ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶುಭ ಮಂಜುಳಗಾತ್ರ್ರೆಕುಂಜರದಂತೆ ಗಮನೆ ರಂಜಿತಾಂಗಿ ನಿರಂಜನಾಂಗಿ ಪ ಧರೆಯ ಮ್ಯಾಲೆ ಹಿರಿಯಳು ನಾ-ನಿರಲು ಲಜ್ಜೆ ತೊರೆದು ನೀನುಸರಸವಾಡೋದೆ ಮುರಹರನಕರೆದು ಭಾಮಿನಿ ಸುಗುಣೆ ಕಾಮಿನಿ 1 ಪತಿಯ ಪ್ರೀತಿ ಎನ್ನ ಮ್ಯಾಲೆಅತಿಶಯದಿ ಇರಲು ಜ್ಯೇಷ್ಠಸತಿಯಳೇನೇ ನೀನು ನೋಡುಮತಿಯ ರುಕ್ಮಿಣಿ ಸುಪದ್ಮಗಂಧಿನಿ2 ಒಂದು ಕಾಲದಲ್ಲಿ ದಾಸಿ-ಯಿಂದ ಪತಿಯು ಸರಸವಾಡಲುಬಂದಳೇನೇ ಅರಸಿ ಸಮ-ಳೆಂದು ಭಾಮಿನಿ ಸುಗುಣೆ ಕಾಮಿನಿ 3 ದಾಸಿ ಸಮಳು ನಾನು ಅಲ್ಲ ದೋಷ ಮಾತನಾಡಬೇಡಶ್ರೀಶನ ದಯರಾಶಿ ಇರಲುದಾಸಿಯೆ ರುಗ್ಮಿಣಿ ಸುಪದ್ಮಗಂಧಿನಿ 4 ಸಾರೆ ಕೃತ್ಯವಾರೆ ಹೂಡಿದ್ವಾರಾವತಿಯಿಂದ ಎನ್ನಸಾರೆ ಬಂದ ಪ್ರೀತಿಯು ಅ-ಪಾರೆ ಭಾಮಿನಿ ಸುಗುಣೆ ಕಾಮಿನಿ5 ಕಡಲಶಾಯಿ ತಡೆದರಿನ್ನುದಿಡುಗು ದೇಹ ಬಿಡುವೆನೆಂಬೊನುಡಿಯ ಕೇಳಿ ಪಿಡಿದನೆಬಿಡದೆ ರುಗ್ಮಿಣಿ ಸುಪದ್ಮಗಂಧಿನಿ 6 ಮಂದರಧರನು ಪ್ರೀತಿ-ಯಿಂದ ನಿನ್ನ ಪಡೆದನೇನೆಒಂದು ಮಣಿಯ ಕಾರಣದಿಬಂದೆ ಭಾಮಿನಿ ಸುಗುಣೆ ಕಾಮಿನಿ7 ಸುಮ್ಮನೆ ಬಂದವಳಿಗೆಬ್ರಹ್ಮ-ಲಗ್ನದಿ ಬಂದೆನಗೆಸಾಮ್ಯವೇನೆ ಯಾಕೆ ನಿನಗೆಹೆಮ್ಮೆ ರುಗ್ಮಿಣಿ ಸುಪದ್ಮಗಂಧಿನಿ. 8 ಮಾನಾದಿ ಭಕ್ತಿಯು ಕನ್ಯಾ-ದಾನವು ಲೋಕದೊಳಗುಂಟುಏನು ನಿನ್ನ ತಾತ ಕೊಟ್ಟದೀನ ಭಾಮಿನಿ ಸುಗುಣೆ ಕಾಮಿನಿ 9 ಎನ್ನ ಹಂಗದೆಂದುಪ್ರಸನ್ನ ಕೇಳಿ ಶತಧನ್ವನಬೆನ್ನಟ್ಟಿ ಕೊಂದನೇ ನೀ-ಚೆನ್ನ ರುಗ್ಮಿಣಿ ಸುಪದ್ಮ ಗಂಧಿನಿ 10 ವೀರ ಅರಸರ ಸ್ವಭಾವಚೋರರ ಕೊಲ್ಲಬೇಕೆಂಬೋಸಾರ ಪ್ರೀತಿಯದರಿಂದತೋರಿ ಭಾಮಿನಿ ಸುಗುಣೆ ಕಾಮಿನಿ11 ಇಂದ್ರಾದಿ ದೇವತೆಗಳೊಳುಸಾಂದ್ರಯುದ್ಧವನ್ನೆ ಮಾಡಿವೀಂದ್ರ ಎನಗೆ ಪಾರಿಜಾತತಂದ ರುಗ್ಮಿಣಿ ಸುಪದ್ಮಗಂಧಿನಿ12 ಕ್ಲೇಶ ನೋಡಿ ತಂದತರುವ ಭಾಮಿನಿ ಸುಗುಣೆ ಕಾಮಿನಿ13 ನಿಜಳೆಂದು ರಂಗನು ಎನ್ನವಿಜಯಯಾತ್ರೆಯಲ್ಲಿ ತನ್ನಭುಜಗಳಿಂದಾಲಂಗಿಸಿದಸುಜನೆ ರುಗ್ಮಿಣಿ ಸುಪದ್ಮಗಂಧಿನಿ 14 ಅರಸರ ಸ್ವಭಾವ ತಮ್ಮಅರಸೇರ ಮನೆಯೊಳಗಿಟ್ಟುಸರಸ ದಾಸೇರಿಂದ್ಹೋಗೋದುಸ್ಮರಿಸೆ ಭಾಮಿನಿ ಸುಗುಣೆ ಕಾಮಿನಿ 15 ಸಾರವಚನ ಕೇಳಿ ಭಾಮೆಮೋರೆ ಕೆಳಗೆ ಮಾಡುತಿರಲುನಾರಿ ರುಕ್ಮಿಣಿ ಭಾಮೆಯರನ್ನುವೀರ ಕರೆದನು ತಾ ಸೇರಿ ಮೆರೆದನು16 ಮಂಗಳಾಂಗ ಮಹಿಮ ಕೇಶವಾ-ಲಿಂಗಿಸಿದ ಭೈಷ್ಮಿಯನ್ನುತುಂಗಗುಣ ಗೋಪೀರಮಣರಂಗವಿಠಲನು ಅನಂಗಜನಕನು 17
--------------
ಶ್ರೀಪಾದರಾಜರು
ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ ಹೀಗೆ ದಿನಗಳಿವಂಗನಿಗೆ ಪ ಬ್ಯಾಗ ಪತಿಗೆ ತಾ ಬಾಗದನುಕೂಲವಾಗಿರದೆ ತಿಳಿದ್ಹಾಗೆ ನಡೆವಳ ಅ.ಪ. ಉದಯದಲೆದ್ದತಿ ಸಜಮಲಳಾಗಿ ತಾ ಮುದದಿ ಪತಿಗೆ ನಮಿಸದವಳಿಗೆ ಪದುಮಾಕ್ಷಿ ತುಳಸಿಯ ಪೂಜಿಸಿ ಮನದಿ ಮಾಧವನ ಭಕ್ತಿಲಿ ಸ್ತುತಿಸದವಳಿಗೆ ಪದುಮನಾಭನೇ ಸರ್ವಪರನೆಂದು ಅರಿಯದೆ ಅಧಮ ಶಾಸ್ತ್ರವ ಕೇಳಿ ಅದರಂತೆ ನಡೆವಳ 1 ಹರಿದಿನದಲಿ ಉಂಡು ಹರಿಯನ್ನದಲೇ ಊರ ತಿರುಗಿ ಹೊತ್ತು ಕಳೆವಳಿಗೆ ಸರಸದಿ ನರಹರಿ ನಾಮ ಸಂಕೀರ್ತನೇ ಇರುಳು ಜ್ಯಾಗರ ಮಾಡದವಳಿಗೆ ದೊರಕಿದಷ್ಟರಲೇ ತಾ ಹರುಷ ಪಡೆದೇ ಧನ ಪತಿ ಹೊರಗ್ಹಾಕ್ವಳ 3 ಗುರು ಹಿರಿಯರ ಅತ್ತೆಮಾವರ ಜರಿದು ತಾ ಹಿರಿಯಳು ಮನಿಗೆ ನಾನೆನುತಿರ್ಪಳು ಪರರ ನಿಂದಿಸಿ ಭೂಸುರರು ಬಂದರೆ ಅನ್ನ ದೊರಕದೆನುತ ಹೇಳಿ ಕಳಹುವಳ ಸರಸ ಮೃಷ್ಟಾನ್ನವ ಹರುಷದಿ ಪತಿದ್ವಾರಾ ಹರಿಗರ್ಪಿಸದಲೇ ತ್ವರದಿ ತಾ ತಿನ್ವಳ 3 ಪತಿ ಅಂತರ್ಯಾಮಿ ಶ್ರೀ ಪತಿಯನರಿದು ತನ್ನ ಪತಿಯ ಸೇವೆ ಮಾಡದಿರುವಳಿಗೆ ಪತಿ ಮುಕ್ತಿ ಪಥವೆಂದು ಪತಿಹಿತದವನೆಂದು ಅರಿಯದೇ ಪತಿ ನೋಡ್ವಳಿಗೆ ಪತಿಯಿಂದಲಂಕೃತವಾಗಿಹ ಮಂಗಳಸೂತ್ರವೇ ಸಕಲ ಭೂಷಣವೆಂದರಿಯದವಳಿಗ್ಹಾಂಗೆ 4 ಪರಮ ಅತ್ತೆಯ ಮಾತು ಶಿರದಿ ಸ್ವೀಕರಿಸಿ ಐವರ ಕೂಡ ಧಾರೆಯರೆಸಿಕೊಂಡಾ ಪರಮ ಪಾವನಳಾದ ಭಾರತೀ ದೇವೇರ ಸ್ಮರಿಸದೇ ಅದರಂತಾಚರಿಸದೆ ಇರುವಳಿಗ್ಹ್ಯಾಂಗೆ 5 ವನವಾಸದಲಿ ಪಾಂಡು ತನಯರ ಕೂಡ ತಾ ಧನ ಸುಖ ಬೇಡದೆÀ ಪೋದವಳು ಘನ ಹಸಿವುತೃಷೆಯಿಂದ ಅನ್ನ ಬೇಡಿದ ದುರ್ವಾಸಾದಿಗಳನು ಆದರಿಸಿದವಳಾ ಆಜನನಿ ದೃಪವ ನಂದನಿಯ ಕೃತ್ಯಗಳನ್ನು ನೆನೆದು ತನ್ನಯ ಮನವನ್ನು ತೊಳೆಯದವಳು 6 ಮರುತಂತರ್ಗತ ಸ್ವಾಮಿ ಸಲಹೆನ್ನದೇ ಪರರಿಗೊಂದೆಡೆ ಇಕ್ಕಿ ಪಂಕ್ತಿ ಭೇದವ ಮಾಡಿ ಕರ್ಮ ಮಾಡ್ವಳಿಗೆ ಪರಮ ಪಾವನನಾದ ಹನುಮೇಶವಿಠಲನ ನೆರೆ ನಂಬದಲೇ ದೇಹ ಸ್ಥಿರವೆಂದು ತಿಳಿವಳಿಗ್ಹ್ಯಾಂಗ 7
--------------
ಹನುಮೇಶವಿಠಲ