ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಪ್ರಾರ್ಥನೆ ಸ್ಮರಿಸುವೆ ನಿನ್ನ ಚರಣ ಪ ಪರಮಪಾವನ|ಸುರವರ ಸುಗುಣ|| ಸ್ಮರಿಸುವೆ ನಿನ್ನ ಚರಣಅ.ಪ ಚರಣವ ಸ್ಮರಿಸುವೆ | ಅನವರತ ಶರಣನ ಮೊರೆಯನು|ಕರುಣದೊಳಾಲಾಲಿಸು |ಗೌರಿಜಾತ ಪ್ರೀತ 1 ವಾಹನ ಪಾಶಾಂಕುಶಧರ | ಪಾವನ ಚರಿತ || ಈಶಜಾತ ಖ್ಯಾತ 2 | ರಕ್ತವಸ್ತ್ರ ತವ| ಭಕ್ತರ ಪೊರೆವ || ಶಕ್ತನೆ ನೀ ಶಿವ | ಶಕ್ತಿ ಕುಮಾರನೆ | ಭಕ್ತದಾತ ಪ್ರೀತ 3 ಮತಿಯನು ನೀಡೈ| ಹಿತದಾಯಕನೆ|| ಕಾಣಿಸು ಭೂತನಾಥ ಜಾತ 4
--------------
ವೆಂಕಟ್‍ರಾವ್
ಜೋ ಸಚ್ಚಿದಾನಂದನೆ ಜೋ ಜೋ ದೇವಕಿಕಂದನೆ ಜೋಜೋ ಬ್ರಹ್ಮಾದಿವಂದ್ಯನೆ ಧ್ರುವ ಹುಟ್ಟಿ ಬಂದು ನಿಜದೋರಿದೆ ಖೂನ ಮುಟ್ಟಿ ಬೀರುವ ಸುಚಿನ್ನಸಾಧನ ಇಟ್ಟ ಕಾವಲಿ ಹಾಕಿದೆ ಮೌನ ಮೆಟ್ಟಿಮರ್ದಿಸಿ ಬಂದೆ ಮಾವನ 1 ಮಾಡಬಂದೆ ನೀ ಧರ್ಮಸ್ಥಾಪನಿಯ ನೋಡಬಂದೆನಿಷ್ಟ ಜನರಾರ್ಚನಿಯ ಆಡಬಂದೆ ನಂದಯಶೋದೆ ಮನಿಯ ನೀಡಬಂದೆ ನಿಜಸುಖಸಾಧನಿಯ 2 ಶಿಷ್ಟಜನರಿಗಾಗಿ ಸಹಾಕಾರಿ ಸೃಷ್ಟಿಯೊಳು ತೋರಬಂದೆ ಶ್ರೀಹರಿ ದುಷ್ಟ ಜನರ ಮರ್ದಿಸುವಾವತಾರಿ ಕಂಸಾರಿ 3 ದೇವಾದಿಗಳ ಮಗುಟಮಣಿಯೆ ಭಾವಿಸಲಳವಲ್ಲ ಸದ್ಗುಣಿಯೆ ಕಾವ ದೈವ ನೀನೆ ಕೃಷ್ಣ ಕರುಣೆಯೆ ದೇವಕಿ ಗರ್ಭನಿಧಾನದ ಖಣಿಯೆ 4 ಬಲವಾಗಿ ಎನಗಬಂದೆ ಸರ್ವೇಶ ಒಲಿದು ಭಾನುಕೋಟಿತೇಜಪ್ರಕಾಶ ಫಲವ ನೀಡಿ ತೋರಬಂದೆ ಸಂತೋಷ ಸಲಹಬಂದೆ ಮಹಿಪತಿ ಪ್ರಾಣೇಶ 5 ಮನೋಹರ ಮಾಡುವ ನೀನೆ ಸಹಕಾರಿ ಅನುದಿನ ಲೆವಕಲ ನೀನೆ ಮುರಾರಿ 6 ಅನೆ ಕಾಯಲಿಪರಿ ನೀನೆ ಉದಾರಿ ಅನಾಥರಿಗೊಲುವ ನೀನೆ ಶ್ರೀಹರಿ 7 ಪತಿತ ಪಾವನ ಪೂರ್ಣ ನೀನೆ ನಿಶ್ಚಯ ಹಿತದಾಯಕ ನೀನಹುದೊ ಮಹಿಪತಿಯ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಶ್ರೀಗುರುನಾಥ ತ್ರಾಹಿ ತ್ರಾಹಿ ಎಂದವನಪರಾಧ ನೋಡದೆ ನೀ ಕಾಯಿ ಧ್ರುವ ಪತಿತಪಾವನೆಂಬ ಬಿರುದು ನಿನಗೆ ಎಚ್ಚರಿಲ್ಲೆ ಪ್ರತಿದಿನ ಮೊರೆ ಇಡಲಿಕ್ಕೆ ಮತ್ತಿದೆ ಸೋಜಿಗವಲ್ಲೆ ಅತಿ ಸೂಕ್ಷ್ಮ ಸುಪಥವರಿಯಲಿಕ್ಕೆ ನಾ ಏನು ಬಲ್ಲೆ ಹಿತದಾಯಕ ನನ್ನ ದೀನ ದಯಾಳು ನೀನೆವೆ ಅಲ್ಲೆ 1 ತಪ್ಪಿಲ್ಲದೆ ನಿನ್ನ ಮೊರೆಯ ಹೋಗುವರೇನೊ ಏ ಶ್ರೀಪತಿ ಒಪ್ಪಿಸಿಕೊಳ್ಳದಿದ್ದರಹುದೆ ಜಗದೊಳು ನಿನ್ನ ಖ್ಯಾತಿ ಕೃಪೆಯುಳ್ಳ ಸ್ವಾಮಿ ನಿನ್ನದೆ ಸಕಲ ಸಹಕಾರ ಸ್ಥಿತಿ ಅಪರಾಧ ಕ್ಷಮೆ ಮಾಡಿ ಸಲಹಬೇಕೆನ್ನ ಶ್ರೀಗುರುಮೂರ್ತಿ 2 ಅನಾಥ ಬಂಧು ನೀ ಎಂದಾಡುತಿರಲಿ ಅನಾದಿಯಿಂದ ನ್ಯೂನಾರಿಸದೆ ಬಾರÀದೆ ಬಿರುದಿಗೆ ತಾ ಕುಂದು ಅನುದಿನ ಅನುಕೂಲ ಮುನಿಜನರಿಗೆ ನೀ ಬ್ರಹ್ಮಾನಂದ ದೀನ ಮಹಿಪತಿ ಸ್ವಾಮಿ ಭಾನುಕೋಟಿತೇಜ ನೀ ಪ್ರಸಿದ್ಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೀನ ಬಂಧು ದೀನ ದಯಾಳ ದೀನಾನಾಥ ನೀನೆವೆ ಕೃಪಾಲ ಧ್ರುವ ಮನೋಹರ ಮಾಡುವ ನೀನೆ ಸಹಕಾರಿ ಅನುದಿನ ಲೆವಕಲ (?) ನೀನೆ ಮುರಾರಿ1 ಪರಿ ನೀನೆ ಉದಾರಿ ಅನಾಥರಿಗೊಲುವ ನೀನೆ ಶ್ರೀ ಹರಿ 2 ಪತಿತಪಾವನ ಪೂರ್ಣ ನೀನೆ ನಿಶ್ಚಯ ಹಿತದಾಯಕ ನೀನಹುದೊ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ಎನಗಾಧಾರಿ ಶ್ರೀಹರಿ ನೀನೆ ಎನಗಾಧಾರಿ ಧ್ರುವ ಸಕಲ ಸುಖವ ಬೀರುವ ಉದಾರಿ ಭಕುತ ವತ್ಸಲ ಮುಕುಂದ ಮುರಾರಿ 1 ಅಂತರ್ಬಾಹ್ಯದ ಲೀಹ ನರಹರಿ ಕಂತುಪಿತನೆ ಪೀತಾಂಬರಧಾರಿ 2 ಹಿತದಾಯಕ ನೀನೆವೆ ಪರೋಪರಿ ಪತಿತಪಾವನ ಮಹಿಪತಿ ಸಹಕಾರಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿ ಪರಮಾನಂದಾ ಗೋವಿಂದಾ ಪ ಪಾಲನ ಅಸುರ ವಿದಾರಣ | ವರಯದು ಕುಲನಿಧಿ ಚಂದ್ರಾ 1 ಅಜಮಿಳ ತಾರಣ ಅಹಲ್ಯೋದ್ಧಾರಣ | ಅಜಭವನನುತ ಶ್ರೀ ಮುಕುಂದಾ 2 ಮಹಿಪತಿ ನಂದನ ಅಹಿತ ಸಂಹಾರಣ | ಸ್ವಹಿತದಾಯಕ ಗೋಪೀ ಕಂದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು