ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಧಿಸಿ ಪಡೆದಿದ್ದೀ ನರಜನುಮ ಸಂ ಪಾದಿಸಿ ಕೊಳ್ಳೆಲೆ ಹರಿನಾಮ ಪ ಪೋದಬಳಿಕ ಇಂಥ ಮಹಜನುಮ ಮತ್ತೆ ಸಾಧನ ಸಾಧ್ಯವಲ್ಲೆಲೊ ತಮ್ಮ ಅ.ಪ ಮಡದಿಮಕ್ಕಳೆಂಬ ಒಣಭ್ರಾಂತಿ ನಿನ ಗ್ಹಿಡಿದಿದೆ ಮಾಯದ ಘನಚಿಂತಿ ಒಡೆದು ತೋರುವ ಜಗಕ್ಷಣ ಸಂತಿ ಇದು ಕಡೆಗೆ ಒಂದು ಇಲ್ಲ ನಿನ್ನ ಸಂಗತಿ1 ಅರ್ಥಇಲ್ಲದೆ ನಾನಾ ಯೋನಿಯಲ್ಲಿ ನೀ ಸತ್ತುಹುಟ್ಟುತ ಬಹು ಬಳಲುವ್ಯಲೇ ಸತ್ಯ ನಿತ್ಯಸುಖ ತಿಳಿಮರುಳೇ ಕಾಂಬ ಮತ್ರ್ಯಭೋಗವೆಲ್ಲ ಸುಳ್ಳುಸುಳ್ಳೆ 2 ತೊಳಲುತ ಎಂಭತ್ತು ನಾಲ್ಕುಲಕ್ಷ ಜನ್ಮ ತಾಳುತ ಪಡೆದಿದ್ದಿ ಬಲುಶಿಕ್ಷೆ ಚೆಲುವ ಶ್ರೀರಾಮನೊಳು ಇಡು ಲಕ್ಷ್ಯ ನಿನಗೊಲಿದು ಕೊಡುವ ಸ್ವಾಮಿ ನಿಜಮೋಕ್ಷ 3
--------------
ರಾಮದಾಸರು
ಹುಚ್ಚು ಹಿಡಿದಿದೆ ಎನಗೆ ಹುಚ್ಚು ಹಿಡಿದಿದೆ ಪ ತುಚ್ಛ ವಿಷಯವೆಂಬುವಂಥ ಅಚ್ಚಮದ್ದು ನೆತ್ತಿಗೇರಿಅ.ಪ ಹಿರಿಯರರಿಯೆ ಕಿರಿಯರರಿಯೆ ಹರಿಯ ಸ್ಮರಣೆ ಮಾಡಲರಿಯೆ ನಾರಿಯರ ಪರಿಚಯದಿ ಆರು ಪುರುಷರೊಡನೆ ಇರುವೆ 1 ಇದ್ದರಿದ್ದೆ ಎದ್ದರೆದ್ದೆ ಇದ್ದ ಸುದ್ದಿ ಪೇಳಲರಿಯೆ ಕದ್ದ ಕಳ್ಳನಂತೆ ಇದ್ದು ಬುದ್ಧಿ ಹೊದ್ದಿಕಿ ಬಿಟ್ಟಿರುವೆ 2 ಹೀನಗುಣಗಳೇನು ಪೇಳಲಿ ಶ್ರೀ ನರಹರಿಯೆ ನೀನೆ ಬಲ್ಲಿ ಮಾನವಂತರು ಜ್ಞಾನವಿತ್ತು ಅಜ್ಞಾನ ವಿಷಯ ಹಾನಿ ಮಾಡಿರಿ3
--------------
ಪ್ರದ್ಯುಮ್ನತೀರ್ಥರು