ಒಟ್ಟು 9 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದೆ ಏನೆಂದೆ ಪ ನಾನೇನೆಂದೆನೆ ಗಾನಲೋಲಗವ ಮಾನದ ಮಾತಿಂಥ ಜೀನನ ಕಾಣೆನೆಂದೆ ಅ.ಪ ಕಾಲು ಇಲ್ಲದ ಹೆಳವನೆಂದೆ ತಲೆಯ ಕಾಣದ ಕುರೂಪಿಯೆಂದೆ ಚೆಲುವಿಕಿಲ್ಲದ ಕಾಡು ಹೀನಮೃಗವೆಂದೆ ಬಲಿಯ ಬಾಗಿಲ ಕಾಯ್ವ ಕೂಲಿಕಾರನೆಂದೆ1 ನಾಲಗೆ ಚಾಚಿ ರಕ್ತ ಕುಡಿದನೆಂದೆ ತಿಳಿದು ಜನನಿತಲೆ ಕಡಿದವನೆಂದೆ ಲಲನೆಯೊಡನೆ ವನವಾಸಕೆ ಪೋಗಿ ಬಳಲಿ ಬಳಲಿ ಬಾಯಾರಿದನೆಂದೆ 2 ಗೊಲ್ಲರ ಕುಲದಲಿ ಹುಟ್ಟಿದನೆಂದೆ ಗುಳ್ಳೆ ಗುಳ್ಳೆ ಬೆಣ್ಣೆ ಕದ್ದವನೆಂದೆ ಗೊಲ್ಲರ ಅಕಳ ಕಾಯುವ ಚರನೆಂದೆ ಫುಲ್ಲನಲನೆಯರ ವಸ್ತ್ರಗಳ್ಳನೆಂದೆ 3 ಬತ್ತಲೆ ಕುಣಿಕುಣಿದಾಡಿದನೆಂದೆ ಸತ್ಯಭ್ರಷ್ಟ ಮಹಕಲಿಯು ಈತನೆಂದೆ ಮತ್ತೆ ವೈಕುಂಠದಿ ಒದೆಸಿಕೊಂಡು ಇವ ವಿತ್ತದಾಸೆಗೆ ಮತ್ರ್ಯಲೋಕಕಿಳಿದವನೆಂದೆ 4 ಕುದುರೆ ನಡೆಸಿ ಒಬ್ಬನುಳಿಸಿದನೆಂದೆ ಕದನದ್ವೊಂಚಿಸಿ ಒಬ್ಬನಳಿದವನೆಂದೆ ಕುದುರೆ ಕಟ್ಟಿದ ವೀರ ತಾಮ್ರಧ್ವಜಗೆ ಸೋತು ಮುದುಕನಾಗಿ ಭಿಕ್ಷದಶ್ವ ತಂದವನೆಂದೆ 5 ಸೋದರಮಾವನ ಕೊಂದವನೆಂದೆ ಸೋದರಳಿಯರ ಜೀವ ಹೊಡೆಸಿದನೆಂದೆ ಭೇದದಿಂದ ಸಾಧು ಹನುಮನ ಸೋಲಿಸಿ ಸಾಧಿಸ್ವರೂಪಕ್ಕೆ ಪತಾಕೆನಿಸಿದನೆಂದೆ 6 ಜಾರ ಸಿರಿ ಸೊರೆಗೊಂಡವನೆಂದೆ ಮೀರಿದಂಥ ಮಹಮಾಯದ ಹೆಣ್ಣೆಂದೆ ಈರೇಳುಲೋಕದ ಕಪಟನಾಟಕನೆಂದೆ 7 ಮೊಚ್ಚೆಗಾರ ಕೈಯೊಳುಂಡವನೆಂದೆ ಉಚ್ಚಿಷ್ಟನಾಗಿ ಬಹಿಷ್ಕಾರ್ಹೊಂದಿದನೆಂದೆ ವೆಚ್ಚಮಾಡಿ ಮತ್ತು ಕುಲದಿ ಬಿದ್ದವನೆಂದೆ ನಿಶ್ಚಲ ಭಕ್ತರಿಗ್ಹುಚ್ಚ್ಹಿಡಿಸಿದನೆಂದೆ 8 ಪುಲ್ಲನಯನ ಸಿರಿರಾಮನ ಮುಂದೆ ಅಲ್ಲದ ಮಾತುಗಳ್ನಾನೇನೆಂದೆ ಬಲ್ಲಿದ ಹದಿನಾಲ್ಕು ಲೋಕ ಪೊತ್ತವನೆಂದೆ ಉಲ್ಲಾಸದಿ ನಿಮ್ಮ ಬಿರುದು ಸಾರುತ ಬಂದೆ 9
--------------
ರಾಮದಾಸರು
ಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸಿಗೆ ಬರುತ್ತದೆಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸ್ಸಿಗೆ ಬರುತ್ತದೆ ಪ ಮುಂಡಕೆ ದಂಡೆಯ ಮಾಡಿಸಿದೆ ಮುಸುಕಲಿ ಸೋಭಾನ ಮಾಡಿದೆಮುಂಡಕೆ ರುಂಡವ ಕೂಡಿಸಿದೆ ಮಂಗಳಾರತಿ ಬೆಳಗಿಸಿದೆ 1 ಕೋತಿಯು ಅಲ್ಲಿ ಕುಣಿಯುತ್ತಿತ್ತು ಕೋಣವು ಮದ್ದಲೆ ಬಾರಿಸುತ್ತಿತ್ತುಕೋತಿಯ ಕಾಲನೆ ಮುರಿದೆ ಕೋಣನ ಮದ್ದಲೆ ಮುರಿದೆ2 ಹಾರುವವನನು ಕಟ್ಟಿ ಹಾಕಿಸಿದೆ ಹಾದಿಲಿ ದೀಪವ ಹಿಡಿಸಿದೆಮೂರು ಮನೆಯ ಮೇಲಟ್ಟದಲ್ಲಿ ಮೆರವಣಿಗೆಯನೆ ಮಾಡಿಸಿದೆ3 ಒಳ್ಳೆ ಬೀಗರ ಬೆಳ್ಳಿ ತಳಿಗೆಯಲ್ಲಿ ಎಲ್ಲರ ಒತ್ತೊತ್ತಾಗಿ ಕೂರಿಸಿದೆಬೆಲ್ಲದ ಪರಮಾನ್ನವನೆ ಉಣಿಸಿದೆ ಬೆಳ್ಳನೆ ಉಡುಗೊರೆ ಹೊದಿಸಿದೆ 4 ಗುಡ್ಡ ಮೂರ ಕೊನೆಯಲಿದ್ದ ಅಡ್ಡಗಲದೆ ದೇವರ ಮನೆಗೊಯ್ದುದೊಡ್ಡ ಚಿದಾನಂದ ಗುರುವಿಗೆ ನಾ ಅಡ್ಡಗೆಡವಿ ಮದುವೆ ಮಾಡಿಸಿದೆ5
--------------
ಚಿದಾನಂದ ಅವಧೂತರು
ಡಂಕಿ ಹೊಯ್ಸಿದ ನಮ್ಮ ವೆಂಕಟರಾಯನು ಪಂಕಜಾಕ್ಷರ ಮುಯ್ಯ ತಿರುಗಿಸಿ ಅಸಂಖ್ಯ ರಾಜರು ಬರಬೇಕೆಂದುಪ. ಸುರರು ಮೊದಲೆ ತೀವ್ರದಿಂದ ಬರಬೇಕೆಂದುಭೇರಿನಾದವ ಮಾಡಿದ ಕೃಷ್ಣಬಾರೆ ಬಾರೆ ಭಾಗ್ಯನಿಧಿಯೆ1 ಬೊಮ್ಮಮೊದಲಾದ ಸುರರುತಮ್ಮ ತಮ್ಮ ಸತಿಯರಿಂದ ಝಮ್ಮನೆ ಮುಯ್ಯಕ್ಕೆ ಬರಬೇಕೆಂದುರಮ್ಯಕಾಳಿ ಹಿಡಿಸಿದ ಕೃಷ್ಣ2 ಇಂದ್ರ ಮೊದಲಾದ ಸುರರುಚಂದ್ರ ಸೂರ್ಯರೊಡಗೂಡಿತಂದೆ ರಾಮೇಶನರಮನೆಗೆಒಂದು ಕ್ಷಣದಿ ಬರಬೇಕೆಂದು3
--------------
ಗಲಗಲಿಅವ್ವನವರು
ತಂಬೂರಿ ಹಿಡಿಸಿದನು ಪ ಅಂಬುಜಾಕ್ಷನು ದಯದಿ ಅ.ಪ ನಂಬೀದ ಜನರಿಗೆ ಬೆಂಬಲ ತಾನೆಂಬ ನಂಬಿಕೆ ಹೃದಯದಿ ತುಂಬುತ ತಾನೀಗ 1 ಆಶಾ ಪಾಶಕೆ ಸಿಲುಕಿ ಬೇಸತ್ತು ಬೆಂಡಾಗಿ ಮೋಸ ಹೋಗುತ್ತಲಿದ್ದೆ ಶ್ರೀಶ ದಯಾಂಬುಧಿ 2 ಹುಟ್ಟಿದ ದಿನದಿಂದ ಕಷ್ಟದಲ್ಲೇ ಬಂದೆ ಮುಟ್ಟಲಿದನು ಈಗ ಸಂತುಷ್ಟಿಯ ಕಂಡೆನು 3 ಕಾಡಿ ಬೇಡುವರಿಲ್ಲ ನಾಡೆಲ್ಲ ನಮ್ಮದೇನೆ ನೀಡುವ ದೊರೆ ಒಬ್ಬ ಈಡಿಲ್ಲದವನಾತ 4 ವಿಧಿ ವಿಸ್ಮರಣೆ ನಿಷೇಧ ಹರಿನಾಮ ಸುಧೆಯನ್ನು ಕರೆದು ಕರೆದು ಕುಡಿವೆ5 ತಂಬೂರಿ ಸಿಗುವುದು ತುಂಬ ಭಾಗ್ಯವು ಸತ್ಯ ಹಂಬಲಂಗಳ ಬಿಡಿಸಿ ತುಂಬುವ ಹರಿ ಮನದಿ6 ಪುಣ್ಯ ರಾಶಿಗಳೆಲ್ಲ ವದಗಿ ಬಂದವೊ ಏನೋ ಚಿನ್ಮಯ “ಶ್ರೀ ಕೃಷ್ಣವಿಠಲ”ನ ದಾಸನಾದೆ7
--------------
ಕೃಷ್ಣವಿಠಲದಾಸರು
ಆದದ್ದೆಲ್ಲ ಒಳತೇ ಆಯಿತು ನಮ್ಮ |ಶ್ರೀಧರನ ಸೇವೆಯ ಮಾಡಲು | ----- ಪಸಾಧನ ಸಂಪತ್ತಾಯಿತು ---------- ಅ.ಪದಂಡಿಗೆ ಬೆತ್ತ ಹಿಡಿಯುವುದಕ್ಕೆ |ಮಂಡೆತಗ್ಗಿಸಿ ನಾಚುತಲಿದ್ದೆ ||ಹೆಂಡತಿ ಸಂತತಿ ಸಾವಿರವಾಗಲಿ |ದಂಡಿಗೆ ಬೆತ್ತ ಹಿಡಿಸಿದಳಯ್ಯ 1ಗೋಪಾಳ ಬುಟ್ಟಿ ಹಿಡಿಯುವುದಕ್ಕೆ |ಭೂಪತಿಯಂತೆ ನಾಚುತಲಿದ್ದೆ ||ಆ ಪತ್ನಿಯು ತಾ ಪ್ರೀತಿಯಿಂದಲಿ |ಗೋಪಾಳ ಬುಟ್ಟಿಯ ಹಿಡಿಸಿದಳಯ್ಯ 2ತುಳಸಿಮಾಲೆಯ ಹಾಕುವುದಕ್ಕೆ |ಅಲಸಿಕೊಂಡು ನಡೆಯುತಲಿದ್ದೆ ||ಜಲಜಾಕ್ಷಿಯು ಶ್ರೀ ಪುರಂದರವಿಠಲ |ತುಳಸಿ | ಮಾಲೆಯ ಹಾಕಿಸಿದಳು 3
--------------
ಪುರಂದರದಾಸರು
ಇವ ಬಲು ಕಳ್ಳ ನಮ್ಮಮಾಧವಬಲು ಸುಳ್ಳನವನವÀ ಗುಣಗಳ ಹಿಡಿಸಿದನ್ಹಳ್ಳ ಪ.ನಿತ್ಯತೃಪ್ತನೆಂಬೊ ಸ್ತುತ್ಯಾರ್ಥ ನಿನ್ನ ಬಿಟ್ಟುಎತ್ತ ಹೋದವಯ್ಯ ನಮಗ್ಹೇಳೊ ಯದುಪತಿಎತ್ತ ಹೋದವಯ್ಯ ನಮಗ್ಹೇಳೊ ಯದುಪತಿತುತ್ತನ್ನ ನಿನಗೆ ಫನವೇನೊ ಯದುಪತಿ 1ಮುನ್ನಶಬರಿ ಎಂಜಲಪನ್ನಿಪಾವನ್ನೊ ನಿನಗೆಅನಸ್ತಾವೆಂಬೊ ಶೃತಿಗಳು ಯದುಪತಿಅನಸ್ತಾವೆಂಬೊ ಶೃತಿಗಳು ಹೊಗಳುತ ನಿನ್ನಲ್ಲೆಹ್ಯಾಂಗ ಇರಬೇಕೊ ಯದುಪತಿ 2ಪಟ್ಟದ ರಾಣಿ ಲಕುಮಿ ಎಷ್ಟು ಗುಣವಂತಳಲ್ಲೊಅಷ್ಟು ಭಾವದಲೆ ಚಲುವಳೊ ಯದುಪತಿಅಷ್ಟು ಭಾವದಲೆ ಚಲುವಳೊಕುಬ್ಜಿಯಂಥಸೊಟ್ಟ ಹೆಣ್ಣಿಗ್ಯಾಕೆ ಮನಸೋತೆÀ್ಯೂ ಯದುಪತಿ 3ಎಷ್ಟು ಸೃಷ್ಟಿಯ ಮಾಡಿಪುಟ್ಟ ಲವಕುಶರ ಪಡೆದಿಸೃಷ್ಟಿ ಮಾಡಿದ್ದು ಮರೆತೆನೊ ಯದುಪತಿಸೃಷ್ಟಿ ಮಾಡಿದ್ದು ಮರೆತೆನೊ ನಾಭಿಯಲ್ಲಿಪುಟ್ಟಿದ ಬೊಮ್ಮನಗುತಾನೊ ಯದುಪತಿ 4ರುದ್ರನ ಭಜನೆ ಮಾಡಿ ಪ್ರದ್ಯುಮ್ನನ ಪಡೆದಿವಿದ್ವಜ್ಜನರೆಲ್ಲ ನಗುತಾರೊ ಯದುಪತಿವಿದ್ವಜ್ಜನರೆಲ್ಲ ನಗುತಾರೊ ಶ್ರೀಧ ಶ್ರೀಧವಿದ್ಯವನೆÀಲ್ಲ ಮರೆತೇನೋ ಯದುಪತಿ 5ಸ್ವರಮಣನೀನೆಂಬೊ ಸ್ವರ ಗೈವ ಶೃತಿಗಳುಹರಿದಾವೇನೊ ಜಲದೊಳುಹರಿದಾವೇನೊ ಜಲದೊಳು ಗೊಲ್ಲತಿಯರ ಬೆರೆದಕಾರಣವ ನಮಗೆ ಹೇಳೊ ಯದುಪತಿ 6ಧೀರ ಗಂಭೀರನೆಂದು ಸಾರುವ ಶೃತಿಗಳುಹಾರಿದವೇನೊ ಮುಗಿಲಿಗೆಹಾರಿದವೇನೊ ಮುಗಿಲಿಗೆ ರಮಿಯರಸುಪೋರತನವೆಂದು ನಗತಾರೊ ಯದುಪತಿ 7
--------------
ಗಲಗಲಿಅವ್ವನವರು
ಮುದ್ದು ಪಾಂಡವರನ್ನ ಗೆದ್ದು ಕೈಚಪ್ಪರಿಸಿಗತ್ತಿಲೆಕಾಳಿ ರುಕ್ಮಿಣಿ ಹೊಯಿಸಿದಳು ಪ.ಅಚ್ಯುತಪಾಂಡವರಿಗೆ ಹುಚ್ಚು ಹಿಡಿಸಿದನೆಂದುಉತ್ಸಾಹದಿಂದಭೇರಿಹೊಯ್ಸಿದಳು1ಮಡದಿ ದ್ರೌಪತಿ ಭದ್ರಾ ಅಡಗಿದರು ಅಂಜಿ ನಮಗೆಎಂದು ಬೆಡಗಿನಡಂಕಿರುಕ್ಮಿಣಿ ಹೊಯ್ಸಿದಳು2ಕಾಂತೆ ದ್ರೌಪತಿ ಭದ್ರಾ ಭ್ರಾಂತರಾದರೆಂದುಕಾಂತೆಯರು ಕೈ ಹೊಯ್ದು ನಿಂತಾರೆಲ್ಲ 3ಪುಟ್ಟಸುಭದ್ರೆಯು ಧಿಟ್ಟ ದ್ರೌಪತಾದೇವಿಬಿಟ್ಟಟ್ಟೆರುಆಣಿಎಂದು ಘಟ್ಟನುಡಿದು4ಧಿಟ್ಟೆರಿಬ್ಬರಗರವು ಕುಟ್ಟಿ ಚೂರ್ಣವ ಮಾಡಿಬಿಟ್ಟರು ಆಣಿಯ ಎಂದು ಸ್ಪಷ್ಟ ನುಡಿದರು 5ತಪ್ಪು ಸತ್ಯಭಾಮೆ ತಪ್ಪು ತಪ್ಪುರುಕ್ಮಿಣಿ ದೇವಿತಪ್ಪುತಪ್ಪು ತಪ್ಪು ಎಂದು ಕೈಯ ಒಪ್ಪಾಗಿ ಮುಗಿದರು 6ತಂದೆ ರಾಮೇಶನ ಮುಂದೆ ರುಕ್ಮಿಣಿದೇವಿವಂದಿಸಿ ದೇವಿಯರೆಲ್ಲ ನುಡಿದರು 7
--------------
ಗಲಗಲಿಅವ್ವನವರು
ಹುಚ್ಚು ಹಿಡಿಸಿದೆಯಾಮಾಧವ|ನಿಚ್ಚನಿನ್ನ ಪಾದಾಂಬುಜವ ಭಜಿಪರಿಗೆ ಪಮತ್ತಗಜವೆಂಟು ಸೊಕ್ಕಿಲಿ ಕೊಲ್ವವು |ಕುತ್ತಿಗೆ ಮುರಿವರಾರು ಮಂದಿಯೂ ||ಎತ್ತ ಹೋಯಿತೋ ಬುದ್ಧಿ ಕುಳಿತುಕೊಂಡರೆ ಮೇಲೆ |ಹುತ್ತ ಬೆಳದರೆಚ್ಚರಿಕೆಯಿಲ್ಲದಂಥ 1ದಾರಾಸುತರೆನ್ನದಾರೆಂದು ನೋ |ಡರಾಗಾರ ನಮ್ಮದೆಂದು ಪೋಷಿಸರು ||ಆರಣ್ಯದಲಿ ಮುಸುಕಿಕ್ಕಿ ಧ್ಯಾನಿಸುವರು |ಶಾರೀರದ ಪರವಿಯನ್ನು ಬಿಟ್ಟಹರು 2ಬಿದ್ದು ಯದ್ದ ಕಾಳು ಆದುಕೊಂಡುಂಬರು |ಇದ್ದ ಬದುಕು ಜೋಕೆ ಮಾಡೊಲ್ಲರು ||ಪ್ರದ್ಯುಮ್ನ ಪ್ರಾಣೇಶ ವಿಠಲನೇ ಇಂಥ |ಬುದ್ಧಿಯ ಪ್ರೇರಿಸಿ ನೋಡಿ ಹಿಗ್ಗುವೆನೀ 3
--------------
ಪ್ರಾಣೇಶದಾಸರು