ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇವೆ ಬಂದದಾ ಖೂನವು | ಇದೇವೆ ಸಾರ್ಥಕ ಜನುಮವು ಪ ಹೊತ್ತು ಹೋಗದ ಬೀದಿ ಮಾತುಗಳಾಡದೆ ಚಿತ್ತಕ ಆಲೇಶ ತರಗುಡನು ಉತ್ತಮರೊಳುಕೂಡಿ ಶ್ರೀಹರಿ ಮಹಿಮೆಯಾ ನಿತ್ಯ ಕಥಾಮೃತ ಸೇವಿಪನು 1 ಹಾಲವನೆರೆದರೆ ಸರಕನೆ ಕುಡಿಯದ ಬಾಲಕನಂದದಿ ಈ ಮನವು ಕಾಲಕಾಲಕ ಸದ್ಭೋದವ ಕೇಳಿಸಿ ಮ್ಯಾಲ ಸ್ವಹಿತ ಕೊಡುವನು 2 ಉದರದ ಧಾವತಿಗನುದಿನ ಬೆರತಿರ ಇದರೊಳಗೆಚ್ಚರ ಹಿಡಿದಿಹನು ಮದಮತ್ಸರಳಿದು ಗುರುಮಹಿಪತಿ ಪದ ಪದುಮದಹಿಷ್ಠೆಯ ಜಡಿದಿಹನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುಭಕ್ತನೆವೆ ಧನ್ಯನು ಬಲು ಮಾನ್ಯನು ಪ ಗುರುದಯ ಸಂಗಡಿಯನು ಹಿಡಿದಿಹನು | ತರಣೋಪಾಯವ ಕೂಡಿದಾ ನಲಿದಾಡಿದಾ 1 ಅನ್ಯ ಮಾರ್ಗವ ನೋಡನು ತಾ ಕೂಡನು | ತನ್ನ ನಿಷ್ಠೆಯೊಳಾಡುವಾ ಗತಿ ಬೇಡುವಾ 2 ಗುರು ಮಾತೇ ಮಂತ್ರ ವೆಂಬನು | ಸವಿ ದುಂಬನು | ಗುರು ಸೇವೆಯಲಿ ಬಾಳುವಾ ಅದೇ ಕೇಳುವಾ 3 ಪುಂಡಲೀಕನ ಭಕ್ತಿಯಾ | ಆಸಕ್ತಿಯಾ | ಕಂಡು ತಾನೆವೆ ಬಂದನು ಮುಕುಂದನು 4 ಸಾರಥಿ | ನೆರೆ ಭಕ್ತಿ ಕೀಲ ಬೋಧನಾ ಹೇಳಿದನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು