ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥÀ ಮಗನೆ ನಿಮ್ಮ ಗೋಪಮ್ಮ ಧ್ರುವ ನವನೀತ ಚೋರ ಜಾರ 1 ಎಳೆವನು ಹಾದಿ ಬೀದಿ ಯೊಳಗೆ ಸೆರಗ ಸುಳಹು ಕಂಡಾರೆಂದರೆ ತಾ ತಿರಗ 2 ಹಿಡಿದೇನೆಂದರೆ ಕೈಯೊಳು ಸಿಲುಕ ಮಾಡಿ ಮಾಡದಿದ್ಹಾಂಗ ಇವ ಬಲು ಠಕ್ಕ 3 ಹೇಳಬೇಕಿನ್ನಾರಿಗೆ ಈ ದೂರ ತಿಳಿದುಕೊಳ್ಳಮ್ಮ ಮಗನ ವಿಚಾರ 4 ಬಿಡ ಇವನೆಂದೂ ಪಿಡಿದವರ ಕೈಯ ಬಿಡದೆ ಸಲಹುತಿಹ್ಯ ಮೂಢಮಹಿಪತಿಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಪಟನಾಟಕನೀತ ಕೃಪಾಸಿಂಧು ಸಾಕ್ಷಾತ ಧ್ರುವ ಸಗುಣ ಸುಪಥ ದೋರಿ ನಿರ್ಗುಣನಾಗಿಹ ಶ್ರೀಹರಿ ಅಗಣಿತ ಗುಣದೋರುವ ಅನೇಕಾಪರಿ ಜಗದೊಳು ಮುರಾರಿ 1 ಹಿಡಿದೇನೆಂದರೆ ಸಿಲುಕ ಗೂಡಿನೊಳಗೆ ಮಾಡಿಹ್ಯ ಮಲಕ ನೋಡೇನೆಂದರೆ ಭಕ್ತಿಗೆ ನಿಲುಕ ಒಡಿಯ ಗೋಪಾಲಕ 2 ಕುಲಗಳ್ಳಗೆ ಕೊಡುವ ಮ್ಯಾಲೆ ಹುಯಲು ತಾ ಮಾಡುವ ಬಲುಖಳ ದೈವ 3 ಭಾಷೆ ಕೊಟ್ಟರೆ ತಪ್ಪ ಋಷಿ ಮುನಿಗಳ ಪಾಲಿಪ ಭಾಸುತ ಭಕ್ತರ ಹೃದಯದೊಳಗಿಪ್ಪ ಭಾಸ್ಕರ ಸ್ವರೂಪ 4 ಗುಹ್ಯ ಆಗೋಚರ ಸೋಹ್ಯ ತಿಳಿಯಲು ಸಾಕ್ಷಾತ್ಕಾರ ಇಹಪರ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾಳಲಾರೆನಮ್ಮಾ ಬಾಲಕನಟ್ಟುಳಿ ಗೋಪೀಘನವಮ್ಮ ಕೇಳಿದುಳವಿಲ್ಲಾ ಕೇಳಿದುಳವಿಲ್ಲಾ ಕಾಲಕಾಲದಲಿಟ್ಟ ಬೆಣ್ಣೆ ಮೂಲವಿರಲಿಕ್ಕಿಲ್ಲಾ ಪ ಅತ್ತನೋಡ ಲಿಹಾ ಇತ್ತ ನೋಡಲಿಹಾ ಸುತ್ತಸೂಸುತ ಬಾಲೆಯರಾ ಚಿತ್ತಮೋಹಿಸುತಿಹಾ1 ಹಿಡಿದೇನೆಂದರೆ ಸಿಕ್ಕಾ ತುಡುಗ ಬಲುದಕ್ಕಾ ಹಿಡಿದು ನಿಲ್ಲಿಸುವರಿಲ್ಲಾ ಪೊಡವಿಲಿವನ ತುಕ್ಕಾ2 ಆರಿಗೇ ವಿಚಾರಾ ಸಾರಬೇಕು ದೂರಾ ಸೂರೆಹೋಗುತಿದೆ ಸಂಸಾರಾ ಸುಖಸಾರ 3 ತಂದೆಮಹಿಪತಿ ನಂದನ ಸಾರಥಿ ಇಂದು ನಮ್ಮ ಕಾಡಿದರ ಮುಂದಾರುಗತಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿದರೆ ತನ್ನೊಳಗದೆ ಗೂಢವಾಗದೆ ಧ್ರುವ ಸೋಹ್ಯ ತಿಳಿಯಗೊಡದೆ ಮಾಯ ಮರಿ ಆಗ್ಯದೆ ಕಾಯದೊಳಗೆ ತಾನಾದೆ ಗುಹ್ಯವಾಗ್ಯದೆ 1 ಅಡಿ ಮೇಲು ತಿಳಿಯದೆ ಬಿಡದೆ ಸೂಸುತಲ್ಯದೆ ಹಿಡಿದೇನೆಂದರೆ ಬಾರದು ಇಡದು ತುಂಬ್ಯದೆ 2 ತೋರಿಕೆ ತೋರಿಸದೆ ಪರಿಪೂರ್ಣ ತಾನಾಗ್ಯದೆ ಮೂರುಗುಣಕೆ ಮೀರ್ಯದೆ ಬ್ಯಾರೆ ತಾನದೆ 3 ಕರುಣಿಸಿ ನೋಡುತದೆ ಕರೆದರೋ ಎನುತದೆ ಬ್ಯಾರೆ ನಿರಾಶೆವಾಗ್ಹಾದೆ ಹೊರೆಯುತಲ್ಯದೆ 4 ನೀಲವರ್ಣದೊಳದೆ ಥಳಥಳಗುಡುತದೆ ಮ್ಯಾಲೆ ಮಂದಿರದೊಳದೆ ಲೋಲ್ಯಾಡುತದೆ 5 ಗುರುತ ಕಂಡವಗದೆ ಗುರುಸ್ವರೂಪವಾಗ್ಯದೆ ಗುರು ಕೃಪೆ ಆದವಂಗದೆ ಸಾರಿ ಚಲ್ಯದೆ 6 ದಾಸ ಮಹಿಪತಿಯೊಳದೆ ವಾಸವಾಗ್ಯದೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು