ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭರ್ತø ಭವನದಿ ಮಗಳೆ ಚಿರಕಾಲ ಸುಖಿಸೌ ಕರ್ತ ಶ್ರೀಹರಿ ಪದವನರ್ಥಿಯಿಂ ಭಜಿಸೌ ಪ ಪತಿಯೆ ಸಿರಿವರನೆಂದು ಅತಿಶಯದಿ ಭಾವಿಸುತ ಸತತ ಸೇವೆಯ ಮಾಡಿ ಗತಿಯೆ ನೀನೆನುತ ಸತಿಶಿರೋಮಣಿಯಾಗಿ ಮಿಗಿಲು ಮೋದವ ಪಡೆದು ಕ್ಷಿತಿಯೊಳಗೆ ನೀ ಬಾಳು ಮತಿವಂತೆಯಾಗಿ1 ಅತ್ತೆಮಾವಂದಿರನು ತಾಯಿತಂದೆಗಳಂತೆ ಅತ್ತಿಗೆ ನಾದಿನಿಯ ಅಕ್ಕತಂಗಿಯರೋಲ್ ಉತ್ತಮಳೆ ಭಾವನಂ ಮೈದುನನ ಸಹಜರೆಂ ದರ್ಥಿಯಿಂದರಿಯುತ್ತ ಉಪಚರಿಸುತಿರು ನೀಂ 2 ಬಂಧುಗಳ ನೀ ಬಹಳ ಪ್ರೇಮದಿಂ ಕಾಣುತ್ತ ವಂದಿಸುವುದೌ ಪರಮಭಾಗವತರಡಿಗೇ ಇಂದಿರಾದೇವಿಯೆಂದೈದೆಯ ಪೂಜಿಸೌ ಸುಂದರ ವಿದ್ವರ ಸುತರಕೂಡ 3 ಸರ್ವತ್ರದಲಿನೀನು ಹಿತವಚನ ಮಾಡುತ್ತ ನಿತ್ಯ ಪಡೆಯುತ್ತ ಗರ್ವವರ್ಜಿತೆಯಾಗಿ ಗುಣಮುಖಿಯು ಎಂದೆನಿಸಿ ಸರ್ವಕಾಲವು ಗೌರವ ಕೀರ್ತಿಯನು ಬೀರೌ 4 ಜಾಜಿಕೇಶವ ನಿನ್ನ ಸೌಭಾಗ್ಯವತಿಯಾಗಿ ಸಾಜದಿಂ ಸಲಹುವನು ಸುಜನವಂದಿತನು ಪೂಜಿಪರ ಮರೆಯದಿಹ ಶ್ರೀಹರಿಯ ಕರುಣದಿಂ ಈ ಜಗದಿ ರಾಜಿಸೌ ಪರಮಮಂಗಳೆಯೇ 5
--------------
ಶಾಮಶರ್ಮರು
ಸುಖದಿಂದ ಬಾಳೆ ಬಾಲೆ | ಸುಮಂಗಲೇ | ಪ ಸುಖದಿ ಬಾಳೆ ಸಾವಿತ್ರಿಯಂತೆ ಸುತರ ಪಡೆದಿಳೆಯೊಳ್ ನಿರಂತರ ಪತಿಯ ವಾಕ್ಯದಿ ನಿರತಳಾಗಿ ಅ.ಪ ಅತಿಶಯದಿ ನಿರುತ ಪತಿಯ ಸೇವಿಸುತ್ತ ಆತನೇ ಪರದೈವವೆಂದೆನುತ ಹಿತವಚನ ವಾಡುತ ಅತ್ತಿಮಾವನ ಸ್ಮರಿಸುತ್ತ ರತಿಪತಿ ಪಿತನಂಘ್ರಿ ಭಜಿಸುತ ಪೃಥ್ವಿಯೋಳ್ ಅನುಸೂಯಳಂತೆ 1 ಸುಂದರಾಂಗಿಯೆ ಸತತ ಗೃಹ ಕಾರ್ಯ ಮಾಡುತ ಇಂದಿರೇಶನ ಪಾಡುತ್ತ | ಬಂದಂಥ ವಿಪ್ರರ ದ್ವಂದ್ವ ಪಾದಕೆರಗುತ | ಹಿಂಗಿರುವದುಚಿತ ಮಂದ ಮತಿಗಳ ಮಾತು ಕೇಳದೆ ತಂದೆ ತಾಯಿಗೆ ಕುಂದು ತಾರದೆ ಇಂದು ಮುಖಿ ನೀ ಹಿಂಗಿದ್ದರನುದಿನ ಬಂದು ಕಾಯ್ವ ಶ್ರೀರಾಮಚಂದಿರ 2 ನಡಿದಾವರೆ ಪೂಜಿಸು ಸರ್ವದಾ ಬಿಡಿ ನುಡಿಗಳಾಡದೆ ಕಡು ಕರುಣದಿ ದ್ರೌಪದಾ ಮೋದ | ಪಡಿಸುಪುತ್ರರ ಪರ ರೊಡನೆ ಕಾಲ್ಕೆದರಿ ಕಲಹವ ತೆಗೆಯದಿರು ಸಖಿ ಒಡೆಯ ಶ್ರೀ ಶಾಮಸುಂದರನು ತಡೆಯದೆ ಸಂಪದವ ನೀಯುವ 3
--------------
ಶಾಮಸುಂದರ ವಿಠಲ