ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರ ಭಾಗ್ಯವಿದು-ಪುರಂದರ-ದಾಸರ ಭಾಗ್ಯವಿದು ಪ ತುಂಬಿ ಸೂಸುತಲಿದೆ ಅ.ಪ ಭೂಸುರ ಜನುಮದಿ ಬಂದು ಬೆಳೆದು ಉಪ- ದೇಶಗೊಂಡು ಮಧ್ವಮತ ಪೊಂದಿ ಲೇಸಾಗಿ ಭಕ್ತಿ ವಿರಕ್ತಿ ಜ್ಞಾನದ ವಿ- ಶೇಷವಾಗಿ ನಾ ಬಾಳುವದೆಲ್ಲ 1 ಸಜ್ಜನ ಸಂಗತಿ ಮಾಡಿ ದುರುಳಜನ ವರ್ಜನಗೈದು ಸತ್ಕರ್ಮಗಳ ಆರ್ಜಿಸಿ ನಾಮ ಮುದ್ರೆ ಹಗಲು ಇರಳು ನಿ ರ್ಲಜ್ಜನಾಗಿ ನಾ ಬಾಳುವುದೆಲ್ಲ 2 ಶ್ರವಣ ಕೀರ್ತನೆ ವಂದನೆ ಸ್ತೋತ್ರ ಹರಿನಾಮ ತವಕದಿಂದ ನುಡಿಯುವ ಕವನ ನವನವ ವಚನವು ಮಂತ್ರ ಸಂಕಲ್ಪವು ಸವಿದು ಸ್ಮರಿಸಿ ನಾ ಬಾಳುವುದೆಲ್ಲ 3 ಯಾತ್ರೆ ತೀರ್ಥ ದಿವ್ಯ ದಾನಧರ್ಮಂಗಳು ಕ್ಷೇತ್ರ ಮೆಟ್ಟಿ ಬಹ ಸಂಭ್ರಮವು ಮಿತ್ರರ ಕೂಡಾಡಿ ಹರಿಪರನೆಂದು ಸ- ತ್ಪಾತ್ರನಾಗಿ ನಾ ಬಾಳುವುದೆಲ್ಲ 4 ಹರಿದಿನದುಪವಾಸ ಜಾಗರಣೆ ಪಾರಣಿ ಗುರು ಹಿರಿಯರಲಿ ವಿಹಿತಸೇವೆ ಹಿರಿದಾಗಿ ಮಾಡೋಡು ಪರಿಪರಿಯಿಂದಲಿ ಹರುಷದಿಂದಲಿ ನಲಿದಾಡುವುದೆಲ್ಲ 5 ಷಡುರಸಭೋಜನ ದಿವ್ಯವಸನ ನಿತ್ಯ ಉಡುವುದು ಹೊದೆವುದು ಹಸನಾಗಿ ತಡೆಯದೆ ಜನರಿಂದ ಪೂಜೆಗೊಂಡು ಸುಖ- ಬಡಿಸುತಿರುವ ವಿಚಿತ್ರಗಳೆಲ್ಲ 6 ಮನವೆ ಹಿಗ್ಗದಿರು ಹಿಯ್ಯಾಳಿಕೆಯಿಂದ ಗುಣಿಸಿಕೊ ಸುಖವಾವುದು ಲೇಶ ನಿನಗೆ ಸ್ವತಂತ್ರ ಎಂಬುದು ಕಾಣೆನೆಂದಿಗು ಗುಣನಿಧಿ ವಿಜಯವಿಠ್ಠಲನ ಪ್ರೇರಣೆಯೆಲ್ಲ 7
--------------
ವಿಜಯದಾಸ
ನರದೇಹ ನಿತ್ಯವಲ್ಲ ನಾಳೆ ಮೃತ್ಯು ಬಿಡುವದಲ್ಲ ಪ ಮರುಳುಮನವೆ ಕೇಳು ಸೊಲ್ಲ ಹರಿಯ ಮರೆವುದುಚಿತವಲ್ಲ ಅ.ಪ ಹಿಂದಿನವರು ಪಟ್ಟಪಾಡು ಇಂದು ನೀನು ತಿಳಿದು ನೋಡು ಸಂದೇಹಗಳೀಡಾಡು ಒಂದೇ ಮನದಿ ಹರಿಯ ಕೊಂಡಾಡು 1 ಹರಿ ನಮಗನಾದಿ ಮಿತ್ರ ವರಶೋಭನ ಚಾರಿತ್ರ ಪೊರೆವದೇನು ನಮ್ಮ ಚಿತ್ರ ಕರುಣಿಸುವನು ಕಮಲನೇತ್ರ 2 ಹೊನ್ನು ಹೆಣ್ಣು ಮಣ್ಣು ಮೂರು ನಿನ್ನದೆಂದು ಹಿಗ್ಗದಿರು ಬೆನ್ನು ಹೊಡೆವರು ಯಮನವರು 3 ಏನು ಸುಖವು ಕಾಣಲೇಶ ಜೋಕೆ ಬಿಡುಬಿಡು ದುರಾಶಾ ಬೇಕು ಸುಜನರ ಸಹವಾಸ 4 ಗುರುರಾಮವಿಠಲ ಮುಕುಂದ 5
--------------
ಗುರುರಾಮವಿಠಲ
ಸಂಸಾರದೊಳು ಸುಖವಿಲ್ಲ ಪ ದುಂಡನೆ ಬಂದಿಹೆ ದುಂಡನೆ ಹೋಗುವೆ ಹೆಂಡಿರು ಮಕ್ಕಳ ನಡುವೆಯಲಿ ತಂಡ ತಂಡದಿ ಹುಟ್ಟಿ ಕೊಂಡವರು ನಚ್ಚಿ ಕೊಂಡಿವರನು ಪರಗತಿಯ ಕೆಡಿಸದಿರು 1 ಹುಟ್ಟುತ ತರಲಿಲ್ಲ ಹೋಗುತ ವೈಯೊಲ್ಲ ನಟ್ಟ ನಡುವೆ ಬಂದ ಸಿರಿಯಿದು ಕಟ್ಟ ಕಡೆಗೆ ನೀನು ಮಡಿಯಲಿ ಕರುವೆಯ ಬಟ್ಟೆಯ ಶವ ಕಿತ್ತಲಿದು ಬಳ್ಳಿತೆಂಬರು 2 ಎನ್ನಮನೆಯು ಎನ್ನತೋಟ ತುಡಿಗೆಯಿದು ದೆನುತ ಹಿಗ್ಗದಿರು ಇದರೊಳಗೊಂದು ಚಿನ್ನ ಬಾರದು ಕಾಲನವರೆಳೆದೊಯ್ವಾಗ 3 ಘಟ್ಟದ ಕೆಳಗುಷ್ಟು ಬೆಟ್ಟದ ಮರಗಾಯಿ ಹುಟ್ಟಿದ ಬಯಲ ಸೀಮೆಯ ಮೆಣಸು ಬಟ್ಟಾದ ಲವಣ ಶಾಕದ ವೋಲು ಸಂಸಾರ 4 ಜಾಣನಾದರೆ ಪರಗತಿಯ ನೀ ನೊಲುವೊಡೆ ತ್ರಾಣ ವಿರಲಿಕೆ ತೊಡಕಬಿಟ್ಟು ಕಾಣುಸಂಸಾರವ ವಿಷವೆಂದು ತ್ಯಜಿಸಿ ಗೀರ್ವಾಣವಂದಿತ ಲಕ್ಷ್ಮೀರ ಮಣನ ಮೊರೆಹೋಗು 5
--------------
ಕವಿ ಪರಮದೇವದಾಸರು
ಹಿಗ್ಗದಿರು ಹಿಗ್ಗದಿರು ಮನುಜಪಶುವೆ | ಮುಗ್ಗಿತಗ್ಗುವುದು ಮುಂದರಿಯದಲೆ ಮರುಳಾದೆ ಪ ಆಯುದಲಿ ದ್ರೋಣಸುತ ಕೃಪ ವಿಭೀಷಣನೇನೊ | ಶ್ರೇಯದಲಿ ದಶರಥ ನಹುಷನೇನೊ || ಈಯುದ್ದಕೆ ಮಯಾರ ಧ್ವಜ ಶಿಬಿ ಬಲಿಯೇನೊ | ಮಾಯಾ ಬಿಡುವಲ್ಲಿ ಜಡ ಭರಿತ ನೀನೇನೊ 1 ಶೂರತ್ವದಲಿ ಭೀಷ್ಮ ಅಭಿಮನ್ಯು ನೀನೇನೊ | ಘೋರ ತಪಸಿನಲಿ ವಿಶ್ವಾಮಿತ್ರನೇನೊ || ವಿರುಕುತಿಯಲಿ ಸುರಸೈನ್ಯ ನಾಯಕನೇನೊ | ಹಾರುವ ಬಿಂಕದಲಿ ಗರುಡ ನೀನೇನೊ 2 ಬಲದಲ್ಲಿ ಬಲರಾಮ ಶಲ್ಯ ಕೀಚಕನೇನೊ | ತಿಳಿವಳಿಕೆಯಲಿ ವಿದುರ ಸಂಜಯನೇನೊ || ಒಲಿದು ಪಾಡುವಲಿ ನಾರದ ತುಂಬುರನೇನೊ | ಛಲ ಮಾಡುವಲ್ಲಿ ಧ್ರುವರಾಯ ನೀನೇನೊ 3 ಭಕುತಿಯಲಿ ಪ್ರಹ್ಲಾದ ಪುಂಡರೀಕನೇನೊ | ಭುಕುತಿಯಲಿ ಅಗಸ್ತ್ಯ ಬಕ ನೀನೇನೊ || ಉಕುತಿಯಲಿ ಸೂತ ಸಹದೇವ ಶೌನಕನೇನೊ | ಶಕುತಿಯಲಿ ವಾಲಿ ಯಮರಾಯ ನೀನೇನೊ 4 ಶುಕ ಜನಕ ಸನಕಾದಿಗಳೇನೊ | ಕರ್ಣ ನೀನೇನೊ || ಭೋಗ ಬಡುವಲ್ಲಿ ಮಹಾಭಾಗ ಇಂದ್ರನೇನೊ | ವೇಗದಲಿ ಪುರುಷ-ಮೃಗನು ನೀನೇನೊ 5 ಸಖತನ ಮಾಡುವಲ್ಲಿ ಶ್ವೇತವಾಹನನೇನೊ | ನಿಖಿಳ ಕಥೆ ಕೇಳುವಲ್ಲಿ ಪರೀಕ್ಷಿತನೇನೊ || ಅಖಿಳರನು ಗೆಲುವಲ್ಲಿ ಕಾರ್ತವೀರ್ಯನೇನೊ | ಸುಖದಲ್ಲಿ ಇಪ್ಪದಕೆ ಪವನ ನೀನೇನೊ 6 ವಿತ್ತದಲಿ ನೀನು ವೈಶ್ರವಣನೇನೊ | ಮತ್ತೆ ಕ್ಷಮೆಯಲಿ ಹರಿಶ್ಚಂದ್ರನೇನೊ | ಭೃತ್ಯತನ ಪಡೆವಲ್ಲಿ ಅಕ್ರೂರ ನೀನೇನೊ | ಸುತ್ತವಲಿ ಪ್ರಿಯವ್ರತ ರಾಯನೇನೊ 7 ವ್ರತದಲ್ಲಿ ಅಂಬರೀಷ ರುಕುಮಾಂಗದನೇನೊ | ಸ್ತುತಿಯಲ್ಲಿ ಮುಚುಕುಂದರಾಯನೇನೊ || ಅತಿ ಚೆಲುವತನದಲ್ಲಿ ಮನ್ಮಥ ನಕುಲನೇನೊ | ಕ್ರತು ಮಾಡುವಲ್ಲಿ ಧರ್ಮಪುತ್ರ ನೀನೇನೊ8 ಶಾಪಗಳ ಕೊಡುವಲ್ಲಿ ಬ್ರಹ್ಮಪುತ್ರನೇನೊ | ತಾಪ ತೋರುವಲ್ಲಿ ರವಿ ಅನಳನೇನೊ | ಕೋಪ ಮಾಡುವಲ್ಲಿ ಗಿರಿಜಾರಮಣನೇನೊ | ತಾಪಸಿರ ನಡುವೆ ವಸಿಷ್ಠ ನೀನೇನೊ9 ಉನ್ನತದಲಿ ನೀನು ಮೇರು ಪರ್ವತನೇನೊ | ಘನ ಮದದಲಿ ಧೃತರಾಷ್ಟ್ರನೇನೊ || ಇನ್ನು ಮತಿಯನ್ನು ಕೊಡುವಲಿ ಗಜಮೊಗನೇನೊ | ಮುನ್ನೆ ಕವನದಲ್ಲಿ ಶುಕ್ರದೇವನೇನೊ 10 ಹಮ್ಮಿನಲಿ ಬಾಳದಿರು ಹಿತವಾಗದೊ ನಿನಗೆ | ಆ ಮಹಿಮರ ಸರಿ ನೀನಲ್ಲವೊ || ಸಿರಿ ವಿಜಯವಿಠ್ಠಲರೇಯನ್ನ | ನೆಮ್ಮಬೇಕಾದರೆ ಸೋಹಂ ನಿರಾಕರಿಸು11
--------------
ವಿಜಯದಾಸ
ಹರಿಕೃಷ್ಣಾಚ್ಯುತ ಗೋವಿಂದ -ವಾಸುದೇವ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನರಹರಿ ಎನಬಾರದೆ ? ಪ.ಉದಯಕಾಲದಿ ಏಳುತ - ಸಿರಿಯರಸನ |ಒದಗಿ ಸೇವೆಯ ಮಾಡುತ ||ತದನಂತರ ಭೋಜನದಲಿ ಸ್ಮರಿಸುತ |ಮದಗಜಗಮನೆಯೊಳ್ ಸರಸÀವಾಡುತಲೊಮ್ಮೆ 1ಸಿರಿ ಬಂದಡಸಿದಾಗ - ಮೆರೆಯದಿರು |ಹಿರಿ ಹಿರಿ ಹಿಗ್ಗದಿರು ||ನೆರೆ ಬಡತನಕೆ ಜರ್ಜರಿತನಾದೆ ನೀನು ?ಹರಿನಾಮಸ್ಮರಣೆಯ ಮರೆಯದಿರೆಲೊ ಮನುಜ 2ದುಷ್ಟರುಪದ್ರದೊಳಾಗಲಿ - ರಣರಂಗದ |ದಿಟ್ಟ ಸಮರದೊಳಾಗಲಿ ||ಕಟ್ಟಾರಣ್ಯದೊಳು ಹುಲಿಯು ಬಾಧಿಸುತಿರೆ |ಸೃಷ್ಟಿಗೊಡೆಯ ಪುರಂದರವಿಠಲ ಕಾಯ್ವ 3
--------------
ಪುರಂದರದಾಸರು