ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನು ಸರ್ವೇಶಾ ಸ್ಮರಣೆಯೆ ಉಲ್ಲಾಸಾ 1 ಮಾಡಲಿಬೇಡ ಇನ್ನಾ ಇಚ್ಛಿಸುವೆ ಭಕ್ತಿರನ್ನಾ | ಯನಗೆ ಪ್ರತ್ಯಕ್ಷನಾಗೂಯತಿರನ್ನಾ 2 ಎಂಥೆಂಥವರನು ಪೊರೆದೇ | ಯನ್ನಂಥವರು ನಿನಗೆ ಹಿರಿದೇ ಚಿಂತೆಯನೀ ತರಿದೇ 3 ನಿನ್ನ ಮೆಚ್ಚಿಸಲೆನಗೆ ಶಕ್ತಿ | ಘನ್ನ ಮಹಿಮನೇಕೊಡು ಭಕ್ತಿ ಚೆನ್ನಾಗಿ ಪಾಲಿಸು ಮುಕ್ತೀ 4 ಪ್ರಥಮದಲಿ ಪ್ರಹ್ಲಾದನಾಗೇ | ಅಲ್ಲಿದಿತಿವಂಶದಲಿ ನೀ ಪೋಗೇ ಹತ ಮಾಡದೆ ಅವನೀಗೇ | ಪಿತಗೆ ಸದ್ಗತಿಯಿತ್ತೆಯೋಗೀ 5 ಮೂರ್ತಿ ಲೋಕದಲಿ ಪ್ರಖ್ಯಾತಿ ಏನೆಂಧೆÉೀಳಲಿ ವಾರ್ತೀ | ರಾಶಿರಾಶಿತುಂಬಿದವು ನಿನ್ನ ಕೀರ್ತೀ 6 ಮನಸಿಗೆ ಪ್ರೀಯಾ ಬಂದು ಪಿಡಿಕೈಯಾ 7 ಸತ್ಯ ಸಂಧರು ನೀವೆನಿಸೀ | ದೊಡ್ಡ ಉತ್ತರಾದಿ ಮಠದಿ ಜನಿಸೀ ಭಕ್ತರನೆಲ್ಲಾ ಸ್ವೀಕರಿಸೀ | ಮಧ್ವಮತವನುದ್ಧರಿಸೀ 8 ಬಿದ್ದೆ ನಿನ್ನ ಪಾದಕೈಯಾ | ಎನ್ನ ವುದ್ಧಾರ ಮಾಡುಜೀಯಾ ವಿದ್ವಾಂಸರಿಗೆ ನೀ ಘೇಯಾ | ಬೇಗ ಎದ್ದು ಬಂದು ಪಿಡಿಕಯ್ಯಾ 9 ನರಸಿಂಹ ವಿಠಲನ ಪ್ರೀಯಾ | ಕರೆಸಿದ್ದು ನೀ ಎನ್ನ ಖರೆಯಾ ಮಹರಾಯಾ 10
--------------
ಓರಬಾಯಿ ಲಕ್ಷ್ಮೀದೇವಮ್ಮ
ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯನೇನಾದರೂ ಬಲ್ಲಿರ ಪ ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲಅಟ್ಟು ಉಣ್ಣದ ವಸ್ತುಗಳಿಲ್ಲಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನುನೆಟ್ಟನೆ ಸರ್ವಜ್ಞನ ನೆನೆ ಕಂಡ್ಯ ಮನುಜ 1 ಜಲವೆ ಸಕಲ ಕುಲಕ್ಕೆ ತಾಯಲ್ಲವೆಜಲದ ಕುಲವನೇನಾದರೂ ಬಲ್ಲಿರಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹನೆಲೆಯನರಿತು ನೀ ನೆನೆ ಕಂಡ್ಯ ಮನುಜ 2 ಹರಿಯೆ ಸರ್ವೋತ್ತಮ ಹರಿಯೆ ಸರ್ವೇಶ್ವರಹರಿಮಯವೆಲ್ಲವೆನುತ ತಿಳಿದುಸಿರಿ ಕಾಗಿನೆಲೆಯಾದಿಕೇಶವರಾಯನಚರಣ ಕಮಲವ ಕೀರ್ತಿಸುವನೆ ಕುಲಜ 3
--------------
ಕನಕದಾಸ
ಧರ್ಮದ ನೀತಿಯ ಅರಿತೇನು ಮರ್ಮದ ರೀತಿಯ ತಿಳಿದೇನು ಪ ಧರ್ಮಕರ್ಮಗಳು ಹರಿಗರ್ಪಣವೆಂದು ನಿರ್ಮಲಚಿತ್ತದಿ ಧ್ಯಾನಿಸದವನು ಅ.ಪ ಗಂಗಾಸ್ನಾನವ ಮಾಡಿದರೇನು ಅಂಗುಲಿಯೂರುವ ಯೋಗದೊಳೇನು ಪಂಗನಾಮ ಬೂದಿಯ ಬಳಿದೇನು ರಂಗನ ಸ್ಮರಿಸದ ಮನವಿದ್ದೇನು 1 ದೇಶ ದೇಶಂಗಳ ತಿರುಗಿದರೇನು ಆಶೆಯ ಬಿಡದ ಕಾಷಾಯದಿಂದೇನು ಕಾಶಿರಾಮೇಶ್ವರಕೋಡಿದರೇನು ಶ್ರೀಶನನಾಮವೇ ಗತಿಯೆನದವನು 2 ಚಿತ್ತದಿ [ನೆನೆದರೆ] ಹರಿ ಕಿರಿದೇ ಸತ್ತು ಹುಟ್ಟುವುದೇ ಜಗದೊಳು ಹಿರಿದೇ ಎತ್ತೆತ್ತಲು ಹರಿಯಿಹನೆನಬಾರದೇ ಕರ್ತಶ್ರೀ ಮಾಂಗಿರಿರಂಗನ ನೆನೆಯದೆ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್