ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವನಜ ಮುಖಿಯರ ಮನದಿಷ್ಟಾರ್ಥವನೀವನ - ಶ್ರೀ ಕೃಷ್ಣ ಎನ್ನಿರೊಮನು ಮುನಿಜನರನು ಅನುದಿನದೊಳು ಪೊರೆವನ - ಶ್ರೀ ಕೃಷ್ಣ ಎನ್ನಿರೊ ಪ ಪಣ್ಣ ಕೊಯ್ದನನುಜಗೆ ಸಹಾಯನಾದನ _ ಶ್ರೀ ಕೃಷ್ಣ ಎನ್ನಿರೊಸಣ್ಣ ಸೀರೆಯ ನಲ್ವೆಣ್ಣು ರೂಪಾದನ _ ಶ್ರೀ ಕೃಷ್ಣ ಎನ್ನಿರೊಅಣ್ಣನ ವೈರಿಯ ಮಗನ ಕೊಂದಾತನ _ ಶ್ರೀ ಕೃಷ್ಣ ಎನ್ನಿರೊಬಣ್ಣಿಸಲರಿಯೆ ನಾನಿವನ ಮಹಿಮೆಯ _ ಶ್ರೀ ಕೃಷ್ಣ ಎನ್ನಿರೊ 1 ಮುತ್ತಯ್ಯನಿರೆ ಮೊಮ್ಮಗಗೆ ಪಟ್ಟಗಟ್ಟಿದನ _ ಶ್ರೀ ಕೃಷ್ಣ ಎನ್ನಿರೊಹೆತ್ತವಳಿರೆ ತಾಯ ಬೇರೆ ಪಡೆದಾತನ _ ಶ್ರೀ ಕೃಷ್ಣ ಎನ್ನಿರೊಮತ್ತೇಭಗಾಮಿನಿಗಾಗಿ ವನವಾಸ ಪೋದನ _ ಶ್ರೀ ಕೃಷ್ಣ ಎನ್ನಿರೊಮತ್ತೆ ಹಿರಣ್ಯಕಗೆ ಕಂಬದಲಿ ತೋರ್ದನ - ಶ್ರೀ ಕೃಷ್ಣ ಎನ್ನಿರೊ 2 ಉಗುರು ಕೊನೆಗಳಿಂದ ನಗವನೆತ್ತಿದನ _ ಶ್ರೀ ಕೃಷ್ಣ ಎನ್ನಿರೊಬೊಗಸೆಗಂಗಳ ಬಾಲೆಯರ ತಂದಾತನ _ ಶ್ರೀ ಕೃಷ್ಣ ಎನ್ನಿರೊಮಗಳ ಗಂಡನ ಶಿರವನೆ ಛೇದಿಸಿದನ _ ಶ್ರೀ ಕೃಷ್ಣ ಎನ್ನಿರೊಸುಗುಣ ತನ್ನ ಕಾಗಿನೆಲೆಯಾದಿಕೇಶವನ _ ಶ್ರೀ ಕೃಷ್ಣ ಎನ್ನಿರೊ 3
--------------
ಕನಕದಾಸ
ಯಮನೆಲ್ಲೊ ಕಾಣೆನೆಂದು ಹೇಳಬೇಡ |ಯಮನೇ ಶ್ರೀರಾಮನುಸಂದೇಹ ಬೇಡಪನಂಬಿದ ವಿಭೀಷಣಗೆ ರಾಮನಾದ |ನಂಬದಿದ್ದ ರಾವಣಗೆ ಯಮನೇ ಆದ 1ನಂಬಿದ ಅರ್ಜುನನಿಗೆ ಬಂಟನಾದ |ನಂಬಿದಿದ್ದ ಕೌರವನಿಗೆ ಕಂಟಕನಾದ 2ನಂಬಿದ ಉಗ್ರಸೇನಗೆ ಮಿತ್ರನಾದನಂಬದಿದ್ದ ಕಂಸನಿಗೆ ಶತ್ರುವಾದ 3ನಂಬಿದ ಪ್ರಹ್ಲಾದಗೆ ಹರಿಯಾದ |ನಂಬದಿದ್ದ ಹಿರಣ್ಯಕಗೆ ಅರಿಯಾದ 4ನಂಬಿದವರ ಸಲಹುವ ನಮ್ಮ ದೊರೆಯು |ಅಂಬುಜಾಕ್ಷ ಪುರಂದರವಿಠಲ ಹರಿಯು5
--------------
ಪುರಂದರದಾಸರು