ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೇ ಕಾಪಾಡಬೇಕು ನಿರುತವು ಬಿಡದೆಯ- ಜ್ಞಾನಾಬ್ಧಿಯ ದಾಟಿಸು ಸೀ- ಕಮಲ ಭೃಂಗ ಶುಭಾಂಗ 1 ಸುಗ್ರೀವನ ಮಂತ್ರಿವರ ದ- ಶಗ್ರೀವನ ಗುದ್ದಿದವನೆ ಶತ್ರುನಿಕರವಂ ಶೀಘ್ರದಿ ಗೆಲುವಂದದಲಿಯ- ನುಗ್ರಹವ ಮಾಡುತಲೆಮ್ಮ ಕೈಪಿಡಿ ಹನುಮ 2 ತ್ವರಿತವತಿ ನಿಧಾನವಲಸಿಕೆಗಳನು ಬಿಡಿಸಿ ಪಿರಿಯರು ಪೇಳಿದ ಪರಿಯಲಿ ನೆರೆನಡೆವಂದದಲಿ ಸುಮತಿಯನು ಕೊಡು ಹನುಮ3 ಹೊರಗಿನ ಶತ್ರುಗಳಂ ವಾ- ಕ್ಪೌರುಷದಿ ವೋಡಿಸಲುಬಹುದು ಒಳಗಿನ ಕಾಮ್ಯಾ ದ್ಯರ ಗೆಲುವುದಕೆ ಶಾಂತಿಯೆ ಕ್ಷುರವಹುದು ದಯಮಾಡಿ ನೀನೆ ಕರುಣಿಸು ಹನುಮ4 ಕತ್ತಿಯಲಿ ಕಡಿದೆರೆರಡಾ- ಗುತ್ತಿರುವುದು ಜಡವು ವಾಕ್‍ಕತ್ತಿಯ ದೆಸೆಯಲಿ ನೆತ್ತಿಮೊದಲು ಪಾದವರಿಗು ಕತ್ತರಿಸಿದರೀತಿಯಹುದು ಕಾಯೈ ಹನುಮ 5 ಪರಧನ ಪರಾಕಾಮಿನಿಯರಿ ಕೊರಳೊಳರಿವೆಂಬ ರಜ್ಜುವಿಂದಲಿ ವಿರಾಗ ದೊಣ್ಣೆಯನು ಕಟ್ಟಿ ಕೈಪಿಡಿ ಹನುಮ 6 ಸಂಗವು ನಿತ್ಯಾಹ್ನೀಕಕೆ ಭಂಗವು ಬರುತಿಹುದು ಸದ್ವಿಷಯವಾದರದೆ ಬಂಗಾರವು ರತ್ನವು ತಾ ಹಿಂಗದೆ ಸೇರಿಸಿದ ರೀತಿ ಹಿತವೈ ಹನುಮ 7 ನವವಿಧ ಭಕ್ತಿಯ ಕೊಡು ರಾ- ಘವನಂಘ್ರಿಪರಾಗದಲಿ ಕಡು ವಿರತಿಯನು ನೀಂ ತವಕದಲಿ ಪಾಲಿಸುತಲಿ ನಿ- ನ್ನವರಂ ಕೈಪಿಡಿವುದೆಂದಿಗೂ ಬಿಡದೆ ಹನುಮ 8 ತಾನನುದಿನದಿ ಬರುವ ಕಷ್ಟಗಳನು ಪರಿಹರಿಸುತ್ತ ಹಿಂದೆ ತಿರುಗುತಲಿರುವಂ9
--------------
ಗುರುರಾಮವಿಠಲ
ವಂದಿಪೆ ನಾ ಭಗವಾನ್ ಪೂರ್ಣಘನಾ ನೀ ಮುಕುತಿನಿದಾನಾ ಜ್ಞಾನಘನಾ ಆನಂದಘನಾ ನಿತ್ಯಾನಂದನು ನೀ ಚೈತನ್ಯ ಮೂಲಪದ ಮಾಯಾರಹಿತ ಸದಾ ಆ ನಿರ್ವಿಕಲ್ಪಾತ್ಮಾ ಸತ್ಯನು ನೀ ಹೇ ಸರ್ವಾಂತರ್ಯಾಮೀ ಪ್ರೇಮಘನಾ ಆನಂದ ಕಣ್ಣು ಮನಗಳಿಗೆ ನಿಲುಕದಲೇ ನೀ ಸಾಕ್ಷಿಸ್ವರೂಪಾ ಇವುಗಳಿಗೇ ಕಲ್ಪಿತವ್ಯೆ ಮಾಯಾಮೋಹಿತವೈ ಈ ಜಗವೆಲ್ಲಾ ನಿನ್ನೊಳ್ ಸತ್ಯಘನಾ ಆನಂದ ಎಂತು ಬಣ್ಣಿಸಲೈ ನಿನ್ನನು ನಾ ಈ ವಾಣಿಯಿಂ ದೂರಾ ನಿಜಸಾರಾ ಯೋಗಿವರಾ ಗುರು ಶ್ರೀ ಶಂಕರಾ ಹೇ ಸರ್ವಾತ್ಮಪೂರ್ಣಾನಂದಘನಾ ಆನಂದ
--------------
ಶಂಕರಭಟ್ಟ ಅಗ್ನಿಹೋತ್ರಿ