ಒಟ್ಟು 12 ಕಡೆಗಳಲ್ಲಿ , 8 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನೆಂತರಿವೆನೈ ನಿನ್ನಂತರಂಗವ ಸಾನಂದಗೋವಿಂದ ನೀನಿಂದು ದಯೆದೋರು ಪ ಆದಿ ಮೂರುತಿಯೆ ನಾನೀದೀನ ನರ ಭೇದರಹಿತನೇ ಅದರ ಹಾದಿಯರಿಯೆನೊ ವೇದ ವಂದ್ಯನು ನೀನು ಓದನರಿಯದ ನಾನು ಸಾಧುರಕ್ಷಕ ಸ್ವಾಮಿ ಬೇದಯ ತಿಳಿಸೊ 1 ಜ್ಞಾನಪ್ರಕಾಶ ನಾ ಮಾನಾಭಿಮಾನಿ ಮೌನಿರಕ್ಷಕನೇ ಆಂ ಹೀನನಡೆಯವ ದಾನಿಪರಮಾತ್ಮನು ದೀನ ತಾಪತ್ರಿಯೆನು ನೀನಮೃತದವನೈ ನಾನು ಮತ್ರ್ಯನು 2 ಸರುವಲೋಕೇಶಾ ನಾಪರದೇಶಿಯಹುದೋ ಸಿರಿದೇವಿಯರಸಾ ದಾಸ ತಿರಿದುಂಬೊತಿರುಕ ಶರಣಸುಧಾರಕ ಬಿರುದಿನಿಂ ಮೆರೆಯುವ ವರದ ಜಾಜೀಶ ಪೊರೆ ಶ್ರೀನಿವಾಸ 3
--------------
ಶಾಮಶರ್ಮರು
ನಾರಾಯಣ ನಿನ್ನ ಚರಣ ಸೇವೆಯ ಬಿಟ್ಟು ಸಾರಸಾಕ್ಷನೆ ಪ್ರಾಣದಿರಲಾರೆ ಕ್ಷಣವೂ ಪ ದಾರಿಯೆನಗಿದೊಂದೇ ತೊರ್ಪದು ಸುಖನಿಧಿ ಬಾರಿಬಾರಿಗೂ ಹರಿ ದ್ಯಾನಾನಂದದೊಳಿಗೆ ಅ.ಪ ಅನ್ನವಸ್ತ್ರಂಗಳಿಗಾಗಿ ದುಡಿವದೊಂದು ಚೆನ್ನ ಪುತ್ರರ ರಕ್ಷಣೆಯೊಂದೆಡೆ ತನ್ನ ಮರ್ಯಾದೆ ಕುಂದುಗಳೆಂಬೊ ವ್ಯಸನದಿ ಭಿನ್ನಿಸಿ ತಾಪತ್ರಯ ಪಡುತಿರುವಿಲ್ಲಿ 1 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಪ್ರೇಮ ಬಾಂಧವರಾಗೆನ್ನನಪ್ಪಿಹರೋ ಸ್ವಾಮಿ ನೀಯೆನ್ನನವರ ಧಾಳಿಗಿಡದಂತೆ ಸಾಮಜವರದ ಸಲಹೆಂದು ಸಂತೋಷದಿ 2 ಭಾಗೀರತಿಪಿತ ಭಾಗವತಪ್ರೀತ ಯೋಗಿಜನಂಗಳೊಳತಿ ಹಿತನೇ ಸಾಗರಶಯನನೆ ಭೋಗಿಗಳ ಪುಣ್ಯನೆ ಬಾಗುವ ಶರಣರ ಬಹುಭಾಗ್ಯನೇ 3 ನಾನಿಲ್ಲಿಗೆ ಬಂದ ಕಾರಣ ಕಾಣೆನೋ ದೀನಪಾಲಕ ಕಾರ್ಯಮಾಡಿಸೋಯನ್ನಿಂ ಏನಾದರು ಮಾಡು ತಪ್ಪಹೊರಿಸಬೇಡ ಶ್ರೀನಿಧಿ ಹೆಜ್ಜಾಜಿಕೇಶವ ಪಾಲಿಸು 4
--------------
ಶಾಮಶರ್ಮರು
ಪರಮ ದಯಾಕರನೇ ಗೌರೀಸುತನೇ ಪರಿಪರಿಯಿಂದಲಿ ಪಾಲಿಸು ಯೆನ್ನನು ಪ ಸಿದ್ಧಿವಿನಾಯಕ ವಿದ್ಯಾಪ್ರದಾಯಕ ಸದ್ಬುದ್ಧಿಯ ಕೊಡು ಮೋದಕಪ್ರಿಯನೆ1 ಮೂಷಕವಾಹನ ದೋಷರಹಿತನೇ ಅಸುರನಾಶ ಸರ್ಪಾಕಟಿಸೂತ್ರನೇ 2 ಜಾನಕೀರಮಣ ಶ್ರೀ ಹನುಮೇಶವಿಠಲನ ಅನುದಿನ 3
--------------
ಹನುಮೇಶವಿಠಲ
ಪುಂಡಲೀಕವರದನೇ | ಕುಂಡಲೀಶಯನನೇ ||ಗಂಡರಿಗೆ ಗಂಡನಾದ | ಪಾಂಡುರಂಗ ರಾಯನೇ ಪ ಅಮ್ಮಾ ನಮ್ಮ ಒಡೆಯನೇ | ಬೊಮ್ಮಾದಿಕರ ವಂದ್ಯನೇ ||ಹಮ್ಮಿನವರ ಹಲ್ಲು ಮುರಿದು | ಸಮ್ಮತರ ಸಲಹುವನೇ 1 ಕಾಲಕರ್ಮ ರಹಿತನೇ | ನೀಲಮೇಘಶ್ಯಾಮನೇ ||ಛಲನ ಮಾಡಿ ಬಲಿಯ ಗೆದ್ದ | ಚೆಲುವ ಪದ್ಮನಾಭನೇ 2 ಅವ್ಯಯ ಸ್ವರೂಪನೇ | ಸವ್ಯಸಾಚಿ ಮಿತ್ರನೇ ||ಹವ್ಯಕವ್ಯ ಭೋಕ್ತನಾದ | ದಿವ್ಯ ರುಕ್ಮಭೂಷನೇ 3
--------------
ರುಕ್ಮಾಂಗದರು
ಮಲಗಯ್ಯ ಕೇಶವಾಮಲಗಯ್ಯ ಮಾಧವಾ ಮಲಗಯ್ಯ ಚನ್ನಕೇಶವ ರಂಗರಾಯಾ ಪ ಶ್ರೀಲೋಲ ಮಲಗಯ್ಯ ಪಾಡಿ ತೂಗುವೆನಯ್ಯ ಬಾಲನ ಸಲಹಯ್ಯ ಕೂಡಿ ಪರಮ್ಮಾತ್ಮಾ ಅ.ಪ. ಜಗವೆಲ್ಲ ಕತ್ತಲೆಯಿಂದ ಮಸುಕಿಹುದಯ್ಯ ಖಗವೃಂದ ಪಶುವರ್ಗವೆಲ್ಲ ನಿದ್ರಿಪುದೂ ಜಗವೆಲ್ಲ ನಿಃಶಬ್ದವಾಗಿದೆ ಶ್ರೀಹರಿ ಗಗನದಿ ಗೂಗೆಯು ತೂಗುತಿದಯ್ಯ 1 ಜನರೆಲ್ಲ ಹರಿ ನಿಂನ ಸೇವೆ ಮಾಳ್ದುದ ಬಿಟ್ಟು ಘನನಿದ್ರಾಂಗನೆಯನ್ನು ಅಪ್ಪಿ ಕೊಳ್ಳುವರೊ ಪ್ರಣವ ಸ್ವರೂಪನೇ ಮಲಗು ನೀ ಬೇಗದಿ ತನುವೆಂಬ ತೊಟ್ಟಿಲದಿ ತೂಗುವೆನಯ್ಯಾ 2 ಪನ್ನಗಶಯನನೆ ಆದ್ಯಾಂತರಹಿತನೇ ಮನ್ನಿಸಿ ಭಕ್ತರ ಪೊರೆವ ಮಾದವನೇ ಬಿನ್ನರೂಪವ ತಾಳಿ ಕಾಯವು ದಣಿದಿದೆ ಇನ್ನು ನಿದ್ರೆಗೆ ಪೋಗು ತೂಗುವೆನಯ್ಯ 3
--------------
ಕರ್ಕಿ ಕೇಶವದಾಸ
ರುದ್ರದೇವರು ಸಾಂಬ ಸದಾಶಿವ | ಸಾಂಬ ಶಿವ ಪ ಶಂಭೋಶಂಕರ | ಶಶಾಂಕಶೇಖರ | ಸಾಂಬ ಶಿವ ಅ. ಪ. ಗಂಗಾಧರ ವರ | ಅಂಗಜ ಮದಹರ | ಸಾಂಬ ಶಿವ || ಸಂಗರಹಿತನೇ ಭು| ಜಗಭೂಷ ವರ | ಸಾಂಬ ಶಿವ 1 ವ್ಯೋಮಕೇಶಭವ | ಭಕ್ತಪರಾಯಣ | ಸಾಂಬ ಶಿವ || ವಾಮದೇವ ಪ್ರಮ | ಥಾಧಿಪ ಶಂಕರ | ಸಾಂಬ ಶಿವ2 ಖಂಡ ಪರಶು ಮಾ | ರ್ತಾಂಡಸಮಪ್ರಭ | ಸಾಂಬ ಶಿವ || ದಂಡಧರ ಹರ | ಮೃತ್ಯುಂಜಯ ಭೂ | ಸಾಂಬ ಶಿವ3 ಜಟಾ ಮಕುಟ ಸುರ | ತಟನೀ ಧರ ವರ | ಸಾಂಬ ಶಿವ || ಸ್ಫಟಿಕಸನ್ನಿಭ | ಖಲತ್ರಿಪುರಾಂತಕ | ಮೃಡ ಸಾಂಬ ಶಿವ 4 ನಕ್ತಂಚರ ಹರ | ಶತ್ರುಭಯಂಕರ | ಸಾಂಬ ಶಿವ || ಭಕ್ತವಶಂಕರ | ಭಜಕಸುಖಂಕರ | ಸಾಂಬ ಶಿವ 5
--------------
ವೆಂಕಟ್‍ರಾವ್
ವಂದಿಸುವೆ ಗಣರಾಜ ನೀ ದಯದಿಂದ ಪಾಲಿಸುವುದು ಪ ಸದ್ಗುಣಭರಿತನೇ ದುರ್ಗುಣರಹಿತನೇ ವಿಘ್ನವಿನಾಶಕನೇ ಭಗ್ನಗೈಸೋ ಎನ್ನ ಅವಗುಣಗಳ ನೀ ವಿದ್ಯಾದಾಯಕನೇ 1 ಶ್ರೀಶನಂಘ್ರಿಸರೋಜಭೃಂಗ ಮಹೇಶನ ವರಸುತನೇ ವ್ಯಾಸಕರುಣಾಪಾತ್ರನೇ ಮನದಾಸೆ ಪೂರೈಸುವವನೇ 2 ಪಾಶಪಾಣಿಯೆ ಪ್ರಾರ್ಥಿಸುವೆ ನೀ ಲೇಸು ಕೊಡುವುದಿನ್ನಾ ಶ್ರೀಶ ಶ್ರೀ ಹನುಮೇಶವಿಠಲನ ದಾಸನೇ ಅನುದಿನಾ 3
--------------
ಹನುಮೇಶವಿಠಲ
ಶರಣು ಗಜಾನನನೆ ಶರಣು ಲಂಬೋದರನೆ ಶರಣು ಪಾರ್ವತಿ ಪುತ್ರ ಶುಭಗಾತ್ರ ಪ ಆದಿಯಲಿ ನಿನ್ನ ಪಾದಭಜನೆಯ ಮಾಡೆ ಸಾದರದಿ ಸಲಹುವೆ ಮೋದವಿತ್ತು ಮೇದಿನಿಯಲಿ ನಿನ್ನಾರಾಧನೆಯ ಮಾಡದವ ನ- ರಾಧಮನೆನಿಸುವನಿದು ಪುಸಿಯಲ್ಲ 1 ಆಖುವಾಹನನೆ ನೀ ಕಳೆ ವಿಘ್ನಗಳ ಸಾಕು ಲಾಲಿಸೆನ್ನ ಏಕದಂತ ಮಣಿ ಭೂಷಣ ಕಾಕುಜನ ಕುಠಾರ ಲೋಕೈಕ ವೀರ 2 ಸಿತಿಕಂಠ ವರಪುತ್ರ ಪ್ರತಿ ವಾಸರವು ನಾ ನುತಿಸಿ ಬೇಡುವೆ ನಿನ್ನ ಸತಿರಹಿತನೇ ಸಿರಿ ರಂಗೇಶವಿಠಲನ ಅತಿಪ್ರೀತಿಯಿಂದ ಭಜಿಪ ಮತಿಯ ನೀಡೋ 3
--------------
ರಂಗೇಶವಿಠಲದಾಸರು
ಹರಿ ಶ್ರೀ ರಘುರಾಯಾ ಸಂಸಾರ ಮಾಯಾ ಭವ ಜೀಯಾ ತೋರೊ ನಿನ್ನಯ ದಿವ್ಯ ಕಾಯಾ ಕೊಡು ನೀ ಸುಮತಿಯಾ ಪ ಗರುಡವಾಹನಾ ಪರಮಪಾವನಾ ಶಿರಿಯ ಸುಖದಿ ಮರೆಯಬ್ಯಾಡೊ ಚರಣದಾಸನಾ 1 ಇಷ್ಟದಾಯಕಾ ಕಷ್ಟತಾರಕಾ ಸೃಷ್ಟಿ ಪತಿಯೆ ಕೊಟ್ಟು ಸಲಹೊ ಮೋಕ್ಷದಾಯಕಾ2 ನಾಶರಹಿತನೇ ವಾಸುದೇವನೇ ಪೋಷಿಸೊ ತವ ದಾಸನಾ ಹನುಮೇಶ ವಿಠಲನೇ3
--------------
ಹನುಮೇಶವಿಠಲ
ಹಿತದಿಂದ ಪೊರೆಯೆನ್ನ | ವಿತತ ಮಹಿಮ ಹರಿಯೇ ಹಿತ ಅಹಿತವೆರಡನ್ನು | ಸಹಿಸುವಂತೇ ಪ ಅತಿ ದಯಾಪರನೆಂದು | ಖತಿದೂರನೆಂದೆನುತಶ್ರುತಿ ನಿಚಯ ಸಾರುತಿದೆ | ಗತಿ ಪ್ರದನೆ ದೇವಾ ಅ.ಪ. ವೇದ ವೇದ್ಯನೆ ದೇವ | ಆದ್ಯಂತ ರಹಿತನೇಕಾದುಕೋ ಎನ್ನನು | ಮೋದಗಳನಿತ್ತೂ ||ಸಾಧನ ಸುಮಾರ್ಗದಲಿ | ಹಾದಿಯನು ಕಾಣದಲೆಬಾಧೆಗೊಳಗಾಗಿಹನ | ಆದರಿಸು ದಯವನಧೀ 1 ಪ್ರಾಣಪತಿಯೇ ಎನ್ನ | ಪ್ರಾಣಗಳು ವಶವಿಲ್ಲಧ್ಯಾನ ಮಾಡುವೆನೆನ್ನ | ಮನನಿಲ್ಲಧ್ಹರಿಯೇ ||ಜ್ಞಾನ ಕರ್ಮೇದ್ರಿಗಳು | ಏನೊಂದು ನಿನ್ನಯಾಧೀನವಿರಲೂ ನಾನು | ಏನು ಮಾಡಲು ಸಾಧ್ಯ 2 ಗೋವರ್ಧನೋದ್ಧರನೆ | ಗೋವುಗಳ ಪರಿಪಾಲಕಾವ ಕರುಣೀ ನಮ್ಮ | ದೇವರ ದೇವಾ ||ಗೋವಿದಾಂಪತಿ ಗುರು | ಗೋವಿಂದ ವಿಠಲನೆನೀವೊಲಿಯದಿನ್ನಾರು | ಕಾವರನು ಕಾಣೆನಯ್ಯಾ 3
--------------
ಗುರುಗೋವಿಂದವಿಠಲರು
ಬೇಡುವೆ ನಿನ್ನನು ಜೋಡಿಸಿ ಕರಗಳ |ಕೂಡಲೆ ವರಗಳ | ನೀಡುವದೀಶನೆ ಪನಂದನ ಕಂದ ಮುಕುಂದ ಮುರಾರೆ |ಸುಂದರ ಶುಭಕರ | ಮಂದರೋದ್ಧಾರ 1ಶಂಕರ ಹಿತನೇ ಪಂಕಜನಾಭನೇ |ವೆಂಕಟರಮಣನೆ | ಶಂಖಚಕ್ರಧರನೇ 2ಸುರನರಕಿನ್ನರ| ತುಂಬುರ ನಾರದರ್ |ಪರಿಪರಿಯಲಿ ನಿನ್ನ | ಸ್ಮರಿಸುತಲಿಹರೂ 3ಅಸುರರ ಬಾಧೆಯೊಳ್ | ಸುರರೆಲ್ಲ ಭಜಿಸಲು |ಕುಶಲದಿ ಭಕ್ತರ|ಪೊರೆದೆ | ಗೋವಿಂದನೇ 4
--------------
ಗೋವಿಂದದಾಸ
ಶ್ರೀ ರಮಾಧವಾ ನಮಿಸುವೆ ದೇವಾ ಪವಾರಿಜೋದ್ಭವನುತಸಾರಸಗುಣಯುತಸಾರಿ ನುತಿಪೆ ದಯದೋರಿ ಸಲಹು ಹರೀಅ.ಪತೋರುವಾ ಸುಂದರ ಶಾಂತಾಕಾರವಾ ಸ್ಥೂಲಸೂಕ್ಷ್ಮ ಶರೀರವಾ ತಪಯೋಗಿ ಹೃದಯಸುಮಾ ಸಾರವಾ ನೀ ಮೆರೆವಾ ಸಾರಸಾಂಘ್ರಿಯುಗವಾಶಂಕವಾ ಉದಿದತಿ ಭಕ್ತಕಳಂಕವಾ ಮುರಿದತಿದುರುಳರ ಬಿಂಕವಾ ಭಕ್ತಜನರ ಸದೃಶಾಂಕವಾಸೇರುವಾ ಪಂಕಜಾಸನ ಪಿತನೇ ಪಾಲಿಸು ಶಂಕರಗತಿಹಿತನೇ ಭವಭಯ ಬಿಂಕವ ಬಿಡಿಸೈ ಪಂಕಜ-ಕರಯುತ ವೆಂಕಟೇಶ ಸರ್ವಾಂಕಿತ ರೂಪನೆ2ಸುಂದರಾ ವನಮಾಲ ಶೋಭಾ ಕಂದರಾಮುಖಪದ್ಮಾಕಾರ ಚಂದಿರಾ ಸದ್ಧರ್ಮಶಾಸ್ತ್ರಸ್ಮøತಿಮಂದಿರಾ ವೇದೋದ್ಧಾರಾ ಚಂದ್ರಸೂರ್ಯನಯನಾ ಕರುಣಾನಂದ ವಿಮಲಚರಣಾಮುನಿಜನವೃಂದ ವಂದ್ಯ ಚರಣಾರವಿಂದವನುಬಂದು ತೋರಿಸಿ ಗೋವಿಂದದಾಸನಪೊರೆ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ