ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ನಿನ್ನ ಸ್ಮರಣೆಯಲಿ ಮನ ಬೇರು ವೂರಿರುವಂತೆ ಕಾರುಣ್ಯದಲಿ ಕಾಯೊ ಪ ವೇದನಾಲ್ಕರ ಕದ್ದಂಥಾ ದೈತ್ಯನ ಕೊಲ್ವಾ ಶದಿ ಮತ್ಯಾವತಾರ ಧರಿಸಿದೆ ಹರಿಯೇ 1 ಮಂದರ ಪೊತ್ತೆ ಭಾವಕಿಯಳ ಮೋಹಿಸಿ ಮೋಹಿನಿಯಾದೆ 2 ವರಹರೂಪದಿ ಪೋಗಿ ಧರೆಯನು ಧರಿಸಿದೆ ದುರುಳ ಹಿರಣ್ಯಕನಕರದಿಂದ ಸೀಳಿದೆ 3 ಕಂದನ ನುಡಿಕೇಳಿ ಕಂಬದಿಂದುದಿಸಿದೆ ತಂದೆಯ ಬಗೆದವನಾ ಛಂದದಿ ಸಲಹಿದೆ 4 ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ತುಳಿದು ಆತನ ಮನೆ ಬಾಗಿಲ ಕಾಯ್ದೆಯೊ 5 ತಾತನ ಮಾತನು ಕೇಳಿ ಮಾತೆಯ ಕೊಂದೆ ಖ್ಯಾತಿಯಿಂದಲಿ ಕ್ಷತ್ರಿಯರನು ಸಂಹರಿಸಿದೆ 6 ಮಾತೆಯ ವರ ಕೇಳಿ ನೀತಿಯಿಂದಲಿ ಪೋದೆ ಸೇತುವೆ ಕಟ್ಟಿ ನೀಖ್ಯಾತರಾವಣನಕೊಂದೆ 7 ಪುಟ್ಟ ಶಿಶುವಾಗಿ ಗೋಪಿಗೆ ಮುದ್ದು ತೋರಿದೆ ಬೊಟ್ಟಿಲಿ ಗಿರಿಯನು ನೆಗಹಿದೆ ಶ್ರೀ ಕೃಷ್ಣಾ 8 ತ್ರಿಪುರರ ಸತಿಯರ ವ್ರತವಗೆಡಿಸುವಂಥಾ ಅಪರಿಮಿತದಿ ಮೋಹಿಸುವಾ ಮೂರ್ತಿಯಾದೆ 9 ಭಕ್ತವತ್ಸಲ ದೇವಾ ಯುಕ್ತಿಯಿಂದಲಿ ಕಾಯ್ವ ವ್ಯಕ್ತಿ ಕಲ್ಕ್ಯಾವತಾರ ಧರಿಸಿದ ಹರಿಯೇ 10 ಶಬ್ದವ ನುಡಿಸುವ ಅಬ್ದಿನಿನ್ನದೊ ದೇವಾ ಶಬ್ದವಾಲಿಸದ ನಿಶ್ಯಬ್ದದೊಳಿರಿಸೆನ್ನಾ 11 ಅಂತರದೊಳಗೆನ್ನಾ ಕಂತುನಾರಾಯಣಾ ಸಂತಸದೊಳು ನಿಜ ಶಾಂತಿ ಪಾಲಿಪ ಗುರು 12
--------------
ಶಾಂತಿಬಾಯಿ
ಮಂಗಲಂ ಗುರುರಾಜಗೆ ಮಂಗಲ ಪರಮಾನಂದಸ್ವರೂಪಗೆ ಪ ಜೀವÀಪರಮರೈಕ್ಯವ ತಿಳುಹಿಸುವಾ ದೇವನೆ ನೀನೆನ್ನುತ ಬೋಧಿಸುವಾ ಸಾವು ಸಂಕಟಗಳ ಮೂಲವ ಕಡಿಯುವಾ ಪಾವನಾತ್ಮ ಘನಜ್ಞಾನರೂಪಗೆ 1 ಶೋಧಿಸಿ ದೇಹತ್ರಯಗಳ ಕಳಹಿ ಬಾಧರಹಿತ ಪರಮಾತ್ಮನ ಅರಿವನು ಬೋಧಿಸಿ ಅನುಭವದಲಿ ನೆಲೆಸಿದಗೆ 2 ತೋರಿಕೆ ಅನಿಸಿಕೆ ಎನಿಸುವ ದ್ವೈತವ ಧೀರತನದಿ ಸುಳ್ಳೆಂದು ತಿಳಿಸುವಾ ನಾರಾಯಣಗುರುವರನ ಕೃಪಾಪ್ರಿಯ ಪೂರಣಬ್ರಹ್ಮಸ್ವರೂಪ ಶಂಕರಗೆ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಹೊಂದಿ ಸುಖಿಸಿನೆರೈಯ್ಯ ನಮ್ಮ ದೇವ ದೇವನಂ | ತಂದೆ ಮಹಿಪತಿ - ಜಪಾಲ ಭಕ್ತ ಜೀವ ಜೀವನಂ ಪ ತೋರ್ಪಕರ್ಪೂರಗಂಗಛವಿಯ | ಸರ್ಪ ಅರ್ಪಿತಾಂಕ ಕಂಠ | ದಿರ್ಪ ಸರ್ಪ ಭೂಷಕಂ - ದರ್ಪ ದರ್ಪ ನಾಶನು 1 ಸ್ಥೈರ್ಯಧೈರ್ಯ ವೀರ್ಯೋದಾರ್ಯ | ವರ್ಯ ಚರ್ಯದೋರಿ ಜನಕ | ಕಾರ್ಯ ಕಾರ್ಯನರ ಹಿಸುವಾ | ಆರ್ಯ ರಾರ್ಯ ಸಾಂಬನಂ | 2 ಕಾಲಕಾಲ ಶಂಭುರಜತ | ಶೈಲವಾಲಯನಿಸಿ ಗಿರಿಜೆ | ನೀಲ ಲೋಹಿತಂಕ | ಪಾಲಿಶೂಲಿ ಶರ್ವನಂ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು