ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳೆಲೋ ಪ್ರಾಣಿ ನಂಬಿ ಪೂಜಿಸು ಹರಿಯ ಪಾದಾ | ಪಾಲಿಸುವಾ ಗರದು ಅನುಭವ ಬೋಧಾ ಪ ಗುರುವಿನಾ ಬಲಗೊಂಡು ಬಲಿಯೋ ಸ್ವಸುಖ ಪಡಕೋ | ಹರಿಯದೇ ನಾನಾ ಮಾರ್ಗವ ಕಂಡು 1 ಕಂಡ ದೈವಕ ಹಲ್ಲಾ ದೆರೆದು ಬಾಗುವದಲ್ಲಾ | ಮಂಡೆ ದಡವಲ್ಲದೇ ಮತ್ತೇನಿಲ್ಲಾ 2 ಇರಲು ಮನಿಲಿ ಧರಿಲುಳ್ಳಾ ಬಯಸಿದವಟಗಳೆಲ್ಲಾ | ತಿರುಕವ ಬೇಡಿ ಉಂಬುದು ಸಲ್ಲಾ 3 ನೀರಡಿಸಿ ಬರಿಗೈಯ್ಯಾ ನೆಕ್ಕಿದರೇನು ಶ್ರಯಾ | ಗುರುವಿನ ಕೇಳು ಸ್ವಹಿತೋಪಾಯ 4 ಹತ್ತು ಕಟ್ಟುವಕಿಂತ ಮುತ್ತು ಕಟ್ಟಬೇಕೆಂದೇ | ಅರ್ತರೊಲುವನು ಮಹಿಪತಿಸುತಂದೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಧಿಸಿದೇ ನೋಡಿ ಪೂರ್ಣ ಆದಿ ತತ್ವದ ಸುಸ್ಥಾನ ಭೇದಿಸುವದನುದಿನ ಸದಾನಂದ ಗುರುಜ್ಞಾನ ಧ್ರುವ ಮಾತಿನಂತಲ್ಲವಿದು ಸ್ವಾತ್ಮಸುಖದ ಸಾಧನ ಶ್ರುತಿಗಗೋಚರ ನೋಡಿ ಪ್ರತ್ಯೇಕದನುಸಂಧಾನ ಅತಿಗುಹ್ಯಗೂಢವಿದು ಹಿತೋಪಾಯದ ಖೂನ ರತಿಗೊಟ್ಟುನೋಡಿ ಪ್ರತ್ಯಕ್ಷ ಇಹ್ಯ ನಿಧಾನ 1 ನಡಿನೋಟ ನೀಟಮಾಡಿ ಪಡಕೊಳ್ಳದೆ ಸ್ವಹಿತ ನುಡಿಆಟದೋರಬ್ಯಾಡಿ ಕೂಡಿ ಸುಜ್ಞಾನÀಸನ್ಮತ ಬಡಬ್ಯಾಡಿ ನಾನಾಶ್ರಮವಿಡಿಯದೆ ಸುಗಮ ತಾ ಇಡಿದು ತುಂಬೇದ ಸಾಂದ್ರ ನೋಡಿ ಅನಂದೋಭರಿತ 2 ಸಾಧನಕಿದೇ ಮುಖ್ಯ ಸಾಧಿಸಿದೆ ಗುರುದಯ ಇದಕಿಲ್ಲ್ಲಿನ್ನೊಂದಧಿಕ ಬುಧಜನರ ಉಪಾಯ ಅದರಿಂದೊಲುವ ತಾನು ಸದ್ಗುರು ಭಾನುಕೋಟ್ಯುದಯ ಸದ್ಗೈಸಿ ಮಹಿಪತಿಯ ಸದೋದಿತ ಉದಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ ಸ್ವಾಮಿ ನಿಮ್ಮ ಚರಣ ನಮ್ಮ ಜನ್ಮೋದ್ಧಾರಣ ಧ್ರುವ ಸ್ವಾಮಿ ನಿಮ್ಮ ದಯ ನಮ್ಮ ಹಿತೋಪಾಯ ಸ್ವಾಮಿ ನಿಮ್ಮ ಭಯ ನಮ್ಮ ಪುಣ್ಯೋದಯ 1 ಸ್ವಾಮಿ ನಿಮ್ಮ ಖೂನ ನಿಜಸ್ಥಾನ ಸ್ವಾಮಿ ನಿಮ್ಮ ಙÁ್ಞನ ನಿಜಧ್ಯಾನ 2 ಸ್ವಾಮಿ ನಿಮ್ಮ ನೋಟ ನಮ್ಮ ಮನದೂಟ ಸ್ವಾಮಿ ನಿಮ್ಮ ಮಾಟ ನಮ್ಮ ಸುಖದಾಟ 3 ಸ್ವಾಮಿ ನಿಮ್ಮ ನಾಮ ನಮ್ಮ ಅತಿಪ್ರೇಮ ಸ್ವಾಮಿ ನಿಮ್ಮ ನೇಮ ನಮ್ಮ ನಿಜಾಶ್ರಮ 4 ಸ್ವಾಮಿ ನಿಮ್ಮ ಸೋಹ್ಯ ನಮ್ಮ ನಿಜಾಶ್ರಯ ಸ್ವಾಮಿ ನಿಮ್ಮ ಸಾಹ್ಯ ಮಹಿಪತಿ ಮನೋತ್ರಾಹ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಳೆಯದಾಯಿತು ಕಾಯಾ ಇನ್ನಾರೇ | ತಿಳಿ ಸ್ವಹಿತೋಪಾಯಾ ಪ ಬಾಲಕನಾಗಿ ಕೆಲವು ದಿನ ಕಳೆದೀ | ಮೌಲ್ಯ ಯೌವ್ವನದಲಿ ಉನ್ಮತ್ತನಾದಿ 1 ಸಡಿಲುತ ಬಂದವು ಅಂಗಮಾಟಗಳು | ವಡಮೂಡದು ವಿವೇಕ ಬುದ್ಧಿಗಳು 2 ಮಂಡೂಕ ಸರ್ಪ ನೋಡದೆ ಭರದಿ | ಅಂಡಲುವದು ನೊಣಕದೇ ಪರಿಯಾದಿ 3 ಏನಾದರಾಗಲಿ ಹಿಂದಿನ ಕರಣೆ | ಜ್ಞಾನದೆಚ್ಚರ ಹಿಡಿ ಮನದೊಳು ಪ್ರಾಣಿ 4 ಗುರುವರ ಮಹಿಪತಿ ನಂದನ ಪ್ರಿಯನಾ | ಅರಿತರೆ ಬಂದದೆ ಸಾರ್ಥಕ ಖೂನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು