ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಗವೇಣಿಯೆಂದರೆ ಹೀಗೇಕೆ ಮಾಳ್ಪಿರಿ ಬಾಗಿಲು ಕುಟ್ಟುವುದೇಕೆ ನೀವ್ ಪ ಬಾಗಿಲು ಬಿಡುವೊಡೆ ಹೇಗದು ಸಾಧ್ಯವೊ ಬೇಗ ಹೇಳು ನೀನಾರು ಇನ್ನು ಅ.ಪ. ಆಗಮ ಕದ್ದೊಯ್ದ ಅಸುರನ ಕೊಂದು ನಾ ನಾನಾಗಲೆ ನಾಲ್ಮೊಗಗಿತ್ತೆ ಕೇಳಿ ಆಗಲೆ ಆಗಮದಲಿ ನಿನಗರ್ತಿಯಷ್ಟಿದ್ದರೆ ಮೂಗನ್ಹಿಡಿದು ಕೂಡೋ ಬೇಗ 1 ಮೂಗನ್ಹಿಡಿವ ಒಣಯೋಗಿಯು ನಾನಲ್ಲ ಆ ಗಿರಿಯನು ನಾ ಪೊತ್ತೆ ಕೇಳಿ ಈಗ ನಾವರಿದೆವು ನೀ ಗಿರಿ ಹೊರವಡೆ ಇಂದು 2 ಕಳ್ಳನಲ್ಲ ಭೂಮಿ ಕಳ್ಳನ ಕೊಂದೆನೆ ಸೂಕರ ನಾನಾಗಿ ಕೇಳಿ ಘೊಳ್ಳನೆ ನಗುವರು ಕೇಳಿದವರು ಇದ ಮೆಲ್ಲು ಹೋಗಿ ನೀ ಮಣ್ಣ 3 ಮಣ್ಣು ಮಾತೇಕೆ ಹಿರಣ್ಯಕನನು ಕೊಂದೆ ಚಿಣ್ಣನ ಕಾಯ್ದೆನು ಕೇಳಿ ಚಿಣ್ಣರ ಸಾಕ್ಷಿಯ ಬಿಟ್ಟರೆ ನಿನಗಿಲ್ಲ ಚಿಣ್ಣನಾಗು ನೀ ಹೋಗÉೂ 4 ಸಣ್ಣವನಾದರೂ ಘನ್ನನು ನಾನಾದೆ ಪುಣ್ಯನದಿಯ ನಾ ಪೆತ್ತೆ ಕೇಳಿ ಬಿನ್ನಾಣ ಮಾತಿಗೆ ಸೋಲುವರಲ್ಲವೊ ಬೆನ್ನು ತಿರುಗಿಸಿ ನೀ ಪೋಗೊ5 ತಿರುಗಿಸಿದವನಲ್ಲ ಬೆನ್ನನೊಬ್ಬರಿಗೂ ನಾ ಪರಶುಧರನು ನಾ ಕೇಳಿ ಅರಸರಲ್ಲ ನಾವ್ ಸರಸಿಜನೇತ್ರೆಯರು ಕರುಣರಹಿತ ನೀ ಪೋಗೊ 6 ಚರಣರಜದಿ ನಾ ಶಿಲೆಯನುದ್ಧರಿಸಿದೆ ಕರುಣರಹಿತನೆ ಪೇಳಿ ನೀವು ಸರಸ ಮಾತುಗಳನು ಮನ್ನಿಸಿ ಎಮ್ಮನು ಕರಿಗಿರೀಶ ನೀ ಕಾಯೋ ಸ್ವಾಮಿ 7
--------------
ವರಾವಾಣಿರಾಮರಾಯದಾಸರು
ನೀರಜಗಂಧಿಯೇ ಹೇಳೇ ಸುಳಿದವರಾರಮ್ಮಾ | ನೀರಜ ಶರಪತಿ ಕಾಣಮ್ಮಾ ಪ ಅರುಣನಖಾಂಗುಲಿ ಗುಲ್ಫ ಗೆಜ್ಜೆ ಕಾ- ಪುರ ನೂಪುರದ ಲೊಪ್ಪುವನವದಾರಮ್ಮಾ | ಸರಸಿಯೊಳಗಪೊಕ್ಕು ತಮನಸುವ ಬಗೆದು | ವರಶೃತಿ ತಂದವ ಕಾಣಮ್ಮಾ 1 ಕಲಿ ದಶನಂದದಿ ಜಂಘೆ ಪೊಂಬಾಳೆಯ | ಪರಿಯ ತೊಡೆಯುಳ್ಳುವ ದಾರಮ್ಮಾ | ಶರಧಿ ಮಥಿಸುವಂದುಗಿರಿನಿಲ್ಲದಿರೆ ಬಂದು | ಭರದಿ ಬೆನ್ನೆವಿತ್ತವ ಕಾಣಮ್ಮ2 ಕಾಂಚನ ವಸನನಿರಿಯ ಮ್ಯಾಲ ವಡ್ಯಾಣ ಮಿಂಚಿನ ಘಂಟೆಯ ದಾರಮ್ಮಾ | ಕ್ಷಿತಿ ವಯ್ದದನುಜನ ಶೀಳಿ ವಿ | ರಂಚಿ ಗುಳಹಿದವ ಕಾಣಮ್ಮಾ3 ಕಿರಿಡೋಳ್ಳಾತ್ರಿವಳಿಯ ನವರತ್ನ ಪದಕಿಹ | ಉರಸಿನ ವತ್ಸನವ ದಾರಮ್ಮಾ | ನರಹರಿ ರೂಪದಿ ಹಿರಣ್ಯಕನನು ಕೊಂದು | ಶರಣನ ಕಾಯ್ದವ ಕಾಣಮ್ಮಾ4 ಕೌಸ್ತುಭಹಾರ ಮೌಕ್ತಿಕದ ಕೊರಳಲಿಹ | ಹಸ್ತ ಕಡಗದವ ನಾರಮ್ಮಾ | ಸ್ವಸ್ತಿ ಎನುತ ಬಂದು ಬೇಡಿ ಬಲಿಯಾಗರ್ವ | ಸ್ವಸ್ತಿ ಮಾಡಿವನು ಕಾಣಮ್ಮಾ5 ಕ | ಪೋಲ ಹೊಳಹಿನವ ದಾರಮ್ಮಾ | ಏಳು ಮೂರು ಬಾರಿ ಕ್ಷತ್ರಿಯ ರಾಯರ ಸೋಲಿಸಿ ಬಂದವ ಕಾಣಮ್ಮಾ6 ಕರ್ಪೂರ ಕರಡಿಗಿ ಬಾಯಿ ಸಂಪಿಗೆಯಂತೆ | ತೋರ್ಪ ನಾಶಿಕದವ ದಾರಮ್ಮಾ | ದರ್ಪ ಮುರಿದು ರಾವಣನ ತಲಿಯ ಧರೆ | ಗೊಟ್ಟಿಸಿದವ ನಿವ ಕಾಣಮ್ಮಾ7 ಕುಡಿಗಂಗಳ ಭ್ರೂಲತೆಯ ಪೆರೆನೆಣೆಸಲು | ಪೊಡವಿಯೊಳಗ ನಂಬಿದ್ದ ಪಾಂಡವರನು | ಬಿಡದೆ ಸ್ಪಾಪಿಸಿದವ ಕಾಣಮ್ಮಾ8 ಕುರುಳು ಗೂದಲು ತಳಕದ ಮಾಲ್ಯ ಮೌಲಿಕ | ಧರಸಿದ ಮುಕುಟವ ದಾರಮ್ಮಾ | ತರಳನಾಗಿ ಮುಪ್ಪುರ ನಾರಿಯರ ವೃತ | ತ್ವರಿತದಿ ಅಳಿದವ ಕಾಣಮ್ಮಾ9 ನೋಡಲು ಮನಸಿಗೆ ಮೋಹನೆ ಮಾಡುವ | ಪ್ರೌಡದಿ ಮನವವ ದಾರಮ್ಮಾ | ರೂಢಿಲಿ ಕುದುರೆಯ ಏರಿ ಕಲಿಮಲವ | ಝಾಡಿಸಿದವನಿವ ಕಾಣಮ್ಮ10 ಸಹಜದಿ ಸವಿಸವಿ ಮಾತಲಿ ಸೋಲಿಸು | ತಿಹ ಸರ್ವರಿಗಿವ ದಾರಮ್ಮಾ | ಮಹಿಪತಿ ಸುತನ ಹೃದಯದಲಿ ನಿಂತು ತನ್ನ| ಮಹಿಮೆ ಬೀರಿಸುವವ ಕಾಣಮ್ಮಾ11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಥೇಯವ ಕಟ್ಟಿರೊ ವೈಕುಂಠಕೆ ಪಯಣ ಸ-ಮ್ಮತವಾದರೆ ಪ. ಮಾತಾಪಿತರುಯೆಂಬೊ ಭಕ್ತಿಚಿತ್ರಾನ್ನವಪಾರ್ಥಸೂತನ ಪಾದಪದ್ಮಪತ್ರವ ಹಾಸಿ ಅ.ಪ. ಹರಿಭಕ್ತಿಹರಿಗೋಲಿಂದ ಮೆಲ್ಲನೆ ನೀವುವಿರಜಾನದಿಯ ದಾಟಿರೊಕರಜಾಗ್ರಗಳಿಂದ ಹಿರಣ್ಯಕನನು ಸೀಳಿದಪರವಾಸುದೇವನ ದರುಶನವಾಹೋದಯ್ಯ 1 ಪ್ರಳಯದ್ಹಾವಳಿಯಿಲ್ಲವೊ ಪೇಳುವುದೇನುಚಳಿ ಮಳೆ ಬಿಸಿಲಿಲ್ಲವೊಬೆಳಸು ಬಿತ್ತಿಲ್ಲದ ಬೇಕಾದ ಸಂಪತ್ತುನಳಿನನಾಭನ ಪುರದೊಳಗೆ ನೆಲಸಿಹುದಯ್ಯ 2 ಶುದ್ಧ ಸಾತ್ವಿಕ ಪುರವು ತಾಮಸರಿಗೆ[ಪೊದ್ದಲಳವಲ್ಲವೊ]ಅಧ್ಯಾತ್ಮ ಅರ್ಜುನಗೆ ನಿರ್ಧಾರ ಪೇಳಿದತದ್ಧಾಮ ಪರಮಂ ಮಮವೆಂಬೊ ಪುರವೊ 3 ಕೂಗಳತೆಗೆ ಕೊಂಚವೊ ಹರಿಯ ಪುರನಾಗರಾಜನ ಸಾಕ್ಷಿಯೊನಾಗಶಯನನಲ್ಲಿ ನಮ್ಮ ಕಂಡರೆಹೋಗಬೇಡಿರೆಂದು ಹುಟ್ಟ ತಡೆವನೊ 4 ಬರವೆಂಬ ಮಾತಿಲ್ಲವೊ ಒಂದುಕಾಸುತೆರಿಗೆಯ ಕೊಡಬ್ಯಾಡಿರೊಪರಮಕರುಣಿ ಹಯವದನ ವೈಕುಂಠದಿಸರುವಮಾನ್ಯವನಿತ್ತು ಶರಣರ ಪೊರೆವನು 5
--------------
ವಾದಿರಾಜ