ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಪ್ರೀತಿಯೊ ಮನಕೆ ಎಷ್ಟು ಪ್ರೀತಿಯೊ ಪ ಇಷ್ಟವೆಂದು ತಿಳಿದು ಈ ಕಷ್ಟ ಸಂಸಾರ ಹೊರುವುದು ಅ ಹಸಿವು ತೃಷೆಯು ಶೋಕ ಮೋಹ ಅಸುವಗೊಂಬ ಜನನ ಮರಣವಿಷ ಸಮಾನವಾದ ಬಹಳ ವ್ಯಸನ ಮೆರವಣಿಮುಸುಕಿ ಕವಿವ ವ್ಯಾಘ್ರದಂತೆ ಅಡಗಿ ಮುಪ್ಪುಗೊಂಬ ರೋಗವಿಷಯದೊಳಗೆ ಕ್ಲೇಶಪಟ್ಟು ವಿಷಯದಿಚ್ಛೆ ಬಿಡದ ಮನಕೆ 1 ನೀರಗುಳ್ಳೆ ಎನಿಪ ಕಣ್ಣ ನೀರಜಾಕ್ಷಿ ಎಂದು ಮತ್ತೆಸೋರುವ ಜಘನ ಕರಿಯ ಕುಂಭ ಸುರಿವ ಶ್ಲೇಷ್ಮದಮೋರೆ ಚಂದ್ರಬಿಂಬ, ಮಾಂಸವಿಕಾರವಾದ ಕುಚವ ಕನಕಕಲಶಸಾರವೆಂದು ನರಕರೂಪಿನ ನಾರಿಯರಿಗೆ ಭ್ರಮಿಸಿ ಬಾಳ್ವುದು2 ಕುಸುಮ ಗಂಧಮಾಲೆ ಕಸ್ತೂರಿಯನು ಪೂಸಿಕೊಂಡುವಸ್ತ್ರ ಒಡವೆ ಇಟ್ಟು ಬಹಳ ಶಿಸ್ತು ನರಕಿಯೆನಿಸಿ ಮೆರೆವುದು3 ಕಾಯ ಸೌಖ್ಯದಿಆಯಾಸಪಟ್ಟು ಗಳಿಸಿದರ್ಥ ಹೇಯವೆನದೆ ಭೋಗಿಸುತ್ತಬಾಯ ಸವಿಯನುಂಡು ಕಡೆಗೆ ನಾಯ ಸಾವು ಸಾಯೋ ಬಾಳಿಗೆ 4 ಮನ್ನಿಸಿ ಗುರುಹಿರಿಯರುಕ್ತಿಯನ್ನು ಕೇಳದೆ ಕಿವುಡುಗೆಟ್ಟುಜೊನ್ನೆಯ ತುಪ್ಪ ಅನ್ನ ಒಲ್ಲದೆ ಎಲುವು ಮಾಂಸವನ್ನು ತಿಂಬಕುನ್ನಿಯಾದೆನಯ್ಯ ಕೃಷ್ಣ ನಿನ್ನ ಮಾಯದೊಳು ಸಿಲ್ಕಿದಎನ್ನನುದ್ಧರಿಸೊ ಸುಪ್ರಸನ್ನ ಆದಿಕೇಶವ5
--------------
ಕನಕದಾಸ
ಕರಪಿಡಿದು ಕಾಯೊ ಶ್ರೀ ಕರುಣಾಳು ಧನ್ವಂತ್ರಿ ವರ ವೆಂಕಟಾದ್ರಿವಾಸ ಪ. ತರಳೆ ಸೇವೆಯ ಕೊಂಡು ಪರಿಪರಿಯ ಬಗೆಯಿಂದ ವರ ಕೃಪೆಯ ಮಾಡೊ ಸ್ವಾಮಿ ಪ್ರೇಮಿ ಅ.ಪ. ಆವ ಪರಿಯಿಂದ ಜಗದೊಳು ನೋಡೆ ಕಾವರಿ ನ್ನಾವರುಂಟೆಲೊ ದೇವನೆ ಪಾವಮಾನಿಯ ಪ್ರೀಯ ಪರಿಪರಿಯ ಪಾಪ ಫಲ ದೀವಿಧದ ಬವಣೆಯನ್ನೇ ನೀ ವಿಚಾರಿಸಿ ಕಾಯೊ ನಿನ್ನ ಶರಣ್ಹೊಕ್ಕಮೇ- ಲಾವ ಸಂಶಯ ಕಾವನೇ ಪಾವಕನ ತೆರದಿ ಭಸ್ಮವ ಮಾಡಿ ದುಷ್ಕರ್ಮ ಜೀವಕ್ಹಿತ ಕೊಡು ಪ್ರೀತನೇ | ಇನ್ನೇ 1 ಸುರರ ವ್ಯಾಕುಲ ಬಿಡಿಸಿ ಅಮರ ಪಕ್ಷವ ವಹಿಸಿ ವರ ಸುಧೆಯನವರಿಗುಣಿಸೀ ದುರುಳ ಸಂಘವ ಕೊಲಿಸಿ ಸುರ ರಾಜ್ಯಸ್ಥಿರಪಡಿಸಿ ಪರಿಪರಿಯ ಸೌಖ್ಯ ಸುರಿಸೀ ಮೆರೆದೆಯೋ ಗುಣಸಿಂಧು ನಿನ್ನ ಸೇವಕಳೆಂದು ಪರಿಕರಿಸಿ ನೀನೀಕ್ಷಿಸೀ ಪರಿ ಕಾಣೆ ಹರಿಸು ಭಯ ಶ್ರೀ ನರಹರೇ | ಶೌರೇ 2 ಬರಿದು ಮಾಡದೆ ಎನ್ನ ಬಿನ್ನಪವ ಪೊರೆಯ ಬೇ- ಕರವಿಂದ ದಳ ನೇತ್ರನೇ ಗುರು ಹಿರಿಯರುಕ್ತಿಯಲ್ಲದೆ ಎನ್ನದೆಂಬುವೋ ಗರುವ ನುಡಿಯಲ್ಲ ನೀನೇ ಚರಣ ಸೇವಕರ ಪೊರೆವಂಥ ವಿಶ್ವಾತ್ಮಕನೆ ಪರಿಹರಿಸು ಕ್ಲೇಶಗಳನೇ ಕರುಣಿ ಶ್ರೀ ಗೋಪಾಲಕೃಷ್ಣವಿಠ್ಠಲ ಶೇಷ- ಗಿರಿನಿಲಯ ಭಕ್ತ ಪ್ರೀಯಾ | ಜೀಯಾ 3
--------------
ಅಂಬಾಬಾಯಿ
ನೊಂದೆನಯ್ಯ ನಂದನಂದನ ಪ. ಹಿಂದು ಮುಂದನರಿಯದಿಂದು ತಂದೆ ನೀನೆ ರಕ್ಷಸೆಂದೇ ಅನನ್ಯಭಾವದೇ ಅ.ಪ. ನೋಡಲಿಲ್ಲ ನಿನ್ನಪದವ ಪಾಡಲಿಲ್ಲ ನಿನ್ನ ಗುಣವ ಮಾಡಲಿಲ್ಲ ನಿನ್ನ ಸೇವೆ ಮೂಢನಂದದಿ ದೂಡಿಸುಜನರ ಸಂಗವನ್ನು ಬೇಡಿ ಕೃಪಣರ ಕರುಣೆಯನ್ನು ಕಾಡುಹರಟೆಯಿಂದ ಕಳೆದೆನಕಟ ಕಾಲಮಂ1 ಉರಿವಕೊಳ್ಳಿಯನ್ನೆ ತುಳಿದೆ ಸುರಿದೆನೀರನುರಿಗೆ ಬರಿದೆ ಹಿರಿಯರುಕ್ತಿಯ ಮೀರಿನಡೆದೆ ಮೆರೆದೆ ಗರ್ವದೆ ಶರಣರನ್ನು ಜರಿದು ನುಡಿದೆ ಪರರ ಹಿಂಸೆಗೈದೆ ಮದದೆ ಪರಮಪಾಪಿಯಾದೆ ನಿನ್ನ ಸ್ಮರಣೆ ಮಾಡದೆ 2 ಅರಿತು ಅರಿಯದಾಚರಿಸಿದಂಥಾ ದುರಿತಗಳನು ಕುರಿತು ಕುರಿತು ಪರಿಪರಿಯೊಳೊರಲುತಿಹೆನು ಪರಮಪುರುಷನೇ ವರದನೆಂಬ ಬಿರುದು ನೆನೆದು ಶರಣುಬೇಡುವ ಕಂದನೆಂದು ಕರವಪಿಡಿದು ಪೊರೆಯೊ ಶೇಷಗಿರಿಯ ವರದನೆ3
--------------
ನಂಜನಗೂಡು ತಿರುಮಲಾಂಬಾ