ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರನಾದ ಮ್ಯಾಲ ಹರಿನಾಮ ಜಿವ್ಹೆದಲಿರಬೇಕು ಪ ಗುರುವಿನ ಬರಣಕ ನಂಬಿರಬೇಕು| ತರಣೋಪಾಯವನರಿಯಲಿ ಬೇಕು| ವಿರತಿಯ ಮಾರ್ಗದಿ ನಡೆಬೇಕು 1 ಪರ ಬೇಕು| ಪಾತಕ ತನವನು ಜರಿಯಲಿಬೇಕು| ಮಾತು ಮಾತಿಗೆ ಹರಿಯೆನಬೇಕು 2 ಶಾಂತಿಯ ಶಮೆದಮೆ ಹಿಡಿಯಲಿಬೇಕು| ಭ್ರಾಂತಿಯ ಕ್ರೋಧವ ನಳಿಯಲಿಬೇಕು| ಸಂತರ ಸಂಗದಲಿರಬೇಕು 3 ತಂದೆ ಮಹಿಪತಿ ದಯ ಪಡಿಬೇಕು| ಬಂದದನುಂಡು ಸುಖದಿರಬೇಕು| ಎಂದೆಂದು ಭಕ್ತಿ ಬಲಿಬೇಕು4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕ್ತಿ ಬೇಕು ವಿರಕ್ತಿ ಬೇಕು ಸರ್ವಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ ಪ ಸತಿ ಅನುಕೂಲ ಬೇಕು ಸುತನಲ್ಲಿ ಗುಣಬೇಕುಮತಿವಂತನಾಗಬೇಕು ಮತ ಒಂದಾಗಿರಬೇಕು 1 ಜಪದ ಜಾಣುವೆ ಬೇಕು ತಪದ ನೇಮವೆ ಬೇಕುಉಪವಾಸ ವ್ರತ ಬೇಕು ಉಪಶಾಂತವಿರಬೇಕು 2 ಸುಸÀಂಗÀ ಹಿಡಿಯಲಿಬೇಕು ದುಸ್ಸಂಗ ಬಿಡಲಿಬೇಕುಶ್ರೀರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು 3
--------------
ಶ್ರೀಪಾದರಾಜರು
ಮುಕುತಿಯ ಮಾರ್ಗವ ಹಿಡಿಯಲಿಬೇಕು ಭಕುತಿಯು ಮನದಲಿ ಮಾಡಲಿಬೇಕು ಪ ಭಕುತರು ತುಳಿವ ಕಲ್ಲಾಗಿರಬೇಕು ಲಕುಮಿಯ ರಮಣನ ದಯೆ ಬರಬೇಕು ಅ.ಪ ನೊಂದವರನು ಸಂತೈಸಲಿಬೇಕು ತಂದೆ ತಾಯಿಯರ ವಂದಿಸಬೇಕು ಬಂದುದ ಮೋದದಿ ಪಡೆಯಲಿಬೇಕು ಇಂದಿರೆಯರಸನೇ ಗತಿಯೆನಬೇಕು 1 ಸಂಗವು ಶರಣರದಾಗಿರಬೇಕು ರಂಗನೊಳೇ ಮನ ತಂಗಿರಬೇಕು ಭಂಗಿಸಿ ಕಾಮವ ವರ್ಜಿಸಬೇಕು ಮಾಂಗಿರಿನಾಥನ ದಯೆ ಬರಬೇಕು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್