ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜದಾಕ್ಷಣ ಕಂಜನೇತ್ರನೆ ಸಂಜೀವಿನಿಯಾ ತಂದು ನೀಡಿದಾ ಪ ಪಸುಳನೈಯಾ ವಪುವೆಸೆವ ರಾಯ ಅಸುರವರ್ಗದಸುವ ಮಿಸುಕದಾಕ್ಷಣ ಹಿಸುಕಿ ಬಿಡುತಿಹ 1 ಭೀಮಸೇನಾ ಭಕ್ತಕಾಮಪೂರ್ಣಾ ಕಾಮಕೀಚಕಾ ಬಾರ ಪಾಮರರಿದಾ ನಾಕ ನಾನು ಮೆರೆದಾ 2 ಶಕ್ತಿಸಾರಾ ಭಕ್ತ ವಿರಕ್ತಿ ಪೂರಾ ಭಕ್ತವೃಂದಕೆ ಮುಕ್ತಿಪಥ ಮಹಾಪೂರಾ ಯುಕ್ತಿಯಿಂದಾ ವ್ಯಕ್ತಪಡಿಸಿದಾ ಅವ್ಯಕ್ತರೂಪಾ 3 ಕ್ಲೇಶದೂರಾ ಪ್ರಾಣೇಶ ವಾರಾ ಗಂಭೀರಾ ದಾಸಜನ ನುಡಿಯಾ ಗುಣದೋಷ ಹರಣಾ ಅಣಿಮಾ ವಾಸನ ರಹಿತಾ ಗುಣಗಣಗಡಣಾ ಗರಿಮಾ 4 ದಿಟ್ಟ ರಾಮಾದಕಾ ಹೃದಯ ಪ್ರೇಮ ಮಧುರಾ ವಿಠಲನರಸಿಂಹಾ ಎದೆಯಾರವಿಂದ ನಯನಾ ದಿಟ್ಟನಿಟ್ಟಿಗೇ ಸಾಧನೆಯ ಸಾರುವಂಥಾ ಧೀರಾ 5
--------------
ನರಸಿಂಹವಿಠಲರು
ತಿಳಿಯಲೋ ರನ್ನಾ ನಿನ್ನೊಳು ನಿನ್ನ ಪ ಅನ್ನವ ನೀಡು ತುಪ್ಪವ ಕೊಡುಚೆನ್ನಾಗಿ ಉಣ್ಣುವವನಾರೋ ಅವನಾರೋ 1 ಹೋಳಿಗೆ ಹಿಸುಕಿ ಹಾಲೊಳು ಕುಸುಕಿಹೋಳಿಗೆ ಉಂಬವನ್ಹೆಸರೇನೋ ಹೆಸರೇನೋ2 ಜಡಕೆಯು ಇಲ್ಲಾ ಇದೆಲ್ಲಾಮೃಢ ಚಿದಾನಂದ ನೀನೆನ್ನು ನೀನೆನ್ನು 3
--------------
ಚಿದಾನಂದ ಅವಧೂತರು
ಪಾದ ಒಮ್ಮಿಗಾದರು ನೆನೆದು ಕರ್ಮ ಪೋಪುವುದು ಎಂತೊ ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ ಕಮ್ಮಗೋಲನ ಬದುಕೀಲಿ ರಂಗಾ ಪ ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು ಬ್ಬಾಳುತನದಿಂದ ಕುಳಿತು ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ ಹೇಳು ಇನ್ನೊಮ್ಮೆ ಎನುತಾ ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು ಪೇಳುವೆನು ಕೈತಿರುವುತಾ ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು ಕೀಳು ವಾರ್ತೆಯ ತಾಹದೊ ಮನಸು1 ಧರೆಯನಾಳುವವನ ಸಮ್ಮುಖದಲ್ಲಿ ನಿಂದು ಕರವೆರಡು ನೊಸಲಿಗೆ ಚಾಚಿ ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ ಸರಿ ಮಿಗಿಲು ಯಿಲ್ಲವೆಂದೂ ಮರಿಯದಲೆ ಸಲಹುವದು ಮಹಾತ್ಮನಹುದೆಂದು ಹರಿ ನಿಮ್ಮಯ ನಾಮವೆ ನೆನೆವೆ ನಾನೆನ್ನಲು ಮರಪು ಬಂದೊದಗಿಹದೊ ರಂಗಾ2 ಹಸಿವೆ ತೃಷೆಯಿಂದ ಉಳ್ಳವರ ಮನೆಗಳ ಕಾಯಿದು ಬಿಸಿಲು ಬೆಳದಿಂಗಳೆನ್ನದೆ ದೆಸೆಗೆಟ್ಟು ಚಾಲ್ವರಿದು ವಿಷವನುಂಡವನಂತೆ ಕುಸಿದು ಕನಿಷ್ಠನಾಗಿ ರೆಸೆದು ಹದಿನಾರು ಪಲ್ಲುಗಳು ಅವರ ಕೊರಳ ಹಿಸುಕಿ ಹಿಂಸೆಗಳ ಬಿಡಿಸಿ ಹಸನಾಗಿ ನಿನ್ನ ನಾಮಾಮೃತವನುಣದೆ ನಾ ಮುಸುರೆ ಎಂಜಲು ಸವಿದೆನೊ ರಂಗಾ 3 ಹೊನ್ನು ಹಣದ ಆಸೆಗೆ ಹಲಬರನ ಅನುಸರಿಸಿ ಅನ್ನಿಗರ ಕೊಂಡಾಡುತ ಎನ್ನಯ್ಯ ಎನ್ನೊಡಿಯ ಎನ್ನ ಸಾಕುವ ತಾತ ಎನ್ನ ಕುಲ ಉದ್ಧಾರಕಾ ನಾಕ ಬಗೆಯಿಂದ ಮರಿಯದಲೆ ಕುನ್ನಿಯಂತೆ ಕಾಯಿದೆನೊ ಪನ್ನಂಗ ಶಯನನೆ ನಿನ್ನ ಮಹಿಮೆಗಳನ್ನು ಅನ್ನದಲೆ ನರಕಿಕ್ಕಿಳಿದೇ ಸ್ವಾಮಿ 4 ಒಂದು ದಿನವಾದರೂ ಸಂತೋಷದಿಂದಲಿ ಜಿಹ್ವೆ ಇಂದಿರಾರಮಣ ಶರಣಾಗತವತ್ಸಲ ಕಂದರ್ಪನಯ್ಯ ಕಮಲಬಾಂಧವ ಕುಲಾಗ್ರಣಿ ಎಂದು ಸ್ಮರಿಸದೆ ಘೋರ ಅಂಧ ಕೂಪದಿ ಹೊರಳಿದೆ ಮಂದಮತಿಗೊಂದು ಗತಿಯಿಲ್ಲ ವಿಜಯವಿಠ್ಠಲ ತಂದೆ ನೀನೆ ಕಾವುದೋ ಹರಿಯೆ 5
--------------
ವಿಜಯದಾಸ
ಕೆಟ್ಟು ನೆಂಟರ ಸೇರುವುದು ಬಹಳ ಕಷ್ಟಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ ಪ.ಹರಿಯನಪ್ಪಲುಬಹುದು ಉರಿಯ ಮುಕ್ಕಲುಬಹುದುಉರುವ ಮಾರಿಗೆ ಗ್ರಾಸವಾಗಬಹುದುಸುರಿವ ಕೆಂಡದ ಮನೆಗೆ ಬರಿಮೈಯೊಳಿರಬಹುದುಧರೆಯೊಳಗೆ ದಾರಿದ್ರವಾರಿಗೂ ಬೇಡವೋ 1ವಿಷಯ ಕುಡಿಯಲುಬಹುದು ಇರಿದುಕೊಳ್ಳಲುಬಹುದುಹಸಿದ ಹುಲಿಬಾಯಿ ತುತ್ತಾಗಬಹುದುಹಸೆಗೆಟ್ಟು ಹೋದ ನಂಟಿರಲಿ ತಾ ಬಾಯನ್ನುಕಿಸಿಯಲಾಗದು ಕೊರಳ ಹಿಸುಕಿಕೊಳಬಹುದು 2ಕುಡುಗೋಲು ಪಿಡಿದು ಕೂಟಿಯಮಾಡಿ ಉಣಬಹುದುಒಡಲಾಸೆಗೊಲ್ಬುರಾಳಾಗಬಹುದುಒಡೆಯ ಶ್ರೀ ಪುರಂದರವಿಠ¯ ಸ್ಮರಣೆಯಲಿಬಡವನಾಗಿಯೇ ಬೇಡಿ ಉಣ್ಣಬಹುದು 3
--------------
ಪುರಂದರದಾಸರು