ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನವು ಶ್ರವಣಮನನಾದಿ ಸಾಧನ ಮಾಡು ಇನ್ನು ಸಂಶಯವ್ಯಾತಕೊ ಪ. ಏನು ಶಪಥವ ಮಾಡಲಿ ಮತವು ಹಿರಿದೆಂದು ಜ್ಞಾನಿಗಳ ಸಮ್ಮತವೊ ಅ.ಪ. ಗುರುಮಧ್ವಶಾಸ್ತ್ರವೆ ಸಕಲ ಶಾಸ್ತ್ರಧಿಕೆಂದು ಶಿರವರಿದು ಮುಂದಿರಿಸಲೆ ಪರಮತಜಾಲವೆಲ್ಲ ವೇದವಿರುದ್ಧವೆಂದು ಶರಧಿಯನು ನಾ ದಾಟಲೆ1 ಭಾಗವತಶಾಸ್ತ್ರವೆ ಬಹು ಭಾಗ್ಯವೆಂತೆಂದು ನೆಗಹಿ ಪರ್ವತವ [ನಿಲಿಸಲೆ] ಭಾಗವತ ನಿಂದಕಗೆ ಬಹು ನರಕವೆಂತೆಂದು ಪರ್ವ- ತಾಗ್ರದಿಂ ಧುಮುಕಲೆ 2 ವಿದಿತ ದೈವರೊಳಗೆ ವಿಷ್ಣು ಉತ್ತಮನೆಂದು ವೇದಂಗಳ ಒಡನುಡಿಸಲೆ ಅಧಿಕಾರಿಗಳೊಳಗೆ ಅಂಬುಜಸಂಭವನೆಂದು [ಕಾದೆಣ್ಣೆ]ಯೊಳು ಮುಣುಗ [ಲೆ] 3 ಪರಲೋಕಸಾಧನಕೆ ತಾರತಮ್ಯಮತವೆಂದು ಗರಳವನು ಕುಡಿಯಲೆ ಹರಿದಿನಕೆ ಮರುದಿನಕೆ ಸರಿಯಿಲ್ಲವೆಂತೆಂದು ಹರಿವ ಹಾವನು ಹಿಡಿಯಲೆ 4 ಗುರುಮಧ್ವರಾಯರೆ ಆತ್ಮರಕ್ಷಕರೆಂದು ಅನಲವ ಕೈ ಪಿಡಿಯಲೆ ಅಮಿತ ಗುಣಪೂರ್ಣನೆಂದು ಅ- ಶರೀರವನು ನುಡಿಸಲೆ 5
--------------
ವಾದಿರಾಜ
ಮರೆಯುವೆ ಏತಕೋ ಗರುಡಗಮನ ಯೆನ್ನಾ ದುರಿತವನಾರ್ಜಿಸಿ ಕೊರಗುವೆನ್ನನು ನೀ ಪ ಹದಿನೆಂಟು ಸಾಸಿರ ಉದರದೊಳುದಿಸುತೇ ಹೃದಯದಿ ನಿನ್ನ ನಾಮಾ ಒದಗಲಿಲ್ಲವೋ 1 ಧರೆಯೊಳು ನರಜನ್ಮ ಹಿರಿದೆಂದು ಪೇಳ್ವರು ತ್ವರಿತದಿ ನಿನ್ನ ನಾಮಸ್ಮರಣೆಯನೀಯದೆ 2 ಸೋಮಶೇಖರನುತ ಕಾಮಜನಕ ಹರಿ ಪ್ರೇಮದಿ ಪಾಲಿಸೆನ್ನ ರಾವiದಾಸಾರ್ಚಿತಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದಿಸುವೆನನವರತ ಇಂದಿರೇಶಾ ಪ ನೊಂದು ಬಳಲಿದೆನಯ್ಯ ಸಲಹೋ ಶ್ರೀಶಾ ಅ.ಪ ಇಂದು ನರಜನುಮದೊಳು ನೊಂದೆನಯ್ಯ ಮುಂದಿನಾ ಜನುಮಗಳ ಸಂದಣಿಗಳೊಳು ನಿನ್ನ ಸುಂದರ ಪಾದಾಂಬುಜವನೆಂದೆಂದು ತೋರೆಂದು1 ನರಜನ್ಮ ಹಿರಿದೆಂದು ಅರಿತವರು ಪೇಳುವರು ನರನಾಗಿ ನಾ ಜನಿಸಿ ಗರುವದಿಂದಾ ಸಿರಿಯಾಸೆಯಿಂದ ಮದ ಪರವೈರ ಲೋಭಗಳ ದುರಿತಗಳನಾರ್ಜಿಸಿದೆ ಪೊರೆಯೊ ದೇವ 2 ಕಡುಪಾಪ ಕೂಪದೊಳಗಡಗಿರ್ಪೆನೈ ಹರಿಯೆ ಅಡಿಗಳಿಗೆ ಎಡೆಯಿಲ್ಲ ನುಡಿವರಿಲ್ಲಾ ಪಿಡಿವುದಕೆ ತೃಣವಿಲ್ಲ ದಡಕೆ ದಾರಿಯು ಇಲ್ಲ ತಡವೇಕೆ ಎನ್ನ ಕೈಪಿಡಿಯೊ ಗೋಪಾಲ 3 ಖಗರಾಜ ಪೊತ್ತಿಹನು ಸುಗತಿದಾಯಕನೆಂದು ಹೊಗುಳುವವು ಶೃತಿ ಶಾಸ್ತ್ರ ನಗಧರನೆ ನಿನ್ನತಾ ನಗಪುತ್ರಿ ನುತಿಸಿಹಳು ನಗಬೇಡವೈ ಪಾದಯುಗಗಳನು ತೋರೆಂದು4 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲಿ ಮುನ್ನಿಗಿಂತೆಂಟುಮಡಿ ಜನುಮ ಬರಲಿ ಮುನ್ನ ನಾವಾರ್ಜಿಸಿದ ಘನಪಾಪನಶಿಸಲಿ ಚೆನ್ನ ಮಾಂಗಿರಿವಾಸ ನನ್ನ ಹೃದಯದೊಳಿರಲಿ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾಕು ಜನ್ಮದ ಸುಖವು ಸಾಕಿನ್ನು ಹರಿಯೇ ಪ ಅನೇಕ ಜನ್ಮದ ಸುಖ ಬೇಡ ಹರಿಯೇ ಅ.ಪ ಹದಿನೆಂಟು ಸಾಸಿರ ವಿಧವಿಧ ಜನ್ಮವ ಮೊದಲು ಕಳೆಯುತಲೀಗ ನರನಾಗಿ ಜನಿಸೀ ಕ್ರೋಧ ಲೋಭಗಳಿಂದ ಮದ ಮಾತ್ಸರ್ಯಗಳಿಂದ ಅಧಿಕ ಮೋಹಿತನಾದೆ ಪದುಮಾಕ್ಷ ಪರಂಧಾಮಾ 1 ನರಜನ್ಮ ಹಿರಿದೆಂದು ಅರಿತವÀರು ಪೇಳ್ವರು ಹರಿ ನಿನ್ನ ನುತಿಸಿ ಪಾಡುವ ಭಕ್ತ ಜನಕೆ ಪರಮಪಾತಕ ಗೈದು ನರಕಕೆ ಪೋಪೆನ್ನ ಮರಳಿ ಕಳುಹಲಿಬೇಡ ಧರಣಿಗೆ ದೇವ ದೇವ 2 ನರಕದೆ ಸುಖವುಂಟು ಧರೆಯಲ್ಲಿ ಸುಖವಿಲ್ಲ ಕರುಣಾಕರ ದೇವ ಸಿರಿಕಾಂತನೇ ಧರೆಯೊಳು ನಾನಿಹೆ ಅರೆಘಳಿಗೇ ನಿನ್ನ ಪರಮನಾಮಾವಳಿಯ ಸ್ಮರಣೆಯ ಕೊಡುಸಾಕು 3 ಗಂಗೆಯ ಜನಕನೆ ಮಂಗಳ ಮೂರುತಿ ಮಾಂಗಿರಿವರವಾಸ ಶ್ರೀಶ್ರೀನಿವಾಸ ಅಂಗಜಾತನ ತಾತ ಶೃಂಗಾರ ಪೂರಿತ ಭಂಗ ಮಾಡಿಸಬೇಡ ರಂಗೇಶ ಭವಬೇಡ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್