ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟು ಸುಳ್ಳೆಂಬೋದು ತಿಳಿಯಲಿಲ್ಲ | ಕಷ್ಟವಿದರೊಳಗು ಎಳ್ಳಷ್ಟು ಸುಖವಿಲ್ಲ ಪ ಮಡದಿ ಮಕ್ಕಳು ಮನೆಮಾರೆಲ್ಲ ಸುಳ್ಳು | ಹಡೆದ ತಾಯಿ ತಂದೆ ಮೊದಲೇ ಸುಳ್ಳು | ಒಡ ಹುಟ್ಟಿದ ಅಣ್ಣ-ತಮ್ಮಂದಿರು ಸುಳ್ಳು |ಒಡವೆ ವಸ್ತುಗಳೆಲ್ಲ ಕಡೆ ತನಕ ಸುಳ್ಳು 1 ಆನೆ ಕುದುರೆ ಸೇನೆ ದೌಲತು ಸುಳ್ಳು | ನಾನು ನೀನೆಂಬ ಅಜ್ಞಾನವೇ ಸುಳ್ಳು | ಮೌನ ಹಿಡಿವುದು ಸುಳ್ಳು | ಸ್ವಾನುಭವಕೆಲ್ಲ ಸುಳ್ಳು 2 ಕೊಟ್ಟು ಕೊಂಡೋದು ಸುಳ್ಳು | ಕೆಟ್ಟದೊಳ್ಳೇದೆಂಬುವದು ಸುಳ್ಳು | ಧಿಟ್ಟ ಭವತಾರಕನ ಮುಟ್ಟಿ ಪೂಜಿಸಿನ್ನು | ಬಟ್ಟ ಬಯಲಾಗಿ ತಾ ಘಟ್ಟ್ಯಾದನು 3
--------------
ಭಾವತರಕರು
ಗೋಪಿ ಎನ್ನ ಕೊಲ್ಲಬೇಕೆಂಬ ಬಗೆಯ ಪ ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆಕೆರೆಯೇನೆ ಹೇಳಮ್ಮಯ್ಯಕರೆದು ಅಣ್ಣನ ಕೇಳಮ್ಮ ಉಂಟಾದರೆಒರಳಿಗೆ ಕಟ್ಟಮ್ಮಯ್ಯ 1 ಮೀಸಲು ಬೆಣ್ಣೆಯನು ಮೆಲುವುದು ಎನಗೆದೋಷವಲ್ಲವೇನಮ್ಮಯ್ಯಆಸೆ ಮಾಡಿದರೆ ದೇವರು ಕಣ್ಣಮೋಸದಿ ಕುಕ್ಕೋನಮ್ಮಯ್ಯ 2 ಅಟ್ಟವನ್ನೇರಿ ಹಿಡಿವುದು ಅದು ಎನಗೆಕಷ್ಟವಲ್ಲವೆ ಹೇಳಮ್ಮಯ್ಯ ನೀಕೊಟ್ಟ ಹಾಲು ಕುಡಿಯಲಾರದೆ ನಾನುಬಟ್ಟಲೊಳಗಿಟ್ಟು ಪೋದೆನೆ 3 ಪುಂಡುತನವ ಮಾಡಲು ನಾನು ದೊಡ್ಡಗಂಡಸೇನೆ ಪೇಳಮ್ಮಯ್ಯ ಎನ್ನಕಂಡವರು ದೂರುತಾರೆ ಗೋಪಮ್ಮ ನಾ ನಿನ್ನಕಂದನಲ್ಲವೇನೆ ಅಮ್ಮಯ್ಯ 4 ಉಂಗುರದ ಕರದಿಂದ ಗೋಪಮ್ಮ ತನ್ನಶೃಂಗಾರದ ಮಗನೆತ್ತಿರಂಗವಿಠಲನ ಪಾಡಿ ಉಡುಪಿಯ ಉ-ತ್ತುಂಗ ಕೃಷ್ಣನ ತೂಗಿದಳು 5
--------------
ಶ್ರೀಪಾದರಾಜರು
ಲಾವಣಿ ಖೋಡಿಮನಸು ಇದು ಓಡಿ ಹೋಗುತದಬೇಡೆಂದರು ಕೇಳದು ಹರಿಯೆಜೋಡಿಸಿ ಕೈಗಳ ಬೇಡಿಕೊಂಬೆ ದಯಮಾಡಿಹಿಡಿದು ಕೊಡು ನರಹರಿಯೆ ಪ ಗಾಡಿಕಾರ ನಿನ್ನ ಮೋಡಿಯ ಮೂರ್ತಿಯಕೂಡಿಸಿ ಪೂಜಿಸಲಘ ಹರಿಯೆದೂಡುತ ಹೃದಯದ ಗೂಡಿನೊಳಗೆ ಸ್ಥಿರ ಮಾಡಲು ಹದವನು ನಾನರಿಯೆನೋಡಿಂದ್ರಿಯಗಳ ತೀಡಬಲ್ಲೆ ಮನತೀಡುವ ಯತ್ನವು ಬರೆಬರೆಯೆಬೇಡಬೇಡವೆಂದಾಡುವೆನೆ ನಿನ್ನನೋಡುವುದೆಂತೈ ಜಗದೊರೆಯೆಕೋಡಗನಂತಿದು ಕಿಡಿಗೇಡಿ ಜಿಗಿದಾಡಿ ಪೋಗುವುದು ತ್ವರೆಮಾಡಿಕೂಡಿಸದದು ಬಹುಕಾಡಿ ದಿಟಿಸ್ಯಾಡಿ ನೋಡಲದು ಅಡನಾಡಿಕಾಡಿಕಾಡಿ ಬಲು ಪೀಡಿಸುತಿರುವದುಕಾಡುವುದೇನಿದು ಈ ಪರಿಯಾಜೋಡಿಸಿ ಕೈಗಳ 1 ತುಣುಕು ತುಣುಕು ಮನಸು ಇದು ಕ್ಷಣದೊಳು ಹಿಡಿವುದುತಿಣಿಕಿ ತಿಣಿಕಿ ಗಡ ಇದನ್ಹಿಡಿಯೆ ಹೆಣಗಲ್ಯಾತಕೆಂದು ಗೊಣಗುತಿಹರುಜನ ಗುಣ ಗೊತ್ತಿತ್ತಿಲ್ಲಿದೆ ಗುಣ ಖಣಿಯೆಗುಣರಹಿತನೆ ನಿನ್ನ ಗುಣ ನಾಮಂಗಳನೆಣಿಸುತೆ ನಾಲಗೆ ತಾದಣಿಯೆ ಟೊಣೆದು ನಿಮ್ಮನು ಕ್ಷಣಕ್ಷಣಕೊಂದುಕಣಕೆ ಹಾರುವುದು ಸುರಧರಣಿಯೆಇಣಚಿಹಾಂಗೆ ಚಪಲವೋಧಣಿಯೆಅಣಕಿಸಿದ್ಹಾಂಗ ಕುಣಿಕುಣಿಯೆಬಣಗು ಜನರು ನಮಗದು ಹೊಣಿಯೆಒಣ ಮಾತಿದು ಕೇಳ್ ನಿರ್ಗುಣಿಯೆಮಣಿಯದು ದಣಿಯದು ಹಣಿಯದು ತಣಿಯದುಟೊಣಿಯಲು ನಿನ್ನದು ಅದರಣಿಯೆ 2 ಸ್ಪಷ್ಟ ಹೇಳುವೆನು ಚೇಷ್ಟೆಗಳದರದುಯ ಥೇಷ್ಟವಾಗಿ ಕಣಾ ಕಣಾಶಿಷ್ಯರನೆಲ್ಲಾ ಭ್ರಷ್ಟ ಮಾಡುವುದು ದೃಷ್ಟಿ ಇಂದೊಂದೇ ಕಾರಣಎಷ್ಟು ಮಾತ್ರಕಿವರಿಷ್ಟ ನಡೆಸದಿಂದಿಷ್ಟೇ ಇದರದು ಧೋರಣಾಕಷ್ಟದಿ ಹಿಡಿದಿಟ್ಟ ಅಷ್ಟು ಇಂದಿಯಕಿದೆದುಷ್ಟರುಪದೇಶದ ಪ್ರೇರಣಾನಷ್ಟಮಾಡೋ ಈ ಚೇಷ್ಟೆಗುಣ ಸುಪುಷ್ಟ ಮತಿಯ ಕೊಡೊ ಪೂರಣಮುಷ್ಠಿಯೊಳಗಿಸೊ ತನುಹರಣಸೃಷ್ಟಿಸ್ಥಿತಿಲಯ ಕಾರಣಸೃಷ್ಟಿಯೊಳಗೆ ಉತ್ಕøಷ್ಟ ಗದುಗಿನಶ್ರೇಷ್ಠ ವೀರನಾರಾಯಣ 3
--------------
ವೀರನಾರಾಯಣ
ಸರ್ವೋತ್ತಮ ಸರ್ವಜೀವನ ಪ್ರಾಣ ಸರ್ವೋತ್ತಮ ಪರಿಪೂರ್ಣ ಸರ್ವೋತ್ತಮ ಧ್ರುವ ಸತ್ಯಜ್ಞಾನ ಅನಂತ ಬ್ರಹ್ಮ ಶ್ರುತಿ ಸಾರುತಲ್ಯದೆ ನೇಮ ಮತ್ಪಾತಕ ಹಿಡಿವುದು ಬರಿ ಭ್ರಮೆ ನಿತ್ಯನಾಗಿರೋ ಘನಮಹಿಮ 1 ಸರ್ವೋತ್ತಮ ಶ್ರೀ ಹರಿ ಸಾಕ್ಷಾತ ಪೂರ್ವಾಪರ ಪ್ರಖ್ಯಾತ ದೋರ್ವನು ತಾ ಘನಮಯ ಸದೋದಿತ ಸರ್ವಾನಂದಭರಿತ 2 ವಾಸುದೇವನೊಬ್ಬನೆ ಸರ್ವೇಶ ಭಾಸ್ಕರಕೋಟಿ ಪ್ರಕಾಶ ಭಾಸುತಲೀಹ್ಯ ವರ ಗುರುದೇವೇಶ ದಾಸ ಮಹಿಪತಿ ಪ್ರಾಣೇಶ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನವೆಂಬ ಬೇಟೆಗಾರಹತ್ತಿಂದ್ರಿಯ ನಾಯಿಮನ ಬಂತು ಘೋರವಾದಮನಮನಾದಿ ಮೃಗಂಗಳನುಮಹಾಕೊಲೆಯ ಕೊಲ್ಲುತಿಹನುಪಮಹಾಪ್ರಪಂಚ ಬಲೆಯುತಾಪತ್ರಯತೊಡಕುಮಹಾವಿಷಯ ಮೇವು ಮಹಾವಿಷಯಮೇವಿಗೆ ಬಂದು ಮನುಜಮೃಗಗಳು ಕೆಡವುತಿಹವು1ನಯನೇಂದ್ರಿಯಗಳೆಂಬ ನಾಯಿಕಂಡಾಗಲೆ ಹಿಡಿವುದುಪ್ರಾಯ ಒಳ್ಳೆಯ ನಾಯಿನಿಯತವಿಹುದಲ್ಲೆ-ನ್ನದಲೆ ನೆನೆದಾಗಲೇ ಹಿಡಿಯುತಿಹುದು2ಒಂದಕ್ಕದೊಂದು ವೇಗವುಹತ್ತೀಪರಿನಾಯಿಬಂದರೆಂತೊಂದು ಸತ್ವವುಬಂದು ಹಿಡಿಯದಿರೆಮತ್ತೊಂದಾದರೆ ಹಿಡಿದು ಕೆಡವುತಿಹುದು3ಬಾಹ್ಯದ ಅಡವಿಯೊಳಗೆಮೃಗಂಗಳಿಗೆ ಬಹಬಾಧೆ ನಿತ್ಯದೊಳಗೆಬಾಹ್ಯ ವಿಷಯಪೇಕ್ಷೆಯಬಿಟ್ಟರೆ ಬದಿಯ ನಾಯಿಗಳು ಸೇರದಿಹವು4ತನಗೆ ತಿಳಿಯಬೇಕುತಾನುಳಿವುದಕೆ ತನಗೇಯಬೇಕುತನ್ನ ಚಿದಾನಂದನೆಂದು ತನ್ನ ಕಂಡರೆ ಭಯವಿಲ್ಲ5
--------------
ಚಿದಾನಂದ ಅವಧೂತರು