ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಪಾರ್ವತಿ) ಬಾರಮ್ಮ ಬಾ ಬಾ ಬೊಮ್ಮನ ಮಗನಾಂಗೀ ಪ ತೋರೆ ತೋರೆ ತವ ಕರುಣಾಪಾಂಗೀ ಅ.ಪ. ಮನವೆಲ್ಲಾ ತಿರುತಿರುಗಿದೆ ಮದನಾಂಗೀಮಾವನ ಮಗನಿಗೆ ಪೇಳೆ ಶುಭಾಂಗೀಮನೋಹಾರನ ತಾಪವ ಹರಿಸು ಕೃಪಾಂಗೀ ಮಧ್ಯದಯಾಂಗೀಮದಪಿತ ಪತಿಯ ಮೋಹಿತಳಾಗಿ ಮರೆಪೊಕ್ಕುದು ಪದೋಪದಿಗೆ ಸ್ಮರಿಸುತ ಬೇಗಾ 1 ಗತಿಯಾರು ಪೇಳಮ್ಮಾ ನಿನ್ಹೊರತು ಮತ್ತೊಬ್ಬನ ನಾ ಕಾಣೆನಮ್ಮಾಬೊಮ್ಮನ ಮಗನಿಹನಮ್ಮಾ ಮದುವ್ಯಾದೆಯಮ್ಮಾಮದುವಿಯ ಮಾಡಿಕೊಂಡು ಮರುಳುಮಾಡಿ ನಿನ್ನ ಕರಪುಟದೊಳಗಿಟ್ಟು ಬಾಯ್ಬಾಯ್ಬಿಡಿಸಲು 2 ಯಷ್ಟೆಂದು ಪೇಳಲಮ್ಮಾ ಇನ್ನೆಷ್ಟೆಂತು ತುತಿಸಾವೆಮ್ಮ ಕಷ್ಟಪಡಲಾರೆ ನಮ್ಮಾ ಬಲು ಭ್ರಷ್ಟನಾದೆನಮ್ಮಾಇಷ್ಟನ ಕರಪುಟ ಜೇಷ್ಠ ಸುರರ ಗೆಲಿದಗುರುಕೃಷ್ಣವಂದಿತ ತಂದೆವರದಗೋಪಾಲವಿಠಲನ ಪಠಿಸುವ 3
--------------
ತಂದೆವರದಗೋಪಾಲವಿಠಲರು
ಮುರಲೀಯನೂದುವ ಮುರಹರನ್ಯಾರೇ ಪೇಳಮ್ಮಯ್ಯಾ ಪ ಮಾರನ ಕುಶಲವ ಮೋದದಿ ಬೀರುತ ಮನಮೋಹಗೊಳಿಪ ಮಾರನಯ್ಯ ಕಾಣೆ ಅ.ಪ. ಸುಂದರೀ ಸಖಿ ಸುಕುಮಾರಿ ಇಂದೀನ ವೈಭವ ಭಾರಿನಂದಾವೃಜನದೊಳಗಿಹ ನಾರೀ ವೃಂದಗಳೆಲ್ಲಾ ಪರಿಪರಿ ಸೇರಿ ನಂದನ ಸುತನಾ ಕಂದನ ಬಾಧೆಯ ತಾಳದೆ ತನ್ನೊಳು ಪೊಗಳುವ ಘನಶೌರಿ1 ಮದನಾ ಜನಕನು ಮೌನದಿ ನಿಂತಾಮಾನಿನಿಯರು ಮಾಡುವ ಚಿಂತಾ ಮನವಾತುರಗೊಳಿಪುದು ಶ್ರೀಕಾಂತಾ ಮಾವನರಿಪು ಸುಧೆನುಣಿಸು ಬಾ ಪ್ರಾಣಕಾಂತಾಮಾನರಹಿತಳಾಗಿ ಗಾನ ಮಾಡುವೆ ಘನ ಪ್ರಾಣಮಳಹೋ ಶ್ರೀಕೃಷ್ಣನೆಂದು 2 ಅಂಗದೊಸನವ ತೂರುತ ಮಂದಾಮಾರುತ ಪಡಿಸುವ ಮುಕುಂದಾ ಭಂಗಬಡಲಾರೆವು ಶ್ರೀಗೋವಿಂದಾ ಮದಮುರಿ ಮದಕುಲ ನಂದಾ ತುಂಗಮಹಿಮ ತಾ ಬಂದು ಪೊರೆದ ತಂದೆವರದಗೋಪಾಲವಿಠಲನ ಸಖ 3
--------------
ತಂದೆವರದಗೋಪಾಲವಿಠಲರು
ರಮಾಸಮುದ್ರನ ಕುಮಾರಿ ನಿನ್ನಸರಿ ಸಮಾನರ್ಯಾರಮ್ಮ ಪ ಉಮೇಶ ಮೊದಲಾದ ಅಮರ ನಿಕರವು ಪಾದ ಕಮಲ ಭಜಿಪುದು ಅ.ಪ ಕರುಣಾವಾರಿಧಿಯೆಂದು ಶರಣ ಜನರು ನಿನ್ನ ಸ್ಮರಣೆ ಮಾಡುತ ಲಿಪ್ಪರೆ ಹರಿಣಾಕ್ಷಿ ಕೇಳ್ನಿನ್ನ ಕರುಣಾದಿಂದಲಿ ಅಘ ಹರಣ ಮಾಡಿ ನಿನ್ನ ಚರಣಾವ ತೋರಿಸಮ್ಮ 1 ಅಪಾರ ಮಹಿಮನ ವ್ಯಾಪಾರಗಳ ತಿಳಿದು ಕಾಪಾಡುವೇ ಜಗವಾ ಕೋಪರಹಿತಳಾಗಿ ಶ್ರೀಪತಿಯೊಳು ಎಮ್ಮ ತಾಪತ್ರಯವ ಪೇಳಿ ಕಾಪಾಡಬೇಕಮ್ಮ 2 ವಾಸವ ವಂದಿತ ಸಿರಿಶೇಷವಿಠ್ಠಲನೊಳು ವಾಸವ ಮಾಡುವಳೆ ಘಾಸೀ ಮಾಡದೆ ಎನ್ನ ಈ ಸಮಯದೊಳು ವಾಸುದೇವಗೆ ಪೇಳಿ ಪೋಷಿಸಬೇಕಮ್ಮ 3
--------------
ಬಾಗೇಪಲ್ಲಿ ಶೇಷದಾಸರು
ಸುಭದ್ರೆ ಸತಿ ಸುಭದ್ರಾ ಸತಿ ನಿನ್ನ ಸಲಹಲಿ ಲಕ್ಷ್ಮೀಲೋಲಾ ಶ್ರೀ ಲಕ್ಷ್ಮೀಲೋಲಾ ಪ. ಭಾವ ಮೈದುನ ಅತ್ತೆಗೆ ಅತಿ ಹಿತಳಾಗಿ ನೀ ಭಾವ ಶುದ್ಧದಿ ಹರಿ ಗುರು ಸೇವೆಯ ಮಾಡಿ 1 ಪತಿಸೇವೆಯ ಅತಿಹಿತದಿಂ ನೀ ಮಾಡೆ ಪತಿವ್ರತೆಯಾಗಿ ನೀ ಸುತರನು ಪಡೆಯುವೆ 2 ಭಕ್ತವತ್ಸಲನ ಭಗಿನಿಯೆಂದೆನಿಸಿದಿ ಸತತ ಶ್ರೀ ಶ್ರೀನಿವಾಸನ ನೆನಯುತ ನೀ ಬಾಳೌ 3
--------------
ಸರಸ್ವತಿ ಬಾಯಿ