ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲದ ಮೇಲೆಯೇ ಹೊಂದಲಿಬೇಡ ಕೇಳಿದನೋ ಕತ್ತೆಕುಲವು ಬೇರೆ ಜ್ಞಾನದ ಹಾದಿಗೆ ನಿನಗೆ ತಿಳಿಯಿತೆ ಪ ಸಣ್ಣವನಾಗಲಿ ಸ್ತ್ರೀಯು ಆಗಲಿ ಆರು ಆದರೆ ಏನುತನ್ನನ್ನು ತಿಳಿದು ತಾನೆಯು ಆದರೆ ಅವನೆ ನಿಜ ಮುಕ್ತಾ 1 ಹಿರಿಯನು ಇಲ್ಲವು ಕಿರಿಯನು ಇಲ್ಲವುತನ್ನನು ತಿಳಿದವ ಹಿರಿಯ ಕರೆಕರೆಸಂಸಾರ ಕೇವಲ ಸುತ್ತಲು ಅರಿತವ ಎಂದಿಗೆ ಮನೆಯೂ 2 ಆವ ಕುಲವು ಆದರೆ ಏನು ತನ್ನ ತಿಳಿಯೆ ಜ್ಞಾನದೇವ ಚಿದಾನಂದನವನನು ಇಲ್ಲವನೆಂದವ ನಲಿವನಾ 3
--------------
ಚಿದಾನಂದ ಅವಧೂತರು
ನೀ ಪಾಲಿಸೋ ಗುರುರಾಯ ಎನ್ನ ಕಾಪಾಡೀಗ ಮಹರಾಯ ಪ ಭೂಪತಿ ನೀ ಎನ್ನ ಆಪದ್ಭಾಂಧವ ಪತಿ ಪರಿ ಮಾಡದೆ ಅ.ಪ ಪಾಪಿಗಳೊಳಗೆ ಹಿರಿಯನು ನಾ ನಿಷ್ಪಾಪಿಗಳರಸೆ ಗುರುರಾಯ ಅಪಾರ - ಜನುಮದಿ ಬಂದಿಹ ತಾಪತ್ರಯವ ಕಳಿ ಮಹರಾಯಾ 1 ನೀಚರ ಒಳಗೆ ನೀಚನೊ ಪಾಪ - ಮೋಚನೆ ಮಾಡೋ ಗುರುರಾಯ ಯೊಚನೆ ಇಲ್ಲದೆ ಅನ್ಯರ ಅನುದಿನ ಯಾಚಿಸಿ ಕೆಟ್ಟೆನೊ ಮಹರಾಯಾ 2 ದೀನರ ಒಳಗೆ ದೀನನು ನಾನೈ ದಾನಿಗಳರಸೇ ಗುರುರಾಯ ಜ್ಞಾನವು ಇಲ್ಲದೆ ನಾನು ನನ್ನದೆಂದು ಹೀನ ಮತ್ಯಾದೆನೊ ಗುರುರಾಯ 3 ಅನ್ನವು ಇಲ್ಲದೆ ಅನ್ಯರ ಮನೆಯಲಿ ಕುನ್ನಿಯಾದೆನೋ ಗುರುರಾಯ ನಿನ್ನನೆ ನಂಬಿ ಅನ್ಯರ ಬೇಡೊದು ಘನ್ನತಿ ನಿನಗೆ ಮಹರಾಯಾ 4 ದಾತನೆ ನಿನ್ನಾ ಪೋತನು ನಾನೀ - ರೀತಿಯ ಮಾಳ್ಪರೆ ಗುರುರಾಯ ನೀತ ಗುರು ಜಗನ್ನಾಥ ವಿಠಲ ಪದ ದೂತನು ನೀನೆ ಮಹರಾಯಾ 5
--------------
ಗುರುಜಗನ್ನಾಥದಾಸರು
ಬದರೀ ಪ್ರಸನ್ನವಿಠಲ | ಮುದದಿ ಪೊರೆ ಇವನಾ ಪ ವಿಧಿ ಭವಾದೀ ವಂದ್ಯ | ಸಕಲ ಜಗತ್ರಾಣಅ.ಪ. ಬುದ್ಧಿಯಲಿ ನೀ ಸ | ದ್ಭುದ್ಧಿ ಪ್ರೇರಕನಾಗಿಮಧ್ವಮತ ದೀಕ್ಷೆಯಲಿ | ಬದ್ಧವೆನಿಸಿವನಾಹೆದ್ದಾರಿ ಮೀರದಲೆ | ಶುದ್ಧ ಸಾಧನಗೈಸಿಉದ್ಧಾರ ಮಾಡೋಹರಿ | ಬದರೀ ನಿವಾಸ 1 ಗುರುಹಿರಿಯನುಸರಿಪ | ವರಮತಿಯ ಕರುಣಿಸುತತರಳನನು ಕೈಪಿಡಿದು | ತೋರೋ ಸನ್ಮಾರ್ಗಅರಹುಲೇನಿಹುದಿನ್ನು | ಸರ್ವಜ್ಞ ನೀನನ್ನುದರ್ವಿ ಜೀವನ ಕಾವ | ಹವಣೆ ನಿನದಲ್ಲೇ 2 ಸತ್ಸಂಗ ಇವಗಿತ್ತು | ಕುತ್ಸಿತವ ಹೊರದೂಡಿವತ್ಸಾರಿ ಶ್ರೀಹರಿಯೆ | ವತ್ಸನ್ನ ಪೊರೆಯೇ |ಮತ್ಸಕೇತನ ಜನಕ | ಉತ್ಸವದಿ ಮೆರೆವಂಥಸತ್ಸ್ವಭಾವನೆ ದೇವ | ಭಿನ್ನವಿಪೆ ನಿನಗೆ 3 ಜ್ಞಾನ ಭಕ್ತಾದಿಗಳ | ನೀನಾಗಿ ಕೊಟ್ಟವಗೆಮಾನನಿಧಿ ಪೊರೆಇವನ | ಧೀನಜನಬಂದೊಕಾಣೆ ಮೂರ್ಲೋಕದೊಳು | ನಿನ್ನಂಥ ಕರುಣಿಗಳಶ್ರೀನಿವಾಸನೆ ತೋರೋ | ಹೃದ್ಗುಹದಿ ಇವಗೇ 4 ಸುಪ್ತೀಶ ನೀನಾಗಿ | ಗೊತ್ತು ಮಾಡ್ಡಂಕಿತವಇತ್ತಿಹೆನೊ ತರಳನಿಗೆ | ವ್ಯಾಪ್ತ ಮೂರುತಿಯೇಇತ್ತು ಮನದಿಪ್ಟವನಾ | ಎತ್ತು ಭವದಿಂದೆಂದುಗೋಪ್ತ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ನೀ ಕರುಣಿಸೊ ವಿಠಲ ನಮ್ಮಸಾಕೊ ಪಂಡರಿ ವಿಠಲ ಪ.ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೆ ವಿಠಲಸಾಸಿವೆಯಷ್ಟು ಭಕುತಿಯನರಿಯೆನುಶೇಷಶಯನ ಶ್ರೀ ವಿಠಲ 1ಭವಸಾಗರದೊಳು ಮುಳುಗುವೆ ಸುಮ್ಮನೆಅವಲೋಕಿಸುವರೆ ವಿಠಲನವ ನವ ವಿಷಯಕೆ ಮುಗ್ಗುತಲಿಹ ಮನದವಸರ ಕಾಯೊ ವಿಠಲ 2ತನುಸಂಬಂಧಿಗಳತಿ ಕಾರ್ಯಾರ್ಥಿಗಳ್ಎನಗಾರಿಲ್ಲೊ ವಿಠಲಾಬಿನಗುಮಾನವರನುಸರಣೆಯಲಿದಣಿಸದಿರಯ್ಯ ವಿಠಲ 3ನಿಶಿದಿನಅಶನವಸನಕೆ ಹೆಣಗುವೆಹುಸಿಸಂಗ್ರಹಿಸಿದೆ ವಿಠಲನಿಶಿದ್ಧಗಳಂಜಿಕೆ ಇಲ್ಲವು ನರಕದಗಸಣೆಗೆ ಅಂಜುವೆ ವಿಠಲ 4ಜಾವಕೆ ಮಾಡುವೆ ಸಾವಿರ ತಪ್ಪನುಕಾವದಯಾಂಬುಧಿ ವಿಠಲನಾ ವಡಲ್ಹೊಕ್ಕೆನೊ ಪ್ರಸನ್ವೆಂಕಟಪತಿಜೀವಕೆ ಹೊಣೆ ನೀ ವಿಠಲ 5
--------------
ಪ್ರಸನ್ನವೆಂಕಟದಾಸರು