ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿಯೊ ಮನವೆ ನಿಜವಸ್ತು ಖೂನ ಅಳಿಯೊ ದೇಹ ನಾನೆಂಬುವಭಿಮಾನ ಹೊಳಿಯೊ ಸದ್ಗುರು ಪಾದದಲಿ ನೀ ಪೂರ್ಣ 1 ಹುಟ್ಟಿ ಬಂದೇನು ಪುಣ್ಯ ಪುರುಷಾರ್ಥ ಘಟ್ಟಿಗೊಳ್ಳದೆ ನಿಜ ಸುಹಿತಾರ್ಥ ನಿಷ್ಠೆ ಹಿಡಿಯದನ ಜನ್ಮ ವ್ಯರ್ಥ ಮುಟ್ಟಿ ತೋರುವ ಶ್ರೀ ಗುರು ಪರಮಾರ್ಥ 2 ಗುರ್ತು ತಿಳಿಯೊ ಜನುಮಕೆ ಬಂದ ಮ್ಯಾಲೆ ಮರೆತು ಮೈಮರೆವದೇನು ತಾ ಮೇಲೆ ಅರ್ತು ನಡೆವದು ನಿನಗೇನು ಸೋಲು ಕರ್ತು ಸದ್ಗುರು ಸ್ಮರಿಸೋ ಆವಾಗಲೂ 3 ಎಲ್ಲಾರಂಥ ತಾನಲ್ಲೊ ಗುರುನಾಥ ಸುಲ್ಲಭದಿಂದ ದೋರುವ ಸುಪಥ ಅಲ್ಲೆ ದೋರ್ವದು ಸಕಲ ಹಿತಾರ್ಥ ಬಲ್ಲ ಮಹಿಮರೆ ತಿಳಿವರೀ ಮಾತ 4 ಭಾಸುತದೆ ಭಾಸ್ಕರ ಕೋಟಿ ಕಿರಣ ಲೇಸಾಗಿ ಹೋಗೊ ಗುರುವಿಗೆ ಶರಣ ದಾಸಮಹಿಪತಿ ಸ್ವಾಮಿ ದೀನೋದ್ಧಾರಣ ಭಾಸಿ ಪಾಲಿಸುವ ತಾ ಸುಕರಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಖ್ಯವ್ಯಾಕೆ ಮುಖ್ಯ ಸ್ವಹಿತ ಹೇಳದನಕ |ಮಕ್ಕಳು ಯಾಕೆ ಪಿತೃಗಳ ಆಜ್ಞೆಯ ನಡೆಸದನಕ ಪ ದಾತನ್ಯಾಕೆ ಬಯಕೆ ಪೂರ್ಣ ಮಾಡದನಕ | ಬರಿ |ಮಾತು ಯಾಕೆ ಸ್ಥಿತಿಯ ಲೇಶ ಇಲ್ಲದನಕ 1 ಸಂತನ್ಯಾಕೆ ಶಾಂತಿ ನೆರಳು ಹಿಡಿಯದನಕ | ತನು |ಕಂಥೆಯಾಕೆ ಶಿವಪದಕ್ಕೆರಗೋ ತನಕ 2 ನೇಮವ್ಯಾಕೆ ಹೃದಯ ಶುದ್ಧವಾಗದ ತನಕ | ಶಿವನ |ನಾಮವ್ಯಾಕೆ ನಾಮರೂಪ ಅಳಿಯದ ತನಕ 3 ತುಂಬಿ ತುಳುಕದ ತನಕ 4 ಜಾಣನ್ಯಾಕೆ ಸಮಯ ಉಚಿತ ಅರಿಯದ ತನಕ | ಬರಿಗಾನವ್ಯಾಕೆ ಸ್ವರದ ಲಯವ ಧರಿಸದ ತನಕ 5 ಧರ್ಮವ್ಯಾಕೆ ಸಮಯ ಕಾಲಕ ಒದಗದ ತನಕ | ಸ- |ತ್ಕರ್ಮವ್ಯಾಕೆ ದಂಭತನವು ದಹಿಸದನಕ 6 ಧನ ವಿದ್ದ್ಯಾತಕೆ ಶರಣರಡಿಗೆ ತರದನ್ನಕ | ಈಮನ ವಿದ್ದ್ಯಾಕೆ ತನ್ನ ಉಗಮ ಸೇರದನ್ನಕ7 ಶಿಷ್ಯನ್ಯಾತಕೆ ಗುರುಗಳ ಹೃದಯ ತಿಳಿಯದನ್ನಕ | ಸರಸಭಾಷ್ಯವ್ಯಾತಕೆ ಶ್ರುತಿಯ ಗರ್ಭ ಉಸುರದನ್ನಕ 8 ಜ್ಞಾನವ್ಯಾಕೆ ಜ್ಞೇಯಗುರಿತವರಿಯದನಕ | ಬರಿ |ಧ್ಯಾನವ್ಯಾಕೆ ಚಿತ್ತವೃತ್ತಿ ಮರೆಯ ದನಕ 9 ಆರಾಮವ್ಯಾಕೆ ದುಃಖಸೀಮಿ ದಾಂಟದನಕ | ಶಿ- |ವರಾಮನ್ಯಾಕೆ ಪೂರ್ಣ ಸುಖದೊಳಾಡದ ತನಕ 10
--------------
ಶಿವರಾಮರು