ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಸ್ತುತಿ ಗುರುಗಳ ಕರುಣವಿದು ಇರುಳು ಹಗಲು ಹರಿಸ್ಮರಣೆಯೊಳಿರುವದು ಪ ಕಲಿಯುಗ ಒದಗಿತಲ್ಲ | ವಿಷಯದಿ ಚಲಿಸಿತು ಮನವೆಲ್ಲ ಇಳೆಯೊಳು ಹಿರಿಯರಿಲ್ಲ ನೆರೆಜನ ಖಳರು ಸಜ್ಜನರಲ್ಲ 1 ವೇದ ಓದುಗಳಿಲ್ಲ ಸುಮ್ಮನೆ ಕಾದಿ ಕಳೆವರು ಕಂಡ್ಹಾಗೆ ಮೋದತೀರ್ಥರ ಮತ ಇದರೊಳು ಓದಿ ಪೇಳುವರಿಲ್ಲ 2 ಮೋಸ ಪೋಗದ ಹಾಗೆ ಹರಿಪದ ದಾಸ್ಯವ ಬಿಡದಾಗೆ ವಾಸುದೇವವಿಠಲನ್ನೆ ಕರುಣದಿ ವಾಸರ ಕಳೆಯುವನೋ | ನಮ್ಮ 3
--------------
ವ್ಯಾಸತತ್ವಜ್ಞದಾಸರು
ಜ್ಞಾನವಂತರ ಸಂಗವಿರಲು ಸ್ನಾನವ್ಯಾತಕೆ ಪ ನಾನು ಎಂಬುದ ಬಿಟ್ಟ ಮೇಲೆ ನರಕವ್ಯಾತಕೆ ಅ.ಪ. ಮೃತ್ತಿಕೆ ಶೌಚ ಮಾಡದವನ ಆಚಾರವ್ಯಾತಕೆಸತ್ಯವಾದಿ ಆಗದವನ ನಂಬಿಗೆ ಯಾತಕೆ ||ಚಿತ್ತಶುದ್ಧಿ ಇಲ್ಲದವನ ವೈರಾಗ್ಯವ್ಯಾತಕೆಉತ್ತಮ ಹಿರಿಯರಿಲ್ಲದಂಥ ಸಭೆಯು ಯಾತಕೆ 1 ಪತಿಯ ಆಜ್ಞೆ ಮೀರಿದವಳ ವ್ರತಗಳ್ಯಾತಕೆಸತಿಗೆ ಅಳುಕಿ ನಡಿಯುವವನ ಸಾಹಸವ್ಯಾತಕೆ ||ಯತಿಯ ನಿಂದೆ ಮಾಡುವವನ ಮತಿಯು ಯಾತಕೆಅತಿ ವಿರೋಧ ಬಡಿಸುವಂಥ ಅಣ್ಣನ್ಯಾತಕೆ 2 ಹರಿಕಥೆಯ ಕೇಳದವನ ಕಿವಿಯು ಯಾತಕೆಮುರಹರನ ಮೂರ್ತಿಯ ನೋಡದಂಥ ಕಂಗಳ್ಯಾತಕೆ ||ಮರುತ ಮತವ ಪೊಂದದವನ ಬಾಳ್ವೆ ಯಾತಕೆಎರಡಾರು ನಾಮವಿಡದ ಶರೀರವೇತಕೆ3 ತಂದೆ ತಾಯಿ ಮಾತು ಕೇಳದ ಮಕ್ಕಳ್ಯಾತಕೆಬಂಧು ಬಳಗ ಉಳ್ಳದವನ ಭಾಗ್ಯವ್ಯಾತಕೆ ||ಬಂದ ಅತಿಥಿಗನ್ನವನಿಕ್ಕದ ಸದನವೇತಕೆ ಗೋ-ವಿಂದನಂಘ್ರಿ ಸ್ಮರಿಸದಂಥ ನಾಲಿಗ್ಯಾತಕೆ 4 ಮಕ್ಕಳನ್ನ ಮಾರಿಕೊಂಬ ತಂದೆಯಾತಕೆರೊಕ್ಕಕಾಗಿ ಬಡಿದಾಡುವ ತಮ್ಮನ್ಯಾತಕೆ ||ಕಕ್ಕುಲಾತಿ ಬಡುವ ಸಂನ್ಯಾಸವ್ಯಾತಕೆಠಕ್ಕು ಭಕುತಿ ಮಾಡುವಂಥ ದಾಸನ್ಯಾತಕೆ 5 ಆಗಿ ಬರದವರ ಅನ್ನ ಉಣ್ಣಲ್ಯಾತಕೆರೋಗವಾದ ನರಗೆ ಹೆಣ್ಣಿನ ಭೋಗವ್ಯಾತಕೆ ||ಯೋಗಿಯಾದ ಮೇಲೆ ದ್ರವ್ಯದ ಆಶೆಯಾತಕೆಭಾಗೀರಥಿಯ ಮಿಂದ ಮೇಲೆ ಪಾಪವ್ಯಾತಕೆ 6 ವೇದವನ್ನು ಓದದಂಥ ವಿಪ್ರನ್ಯಾತಕೆಕಾದೊ ರಣಕೆ ಅಂಜುವಂಥ ಕ್ಷತ್ರಿಯನ್ಯಾತಕೆ ||ವಾದವನ್ನು ಮಾಡುವಂಥ ಬಂಟನ್ಯಾತಕೆಸಾಧುಗಳಿಗೆ ಎರಗದವನ ಶಿರವಿದ್ಯಾತಕೆ 7 ಯಾತ್ರೆ ತೀರ್ಥ ಮಾಡದಂಥ ಪಾದವ್ಯಾತಕೆಪಾತ್ರರ ಸಂಗವಾಗದವನ ಜನ್ಮವ್ಯಾತಕೆ ||ಸ್ತೋತ್ರಕೆ ಮರುಳಾಗುವವಗೆ ಸಾಧನ್ಯಾತಕೆಪಾರ್ಥ ಸಖನ ತಿಳಿಯದವನ ಜ್ಞಾನವ್ಯಾತಕೆ 8 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆಅರಿತು ವಿದ್ಯ ಪೇಳದ ಉಪಾಧ್ಯನ್ಯಾತಕೆ ||ಹರುಷವನ್ನು ತಾಳದಂಥ ಜ್ಞಾನಿ ಯಾತಕೆಕರಣ ಶುದ್ಧಿ ಇಲ್ಲದವನ ಸ್ನೇಹವ್ಯಾತಕೆ 9 ಗಾಣ ಕಟ್ಟಿದೆತ್ತಿಗೆ ಗೆಜ್ಜೆಯಾತಕೆ ||ರಾಣಿ ಇಲ್ಲದವನು ಮಾಡುವ ಬದುಕು ಯಾತಕೆತಾನು ಉಣ್ಣದೆ ಪರರಿಗಿಕ್ಕದ ಧನವಿದ್ಯಾತಕೆ 10 ಧರ್ಮವಿಲ್ಲದೆ ರಾಜ್ಯ ಆಳುವ ಪ್ರಭುವಿದ್ದ್ಯಾತಕೆಮರ್ಮವರಿತು ನಡೆಯದಂಥ ಹೆಣ್ಣು ಯಾತಕೆ ||ನಿರ್ಮಲಾಂಗನಾದ ಮೋಹನ ವಿಠಲನ ಗುಣಕರ್ಮ ಕ್ರಿಯಾ ತಿಳಿದ ಮ್ಯಾಲೆ ನಿರ್ಣಯವ್ಯಾತಕೆ 11
--------------
ಮೋಹನದಾಸರು
ಮಾಧವ ಗೀತೆ ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ ಶರುಣು ಭವಗೆ ಶರಣು ಶಿವೆಗೆ ಶರಣು ಬೆನಕಗೆ ಶರಣು ತತ್ವಮಾನಿಗಳಿಗೆ ಶರಣು ಮುನಿ ಸಮೂಹಗಳಿಗೆ ಮಾಧವ 1 ಪರಮಭಕ್ತರಾಗಿ ಮೆರೆದ ಗುರು ಪುರಂದರಾದಿ ಸಾಧು ವರರ ವಚನ ಮಣಿಗಳನ್ನು ಮನದೊಳಾರಿಸಿ ಸರವ ಮಾಡಿ ಶರಣ ಜನರ ಕರುಣದೆಳೆಯೊಳಿದನು ಬಿಗಿಸಿ ಮಾಧವ 2 ಶ್ರೀಯೆ ಸತಿಯು ನಿನಗೆ ಬ್ರಹ್ಮರಾಯ ಹಿರಿಯ ಮಗನು ವೈನ- ತೇಯ ರಥವು ಖಾದ್ರವೇಯೆ ಶಯ್ಯೆ ಛತ್ರವು ಮನೆಯ ದಾಸಿ ಸುರನಿ ಮಾಧವ 3 ಪರ್ವತೇಶನಣುಗಿ ತಂಗಿ ಶರ್ವದೇವ ನರ್ಮ ಸಖಳು ಸರ್ವದುರಿತವಳಿವ ಗಂಗೆ ನಿನ್ನ ಪುತ್ರಿಯು ಸರ್ವಕರ್ತ ಸರ್ವಶಕ್ತ ಸರ್ವಕಾಲ ದೇಶ ವ್ಯಾಪ್ತ ಭೋಕ್ತ ಮಾಧವ 4 ನೀನೆ ತಾಯಿ ನೀನೆ ತಂದೆ ನೀನೆ ಬಂಧು ನೀನೆ ಬಳಗ ನೀನೆ ಸಖಳು ನೀನೆ ಗುರುವು ನೀನೆ ದ್ರವ್ಯವು ನೀನೆ ಧೃತಿಯು ನೀನೆ ಸ್ಮøತಿಯು ನೀನೆ ಮತಿಯು ಮಾಧವ 5 ನಿನ್ನ ನಾಮ ಪುಣ್ಯನಾಮ ನಿನ್ನ ರೂಪ ಮಾನ್ಯರೂಪ ಅನ್ಯ ದೈವರನ್ನು ಕಾಣೆ ಘನ್ನ ಭಕ್ತವರ್ಯರಾಣೆ ಮಾಧವ 6 ದೀನ ನಾನು ದಾನಿ ನೀನು ಹೀನ ನಾನು ಮಾನಿ ನೀನು ಏನ ಬಲ್ಲೆನೈಯ ನಾನು ಜ್ಞಾನಪೂರ್ಣನೈಯ ನೀನು ಮಾಧವ 7 ಹೃದಯದಲ್ಲಿ ನಿನ್ನ ರೂಪ ವದನದಲ್ಲಿ ನಿನ್ನ ನಾಮ ಉದರದಲ್ಲಿ ಅರ್ಪಿತಾನ್ನವಿತ್ತು ಅನುದಿನ ಒದಗಿ ಬಂದು ಬದಿಯಲಿದ್ದು ಮದಡ ಬುದ್ಧಿಯನ್ನು ಬಿಡಿಸಿ ಮಾಧವ 8 ಸ್ನಾನ ಮೌನ ಧ್ಯಾನ ತಪಗಳೇನು ಮಾಡಲೇನು ದೇವ ನೀನೆ ಕೃಪೆಯಿನೊಲಿಯದಿರಲು ಜ್ಞಾನ ಬಾರದು ಏನು ಹೀನ ಹಾನಿ ಬರಲು ನೀನು ಮಾತ್ರ ಬಿಡದಿರೆನ್ನ ಮಾಧವ 9 ನಿತ್ಯವಲ್ಲ ದೇಹವಿನ್ನು ವ್ಯರ್ಥವಾಗಿ ಪೋಪುದಾಯು ಮತ್ತೆ ಬರುವುದೇನು ನಿಜವು ಮತ್ರ್ಯಕಾಯವು ನಿತ್ಯ ನಿನ್ನ ಭಜಿಸುತಿಪ್ಪ ಮಾಧವ 10 ಅಂಬುಗುಳ್ಳೆಯಂತೆ ಇರುವ ಡಿಂಬವನ್ನು ನಂಬಿ ಕೆಟ್ಟು ಹಂಬಲಿಸುತ ವಿಷಯಗಳಿಗೆ ಡೊಂಬನಾದೆನು ಕಂಬಳಿಯೊಳು ಕಟ್ಟಿದನ್ನ ತಿಂಬುವನಿಗೆ ದೊರೆವ ಸುಖವು ಮಾಧವ 11 ಹೊಟ್ಟು ತಂದು ಕುಟ್ಟಿ ಕೇರಿ ಕಷ್ಟಪಟ್ಟು ತುಕ್ಕಿ ಬೀಸಿ ಅಟ್ಟಹಾಸದಿಂದ ರೊಟ್ಟಿ ಸುಟ್ಟು ತಿನ್ನಲು ಎಷ್ಟು ಸುಖವೊ ಅಷ್ಟೆಯಿನ್ನು ಭ್ರಷ್ಟ ಭವದಿ ಮಮತೆಯಿಡಲ ಮಾಧವ 12 ಹೊಟ್ಟೆಕಿಚ್ಚು ಪಡುವೆ ದೈವಕೆಷ್ಟು ಪೂಜೆ ಮಾಡೆ ಕರುಣ ಪುಟ್ಟಲೊಲ್ಲದದಕೆ ಬೆಟ್ಟದಷ್ಟು ಕೊಟ್ಟರು ಬೆಟ್ಟು ನೀರೊಳದ್ದಿ ಬಾಯೊಳಿಟ್ಟು ಚಪ್ಪರಿಸಲು ರುಚಿಯ ಮಾಧವ 13 ತಪ್ಪು ಸಾಸಿರಂಗಳನ್ನು ಒಪ್ಪಿಕೊಂಡು ಕಾವದೇವ ಮುಪ್ಪುರಂಗಳನ್ನು ಗೆಲಿಸಿದಪ್ರಮೇಯನೆ ಕಪ್ಪು ಮೇಘಕಾಂತಿಯಿಂದಲೊಪ್ಪುತಿಪ್ಪ ತಿರುಮಲೇಶ ಮಾಧವ 14 ಒರಳ ನೆಕ್ಕಿ ವ್ರತವ ಕೆಟ್ಟ ಮರುಳನಂದವಾಯ್ತು ದೇಹ ಧರಿಸಿದುದಕೆ ನಿನ್ನ ಬಿಟ್ಟು ನರರ ಸ್ತುತಿಸಲು ಹರಕು ಚಿಂದಿ ಬಿಡಿಸಲಿಲ್ಲ ಕರಕು ಅನ್ನ ಹೋಗಲಿಲ್ಲ ಮಾಧವ 15 ಮೊರಡು ತುರುವ ಹಿಡಿದು ಕಟ್ಟಿ ಕರೆದು ಕಷ್ಟ ಪಟ್ಟು ಪಾಲ ನುರಗಗಳಿಗೆ ಎರೆದ ತೆರದಲಾಯ್ತು ನಿನ್ನನು ತರಣಿ ಮುಣಗ ದುಡಿದು ಬಡಿದು ಮಾಧವ 16 ಕೆರವ ತಿಂಬ ನಾಯಿಗಿನ್ನು ಸುರುಚಿಯನ್ನ ಸೊಗಯಿಸುವುದೆ ನರಕ ಭಾಗಿ ಪಾಮರಂಗೆ ನಿನ್ನ ನಾಮವು ಗರಳದಂತೆ ತೋರ್ಪುದೈಯ ಗುರುಗಳಿಲ್ಲ ಹಿರಿಯರಿಲ್ಲ ಮಾಧವ 17 ಕ್ರೂರ ಮಾನವರೊಳುದಾರ ಧೀರ ಶೂರರೆಂದು ಸಾರಿ ಬಾರಿ ಬಾರಿಗಿನ್ನು ಪೊಗಳಿ ಬೊಬ್ಬೆಯಿಟ್ಟರು ಬಾರದವರಿಗೆಂದು ಕರುಣ ಘೋರತನದ ದನುಜರವರು ಶೌರಿ ಮಾಧವ 18 ಹಾಳು ಹೊಲಕೆ ನೀರನೆತ್ತಿ ತೋಳು ಬೀಳು ಹೋದವೋಲು ಖೂಳ ಜನಕೆ ಪೇಳಿಕೊಳ್ಳುತಿಹನು ಬಾಳ್ವೆಯು ದಾಳಿ ಮಾಳ್ಪ ವಿಷಯಗಳನು ಹೂಳಿ ಜ್ಞಾನ ಭಕ್ತಿಯನ್ನು ಮಾಧವ 19 ಎಷ್ಟು ನೀಲಿಯನ್ನು ತೊಳೆಯೆ ಬಿಟ್ಟು ಹೋಗದವರ ಬಣ್ಣ ದುಷ್ಟ ಮಾನವರಿಗೆ ಕರುಣ ಪುಟ್ಟದೆಂದಿಗು ಕಷ್ಟಪಟ್ಟು ಸೇವಿಸುವರ ಹೊಟ್ಟೆಯನ್ನು ಹೊಡೆದು ತಮ್ಮ ಮಾಧವ 20 ನಿರುತ ನಿನ್ನ ಕಥೆಯ ಬಿಟ್ಟು ನರರ ಕಥೆಗಳನ್ನು ಕೇಳಿ ಗುರುಗಳನ್ನು ಹಿರಿಯರನ್ನು ಜರೆಯುತಿಪ್ಪರು ಪೊರೆದ ತಂದೆ ತಾಯ ಮಾತ ಪರಿಕಿಸದಲೆ ತೊರೆದು ತಮ್ಮ ಮಾಧವ 21 ಪಟ್ಟದರಸಿಯನ್ನು ತೊರೆದು ಬಿಟ್ಟು ಪರರ ಸತಿಯ ಕೂಡಿ ಕೊಟ್ಟ ಸಾಲವನ್ನು ಕೊಡದೆ ನುಂಗುತಿಪ್ಪರು ಕರವ ಭಾಷೆಯನ್ನು ಕೊಟ್ಟು ಮೋಸ ಮಾಡುತಿಹರು ಮಾಧವ 22 ಉಂಡ ಮನೆಗೆ ಬಗೆವರೆರಡನವರು ಭಂಡರು ಕಂಡು ನುತಿಸಿ ಬೇಡಿಕೊಂಡರು ದಂಡಿಸುವರ ಕಂಡು ನಡುಗಿ ಮಾಧವ 23 ಕೊಳ್ಳರೊಳಗೆ ಸ್ನೇಹ ಬಹಳ ಸುಳ್ಳರೊಳಗೆ ಸೋಲುತಿಹರು ಒಳ್ಳೆಯವರ ಕಂಡವರ ಟೊಳ್ಳು ಮಾಳ್ಪರು ಬಳ್ಳೆಸುರಿದು ಬಲ್ಲಿದವರಿಗಳ್ಳೆ ಬಿರಿಯಲುಣಿಸಿ ದಣಿಸಿ ಮಾಧವ 24 ಮಾಡಿದಂಥ ಕೃತಿಯು ಮರೆತು ಕೇಡು ಬಗೆದು ಕಾಡುತಿಹನು ನೋಡರೊಮ್ಮೆಗಾದರವರು ಬಡವರೆಂಬುದ ಜಾಡೆಯರಿತು ನಿನ್ನ ನಾಮ ಪಾಡಿ ಪೊಗಳುತಿಹರಿಗೆಂದು ಮಾಧವ 25 ಶಾಕವ್ರತದೊಳೆಲ್ಲ ಶಾಕಂಗಳನ್ನು ಬಿಡುವ ತೆರದಿ ಬೇಕು ಬೇಕು ಎಂಬ ಬಯಕೆ ಬಿಡಲು ಬಾರದು ಸಾಕೆನಿಸದೆ ರತಿಯ ಸುಖದೊಳೇಕ ಚಿತ್ತನಾಗುವಂತೆ ಮಾಧವ 26 ನೇಮ ನಿಷ್ಠೆಯೆಂದು ಪರರ ಧಾಮದನ್ನ ಬಿಡುವವೋಲು ಕಾಮಲೋಭ ಮೋಹಗಳನು ಬಿಡಲು ಬಾರದು ನಿತ್ಯ ಪರರ ಮಾಧವ 27 ಹೇಸಿಗೆಯನು ಕಂಡು ಕರದಿ ನಾಸಿಕವನು ಹಿಡಿಯುವಂತೆ ಹೇಸಿ ವಿಷಯ ವಾಸನೆಯನು ಬಿಡಲು ಸಲ್ಲದು ಘಾಸಿಬಟ್ಟು ಪರರ ಸೇವೆಯಾಸೆಬಟ್ಟು ಮಾಡುವಂತೆ ಮಾಧವ 28 ವಿತ್ತ ಪದವಿ ಕಂಡು ಹರುಷ ಕ್ಲೇಶಗಳಿಗೆ ಸಿಲುಕು- ತಿರುಳು ಹಗಲು ಬಿಡದೆ ಕುದಿದು ತೊಳಲುತಿರುವೆನು ದುರುಳ ವಿಷಯಗಳಿಗೆ ಮನವ ಮಾಧವ 29 ಹೇಸಿ ವಿಷಯ ಸುಖವ ನಾನು ಲೇಸೆನುತ್ತೆ ತಿಳಿದು ಮಮತೆ ಯಾಸೆಯಲ್ಲಿ ಕಟ್ಟುಬಿದ್ದು ಕ್ಲೇಶಪಡುತಿಹೆ ಪಾಶಬಿಡಿಸಿ ದಾಸ ದಾಸ ದಾಸನಾಗಿಸೆನ್ನ ದೋಷ ಮಾಧವ 30 ಆಗದೆನಗೆ ಅಬುಜನಾಭ ಭಾಗವತವ ಕೇಳೆ ಮನಸು ಬೈಗು ಬೆಳಗು ಪೋಗುತಿಹುದು ಸಾಗಿ ಬಾರದು ಭೋಗ ಭಾಗ್ಯಗಳನು ಬಯಸಿ ರಾಗ ಲೋಭಗಳಲಿ ನೆಲಸಿ ಮಾಧವ 31 ಬಂದ ಕಾರ್ಯವಾಗಲಿಲ್ಲ ಎಂದು ಬ್ರಹ್ಮ ದೇಹ ಧರಿಸಿ ಮುಂದ ನೊಂದನರಿಯೆ ಮಾಧವ 32 ದಾಸ ವೇಷವನ್ನು ಹಾಕಿ ದೇಶ ದೇಶವನ್ನು ತುಕ್ಕಿ ಮೋಸಮಾಡಿ ಸುಜನರನ್ನು ಘಾಸಿಗೊಳಿಸಿದೆ
--------------
ಲಕ್ಷ್ಮೀನಾರಯಣರಾಯರು
ಭಾಳಭಾಳಬಿಂಕರುಕ್ಮಿಣಿನಿನ್ನಕೇಳಿಬಲ್ಲೆನೆ ಸತ್ಯಭಾಮಿನಿಪ.ದೊರೆಯರ ಮಗಳೆಂದು ಗರವಿಲೆÉ ರುಕ್ಮಿಣಿಬರಲಿಲ್ಲ ನಮ್ಮ ಕರೆಯಲುಬರಲಿಲ್ಲ ನಮ್ಮ ಕರೆಯಲು ರುಕ್ಮಿಣಿಸರಿಯವರುನೋಡಿ ನಗತಾರ1ಕೆಂಚಿನಿಮ್ಮಣ್ಣನ ಪಂಚೆಚೂಡನ ಮಾಡಿಕಂಚಿಯ ವರದ ಕಳುಹಿಲ್ಲಕಂಚಿಯ ವರದ ಕಳುಹಿಲ್ಲ ರುಕ್ಮಿಣಿಪಾಂಚಾಲಿಗೆ ನೀನು ಸರಿಯೇನ 2ನಾರಿ ನಿಮ್ಮಣ್ಣನ ಮಾರಿಯ ಬಾಡಿಸಿತೇರಿಗೆಕಟ್ಟಿಮೆರೆಸಿಲ್ಲತೇರಿಗೆ Pಟ್ಟಿ ಮೆರೆಸಿಲ್ಲ ರುಕ್ಮಿಣಿಯಾರ ಮುಂದಿಷ್ಟು ಬಡಿವಾರ 3ಹರದಿನಮ್ಮಣ್ಣಗೆ ¨ರೆದ ಓಲೆಯನೋಡಹಿರಿಯರಿಲ್ಲೇನ ಮನೆಯಾಗಹಿರಿಯರಿಲ್ಲೇನ ಮನೆಯಾಗಅತ್ತಿಗೆಸರಿಯವರುನೋಡಿ ನಗತಾರ4ಹತ್ತು ಮಾರಿಯವನ ಬೆನ್ನತ್ತಿ ಹೋದವಳೆಂದುಕೀರ್ತಿಯ ಪಡೆದೆಯೆಲೆಭಾವೆಕೀರ್ತಿಯ ಪಡೆದೆಯೆಲೆ ಭಾವೆನೀಮಹಾಮೂರ್ತಿಎಂಬೋದು ಹರಿಬಲ್ಲ5ಪಟ್ಟದರಸಿ ಎಂದು ದೃಷ್ಟಿ ತಿರುಗ್ಯಾವ ನಿನ್ನಎಷ್ಟುಬಡಿವಾರಎಲೆಭಾವೆಎಷ್ಟುಬಡಿವಾರಎಲೆಭಾವೆನೀ ನಮ್ಮಪುಟ್ಟ ಸುಭದ್ರೆಯ ಸರಿಯೇನ 6ಪತಿವ್ರತೆ ಅಂದರೆ ಅತಿ ಅತಿ ಗರುವ್ಯಾಕಪತಿಎಲ್ಲ ಬಲ್ಲ ನಿನ್ನಗುಣಪತಿಎಲ್ಲ ಬಲ್ಲ ನಿನ್ನಗುಣವನದೊಳುಸತಿಅಲ್ಲವೆಂದು ಬಿಡಲಿಲ್ಲ7ಗಂಡನಿನ್ನಯಗುಣಕಂಡನೆ ವನದೊಳುಕೆಂಡವು ಎಂದು ಹೊಗಸಿಲ್ಲಕೆಂಡವು ಎಂದು ಹೊಗಸಿಲ್ಲ ಈ ಮಾತುಪಂಡಿತರುಕೇಳಿಹುಸಿಯಲ್ಲ8ಮಂದಗಮನೆ ನಿನ್ನ ತಂದೆ ಹ್ಯಾಂಗೆ ಅಂದ್ಹಾಂಗೆಇಂದಿರಾಪತಿಯೆಗತಿಕೊಟ್ಟಇಂದಿರಾಪತಿಯೆಗತಿಕೊಟ್ಟ ಅದರಿಂದಬಂದಿತ್ಯಾಕಿಷ್ಟುಬಡಿವಾರ9ನಾರಿ ಹಿಂದಕ್ಕೆ ಒಂದು ಪಾರಿಜಾತಕ್ಕಾಗಿನೀರಜನಯ್ಯನ ದಣಿಸಿದೆಯಲ್ಲನೀರಜನಯ್ಯನ ದಣಿಸಿದೆಯಲ್ಲಅತ್ತಿಗೆಯಾರ ಮುಂದಿಷ್ಟೆಬಡಿವಾರ10ನಾರಿ ಹಿಂದಕೆ ಒಂದು ನಾರು ವಸ್ತ್ರವಕಾಣಿಊರು ಇಲ್ಲದಲೆ ವನವನಊರು ಇಲ್ಲದಲೆ ವನವನ ತಿರುಗಿದಿಯಾರ ಮುಂದಿಷ್ಟುಬಡಿವಾರ11ಧಿಟ್ಟೆ ಹಿಂದಕ್ಕೆ ಒಂದು ಉಟ್ಟೆನೆಂದರೆ ಇಲ್ಲಹೊಟ್ಟೆಗಿಲ್ಲದಲೆ ಮುನಿಪನಹೊಟ್ಟೆಗಿಲ್ಲದಲೆ ಮುನಿಪನ ಕುಟೀರದಿಎಷ್ಟು ದಿನಕಾಲಕಳೆದೆಯಲ್ಲ12ಸ್ವಾಮಿ ಶ್ರೀಕೃಷ್ಣರಾಯ ರಾಮನಂಥವನಲ್ಲಭೂಮಿ ಮ್ಯಾಲಿಂಥ ದೊರೆಯಿಲ್ಲಭೂಮಿ ಮ್ಯಾಲಿಂಥ ದೊರೆಯಿಲ್ಲ ಅದರಿಂದಭಾಮೆ ನೀ ಕಂಡೆಒಗೆತನ13ಪಟ್ಟಾಭಿರಾಮನಂತೆ ಸಿಟ್ಟು ಕೃಷ್ಣಯ್ಯಗಿಲ್ಲಎಷ್ಟು ದಯವಂತ ಯದುಪತಿಎಷ್ಟು ದಯವಂತ ಯದುಪತಿ ಅದರಿಂದಶ್ರೇಷ್ಠಳೆ ಕಂಡೆಒಗೆತನ14ಇಷ್ಟು ಜನರೊಳು ಅಷ್ಟೂಗುಣಗಳ ಸ್ಪಷ್ಟ ಮಾಡಿ ಹೊಗಳಲಿಸ್ಪಷ್ಟ ಮಾಡಿ ಹೊಗಳಲಿ ರಮಿ ಅರಸುಬಿಟ್ಟರೆÉ ನಿನ್ನ ತೆgನೆÉೀನಭಾಳಭಾಳಬಿಂಕರುಕ್ಮಿಣಿ15
--------------
ಗಲಗಲಿಅವ್ವನವರು