ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಕಿತ ಪದ ಕನಕಾದ್ರಿ ಹರಿ ವಿಠಲ | ಕಾಪಾಡೊ ಇವಳಾ ಪ ಪಾದ | ವನಜ ಸೇವಿಪಳಾ ಅ.ಪ. ನಿತ್ಯ ತೈಜಸ ಸೂಚ್ಯ | ಇತ್ತಿಹೆನೊ ಅಂಕಿತವಸಾರ್ಥಕೆನಿಪುದು ಇದನ | ಭಕ್ತನಾಭಯದನೇ 1 ಪತಿಸೇವೆ ದೊರಕಿಸುತಾ | ಮುಕ್ತಿ ಮಾರ್ಗದಿ ನಡೆಸಿಕೃತಕೃತ್ಯಳೆಂದೆನಿಸೊ | ಕೃತಿರಮಣದೇವಾ |ಹಿತವಹಿತ ವೆರಡುಗಳಾ | ಸಮತೆಯಲಿ ಉಂಬಂಥಧೃತಿಯನ್ನೆ ನೀಕೊಟ್ಟು | ಸತತ ಕೈ ಪಿಡಿಯೋ 2 ಮಧ್ವಮತ ತತ್ವಗಳ | ಶುದ್ಧಭಾವದಿ ತಿಳಿದುಅಧ್ವಯನು ಹರಿಯೆಂಬ | ಬುದ್ಧಿವೃದ್ಧಿಸುತಾಶ್ರದ್ದೆ ಭಕ್ತಿ ಜ್ಞಾನ | ಸಿದ್ಧಾಂತ ಅನುಸರಿಪಶುದ್ಧ ಬುದ್ಧಿಯನಿತ್ತು | ಉದ್ಧರಿಸೊ ಹರಿಯೇ 3 ಕಾಮಿತ ಪ್ರದನಾಗಿ | ಕಾಮಿತಂಗಳನಿತ್ತುಭೂಮಿಯೊಳು ಸದ್ವøಂದ್ಯ ಸ್ತೋಮದಲಿ ಮೆರೆಸೋಶ್ಯಾಮಸುಂದರ ಹರಿಯೆ | ಶ್ರೀಮಹೀ ಸೇವಿತನೆನೀ ಮನವ ಮಾಡೆ ಹರಿ | ಆವುದಾ ಸಾಧ್ಯಾ 4 ಭಾವ ಜ್ಞಾನೀನಿರಲು | ಪೇಳ್ವುದೇನಿಹುದಿನ್ನುಭಾವುಕಳ ಪೊರೆಯಿಂದು | ಓವಿ ಪ್ರಾರ್ಥಿಸುವೆ |ಭಾವಜನಯ್ಯಗುರು | ಗೋವಿಂದ ವಿಠ್ಠಲನೆ ನೀವೊಲಿಯದಿನ್ನಿಲ್ಲ | ಕಾವಕೊಲ್ಲುವನೆ 5
--------------
ಗುರುಗೋವಿಂದವಿಠಲರು
ಶೇಷನುತ ಗೋಪ ವಿಠ್ಠಲ | ನೀ ಸಲಹೊ ಇವಳಾ ಪ ವಾಸದೇವನೆ ನಿನ್ನ | ಪ್ರಾರ್ಥಿಸುವೆ ಹರಿಯೇ ಅ.ಪ. ಕನ್ಯೆ ಬಹು ಭಾವುಕಳು | ನಿನ್ನೆಯಿಂ ಪ್ರಾರ್ಥಿಪಳುಘನ್ನ ಹರಿದಾಸ್ಯದಲಿ | ಮುನ್ನಮನವಿರಿಸೀ |ಇನ್ನು ತೈಜಸರೂಪ | ಚೆನ್ನ ಶೇಷನು ಆಗೆಮಾನ್ಯರೂ ಪರಮಗುರೂ | ವನ್ನೆ ಕಂಡಿಹಳೋ 1 ಗುರುತರೂಪಿ ತೈಜಸನು | ವ್ಯಾಸಪೀಠದ ಮುಂದೆಇರುತ ಗುರು ರಾಜರ | ಮಹಿಮೆ ಪೇಳುತಲೀ |ಹರಿಸುತಲಿ ಕನ್ಯೆಗೇ | ಫಲಪುಷ್ಪ ತಾಂಬೂಲದೊರಕಿಸಿಹ ಅದರಿಂದೆ | ಉಪದೇಶವಿತ್ತೇ 2 ಪತಿಸೇವೆ ದೊರಕಿಸುತ | ಕೃತ ಕಾರ್ಯಳೆಂದೆನಿಸೊಹಿತವಹಿತವೆರಡರಲಿ | ರತಿ ಇಡದೆ ಉಂಬಾ |ಮತಿಯನ್ನೇ ಕರುಣಿಸುತಾ | ಮತಿಮತಾಂವರರಂಘ್ರಿಶತಪತ್ರ ಸೇವೆಯಲಿ | ರತಳು ಎಂದೆನಿಸೊ 3 ಭವ | ಸಾಗರದ ಬತ್ತಿಪುದುಮರುತಾಂತರಾತ್ಮ ಹರಿ | ವೇಣುಗೋಪಾಲಾ 4 ಭಾವ ಮೈದುನಗೊಲಿದ | ಶ್ರೀವರನೆ ಮೈದೋರಿಭಾವುಕಳೆ ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ |ಸಾರ್ವಭೌಮನೆ ಹರಿಯೆ | ಕೋವಿದೋತ್ತಂಸ ಗುರುಗೋವಿಂದ ವಿಠ್ಠಲನೆ | ನೀವೊಲಿಯ ಬೇಕೋ 5
--------------
ಗುರುಗೋವಿಂದವಿಠಲರು
ಶ್ರೀಕೃಷ್ಣ ಹರಿ ವಿಠಲ | ಕಾಪಾಡೊ ಇವಳಾ ಪ ಹೇ ಕೃಪಾಕರ ಮೂರ್ತೆ | ಪ್ರಾರ್ಥಿಸುವೆ ಇದನಾ ಅ.ಪ. ಪತಿತ ಪಾವನರಂಗ | ಮತಿಮತಾಂವರರಂಘ್ರಿಶತಪತ್ರ ಸೇವೆಗಳ | ಸತತ ದೊರಕಿಸುತಾಸತತ ತವ ಸ್ಮರಣೆ ಸುಖ | ರತಿ ಪಾಲಿಸಿವಳೀಗೆಗತಿಗೋತ್ರ ನೀನೆಂದು | ಪ್ರಾರ್ಥಿಸುವೆ ಹರಿಯೇ 1 ಪತಿಸೇವೆ ದೊರಕಿಸುತ | ಕನನಗಭಯದನಾಗಿಪಥತೋರೋ ಸದ್ಗತಿಗೆ | ಕೃತಿರಮಣ ದೇವಾಹಿತವಹಿತ ದ್ವಂದ್ವಗಳ | ಸಮತೆಯಲಿ ಕಾಂಬಂಥಮತಿಯ ನೀ ಕರುಣಿಸುತ | ಕಾಪಾಡೊ ಹರಿಯೇ 2 ಪವನ ಮತ ಸುಜ್ಞಾನ | ದ್ರುವ ವರದ ಭಕ್ತಿಯನುದಿವಸ ದಿವಸದಿ ಕೊಟ್ಟೆ | ಉದ್ದರಿಸೊ ಇವಳಾಪವನಂತರಾತ್ಮ ಗುರು | ಗೋವಿಂದ ವಿಠಲನೆಇವಳ ಕೈಯನೆ ಪಿಡಿಯೆ | ಭಿನ್ನವಿಪೆ ಹರಿಯೇ 3
--------------
ಗುರುಗೋವಿಂದವಿಠಲರು
ಹರಿಗುರು ಪ್ರಸನ್ನ ವಿಠಲ | ಪೊರೆಯ ಬೇಕಿವಳಾ ಪ ದುರಿತ ರಾಶಿಯ ಕಳೆದು | ಕಾಪಾಡೋ ಇವಳಾ ಅ.ಪ. ಭವ ವಂದ್ಯ | ಕೋಮಲಾಂಗನೆ ದೇವಕಾಮಿತಾರ್ಥದವನಾಗಿ | ಕಾಪಾಡ ಬೇಕೋ 1 ಬೋಧ ತಿಳಿಸುತಲೀಸಾಧನವ ಗೈಸಿ ಸ | ಮ್ಮೋದ ಕೊಡು ಇವಳೀಗೆಹೇ ದಯಾನಿಧಿ ಹರಿಯೇ | ಬಾದರಾಯಣನೇ 2 ಪತಿಸುತರೊಳು ಹರಿಯೇ | ವ್ಯಾಪ್ತಿಯನೆ ತಿಳಿಸುತ್ತಹಿತದಾದ ಸೇವೆಯಲಿ | ರತಳೆನಿಸೊ ಹರಿಯೇಹಿತವಹಿತವೆರಡನ್ನು | ಸಮತೆಯಲಿ ಉಂಬಂಥಮತಿಯ ನೀ ಕರುಣಿಸುತ | ಅತಿಹಿತದಿ ಪೊರೆಯೋ 3 ಭವವನದಿ ನವಪೋತ | ತವದಿವ್ಯಸ್ಮøತಿ ಇತ್ತುಶ್ರವಣ ಸುಖ ವದಗಿಸುತ | ಸಾಧನವ ಗೈಸೋಭುವನ ಪಾವನ ದೇವ | ತವನಾಮ ಜಪಗಳನುಸರ್ವದಾ ಕರುಣಿಸುತ | ಉದ್ಧರಿಸೋ ಇವಳಾ 4 ಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು