ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿಗೆ ಕಡೆಮಾಡು ಎನ್ನ ಮಂದಬುದ್ದಿ ತಂದೆ ಕೇಳಿ ಮರೆಬಿದ್ದೆ ನಿನ್ನವರ ಸುದ್ದಿ ಪ ಒಪ್ಪಿಡ್ಯವಲಕ್ಕಿಗೆ ಒಪ್ಪಿ ಘನ ಬಡತನವ ಕಪ್ಪುಕುಲದವನಿಂಗೆ ತುಪ್ಪ ಸಕ್ಕರೆಯನ್ನು ಗಪ್ಪತ್ತಿಲುಂಡು ಮುಕ್ತಿ ಸಂಪದ1 ವಿದುರನರ್ಧಾಂಗಿಯ ಸದಮಲದ ತವಪಾದ ಸದನಕೈಯಲು ಪದುಮವದನೆ ಮೈ ಮರೆದು ಕದಳಿಫಲ ಮೇಲ್ಭಾಗ ವದನದಿಕ್ಕಲು ಸವಿದು ಸದುಯಾಂಬುಧೊಲಿದಸಮಪದವಿ ದಯಮಾಡ್ದಿ2 ಅಧಮಾಧಮಾಗಿ ದುರ್ಮದದಿಂದ ಮತಿಗೆಟ್ಟು ಸದಮಲ ಕುಲಪದ್ಧತಿ ವಿಧಿಯನ್ನು ಮರೆತು ಅಧಮಕುಲಜಳಿಗೊಲಿದು ಮದುವ್ಯಾದ ಅಜಮಿಳಗೆ ಒದಗಿ ಬಂದಂತ್ಯಕೆ ನಿಜಪದವಿ ಕರುಣಿಸಿದಿ3 ವರಧರ್ಮ ಹಿತಭಕ್ತ ನರನಿವರ ಲೆಕ್ಕಿಸದೆ ಕರುಣದ್ವಿದುರನ ಮನೆಗೆ ಭರದಿ ಬಂದಿಳಿದಿ ಪರಮಪಾವನ ನಿಮ್ಮ ಚರಣಭಕ್ತ್ಯೊಂದೆನಗೆ ಕರುಣಿಸು ಮತ್ತಾವ ಸಿರಿಯ ನಾನೊಲ್ಲೆ 4 ನಿನ್ನ ಎಂಜಲು ಉಣಿಸಿ ನಿನ್ನವರೊಳಾಡಿಸಿ ನಿನ್ನ ಉನ್ನತ ಧ್ಯಾನವನ್ನೆ ದಯಮಾಡಿ ಮನ್ನಿಸಿ ಸಲಹಯ್ಯ ನಿನ್ನ ದಾಸನೆಂದೆನಿಸಿ ಎನ್ನಯ್ಯ ಶ್ರೀರಾಮ ನಿನ್ಹ್ನೊರತನ್ಯರಿಯೆ 5
--------------
ರಾಮದಾಸರು
ಬಿನ್ನಹಕೆ ಬಾಯಿಲ್ಲ ಭೂತನಾಥ ಪ ನಿನ್ನ ಪದರಜ ಸ್ನಾನ ನೀಡೆನ್ನ ಉದ್ಧರಿಸು ಅ.ಪ. ಹೀನ ಯೋಗ್ಯತೆಗಿನ್ನು ಏನು ಮಾಡಲೊ ಸ್ವಾಮಿ ಧೇನು ವತ್ಸನ ತೆರದಿ ಪಾಲಿಸೆನ್ನ ವೇಣುಗೋಪಾಲನಾ ಧ್ಯಾನ ನಿಲ್ಲದು ಮನದಿ ನಾನು ನನ್ನದು ಬಿಡದು ಎನಗಾವ ಗತಿಯಿನ್ನು 1 ನೀಲಕಂಠನೆ ನಿನ್ನ ನೀಳಪಾದದ ಧೂಳಿ ಮೂರ್ಲೋಕದಘತೂಲಕಗ್ನಿ ಸತತ ಫಾಲಾಕ್ಷ ಪತಿತ ಪರಿಪಾಲಕನು ನೀನೊಬ್ಬ ಹಾಲಲ್ಲಿ ಅದ್ದೆನ್ನ ಹರಿಭಕ್ತರ ಬಂಧು 2 ಮನಕರಣ ತನು ವಿಷಯ ಘನಪಾಶದಲಿ ಸಿಕ್ಕಿ ಉಣಿಸುವುವು ಮಹದುಃಖ ಎನ್ನ ಮೀರಿ ತುಂಬಿ ಎನಿತು ನಿನ್ನಲಿ ನಿಂದು ಪೊರೆಯೆಂದು ಮೊರೆ ಇಡಲಿ 3 ದುಷ್ಟವಾಸನೆ ಶಕ್ತಿ ಮೆಟ್ಟಿ ಆಳುವುದೆನ್ನ ವೃಷ್ಟೀಶನಲಿ ಎನ್ನ ಪೋಗಬಿಡದೊ ದುಷ್ಟನಕ್ರಗೆ ಸಿಕ್ಕ ಕರಿಯಂತೆ ಬಾಯ್ಬಿಡುವೆ ಕಷ್ಟ ಪರಿಹರಿಸಯ್ಯ ಹರಿನಿಷ್ಠಧ್ಯಾನವನಿತ್ತು 4 ಶತಕೋಟಿ ಶ್ರುತಿಯಲಿ ಜಯೇಶವಿಠಲ ನತಬಂಧು ಎಂತೆಂದು ಸಾರುತಿಹುದು ಹಿತಭಕ್ತ ನೀ ಹರಿಗೆ ಹರಿಮೀರ ನಿನ್ನುಕ್ತಿ ಪತಿತಪಾವನ ನನ್ನ ಹರಿಭಕ್ತನ ಮಾಡು5
--------------
ಜಯೇಶವಿಠಲ
ವಶವಲ್ಲದೀ ಮನದ ದೆಸೆಯಿಂದೆ ನಾ ಬಲು ದೆಸೆಗೆಟ್ಟು ಬಳಲುವೆ ಕುಸುಮಾಕ್ಷ ಕಣ್ದೆರೆಯೊ ಪ ನಶಿಪ ಪ್ರಪಂಚ ಭ್ರಮಿಸಿ ಹಸಗೆಡಿಸಿ ನಿಜಧ್ಯಾನ ಪಶುವಿನಂತೆನ್ನನು ದಿಸೆದಿಸೆಗೆಳಿಪುದು ಅ.ಪ ಭುವಿಪರನೊಲಿಸರೆಲವದಿ ಭೂಮಿಯ ಪಡೆದೆ ಸವ ಜೋಡಿ ನೂಕಿತ್ತು ಜವದಿ ಕಟ್ಟುವುದು ಬುವಿಯೊಳು ಮಿಗಿಲೆನಿಸುವ ತೆರೆ ಮೇಲ್ಮಾಡಿ ಭವನ ರಚಿಸಿ ಕೋಟಿದ್ರವ್ಯಗಳಿಗಳುವುದು 1 ಮದುವ್ಯಾಗಿ ಪದ್ಮಿನಿಯ ವದನದೊಳ್ವದನಿಕ್ಕಿ ಮದನಕದನದಿ ಸುಖಿಸುವುದೊಂದು ಫ¼ಗಿ ಸದನ ಮುರಿದು ಸಂ ಪದವೆಲ್ಲ ತನ್ನಗೆ ಒದಗಿಬರಲೆನ್ನುವುದು 2 ತಡೆಯದೆ ವೈರಿಗಳ ಕಡುಕೋಪದಿಂ ತಂದು ಪಿಡಿದು ಕಂಬಕೆ ಕಟ್ಟಿ ಸುಡಿಸುವುದೊಡನೆ ಕಡುಗಲಿತನದಿಂದ ಪೊಡವಿಪರ ಸದೆಬಡಿದು ಪೊಡವಿ ಗೆಲಿದು ಒಂದೇ ಕೊಡೆಯಿಂದಾಳುವುದು 3 ಯಾತ್ರೆ ಮಾಡುವುದೊಮ್ಮೆ ಕ್ಷೇತ್ರದೊಳಗೆ ಕೂತು ನೇತ್ರಮಂ ಬಂಧಿಸಿ ಸ್ತೋತ್ರ ಮಾಡುವುದು ಮೂತ್ರದ್ವಾರದೆ ಬಂದ ಸೂತ್ರದ ಕಾಯಕ್ಕೆ ಧಾತ್ರಿ ಸೊನ್ನೆಂದೊಮ್ಮೆ ಖಾತ್ರಿ ಮಾಡುವುದು 4 ಯಾತರ್ಹಲವು ಪರಿಮಿತಿಯಿಲ್ಲದ್ಯೋಚಿಸಿ ಖತಿ ತಾಳಲಾರೆ ಅತಿಭ್ರಷ್ಟಮನದ ದುರ್ಮತಿ ನಿವಾರಿಸು ಗತಿ ನೀಡೆನಗೆ ಕೃಪೆಯಿಂ ಹಿತಭಕ್ತ ಶ್ರೀರಾಮ 5
--------------
ರಾಮದಾಸರು
ಶ್ರೀಹರಿದಾಸವೃಂದ ಸ್ತೋತ್ರ ದಾಸವರ್ಯರಿಗೊಂದಿಪೆ ದಾಸವರ್ಯರಿಗೆರಗಿ ಜನ್ಮಾಂತರದ ದೋಷವ ಪರಿಹರಿಸಿಕೊಂಬೆ ಪ ನಾರದ ಮುನಿಹರಿಯಾಜ್ಞ್ಞೆಯಿಂದಲೆ ಪುರಂ - ದರ ದಾಸರಾಗಿಜನಿಸಿದ ದಾ - ನಾರಾಯಣನ ದಿವ್ಯನಾಮದ ಮಹಿಮೆಯ ಮೂರು ಲೋಕಗಳಲ್ಲಿ ಹರಹಿದ 1 ಭಜಿಸುವ ಭಕುತರ ಅಗಣಿತದೋಷವ ನಿಜವಾಗಿ ಪರಿಹರಿಸುವಂಥ ದಾಸ - ಸುಜನ ಪೋಷಕ ದುಷ್ಟಕುಜನ ಕುಠಾರ ಶ್ರಿ ವಿಜಯರಾಯರ ಪಾದಕ್ಕೆರಗುವೆ 2 ಕೋಪರಹಿತಭಕ್ತ ಪಾಪವಿದೂರಕ ಭೃಂಗ ದಾ - ತಾಪ ಸೋತ್ತುಮಭವ ತಾಪನಿವಾರಕ ಗೋಪಾಲದಾಸರಿಗೆರಗುವೆ 3 ಧರಿಯಸುರರ ಉದ್ಧರಿಸಲೋಸುಗ ದಿವ್ಯ ಹರಿಕಥಾಮೃತ ಸಾರಗ್ರಂಥವದಾ - ವಿರಚಿಸುತಙÁ್ಞನಪರಿಹರಿಸಿದಂಥ ಹರಿಭಕ್ತಾಗ್ರಣಿ ಶ್ರೀ ಜಗನ್ನಾಥ 4 ಧರೆಯೊಳು ಹರಿಲೀಲಾಮೃತ ವೃಷ್ಟಿಗರೆಯಲು ಪರಿಪರಿ ಕಥೆಗಳ ರಚಿಸಿದ ದಾ - ವರದೇಂದ್ರ ಮುನಿಗಳ ಪಾದಸಾರಸಭೃಂಗ ಪರನುಸುಚರಿತ ಶ್ರೀ ಪ್ರಾಣೇಶ 5 ಹರಿಭಕ್ತಿ ಮಾರ್ಗವ ಪರಿಪರಿಶಿಷ್ಯರಿ ಗರುಹಿ ಕರುಣದಿಂದುದ್ಧರಿಸಿದ ದಾ - ಪರಮತತಿಮರಕ್ಕೆ ತರಣಿಸ್ವರೂಪ ಶ್ರೀ ಗುರುಪ್ರಾಣೇಶಾರ್ಯರಿಗೆರಗುವೆ6 ಗುರುಪಾದ ಸೇವೆಯ ಪರಿಪರಿಗೈದು ಈ ಧರಿಯೊಳು ಧನ್ಯರೆಂದೆನಿಸಿದ ದಾ - ಹರಿದಾಸ ಕುಲರತ್ನ ಸರುವ ಸದ್ಗುಣ ಪೂರ್ಣ ವರಶ್ರೀಪ್ರಾಣೇಶದಾಸಾರ್ಯ 7 ಗುರುಪ್ರಾಣೇಶರ ಕರಸರಸಿಜ ಸಂಜಾತ ಪರಮಭಾಗವತರೆನಿಸಿದ ದಾ ಮರುತಮತದ ತತ್ವವರಿದಂಥ ಸುಖದ ಸುಂ - ಮೋದ ವಿಠಲರೆಂಬ 8 ಭೂಮಿಯೋಳ್ ವರದೇಶ ವಿಠ್ಠಲನ ನಿಜಭಕ್ತ ಸ್ತೋಮಕ್ಕೆ ಶಿರಬಾಗಿ ನಮಿಸುವೆ ದಾ ಆ ಮಹಾತ್ಮರಪಾದರಜಾದೊಳೆನ್ನನು ದೇವ ನೇಮದಿಂದಲಿ ಹೊರಳಾಡಿಸೊ 9
--------------
ವರದೇಶವಿಠಲ