ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವದೆನೆಗೆ ಪ್ರೀತಿ ಎಂದೆಂಬಿಯಾ | ದೇವ ದೇವಕಿ ತನುಜ ಬಿನ್ನಪವ ಮಾಡುವೆನೊ ಪ ದೊರೆತನವಲ್ಲೆ ಧನವಲ್ಲೆ ಒಬ್ಬರ ಬಳಿಯ | ಹಿರಿಯತನವಲ್ಲೆ ಹಿಗ್ಗುವುದು ವಲ್ಲೆ | ಹರಿ ನಿನ್ನ ಚರಣಗಳ ಸ್ಮರಿಸುವ ಭಾಗವತರ | ಅರಮನೆಯ ಬೀದಿಯಲಿ ಹೊರಳುವ ಭಾಗ್ಯವ ಕೊಡು 1 ಪಂಡಿತನಾಗಲಿವಲ್ಲೆ ಫಲವಲ್ಲೆ ನಾವು ಪ್ರ | ಚಂಡ ಯೋಗಗಳೊಲ್ಲೆ ಯಾಗವಲ್ಲೆ | ಥಂಡ ಥÀಂಡದಿ ನಿನ್ನ ಕೊಂಡಾಡುವರ ಬಳಿಯ | ಕೊಂಡರಾಗಿಪ್ಪವರ ಸೇರುವ ಭಾಗ್ಯವ ಕೊಡು 2 ಅಂದಣವೇರಲಿವಲ್ಲೆ ಆತ್ಮಸುಖವಲ್ಲೆ ನಾ | ನೆಂದು ಪೇಳುವರ ಸಂಗತಿಯವಲ್ಲೆ | ನಿತ್ಯ | ನಿಂದಂಗಳದೊಳಗೆ ಯಿಪ್ಪ ಭಾಗ್ಯವ ಕೊಡು 3 ರಸ ರಸಾಯನ ವಲ್ಲೆ ಹಸನಾದ ಪಟ್ಟಿ ರಂ | ಜಿಸುವದುವಲ್ಲೆ ರಾಗಗಳುವಲ್ಲೆ | ವಸುದೇವ ಸುತ ನಿನ್ನ ಪೆಸರು ಎಣಿಸುವವರ | ಶಿಶುವಾಗಿ ಬದಕುವ ಕುಶಲ ಭಾಗ್ಯವ ಕೊಡು 4 ಪುಣ್ಯ ತೀರ್ಥಗಳು ನಿನ್ನ ಮನಸಿಗೆ ಬಂದ | ವನ್ನು ಮಾಡಿಸು ಬಿಡದೆ ಮನ್ನಿಸೆನ್ನ | ಚನ್ನ ಮೂರುತಿ ಚೆನ್ನ ವಿಜಯವಿಠ್ಠಲರೇಯ | ಎನ್ನ ವಂದನೆಯನ್ನು ಮುನ್ನು ನೀ ಕೈಕೊಂಡು5
--------------
ವಿಜಯದಾಸ
ಇನ್ನೆಲ್ಲಿತನಕ ಇವಗೆ ದುರ್ಬವಣೆ ಹರಿಯೆ ನಿನ್ನ ಉನ್ನತವಾದ ಮರೆಬಿದ್ದ ಬಳಿಕ ಪ ಮಂದಮತಿ ತೊಲಗದು ಕುಂದು ನಿಂದೆ ಅಳಿವಲ್ಲದು ಮಂದಿಮಕ್ಕಳ ಮೋಹವೊಂದು ಕಡಿವಲ್ಲದು ಸಿಂಧುಶಯನನೆ ಗೋವಿಂದ ನಿಮ್ಮ ಚರಣ ವೊಂದೆ ಮನದಲಿ ಭಜಿಸಾನಂದಪಡಿವಲ್ಲದು 1 ಮೋಸಮರವೆ ಹರಿವಲ್ಲದು ಆಶಪಾಶ ಬಿಡವಲ್ಲದು ಹೇಸಿ ಸಂಸಾರದ ದುರ್ವಾಸನೆಯು ಹಿಂಗದು ದೂಷಣೆಗೆ ನೋಯುವುದು ಭೂಷಣೆಗೆ ಹಿಗ್ಗುವುದು ದೋಷದೂರನೆ ನಿನ್ನ ಧ್ಯಾಸನಿಲ್ಲವಲ್ಲದು 2 ಕಪಟ ಮತ್ಸರಬುದ್ಧಿ ಚಪಲತನ ಅತಿಕ್ರೋಧ ಕಪಿಮನದ ಚೇಷ್ಟೆ ಅಪರೋಕ್ಷ ನಿಲ್ಲವಲ್ಲದು ಅಪ್ಪ ಶ್ರೀರಾಮ ನಿಮ್ಮ ಜಪತಪ ಸಿದ್ಧಿಸವಲ್ಲದು 3
--------------
ರಾಮದಾಸರು