ಒಟ್ಟು 6 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಮನವೆ ಸಲೆ ನಿನ್ನ ಮರೆವದು ಗುಣವೇ ಪ ಹರಿಯೋ ಮರವಿನ ಮುಸುಕಿದೆ ಮರೆಯೋ | ಸಿರಿ ಸೌಖ್ಯ ಮೃಗಜಳ ಪರಿಯೋ | ಚರವೆಂಬ ಹಂಬಲ ಮರಿಯೋ | ಪರಿ ವಾಸನೆಯ ಜರಿಯೋ | ಪ್ರಾರಬ್ಧ ನಿಜ ವೆಂದರಿಯೋ | ತಾಪ ಮೊನೆ ಮುರಿಯೋ | ಅರವಿನ ನಯನವದೆರಿಯೋ | ಪಾದ ಪದ್ಮಕ ಬೆರೆಯೋ 1 ತಿಳಿಯೋ ಇಳಿಯೊಳು ಸತ್ಪಥ ನೆಲಿಯೋ | ಕಳೇವರ ಸ್ಥಿರ ಬೊಬ್ಬುಳಿಯೋ | ನಲವಾರು ಅರಿಗಳ ನಳಿಯೋ | ಬಲಿತಿಹ ಹಮ್ಮಲ ಕಳಿಯೋ | ಬಳಲಿಪಾಗುಣ ಮಲ ತೊಳಿಯೋ | ಬಲು ಶಾಂತಿ ಹೃದಯದಲಿ ತಳೆಯೋ | ಒಲುವಂತೆ ಗುರುನಡಿ ಕಲಿಯೋ | ಸಲಹುವಾಗರದು ದಯ ಮಳಿಯೋ 2 ಜಡಿಯೋದೃಢ ಭಾವನೆಯನು ಹಿಡಿಯೋ | ಕೆಡುವ ಭಾವ ಮೂಲವ ಕಡಿಯೋ | ತಡಿಯದೆ ಮಹಿಪತಿ ದಯ ಪಡಿಯೋ | ಅಡಿಗಳಾಶ್ರಯವನು ಹಿಡಿಯೋ | ಒಡೆಯನಾಜ್ಞೆಯಂದದಿ ನಡೆಯೋ | ಕಡು ಪ್ರೀತಿಲಿ ಸ್ತುತಿ ನುಡಿಯೋ | ಮಡಿದ್ಹುಟ್ಟುವ ಜನ್ಮದ ಮುಡಿಯೋ | ಒಡನ ಹಾದಿದರಿಂದ ಕಡಿಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಲ ಕಳೆಯಬೇಡ ಮನವೇ ಮೂಳನಾಗಬೇಡ ಪ ಕಾಳು ಕತ್ತಲೆಂಬ ಹಾಳು ಸಂಸಾರ ಮಾಯಾ ಜಾಲ ಮೋಹಿಸಿ ಹೊತ್ತು ಹಾಳುಮಾಡಿಕೊಂಡು ಅ.ಪ ನಿನ್ನೊಳು ಹುಡುಕಾಡಿ ಹರಿಯ ಉನ್ನತಕೃಪೆ ಪಡಿ ಕಣ್ಣುಮುಚ್ಚಿ ಪರರ್ಹೆಣ್ಣಿನ ಹೊಲೆಮೈ ಬಣ್ಣಕೆ ಮನಸೋತು ಠೊಣ್ಯನೆನಿಸಿಕೊಂಡು 1 ನೋಡಿ ತಿಳಿದು ಭವಮೂಲ ಹುಡುಕಾಡಿ ಹಿಡಿಯೋ ನಿಜವ ರೂಢಿಸುಖಕೆ ಮನನೀಡಿ ಸನ್ಮಾರ್ಗದ ಜಾಡು ತಿಳಿಯದೆಮತಾಡಣೆಗೊಳಪಟ್ಟು 2 ಅರಿತು ಶ್ರೀರಾಮಚರಣ ನಿರುತದಿ ಗುರುತು ಹಿಡಿಯೋ ಜಾಣ ಪರಲೋಕ ಸಾಧನ ಸುರತು ಷರತು ಮಾಡಿಕೊಂಡು ಪರಕೆ ಪರಮ ಪರತರ ಮುಕ್ತಿ ಸುಖ ಸುರಿ 3
--------------
ರಾಮದಾಸರು
ಬುದ್ಧಿಯ ನಾನೇ ಹೇಳುವೆ ಎಲೆ ಎಂಗರವಟ್ಟೆಬುದ್ಧಿಯ ನಾನು ಹೇಳುವೆಬುದ್ಧಿಯ ನಾನು ಹೇಳುವೆ ಶುದ್ಧ ಬ್ರಹ್ಮನು ನೀನು ಎಲೆ ಎಂಗರವಟ್ಟೆ ಪ ಸತಿ ಎಲ್ಲಿ ಹಿಂದಣ ಸುತರೆಲ್ಲಿಹಿಂದಾದುದನು ಬಿಟ್ಟು ಇಂದಿದು ನನ್ನದೆಂಬೆ ಎಲೆ ಎಂಗರವಟ್ಟಿ 1 ಮುಂದಾವ ಜನ್ಮ ಭೋಗಿಪೆಯೋ ಎಲೆ ಎಂಗರವಟ್ಟೆಮುಂದಾರ ಮದುವೆಯಹೆ ಎಲೆ ಎಂಗರವಟ್ಟೆಮುಂದಣ ತಾಯಿ ಯಾರು ಮುಂದಣ ತಂದೆ ಯಾರುಮುಂದಣ ಹಿಂದಣದರಿಯೆ ಇಂದಿನದು ಎನ್ನದೆಂಬೆ ಎಲೆ ಎಂಗರವಟ್ಟಿ2 ಭಿಕ್ಷವ ಹಾಕಲಾರಿ ಎಲೆ ಎಂಗರವಟ್ಟೆ ಕುಕ್ಷಿಗೆ ತಿನ್ನಲಾರಿಲಕ್ಷ ಹೊನ್ನುಗಳನ್ನು ನೆತ್ತಿಗೆ ಇಟ್ಟುಕೊಂಬೆಯಾ ಎಲೆ ಎಂಗರವಟ್ಟೆ 3 ತನುವಿದು ತನ್ನದೆಂಬೆ ಎಲೆ ಎಂಗರವಟ್ಟೆ ತನುವನು ನೋಡಿಕೊಂಬೆನಿನ್ನ ಮುಂದೆಯೇ ತನು ತಾನು ಹೋಗುವುದುತನುವದು ನಿನಗಿಲ್ಲ ತನು ಸಂಬಂಧವೆಂತೋ ಎಲೆ ಎಂಗರವಟ್ಟೆ4 ಹಿಡಿಯೋ ಗುರುಪಾದವನು ಎಲೆ ಎಂಗರವಟ್ಟೆ ಪಡೆಯೋ ಕಟಾಕ್ಷವನುಸಡಿಲದೇ ದೃಷ್ಟಿಯನು ತಿರುಹಿ ನಿನ್ನೊಳಗಿಟ್ಟುಒಡೆಯ ಚಿದಾನಂದನು ನೀನಾಗಿ ನೀನಿರು 5
--------------
ಚಿದಾನಂದ ಅವಧೂತರು
ಸಾವಧನಾಗಿ ಮನುಜಾ | ಕೇಳು | ನಿಜ ಸ್ಥಿತಿಯಾ ಪ ಕೇಳು ನಿಜ ಸ್ಥಿತಿಯಾ | ಪಡೆದೇನೆಂದರೆ ಗತಿಯಾ | ಬೀಳದೆ ನೀ ಕವಳದಾರಿಗೆ | ನಂಬು ಗುರು ಮೂರ್ತಿಯಾ 1 ಗಗನ ಮುರಿದು ಬೀಳಲಿ | ಸಾಗರ ಮೇರೆದಪ್ಪಲಿ | ಬಾಗದೇ ನೀ ಅನ್ಯದೈವಕ | ಭಾವ ದೃಢ ವಿರಲಿ 2 ದಾಸರ ಕಂಡರೆ ರಂಗಯ್ಯಾ | ಜಂಗಮ ಕಂಡರೆ ಲಿಂಗಯ್ಯಾ | ವೇಷಿಯಂತೆ ತಿರುಗಬ್ಯಾಡಾ | ಹಿಡಿಯೋ ಒಂದೇ ನಿಷ್ಠೆಯಾ 3 ಕಂಡ ಮಾರ್ಗ ನೋಡದೆ | ಕಂಡ ಮಾತನಾಡದೆ | ಗಂಡನೊಬ್ಬನ ಮಾಡದೆ ನಾರಿ | ಪತಿವೃತೆ ಮೆರಿವದೇ 4 ಎಲ್ಲಿ ಒಂದೇ ನಿಷ್ಠೆಯು | ಅಲ್ಲಿ ಶ್ರೀ ಹರಿ ಕೃಪೆಯು | ನಿಲ್ಲದೆ ಮಹಿಪತಿ ನಂದನಸ್ವಾಮಿ | ಇದಿರಿಡುವನು ಸಂಗತಿಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು