ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕರುಣವೊ ಕೃಷ್ಣ ಎಮ್ಮ ಮೇಲೆ ಪ ನಾನಾಪತ್ತುಗಳ ಕಳೆದು ಸಲಹಿದೆಯೊ ಅಕಳಂಕ ಅ.ಪ. ಕೌರವ ಕೊಟ್ಟ ಪರಿಪರಿಯ ಕಷ್ಟಗಳ ಪರಿಹರಿಸಿ ನೀ ಕಾಯ್ದೆ ಪರಮ ಕರುಣಿ ಅರಗಿನ ಮನೆಯಲಿ ಉರಿದುಪೋಗದ ತೆರದಿ ಭರದಿಂದ ರಕ್ಷಿಸದೆ ಭೀಮನೊಳು ನೀನಿದ್ದು 1 ಕಾನನದಿ ನಾವ್ ನಿದ್ರೆಗೈಯುತಿರೆ ಕಡುಘೋರ ದಾನವ ಹಿಡಿಂಬಕನು ಕೊಲ್ಲ ಬರಲು ಪ್ರಾಣಸುತ ನಮ್ಮ ಈ ಭೀಮನಿಗೆ ಬಲಕೊಟ್ಟು ಹೀನಖಳನನು ಸೋಲಿಸಿ ಕಾಯ್ದೆ ಸ್ವಾಮಿ 2 ಲೋಕಕಂಟಕನಾದ ಭೀಕರ ಬಕಾಸುರನ ನೀ ಕೊಂದು ಈ ವೃಕೋದರನಲಿ ನಿಂದು ಏಕಚಕ್ರಪುರದ ಲೋಕವನು ನೀ ಕಳೆದೆ ಏಕಮೇವಾದ್ವಿತೀಯ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ನಿತ್ಯ ಶುಭಮಂಗಳಂ ಪ ಚಾರು ಮರಕಟರೂಪ ತಾಳಿದಾ ಮೂರ್ತಿಗೆ ಚೋರ ದಶಕಂಠನನು ದಣಿಸಿದವಗೆ ನೀರಜಾಮುಖಿಗೆ ಮುದ್ರೆಯಿತ್ತ ಕಪಿವರಗೆ ಶ್ರೀರಾಮ ಧ್ಯಾನದೊಳು ತತ್ಪರಾದವಗೆ 1 ನೀಚ ಠಕ್ಕನ ಹಿಡಿಂಬಕನೊರಸಿದಾ ಬಲಗೆ ಕೀಚಕರ ಕಿರ್ಮೀರ ಬಕಕಾಲಗೆ ನಾಚಿ ನೀರೊಳು ಪೊಕ್ಕು ಕುರುಪತೀಯಂತಕಗೆ ಆ ಚಕ್ರ ಸೇವೆಯಲಿ ನಿರತನಾದವಗೆ 2 ಜಗವನುದ್ಧರಿಪ ಬುದ್ಧಿಯ ತಾಳ್ದಯತಿವರಗೆ ಮಗುವಾಗಿ ಮಧ್ಯಗೇಹದಿ ಜಾತಗೆ ನಿಗಮ ಗೋಚರ ಶ್ರೀ ನರಸಿಂಹವಿಠಲನ ಭಕುತಿಯನು ಬೇಡಿ ಅಜಪದ ಪಿಡಿದ ಹರಿಗೇ 3
--------------
ನರಸಿಂಹವಿಠಲರು
ಭೀಮ ಭುಜಬಲೋದ್ದಾಮ ಸವರಿದಿ ಕುರುಪನ ಕುಲವ ನಿಸ್ಸೀಮ ಪ ವಿಷದಿ ಕಜ್ಜಾಯ ತಿನಿಸಿ ಮುಸುಕಿನಿಂ ಬಂಧಿಸಿ ಎಸೆಯಲು ನದಿಯೊಳು ಕುಶಲದಿಂ ಬಂದೆಯೊ 1 ಜನನಿ ಗೌರಿಯ ವ್ರತವನು ಮಾಳ್ಪೆನೆಂದೆನಲು ಅಣ್ಣ ನನುಮತಿಯಂತೆ ಘನ ಸುರಲೋಕ ಕೈದ್ಯೊ 2 ನಿರುತದಿಂ ಸುರಧೇನು ವರ ಪರುಷಮೃಗವನ್ನು ಕರೆತಂದು ಗಜಗೌರಿ ವ್ರತವ ಪೂರೈಸಿದಿಯೊ 3 ಬಕನ ಮರ್ದಿಸಿ ಹಿಡಿಂಬಕನ ತರಿದು ಹಿಡಿಂ ಬಿಕಿಯಳ ಕರಗ್ರಹಣ ಕೈಕೊಂಡ್ಯೊ ರಣಶೂರ 4 ಬಲ್ಲಿದತನದಿ ಆ ಖುಲ್ಲಕೀಚಕನೊದೆದು ಪುಲ್ಲನಯನೆಯ ಕಾಯ್ದೊ ಬಲ್ಲಿದ ಶ್ರೀರಾಮನ ದೂತ 5
--------------
ರಾಮದಾಸರು