ್ದ ವಾಚ್ಯಪರಮೇಷ್ಠಿ ಜನಕ ನಿನ್ನ ಮನ ಮುಟ್ಟಿ ಭಜಿಸದೆ ಬಯಲೆಷ್ಟವ ಬಯಸುವೆನಲ್ಲೊ 1 ದಾನಧರ್ಮ ಜಪತಪ ಮೌನ ಮೊದಲಾದ ಸ- ತ್ಸಾಧನ ಹೀನನಾದರು ನಿನ್ನಾನುರಾಗದಿ ಮನಮುಟ್ಟಿ ಕ್ಞಣವಾದರು ಧ್ಯಾನಿಸಲು ಸಕಲವಂದ್ಯ ಮುನಿಗಮ್ಯ ಪದವನೀವಾತನು ನೀನೆಂದೊಂದೆ ತಿಳಿದೆ 2 ಮನವಚನ ಕಾಯಕಾದನುದಿನ ಕೃತವಾದ ಘನ ಪಾಪಂಗಳಿಗೆ ನಾ ಕೊನೆಗಾಣೆನು ದನುಜಾರಿ ರಾಮ ಅನಿಮಿತ್ತಬಂಧು ಎಂಬ ಘನತೆ ತೋರಿಸಿ ನಿನ್ನ ತನಯನೆಂದೆಂನ ಸಲಹೊ 3 ವೀರವೇದೋದ್ಧಾರ ವರಮಂದರಧರ ನರ ಹರಿಕುಬ್ಜಾಕಾರ ಪೃಥ್ವೀಭಾರವಾರಕ ವಾರುಧಿ ಬಂಧಕಯದು ವೀರ ತ್ರಿಪುರ ಸ್ಮರ ಹರನಿಂದ ತರಿಸಿದ ತುರಗವೇರಿದ ಧೀರ 4 ಮಂದಮತಿಯಾದ ಎನ್ನ ಬಂಧುವಾಗಿ ಕೈಯ ಪಿಡಿದು ಮುಂದು ಗಾಣಿಸುವೆನೆಂದು ಹಿಂದೆ ರಕ್ಷಿಸಿ ಇಂದು ಎನ್ನ ಕುಂದನೆಣಿಸಿ ತಂದೆ ನೀನುಪೇಕ್ಷಿಸಲು ಮುಂದೆ ಕಾಯ್ವರಾರೊ ಕರುಣಾಸಿಂಧು ಅನಿಮಿತ್ತ ಬಂಧು 5 ಮಾನಗೇಡಿನಿಂದ ದ್ವೇಷಿ ಮಾನವಾಧಮರ ಮುಂದೆ ಶ್ವಾನಕಿಂತ ಕಡೆಯಾಗಿನ್ನೇನು ಮಾಡಲೊ ನೀನೆ ಗತಿಯೆಂಬ ಮನೋಧ್ಯಾನದಿಂದ ಬಂದೆ ನಿಂದು ಕಾನನದ ಶಿಶುವಿದೆಂದು ಮಾನಿಸಿ ರಕ್ಷಿಸೊ ತಂದೆ 6 ಘಾಸಿಗೊಳಿಸುತೀ ಆಶಾಪಾಶದಿಂದ ಎನ್ನ ಬಿಡಿಸಿ ದಾಸರ ದಾಸ್ಯವನಿತ್ತು ಪೋಷಿಸೆನ್ನುತ ಮೀಸಲಾಗಿಹೆನು ಶ್ರೀನಿವಾಸ ಬೇಗ ಸಲಹೊ ಬಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ನಿನ್ನ ಕೃಪೆಯಿರೆ ಬಲುಸುಖ ಈ ಸಂಸಾರನಿನ್ನ ಕೃಪೆಯಗಲಿದರೆ ಘನಗೋಳು ಹರಿಯೆ ಪಅಲ್ಲ ಅಹುದಾಗುವುದು ಸುಳ್ಳೆ ಖರೆಯಾಗುವುದುಎಲ್ಲಸಿರಿ ಒದಗುವುದು ಒಲ್ಲೆನಲು ಬಿಡದೆಪುಲ್ಲನಾಭನ ಒಲುಮೆವುಳ್ಳ ಮಾನವರಿಗೆಕಲ್ಲಿನೊಳು ಜಲಪುಟ್ಟಿ ಹೊಳೆಯಾಗಿ ಹರಿಯುವುದು 1ಹೀನನಾದರು ಬಹುಮಾನ ಸಿಗುವುದು ಗೊಡ್ಡುಧೇನುಗಳೆಲ್ಲ ಬಿಡದೆ ಹೈನಗರೆಯುವುವುದೀನನಾಥನು ಒಲಿಯೆ ನಾನಾ ಸಿರಿಸೌಭಾಗ್ಯತಾನೆ ಬರುವುದು ತೆಂಗಿನೊಳುದಕದಂತೆ 2ವಿಷವೆ ಅಮೃತವಹುದು ಕಸವೆ ಕರ್ಪುರವಹುದುವಿಷಮ ವಿಷಯದ ಎಡರು ಹಸನಹುದು ನಿಖಿಲವಸುದೆಗಧಿಕ ನಮ್ಮ ಬಿಸಜಾಕ್ಷ ಶ್ರೀರಾಮನೊಶವಾದ ಬಳಿಕ ನಿಜ ಅಸಮ ಮುಕ್ತಿಹುದು 3
--------------
ರಾಮದಾಸರು