ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುಷ್ಯೋತ್ಸವ ಗೀತೆ ಮಕರಪುಷ್ಯದ ಶುದ್ಧ ಷಷ್ಟಿಯಲಿ ನಗರಶೋಧನೆ ಮಾಡಿ ಮಂತ್ರಿಯು 1 ಮೊದಲು ದಿವಸದಿ ಧ್ವಜವನೇರಿಸಿ ಭೇರಿಯಿಡೆ ಸುರರ ಕರೆದರು 2 ಯಾಗಶಾಲೆಯ ಪೊಕ್ಕು ರಂಗನು ಯಾಗಪೂರ್ತಿಯಾ ಮಾಡಿ ನಿಂದನು 3 ಯಾತ್ರದಾನವ ಬೇಡಿ ಹರುಷದಿ ಸೂತ್ರ ಧರಿಸಿದಾ ಧಾತ್ರಿಗೊಡೆಯನು 4 ಕಂದರ್ಪನಾಪಿತ ದರ್ಪಣಾಗ್ರದಿ ಹ ನ್ನೊಂದು ದಿನದಲಿ ನಿಂದ ಹರುಷದಿ 5 ಸೂರ್ಯಚಂದ್ರರು ಹಂಸಯಾಳಿ[ಸಹಿತ] ಏರಿ ಬಂದನು ಸಿಂಹ ಶರಭವ 6 ಸರ್ಪವಾಹನ ಕಲ್ಪವೃಕ್ಷವು [ಗರು ಡ] ಪಕ್ಷಿ ಹನುಮನ ಏರಿ ಬಂದನು 7 ಏಳು ದಿವಸದಿ ಚೂರ್ಣಾಭಿಷೇಕವ ಸೀಳೆಸಹಿತಲೆ ಗ್ರಹಿಸಿ ಮಿಂದನು 8 ಎಂಟು ದಿವಸದಿ ಏರಿ ತೇಜಿಯ ಬಿಟ್ಟನು ಪೇರಿ ತೇರಿನಿದಿರಲಿ 9 ಒಂಬತ್ತು ದಿನದಲಿ ಶೃಂಗರಿಸಿದಾರು ಸಂಭ್ರಮದಿಂದಲೆ ಬೊಂಬೆರಥವನು 10 ಪುನರ್ವಸುವಿನಲ್ಲಿ ಪುರುಷೋತ್ತಮನು ರಥ ವನೇರಲು ಪೊರಟುಬಂದನು11 ಸಿಂಧುಶಯನನ ಹಿಂದೆಬಂದರು 12 ಅಷ್ಟಪತಿಯನು ಅಷ್ಟು ಕೇಳುತಾ ಸೃಷ್ಟಿಗೀಶ್ವರ ರಥವನೇರಿದ 13 ಪತ್ನಿ ಸಹಿತಲೇ ಹತ್ತಿ ರಥವನು ಉತ್ತರಬೀದಿಯ ಸುತ್ತಿಬಂದನು 14 ಇಂದಿರಾಪತಿ ಇಳಿದು ರಥವನು ಚಂದ್ರಪುಷ್ಕರಿಣಿಯಲಿ ತೀರ್ಥವಿತ್ತನು 15 ಕರೆತಂದರು ಕರಿಯಮೇಲಿಟ್ಟು ಚ ದುರಂಗಗೆ ನಜರು ಕೊಟ್ಟರು 16 ಸಪ್ತಾವರಣವ ಶಬ್ದವಿಲ್ಲದೆ ಸುತ್ತಿಬಂದನು ಭಕ್ತವತ್ಸಲ 17 ಸುತ್ತಿ ಲಕ್ಷ್ಮೀಗೆ ಇತ್ತು ಸೇವೆಯ ಭಕ್ತ ಭಾಷ್ಯಕಾರರಿಗೆ ಒಲಿದು ನಿಂದನು 18 ತನ್ನ ಚರಿತೆಗಳನು ಕೇಳುತ ಪನ್ನಗಶಯನನು ಪರಮ ಹರುಷದಿ 19 ಬಂದ ಸುರರ ಆನಂದದಿಂದಲೇ ಮಂದಿರಕ್ಕೆ ತಾ ಕಳುಹಿ ರಂಗನು 20 ಬಿಚ್ಚಿ ಕಂಕಣ ನಿಂದ ಹರುಷದಿ ಅರ್ಥಿಯಿಂದಲೆ ಅಚ್ಚುತಾನಂತ 21 ಏರಿ ಆಳಂಪಲ್ಲಕ್ಕಿ ಹರುಷದಿ ಒ ಯ್ಯಾರದಿಂದ ಬಂದ ರಂಗನು 22 [ಮೋಕ್ಷ] ಕೊಡುವನು ಮುದ್ದುವೆಂಕಟರಂಗನು 23
--------------
ಯದುಗಿರಿಯಮ್ಮ
ಮಾತ್ರೆಯಿದು ಸಜ್ಜನರಿಗಾರೋಗ್ಯ ಮಾತ್ರೆ ಸೂತ್ರ ನಾರದನಿದಕೆ ನೆನಪಿನಾ ಮಾತ್ರೆ ಪ ಸಾರ ಪಾಕಗಳಿಲ್ಲ ಊರೂರಿಗೊಯ್ವುದಕೆ ಭಾರವಲ್ಲ ಅ.ಪ ಚಾರು ಚೂರ್ಣವಿದಲ್ಲ | ನೀರೊಳಲೆದುದು ಅಲ್ಲ ಕ್ಷಾರ ಹುಳಿ ಕಹಿಯಿಲ್ಲದೈಶ್ವರ್ಯದಾ ಮಾತ್ರೆ 1 ಇಂದಿರಾಪತಿಯೆಂಬ ಚಂದ್ರೋದಯದ ಮಾತ್ರೆ ಮಂದರೋದ್ಧಾರನೆಂಬ ಸಿಂಧೂರಮಾತ್ರೆ 2 ನಾರಾಯಣಾಯೆಂಬ ನೀರ ಬೆರಸಿರೋದಿದಕೆ ಸಾರತರ ರಸಪಾಕ ತೋರುವಾ ಮಾತ್ರೆ3 ಶ್ರೀರಮಣನೆಂಬ ಮಧುಸೇರಲಾ ಮಾತ್ರೆಗಳ [ಮೂರೊತ್ತು ಸೇವಿಸೆ ಮನಕಹುದು ಹಿತ] 4 ಕರುಣಾಕರಾಯೆಂಬ ವರಸಕ್ಕರೆಯ ಬೆರಸಿ ಶರಣಜನವರದನೆಂದೊರೆವರು ಸದಾ 5 ಪರಮಾತ್ಮನೆಂಬ ಒರಳೊಳ್ ಹರಿಯೆಂಬ ಗುಂಡಿನಿಂದ ಅರೆದೊಡದು ಕೇಳಾ ಮಾಂಗಿರಿರಂಗನೆನಿಪಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್