ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

Àಥವನೇರಿ ಬರುವ ರಂಗನಾಥನ ನೋಡಿ ಪ ಅತಿಶಯವಾದಂಥ ಪರಗತಿಯನು ಪಡೆಯಿರೊ ಅ.ಪ. ಹಸ್ತಿಗಳು ಚಾಮರ ಹಾಕುತಲಿರೆ ಸ್ವಸ್ತಿವಾಚನಗಳನು ದ್ವಿಜರು ಪೇಳುತಲಿರೆ ಸ್ವಸ್ತಿಲಿ ವಿವಿಧ ವಾದ್ಯತತಿ ಸೂಳೈಸುತಲಿರೆ ಮಸ್ತಕಾಂಜಲಿಪುಟದಿ ಹರಿದಾಸರು ಪೊಗಳುತಿರೆ 1 ಸಾಲು ಪಂಜಿನ ದೀವಟಿಗೆಗಳು ಮೆರೆಯೆ ನಾಲ್ಕು ದಿಕ್ಕಲಿ ಜನರು ನಿಂತು ನೋಡುತ ನಲಿಯೆ ಲೀಲೆಯ ತೋರುತ ಶ್ರೀ ಭೂದೇವಿಯರಿಂದ ಲೋಲುಪ ತಾನಾಗಿ ಬಹು ಸಂಭ್ರಮದಿಂದ 2 ನಭದೊಳು ಸಕಲ ದಿವಿಜರೊಡಗೂಡಿ ತಾ ನಭುಜಭವನು ನಿಂತು ನೋಡಿ ಹಿಗ್ಗುತಿರೆ ಇಭರಾಜವರದ ಶ್ರೀ ರಂಗೇಶವಿಠಲನು ತ್ರಿಭುವನ ಪಾವನ ಮಾಡಿ ಸೊಬಗು ತೋರುತ 3
--------------
ರಂಗೇಶವಿಠಲದಾಸರು
ಎಷ್ಟು ದಿನದ ಪೂಜೆ ಹಿಡಿದೆಣ್ಣಾ ಸತಿಯೆಂಬ ಮಾರಿದಿ- ನ್ನೆಷ್ಟು ದಿನ ಪೂಜೆ ಮಾಡಬೇಕಣ್ಣಾ ಪ ಎಷ್ಟು ದಿನದ ಪೂಜೆ ಹಿಡಿದಿ ನ್ನೆಷ್ಟುದಿನ ಮುಂದೆ ಬಾಕಿ ಉಳಿದಿದೆ ಕಷ್ಟಕಂಜದೆ ಬಿಡದೆ ಅನುದಿನ ನಿಷ್ಠೆಯಿಂದ ಪೂಜೆ ಮಾಡುವಿ ಅ.ಪ ಒಬ್ಬರ ಮನೆ ಮುರಿದು ತರುವಿ ಅವಳಿಗೇನೆ ಹಬ್ಬಮಾಡಿ ಉಣಿಸುತಿರುವಿ ಮತ್ತು ಇನ್ನು ಒಬ್ಬರೈತರ ಬೊಬ್ಬೆ ಹೊಡೆಯುವಿ ದಬ್ಬಿ ಓಡಿಸುವಿ ಹಬ್ಬ ಹುಣ್ಣಿಮೆ ಬರಲು ವೈಭವದುಬ್ಬಿಉಬ್ಬಿವಸ್ತ್ರ ಒಡವೆ ಅಬ್ಬರದಿಂದುಡಿಸಿ ತೊಡಿಸಿ ಮಬ್ಬಿನಿಂದ ಹಿಗ್ಗುತಿರುವಿ 1 ಧನವ ತಂದು ಅವಳಿಗರ್ಪಿಸಿ ಮತ್ತು ನಿನ್ನಯ ಮನವ ಅವಳ ವಶಕೆ ಸಲ್ಲಿಸಿ ಎಂಟುಗೇಣಿನ ತನುವು ಅವಳಾಧೀನದಲ್ಲಿರಿಸಿ ಕುಣಿವಿ ಪಶುವೆನಿಸಿ ಪಾಲಿಸಿ ದಿನಗಳೆಯುವಿ ನೋಡಿಕೊಳ್ಳದೆ 2 ಬಂದಕಾರ್ಯ ಮರೆದುಬಿಟ್ಟ್ಯಲ್ಲ ಹೆಡತಲೆಮೃತ್ಯು ಹಿಂದೆ ನಿಂತು ನಲಿಯುತಾಳಲ್ಲ ಹೇ ಪಾಪಿ ನೀನು ಒಂದೂ ವಿಚಾರ ಮಾಡಿ ಅರೀಲಿಲ್ಲ ಮಂದನಾದೆಲ್ಲ ತಂದೆ ಶ್ರೀರಾಮನ್ನಂತಂಘ್ರಿಗೊಂದಿ ಭಜಿಸಿ ದಾಸನಾಗಿ ಅಂದಮಾದ ನಿತ್ಯಮುಕ್ತಿ ಪಡೆವ ಸುಸಂಧಿ ನಡುವೆ ಹೋಗುತಾದರ್ಲ3
--------------
ರಾಮದಾಸರು
ಬ್ರಹ್ಮಜ್ಞಾನ | ಬಿಡು ಬಿಡು ಬಿಡು ನೀ ಸಂಸಾರ ಧ್ಯಾನ |ಕಡೆಯಲ್ಲಿ ನಿನ್ನ ಕಳಹುವರಲ್ಲಿಗೆ | ಬಿಡದಿರು ಸದ್ಗುರುವಿನ ಧ್ಯಾನ ಪ ಯಾತಕೆ ಕಲಿತ್ಯೋ ಬಹು ಯುಕ್ತಿಗಳ | ಬರಿ ಮಾತಿಲಿ ಆಗದು ನಿಜ ಮುಕ್ತಿ | ನೀತಿಯಿಂದ ನೀ ಅರಿತು ನೋಡಲು | ಸ್ವಾತ್ಮದ ಜ್ಞಾನವು ಆಗುವದಿದಕೆ1 ಸತಿ ಸುತರಾ ನೀ ನೋಡಿ ಹಿಗ್ಗುತಿ | ಮಿತಿಯಿಲ್ಲದೆ ಅವರಿಗೆ ತಗ್ಗುತಿ | ಗತಿಯ ಕೊಡುವ ಸಂತರು ಬಂದರೆ | ಮೋತಿಯ ತಿರುವಿ ವ್ಯಸನಕೆ ತಗ್ಗುತಿ 2 ಸಾಧು ಪುರುಷರ ಸಂಗವ ಹಿಡಿಯೊ | ಬೋಧಾಮೃತವನು ನೀ ಕುಡಿಯೊ | ಆದಿಯಲಿ ಭವತಾರಕ ಭಜಕರು | ಹೋದ ಹಾದಿಯ ನೀ ಹಿಡಿಯೊ 3
--------------
ಭಾವತರಕರು
ಮಾನವ ಪ ಕುಸುಮ ಮಾಲೆಯಿತ್ತು ಪುರದೊಳು 1 ಬಿಡಲದಾರ ಕೊರಳಿನಲ್ಲಿತೊಡರಿಸಲ್ಕೆ ಅವರ ಪಟ್ಟದೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆಒಡನೆ ತನ್ನ ಕೊರಳಿನಲ್ಲಿತೊಡರಿಸುವುದ ಕಂಡು ತಿರುಕಪೊಡವಿಯಾಣ್ಮನಾದೆನೆಂದು ಹಿಗ್ಗುತಿದ್ದನು 2 ಪಟ್ಟಗಟ್ಟಲಾಗ ನೃಪರುಕೊಟ್ಟರವಗೆ ಕಪ್ಪಗಳನುನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೆಪಟ್ಟದರಸಿಯೊಳಗೆ ಸುಖವಪಟ್ಟು ಮನದಿ ಹರುಷಗೊಳಲುಪುಟ್ಟಿದವು ಹೆಣ್ಣು ಗಂಡು ಮಕ್ಕಳಾಗಲೆ 3 ಓಲಗದೊಳಗಿರುತ ತೊಡೆಯಮೇಲೆ ಮಕ್ಕಳಾಡುತಿರಲುಲೀಲೆಯಿಂದ ಚಾತುರಂಗ ಬಲವ ನೋಡುತಲೋಲನಾಗಿ ನೆನೆದು ಮನದಿಪೇಳೆ ಮಂತ್ರಿಗಳಿಗೆ ಆಗಬಾಲೆಯರನು ನೋಡಿ ಮದುವೆ ಮಾಳ್ಪೆನೆಂದನು 4 ನೋಡಿ ವರಗಳೆನುತ ಕಳುಹೆನೋಡಿ ಬಂದೆವೆನಲು ಜೀಯಮಾಡೆ ಮದುವೆ ಮಂಟಪವನು ರಚಿಸಿರೆಂದನುಗಾಢ ಸಂಭ್ರಮದೊಳು ಕೂಡಿಮಾಡಿದನವ ಮದುವೆಗಳನುರೂಢಿ ಪಾಲರೆಲ್ಲ ಕೇಳಿ ಮೆಚ್ಚುವಂದದಿ 5 ನೃಪರ ದಂಡುಮನೆಯ ಮುತ್ತಿದಂತೆ ಕಂಡುಕನಸಿನಲ್ಲೆ ದಿಗಿಲುಗೊಂಡು ಕಣ್ಣು ತೆರೆದನು 6 ನಿತ್ಯ ಸುಖವನೀವನು 7 * ಈ ಕೀರ್ತನೆ ಮುಪ್ಪಿನ ಷಡಕ್ಷರಿಯದೆಂದೂ ಪ್ರತೀತಿಯಿದೆ.
--------------
ಕನಕದಾಸ
ಹರಿದಾಸರಿಗೆ ಒಬ್ಬರ ಗೊಡವೆ ಯಾತಕೆ ಅರಿವೆ ಅನ್ನಾಭರಣ ದ್ರವ್ಯ ಸರ್ವವು ಶ್ರೀ ವರನೆ ಎಂಬ ಪ ನಿತ್ಯಾನಂದ ನಿತ್ಯಜ್ಞಾನಾನಿಮಿತ್ತ ಬಂಧು ಭಕ್ತರಿಗೆ ಇತ್ತದ್ದೆ ಸಂಪತ್ತು ಎಂದು ಕೀರ್ತಿಸುತ್ತ ನರ್ತಿಸುವ 1 ದೋಷದೂತರನೊಬ್ಬ ಪೋಷ್ಯ ಪೋಷಕಾಧಾರ ಧೇಯ ದೋಷಕಾರಿ ತ್ರೈ ಲೋಕ್ಯ ವಿಭೂಷಣ ವಿಭೂತಿದನೆಂಬ 2 ಎನ್ನ ಸ್ವಾಮಿ ಸರ್ವರಿಗೆ ಎನ್ನ ಬಿಂಬ ಎಲ್ಲರಿಗೆ ಮಾನ್ಯ ಮಾನದನು ಜಗದ್ಭಿನ್ನನೆಂದು ತುತಿಸುತಿಪ್ಪ 3 ಜನನೀ ಜನಕ ಲಕ್ಷ್ಮೀ ನಾರಾಯಣನೆ ಪುತ್ರಮಿತ್ರನೆಂದು ಕ್ಷಣಶ ಕೊಂಡಾಡುತನ್ಯರ ಗಣನೆ ಮಾಡದಿಪ್ಪ ನಿಜ4 ಹಾನಿ ಲಾಭ ಕೀರ್ತಿ ಅಪಮಾನ ಮಾನ ಪುಣ್ಯಪಾಪ ಶ್ರೀನಿವಾಸಗರ್ಪಿಸಿ ಮದ್ದಾನೆಯಂತೆ ಚರಿಸುತಿಪ್ಪ 5 ಅನಂತ ಜೀವರಿಗಿನ್ನು ಅನಾದಿ ಅನ್ನದನಾಗಿ ಅನಿರ್ವಿಣ್ಣ ನಾಮಕನೆಂದು ಸನ್ನುತಿಸಿ ಹಿಗ್ಗುತಿಪ್ಪ 6 ಸರ್ವ ಜೀವ ದೇಹಾಂತಸ್ಥ ಸರ್ವ ಜಗನ್ನಾಥ ವಿಠಲ ಸರ್ವರೂಪ ಸರ್ವನಾಮ ಸರ್ವವೇದೋದಿತನೆಂಬೊ 7
--------------
ಜಗನ್ನಾಥದಾಸರು
ಹೊನ್ನು ಹೆಣ್ಣು ಮಣ್ಣು ಮೂರನು ಬಿಟ್ಟು ಚರಿಸುವವ ಯೋಗಿ ಬಣ್ಣ ಸಣ್ಣ ಸರ್ವಾಭರಣವಿಟ್ಟು ಮೆರೆವನು ಬೋಗಿ ಪ ನಾರಿಯರದನು ಕಂಡು ಥೂ ಎಂದುಗುಳಿ ತೊಲಗುವಯೋಗಿ ಭೋಗಿ ಘೋರ ತಪವ ಚರಿಸಿ ಅಡವಿಸೇರಿ ಕೊಂಬನು ಯೋಗಿ ಭೋಗಿ 1 ಮಾಯೆಯಳಿದು ವಸ್ತುವರಿತು ಚರಿಸುತಿಹನು ಯೋಗಿ ಜಾಯೆ ಸುತರ ಸಿರಿಯ ನೆಚ್ಚಿ ಹಿಗ್ಗುತಿಹನು ಭೋಗಿ ಬಾಯ ಬಿಡದೆ ಮೌನಿಯಾಗಿ ಜಪಿಸುತಿಹನು ಯೋಗಿ ಭೋಗಿ 2 ಕುಲದಲಾವನೆಂದು ಜನಕೆ ತಿಳಿಯ ಬಾರದವನು ಯೋಗಿ ಹೊಳಲಿನೊಳಗೆ ಸುಳಿದು ಸುಳಿದು ನಲಿಯುತಿಹನು ಭೋಗಿ ಚಲನ ಭವನ ಕೋಣೆ ಲಕ್ಷ್ಮೀರಮಣನು ತಾನೆಯಾಗಿ ಒಳಗು ಹೊರಗು ಬೆಳಗುತಿಹನು ಯೋಗಾನಂದನಾಗಿ 3
--------------
ಕವಿ ಪರಮದೇವದಾಸರು