ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ | ಶೋಭಾನವೆನ್ನಿ ಶುಭವೆನ್ನಿ ಪ ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು | ಭರದಿಂದ ಇಳಿದು ಸತ್ಯಲೋಕ || ಭರದಿಂದ ಇಳಿದು ಸತ್ಯಲೋಕಕೆ ಬಂದ | ವಿರಜೆಗಾರುತಿಯ ಬೆಳಗಿರೇ 1 ಸರಸಿಜಾಸನ ನಮ್ಮ ಹರಿಪಾದ ತೊಳಿಯಲು | ಸರಸ ಸದ್ಗುಣ ಸುರಲೋಕ | ಸರಸ ಸದ್ಗುಣದಿ ಸುರಲೋಕಕೈದಿದಾ | ಸ್ವರ್ಣೆಗಾರುತಿಯ ಬೆಳಗಿರೇ 2 ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು | ಚಂದದಿಂದಲಿ ಮೇರುಗಿರಿಗೆ | ಚಂದದಿಂದಲಿ ಮೇರುಗಿರಿಗೆ ಬಂದಾ | ಸಿಂಧುವಿಗಾರುತಿಯ ಬೆಳಗಿರೇ 3 ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು | ಚತುರ್ಭಾಗವಾಗಿ ಕರೆಸಿದ | ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗ | ವತಿಗಾರುತಿಯ ಬೆಳಗಿರೇ4 ಇಂದ್ರ ದಿಕ್ಕಿಗೆ ಸಿತಾ ಚಕ್ಷು ಪಶ್ಚಿಮ ದಿಕ್ಕು | ಚಂದ್ರ ಯಮ ದಿಕ್ಕಿಗೆ ಭದ್ರದೇವಿ | ಚಂದ್ರ ಯಮ ದಿಕ್ಕಿಗೆ ಭದ್ರದೇವಿ ಅಳಕ | ನಂದಿನಿಗಾರುತಿಯ ಬೆಳಗಿರೇ 5 ಕುಂದ ಮಂದರೆ ಇಳಿದು ಗಂಧ ಮಾದನಗಿರಿಗೆ | ಹಿಂಗದೆ ಪುಟಿದು ವಾರಿನಿಧಿಯ | ಹಿಂಗದೆ ಪುಟಿದು ವಾರಿನಿಧಿಯ ನೆರದ | ಗಂಗೆಗಾರುತಿಯ ಬೆಳಗಿರೇ 6 ಗಿರಿಜೆ ಸೂಪಾರಶ್ವಕೆ ಧುಮುಕಿ ಮಾಲ್ಯವಂತಕೆ ಜಿಗಿದು | ಪರಿದಂಬುಧಿಯ ಕೂಡಿ ಮೆರದು | ಪರಿದಂಬುಧಿಯ ಕೂಡಿ ಮೆರದಾ | ತ್ರಿದಶೇಶ್ವರಿಗಾರುತಿ ಬೆಳಗಿರೇ7 ಕುಮುದಾದ್ರಿಗೆ ಇಳಿದು ನಲಾ ಶತ ಶೃಂಗ | ವನಧಿ | ವನಧಿ ಕೂಡಿದಾ | ಸುಮತಿಗಾರುತಿಯ ಬೆಳಗಿರೇ 8 ಮೇರು ಮಂದರಕಿಳಿದು ನಿಷಿಧ ಕಾಂಚನ ಕೂಟ | ಮೀರಿ ಹಿಮಗಿರಿಗೆ ಹಾರಿ ಬದರಿಗೆ | ಮೀರಿ ಹಿಮಗಿರಿಗೆ ಹಾರಿ ಬದರಿಗೆ ಬಂದಾ | ನಾರಿಗಾರುತಿಯ ಬೆಳಗಿರೇ 9 ಕ್ಷಿತಿಪ ಭಗೀರಥನಂದು ತಪವ ಒಲಿದು| ಅತಿಶಯವಾಗಿ ಧರೆಗಿಳಿದು | ಅತಿಶಯವಾಗಿ ಧರೆಗಳಿದು ಬಂದಾ | ಭಾಗೀರಥಿಗಾರುತಿಯ ಬೆಳಗಿರೇ10 ಮುನಿ ಜನ್ಹು ಮುದದಿಂದ ಆಪೋಶನವ ಮಾಡೆ | ಜನನಿ ಜಾನ್ಹವಿ ಎನಿಸಿದಾ| ಜನನಿ ಜಾನ್ಹವಿ ಎನಿಸಿದಾ ಮೂಜಗದ | ಜನನಿಗಾರುತಿಯ ಬೆಳಗಿರೇ 11 ವಿಷ್ಣು ಪ್ರಜಾಪತಿ ಕ್ಲೇತ್ರದಲ್ಲಿ ನಿಂದು | ಇಷ್ಟಾರ್ಥ ನಮಗೆ ಕೊಡುವಳು ಸತತ | ಇಷ್ಟಾರ್ಥ ನಮಗೆ ಕೊಡುವಳು ಸತತ ಸಂ | ತುಷ್ಟಿಗಾರುತಿಯ ಬೆಳಗಿರೇ 12 ಕ್ರಮದಿಂದ ಬಂದು ನಲಿವುತ ಸರಸ್ವತಿ | ಯಮುನೇರ ನೆರೆದು ತ್ರಿವೇಣಿ | ಯಮುನೇರ ನೆರೆದು ತ್ರಿವೇಣಿ ಎನಿಸಿದಾ | ವಿಮಲೆಗಾರುತಿ ಬೆಳಗಿರೇ13 ತ್ರಿವಿಧ ಜೀವರು ಬರಲು | ಅತ್ಯಂತವಾಗಿ ಅವರವರ | ಅತ್ಯಂತವಾಗಿ ಅವರವರ ಗತಿ ಕೊಡುವ | ಮಿತ್ರೆಗಾರುತಿ ಬೆಳಗಿರೇ 14 ಪತಿಯ ಸಂಗತಿಯಿಂದ ನಡೆತಂದು ಭಕುತಿಲಿ | ಸತಿಯಲ್ಲಿ ವೇಣಿಕೊಡಲಾಗಿ | ಸತಿಯಲ್ಲಿ ವೇಣಿ ಕೊಡಲಾಗಿ ಕಾವ ಮಹಾ | ಪ್ರತಿಗಾರುತಿ ಬೆಳಗಿರೇ 15 ವೇಣಿಯ ಕೊಟ್ಟಂಥ ನಾರಿಯ ಭಾಗ್ಯವು | ಪಡಿಗಾಣೆ | ಪಡಿಗಾಣೆ ಸುಖವೀವ | ಕಲ್ಯಾಣಿಗಾರುತಿಯ ಬೆಳಗಿರೇ 16 ಒಂದು ಜನ್ಮದಲಿ ವೇಣಿಯಿತ್ತವಳಿಗೆ | ಎಂದೆಂದು ಬಿಡದೆ ಐದೆತನವ | ಎಂದೆಂದು ಬಿಡದೆ ಐದೆತನವೀವ ಸುಖ | ಸಾಂದ್ರೆಗಾರುತಿಯ ಬೆಳಗಿರೇ 17 ವಾಚಾಮಗೋಚರೆ ವರುಣನರ್ಧಾಂಗಿನಿ | ಪ್ರಾಚೀನ ಕರ್ಮಾವಳಿ ಹಾರಿ | ಮಕರ | ವಾಚಳಿಗಾರುತಿಯ ಬೆಳಗಿರೇ 18 ಅಂತರ ಬಾಹಿರ ಪಾಪ ಅನೇಕವಾಗಿರೆ | ಸಂತೋಷದಿಂದಲಿ ಭಜಿಸಲು | ಸಂತೋಷದಿಂದಲಿ ಭಜಿಸಲು ಪೊರೆವ ಮಹಾ | ಕಾಂತೆಗಾರುತಿಯ ಬೆಳಗಿರೇ 19 ಗುರುಭಕುತಿ ತಾರತಮ್ಯ ಇಹಪರದಲ್ಲಿ ತಿಳಿದು | ಹರಿ ಪರನೆಂದು ಪೊಗಳುವರ | ಹರಿ ಪರನೆಂದು ಪೊಗಳುವರ ಪೊರೆವ | ಕರುಣಿಗಾರುತಿಯ ಬೆಳಗಿರೇ20 ಜಗದೊಳು ಪ್ರಯಾಗ ಕ್ಷೇತ್ರದಲ್ಲಿ ನಿಂದು | ಬಗೆ ಬಗೆ ಶುಭವ ಕೊಡುವಳು | ಬಗೆ ಬಗೆಯ ಶುಭವ ಕೊಡುವ ವಿಜಯವಿಠ್ಠಲನ | ಮಗಳಿಗಾರುತಿಯ ಬೆಳಗಿರೇ ಶೋಭಾನೆ 21
--------------
ವಿಜಯದಾಸ
ಶರಣು ಶರಣೂ ಪ.ಮಹಾದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನುಸಾಧುಮಾತೆಯ ಶಾಪವನ್ನು ಕೈಗೊಂಡುಆದಿಪೂಜೆಗೆ ಅಭಿಮಾನಿದೇವತೆಯಾದಿಮಾಧವನಮ್ಮ ಹಯವದನನ್ನ ಪ್ರಿಯ1ಹಿಮಗಿರಿಗೆ ಮಗಳಾಗಿ ಜನಿಸಿ ತಪವನು ಗೈದುಕಮಲಸಂಭವಸುತನ ಒಲಿಸಬೇಕೆಂದುರಮಣಿ ರಾಮಮಂತ್ರ್ರ ದಿನಸಹಸ್ರವು ಜಪಿಸೆಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ 2ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿಕಡುಘೋರ ತಪಗೈಯೆ ಮನ್ಮಥನು ಬರಲುಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿಕಡಲೊಡೆಯ ನಮ್ಮ ಹಯವದನನ್ನ ಪ್ರಿಯ 3ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲುತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲುಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರಅಚ್ಯುತನಮ್ಮ ಹಯವದನನ್ನ ಪ್ರಿಯೆ4ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನುತ್ರೇತೆಯಲಿ ರಾಮರ ಸೇವೆಯನು ಮಾಡಿಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀಶ್ರೀಪತಿ ಹಯವದನ ದೂತ ಪ್ರಖ್ಯಾತ 5ಈರೇಳು ಲೋಕದ ಜನರ ನಾಲಗೆಯಲ್ಲಿಬೀಜವನು ಬಿತ್ತಿ ಅನ್ನವ ಕೊಡುವ ತಾಯೆವಾರಿಜಸಂಭವನ ಹಿರಿಯ ಪಟ್ಟದ ರಾಣಿನೀರಜಾಕ್ಷನಮ್ಮ ಹಯವದನನ್ನ ಪ್ರಿಯೆ6ಜನನಿಹುಟ್ಟಿದ ನಾಳದಲ್ಲಿ ಜನಿಸಿದಿ ನೀನುಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದುಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲುವನಜಾಕ್ಷ ನಮ್ಮ ಹಯವದನನ್ನ ಪ್ರಿಯ 7ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದುಪದ್ಮಾಕ್ಷನ ರಥಕ್ಕೆ ಕೈ ನೀಡಿ ಬಂದೆಪದ್ಮಾವತಿ ಎಂದು ಖ್ಯಾತಿ ಮೂರ್ಲೋಕದೊಳುಪದ್ಮಾಕ್ಷ ನಮ್ಮ ಹಯವದನನ್ನ ಪ್ರಿಯೆ 8ಅನಂತ ನಾಟಕಾನಂತ ಸೂತ್ರಧಾರಿಅನಂತ ಚರಿತ ನಿತ್ಯಾನಂದಭರಿತಅನಂತಾಸನ ಶ್ವೇತದ್ವೀಪ ವೈಕುಂಠಅನಂತಗುಣಭರಿತ ಹಯವದನ ಚರಿತ 9ಶರಣುಮತ್ಸ್ಯಕೂರ್ಮವರಾಹನಾರಸಿಂಹಶರಣು ವಾಮನಭಾರ್ಗವರಾಮಚಂದ್ರಶರಣು ಕೃಷ್ಣ ಬೌದ್ಧ ಕಲ್ಕ್ಯಸ್ವರೂಪನೆಶರಣು ಹಯವದನನ್ನ ಚರಣಗಳ ನುತಿಪೆ 10
--------------
ವಾದಿರಾಜ