ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೊ ಕರುಣದಿಂದೆನ್ನನು ತೋಯಜಾಕ್ಷನೆ ನೀನು ಪ ಕಾಯೊ ಕರುಣದಿ ತೋಯಜಾಕ್ಷನೆ ನೀನು ಹೇಯ ಜನಮವೆತ್ತಿ ಮಾಯಕೆ ಸಿಲುಕಿದೆ ಅ.ಪ. ಹಿಂದೆ ತಪ್ಪಿದೆನ್ಯಯ್ಯ ಮುಂದೆ ಬುದ್ಧಿಯು ಬಂತು ಸಿಂಧುಶಯನ ನೀನು ಬಂದು ಮೈದೋರಿ 1 ಸತಿಸುತರೆನಗೆ ಅತಿ ಹಿತರೆಂತೆಂದು ಮತಿಭ್ರಾಂತನಾಗಿದ್ದೆ ಪತಿತ ಪಾವನನೆ 2 ಕೊಟ್ಟು ಆದರಿಸಲು ಇಷ್ಟ ಮಿತ್ರರು ಇದ್ದು ಕೆಟ್ಟುಪೋದಮೇಲೆ ಕೈಬಿಟ್ಟರು ನೀ ಬಿಡಬೇಡ 3 ತಂದೆತಾಯಿಯು ನೀನೆ ಬಂಧು ಬಳಗವು ನೀನೆ ಇಂದಿರೆರಮಣನೆ ಬಂಧವ ಬಿಡಿಸೀಗ 4 ಕರುಣಾಸಾಗರ ನಿನ್ನ ಮರೆಹೊಕ್ಕೆ ನಾನೀಗ ಶರಣರ ಪೊರೆಯುವ ರಂಗೇಶವಿಠಲನೆ 5
--------------
ರಂಗೇಶವಿಠಲದಾಸರು