ಗುರುಭಕ್ತಿ ಮನವೆ ನೀ ಮಾಡು ಸ್ಥಿರ
ಗುರುತಿಟ್ಟು ಬಾಹುದು ಪರಾತ್ಪರ
ಸರಿಗಾಣೆನೊ ಪುಣ್ಯಕೆ ನೋಡಿದರ
ಕರಕೊಂಬುದಿದೆ ಸುಖ ಸಜ್ಜನರ 1
ಹಿಡಿಬೇಕು ಸದಾ ಗುರುಭಾವದೃಢ
ಉಪಾಧಿ ಜಡ
ಪಡಕೊಂಬುದು ಮಾಡಬಾರದು ತಡ
ಒಡಲ ಹೊಕ್ಕರ ಸದ್ಗುರು ಕೈಯಬಿಡ 2
ಗುರುನಾಮ ನಿಧಾನ ನೆನಿಯೊ ಸದ
ಸುರಲೋಕಕೆ ಪಾವನ ಮಾಡುವದ
ಪರತತ್ವಕೆ ಪಾರನೆದೋರುವದ
ಸ್ಮರಿಸಿನ್ನು ಮಹಿಪತಿ ಮುಖ್ಯವಿದ 3