ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮ್ಮನ ತೊಡೆಯ ಮೇಲೆ ನಮ್ಮ ಕೃಷ್ಣ ಸುಮ್ಮನೆ ಮಲಗಿಹನು ಪ ಸುಮ್ಮೊನದಿ ಸುಖದಿಂ ನಲಿದಾಡುತ ಅ.ಪ ಮಣ್ಣ ಮೆದ್ದುದ ಕಂಡು ಗೋಪಿದೇವಿ ಚಿಣ್ಣನ ಬಾಯಿನೋಡೆ ಕಣ್ಣಿಗೆ ಬ್ರಹ್ಮಾಂಡ ತೋರಿಸಿದಂಥ ಪರಬ್ರಹ್ಮ 1 ತರಳ ತರಲೆ ಮಾಡೆ ತಾಯಿಯು ಹೊರಳೆಗೆ ಕಟ್ಟಲಾಗಿ ಸುರತರುಗಳ ಮುರಿದು ನಿಜತರವ ಗೈದ ನಿತ್ಯಾತ್ಮ 2 ಕಾಲಲೊದೆದು ಕೊಂದು ಧಾತಾ ದೇವೇಂದ್ರರ ಶಿರಬಾಗಿಸಿದ ಪೂತಗುಣ 3 ಹಾಲುಕೊಡೆನೆ ಬಾಲ ಸಂಜೆಗೆ ಹಸುವ ಕರೆವೆನೆನಲು ಲೀಲೆಯಿಂ ಕಣ್ಣ ಮುಚ್ಚಿ ಕತ್ತಲೆ ಕವಿಸಿದ ದೈವ 4 ಗೋಪೀಜನಗಳೊಡನೆ ಗೋಪಾಲನು ಸ್ತ್ರೀಲೋಲನಾಗಿ ಕುಣಿದು ರಥಾಂಗಪಾಣಿ 5 ನವನೀತ ಚೌರ್ಯಮಾಡಿದ ನಾರೀಜನರ ವಸ್ತ್ರಾಪಹರ ಗೈದ ಅವನೀಭಾರವ ಕಳೆದ ಮಾಯಾಮೂರ್ತಿ ದೇವಶಿಖಾಮಣಿ6 ಭೂಮಿಪಾಲನೆ ಮಾಡಿದ ಹಿಂಸಕರ ವಂಶವಳಿಪ ಹಂಸಲೋಲ ಜಾಜಿಶ್ರೀಶ 7
--------------
ಶಾಮಶರ್ಮರು
ತುಂಗಭದ್ರೆ ಸುತರಂಗಿಣಿ ತೀರಗನ್ಯಾರೇ ಪೇಳಮ್ಮಯ್ಯ ಪ ಮಂಗಳ ಮಹಿಮ ಶುಭಾಂಗ ಮೂರುತಿ | ಶ್ರೀ ಹರಿಹರ ಇವ ಕಾಣಮ್ಮ ಅ.ಪ. ಬಹು ಕಂಟಕಿ ಆ ಗುಹನ ತಪಸಿಗೆ | ಮೆಚ್ಚಿದ ಹರ ನೋಡಮ್ಮಮ್ಮ |ಅಹಿ ಭೂಷಣ ತಾ ವರವನು ಕೊಟ್ಟನು | ಬಹು ಬೇಗನೆ ನೋಡಮ್ಮಮ್ಮ|ವಿಹಗವಾಹ ಹರಿ ಮತ್ತೆ ರುದ್ರನಿಂ | ಇವನ ಜೇಯ ನೋಡಮ್ಮಮ್ಮ |ಮಹಿಯೊಳು ಸುರರಾಹವ ಕೆಡಸುತ | ಬಹು ಹಿಂಸಕ ನೋಡಮ್ಮಮ್ಮ 1 ಸುರಲೋಕಕು ಈ ಅಸುರನ ಬಾಧೆಯು | ತಟ್ಟಿತು ನೋಡಮ್ಮಮ್ಮ |ಸುರ ಭೂಸುರರೆಲ್ಲರು ಮೊರೆಯಿಟ್ಟರು | ಹರಿಯಲಿ ನೋಡಮ್ಮಮ್ಮ |ಸಿರಿಯರಸನು ತಾನಭಯವನಿತ್ತವರನು | ಕಳುಹಿದ ನೋಡಮ್ಮಮ್ಮ | ಕರುಣಾಕರ ತಾ ಹರಿಹರ ರೂಪದಿ | ದುರುಳನ ತರೆದ ನೋಡಮ್ಮಮ್ಮ 2 ಕೃತ್ತಿವಾಸ ತಾ ನಿತ್ತ ವರವ ಹರಿ | ಪಾಲಿಸಿದನು ನೋಡಮ್ಮಮ್ಮ | ದಿತಿಸುತನಾಯುವು ದಶಶತಕಳೆಯಲು | ವತ್ತಿದ ಕೆಳಗವನಮ್ಮಮ್ಮ |ಹಿತದಿಂದಲಿ ತಾ ಭಕುತರ ಪೊರೆಯುವ | ಹರಿಹರನ ನೋಡಮ್ಮಮ್ಮ | ದೈತ್ಯನ ಪೆಸರಿಲಿ ಪಾವನವಾಯಿತು | ಈ ಕ್ಷೇತ್ರವು ಕಾಣಮ್ಮಮ್ಮ 3 ದಕ್ಷಿಣ ಪಾಶ್ರ್ವದಿ ಅಭಯ ಹಸ್ತ | ತ್ರಿಶೂಲ ಧರನ ನೋಡಮ್ಮಮ್ಮ | ಅಕ್ಷಿಯ ಮಾನಿಯು ದಕ್ಷಿಣ ಶಿರದಲಿ | ಮೆರೆಯುವನು ನೋಡಮ್ಮಮ್ಮ | ದಕ್ಷಸುತೆಯು ತಾ ವಿರೂಪಾಕ್ಷನ | ಸೇವಿಪಳೂ ನೋಡಮ್ಮಮ್ಮ |ಪಕ್ಷಿವಾಹಗೆ ತಾನರ ಮೈಯ್ಯಾದನು | ತ್ರ್ಯಕ್ಷನು ಕಾಣಮ್ಮಮ್ಮ 4 ಕಂಬು | ಧರನಾ ನೋಡಮ್ಮಮ್ಮ ಲಕ್ಷ್ಮೀವನಿತೆಯು ಕಾಮನ ಜನಕನ | ಸೇವಿಪಳೂ ನೋಡಮ್ಮಮ್ಮ ಶುಮಲಾಂಗ ವನಮಾಲೆಗಳನು | ಧರಿಸಿಹ ನೋಡಮ್ಮಮ್ಮ |ಸಾಮಸನ್ಮುತ ಗುಣಧಾಮನ ಲೀಲೆ | ಇದೆಲ್ಲವು ಕಾಣಮ್ಮಮ್ಮ 5 ಕ್ರೋಶ ಪಂಚ ನಾಲ್ಕಾರದಿ ಮೀಸಲು | ಸುಕ್ಷೇತ್ರವ ನೋಡಮ್ಮಮ್ಮ | ಭಾಸಿಸುವವು ಇಲ್ಲೆಕಾದಶ ವರ | ತೀರ್ಥಂಗಳು ನೋಡಮ್ಮಮ್ಮ | ಈ ಸುಕ್ಷೇತ್ರವು ಆ ಮಹಕಾಶಿಗೆ | ಸಮವೆನಿಸಿದೆ ನೋಡಮ್ಮಮ್ಮ |ಅಸಮ ಮಹಿಮ ಹರಿ ಅಸುರಗೆ ಕೊಟ್ಟನು | ಈ ಪರಿವರ ಕಾಣಮ್ಮಮ |6| ಕೃತಿ ವಿಧಿ ಜನಕನಿಗೂ | ಭೇದವೆ ಸರಿ ಕೇಳಮ್ಮಮ್ಮ ಮೋದಮಯ ಗುರು ಗೋವಿಂದ ವಿಠಲನ | ಲೀಲೆಗಳಿವು ಕಾಣಮ್ಮಮ್ಮ 7
--------------
ಗುರುಗೋವಿಂದವಿಠಲರು
ನಿನ್ನವರ ಧರ್ಮ ವಿಹಿತವಾಗುವುದು ಮ ತ್ತನ್ಯರಾಚರಿಸಿದ ಧರ್ಮ ಅಧರ್ಮ ಪ ಕಡಲ ಮಥನದಲಿ ಕಪರ್ದಿ ಕಾಳಕೂಟ ಕುಡಿಯಲು ಕಂಠಭೂಷಣವಾಯಿತು ಒಡನೆ ರಾಹು ಕೇತು ಸುಧೆಯ ಪಾನದಿಂದ ಮಡಿದರೆಂದು ಮೂರ್ಲೋಕವೇ ಅರಿಯೆ 1 ಬಲಿನಿನ್ನ ಮುಕುಟ ಕದ್ದೊಯ್ಯ ಪಾತಾಳಕೆ ಸಲೆ ಭಕ್ತನೆಂದು ಬಾಗಿಲ ಕಾಯ್ದೆ ಇಳೆಯೊಳು ಸುರರಿಗೆ ಗೋ ಭೂ ಹಿರಣ್ಯವಿತ್ತಾ ಖಳ ಜರಾಸಂಧನ ಕೊಲಿಸಿದೆ ಹೋಗಿ 2 ಪತಿವ್ರತ ಧರ್ಮದಿ ಮೃತರಾದ ತ್ರಿಪುರರ ಸತಿಯರು ಶಿವನಿಂದ ಹತರಾದರು ಸತಿ ಉಡುಪ ಪತಿಯಿಂದಲಿ ನಿತ್ಯ ಸೇವೆಯೊಳಿರುವಳು 3 ಮೇದಿನಿಯೊಳು ಪ್ರಾಣಿ ಹಿಂಸಕನೆನಿಸಿದಾ ವ್ಯಾಧನ ಯಮಿಕುಲೇಶನ ಮಾಡಿದೆ ವೇದೋಕ್ತ ಕರ್ಮವಾಚರಿಸಿದ ಜಿನನೊಳ್ ಪ್ರಾದುರ್ಭೂತನಾಗಿ ಕೆಡಹಿದೆ ತಮಕೆ 4 ಪರಾಶರನು ಸತ್ಯವತಿಯ ಸಂಬಂಧಿಸೆ ಶ್ರೀರಮಣ ನೀನವತರಿಸಿದಲ್ಲಿ ಭವ ಸರೋಜ ಕನ್ನಿಕೆಯಸಾರಲು ಬಿಡುವ ಜಗನ್ನಾಥ ವಿಠಲ 5
--------------
ಜಗನ್ನಾಥದಾಸರು
ಪೀತಾಂಬರಧರ ನಮೋನಮೋ ವನ ಜಾತಾಂಬಕ ತೇ ನಮೋ ನಮೋ ಪ ಖ್ಯಾತ ಚರಿತ್ರ ವಿಧಾತೃಜನಕ ಪುರು - ಹೂತ ಸಹೋದರ ನಮೋ ನಮೋ ಅ.ಪ ಪಾರ್ಥೋನಿಧಿಶಯ ನಮೋ ನಮೋ ಶ್ರೀ ತರುಣೀಪ್ರಿಯ ನಮೋ ನಮೋ 1 ಶ್ಯಾಮಳನೀರದ ಕೋಮಳದೇಹ ನಿ ರಾಮಯ ನಿರ್ಮಲ ನಮೋ ನಮೋ ಕಾಮಜನಕ ಬಲರಾಮ ಸಹಜ ಸಂ ಗ್ರಾಮಮುಜ್ವಲ ನಮೋ ನಮೋ 2 ಸುಂದರ ನಮೋ ನಮೋ ಕುಂದರದನ ಶರದಿಂದುವದನ ಗೋ ವಿಂದ ಜನಾರ್ಧನ ನಮೋನಮೋ 3 ಶಂಸ ವಿಹಿಂಸಕ ನಮೋ ನಮೋ ಸಂಸರದಘ ವಿಧ್ವಂಸಕ ಪರಮ ಹಂಸೋತ್ತಂಸಕ ನಮೋ ನಮೋ 4 ಗರುಡಗಮನ ತೇ ನಮೋ ನಮೋ ವರದವಿಠಲ ತೇ ನಮೋ ನಮೋ 5
--------------
ವೆಂಕಟವರದಾರ್ಯರು
ದಾತೆಇಂದಿರೆಪಾರಿ| ಜಾತ ಮಂದಿರೆ ಲೋಕ |ನಾಥೆ ಸುಖ ಪೂರ್ಣೆ ವಿಖ್ಯಾತೆ ||ಬಿನ್ನವಿಸುವೆನೆ ಯನ್ನಮಾತು ಮನ್ನಿಪುದೇ ವಿಧಿಮಾತೆ ಪಪಾನೀಯಧಿ ಹರಿಗೆ | ಏನು ಕೊಟ್ಟನೊ ನಿನ್ನ |ಕಾಣಿಸವೆ ಕಣ್ಣು ಕುಲವಿಲ್ಲ ||ಗೋತ್ರವಿಲ್ಲ ಹೆತ್ತವರ-ಕ್ಷೋಣಿಯೊಳಗೊಬ್ಬರರಿತಿಲ್ಲ1ಏನು ಮರುಳಾದೆವ್ವ | ಶ್ರೀನಾರಿಯಿಂಥವಗೆ |ಹೀನಳುಚ್ಛಿಷ್ಟ ಫಲಮೆದ್ದ ||ಬಡ ಬ್ರಾಹ್ಮಣೊದ್ದರೆಮಾನವೇ ಇಲ್ಲಿ ನಗುತಿದ್ದ2ಥವ ಚೋರ ಬಹುಜಾರ| ಸವತಿಯರು ಬಲು ಮಂದಿ |ಅವರಿಗಾತ್ಮಜರು ಹತ್ತತ್ತು ||ನಿನ್ನೊಗತನದೊಳಿದ್ದಅವಿವೇಕ ಮೂಲೋಕಕೆ ಗುರುತು3ಅತ್ತೆ ಮಾವಗಳಿಲ್ಲ |ವೃತ್ತಿಕ್ಷೇತ್ರಗಳಿಲ್ಲ |ಹಸಿದರನ್ನಿಲ್ಲ ಮನೆಯಲ್ಲಿ ||ಈ ಗಂಡನೊಡನೆಯೇ-ನರ್ಥಿ ಪಡುತಿಹೆಯೆ ನೀ ಬಲ್ಲೆ 4ಸೇರಿದನುಪತಿನಿನ್ನ | ತೌರು ಮನೆ ನೋಡಲ್ಕೆ |ಧಾರಿಣಿಯೊಳಗೆ ಬಹು ನಿಂದಾ ||ಭಕ್ತಿಯಿಂದವನ ಹ್ಯಾ-ಗಾರಾಧಿಸುವದೋ ಸುರವೃಂದಾ 5ಶಿಶು ಹಿಂಸಕತಿ ಕಠಿಣ | ಹಸನ್ಮುಖನಲ್ಲರ್ಭಕ ಹೆಂ- |ಗಸರಳಿದ ಪುಕ್ಕಾ ಬಹು ಠಕ್ಕಾ ||ಕಲಹಗಂಟೇನು ಸೇ-ವಿಸಿದ್ಯೊ ವ್ರತಗಳನು ಇವ ಸಿಕ್ಕಾ6ಎಲ್ಲೆಲ್ಲಿ ನೋಡಿದರು | ಇಲ್ಲಿ ಪ್ರಾಣೇಶ ವಿ- |ಠಲನಂಥವರೂ ಏನೆಂಬೆ ||ಮುದದಿಂದ ಬಿಡದೆ ಅವ-ನಲ್ಲಿ ಪೊಂದಿರ್ಪೆ ಜಗದಂಬೆ 7
--------------
ಪ್ರಾಣೇಶದಾಸರು
ವೆಂಕಟಾಚಲ ವಾಸ ವಂದಿಪೆನೋ ತವ ಪದ |ಪಂಕಜವ ನಿರ್ದೋಷ ವಾರಾಶಿಜಾದ್ರುಹಿಣ|ಶಂಕರ ಪ್ರಮುಖ ಪೋಷ ಶ್ರೀ ಶ್ರೀನಿವಾಸ ಪವೆಂಕಟ ಗದಾ ಸುದರುಶನವಿಜಯ|ಅಂಕಿತನೆಗಾಂಗೇಯಚೈಲತ- |ಳಂಕ ನನುಜ ಪಾಲಿಪುದು ಯನ್ನ ಮೀ |ನಾಂಕ ಜನಕ ಶಶಾಂಕ ಭಾಸ ಅ.ಪ.ಸ್ವಾಮಿ ಹೇ ನಿರಪೇಕ್ಷಝಷಕೂರ್ಮವರಾಹ|ಹೇಮಕಶ್ಯಪು ತೀಕ್ಷವಟುಭೃಗು ಕುಲೋದ್ಭವ ||ರಾಮ ಪಾಂಡವಪಕ್ಷ ತ್ರಿಪುರಾರಿ ಕಲ್ಕಿ |ಭೀಮವಂದಿತ ತ್ರ್ಯಕ್ಷಸಖವ್ರತತಿಜಾಕ್ಷ ||ಕಾಮಿತಪ್ರದ ಕೈರವದಳಶ್ಯಾಮಸುಂದರ ಕೋಟಿಮಾರಸು- |ಧಾಮಪ್ರಿಯ ಭಯವಿಪಿನವಹ್ನಿಸು ||ತ್ರಾಮ ನಂದನ ಪ್ರಾಣರಕ್ಷಕ |ಭೂಮಿಯೊಳು ದುರುಳರಿಪು ಸಾಲಿ ||ಗ್ರಾಮ ಮಂದಿರ ಲಕುಮೀ ಮನೋಹರ |ಸಾಮಜೇಂದ್ರನ ಪೊರೆದ ಸಹಸ್ರನಾಮ ಕಾಳೀಮದಾಹ ದೇವತ್ರ ||ಈಮಾಯಾತೃಣಕಾಷ್ಠಾದಿ ವ್ಯಾಪುತ |ಚಾಮೀಕರಭೂಷಣ ಶೋಭಿತ ||ಹೇಮಾಚಲ ಮಂದಿರ ಮುನಿಗಣಸೋಮಾರ್ಚಿತ ಕರುಣಿಸು ತ್ವರ್ಯಾ 1ನೀರಚರನಗಧರಕಿಟಿನೃಹರಿ ವಾಮನ |ಧರಣಿಪ ಸಂಹರ ಕೋದಂಡಕರ ಸ- ||ತ್ಯಾರಮಣಅಂಬರವರ್ಜಿತ |ತುರಂಗಮವೇರಿಕುಂಭಿಣಿಭಾರವಿಳುಹಿದ ಉದಾರ ||ಪರಾಶರ ಸುತ ಕಪಿಲರೂಪಿ ಸ- |ಮೀರ ವಂದ್ಯ ಅನಸೂಯವರಕುಮಾರ ಪು- ||ಷ್ಕರ ಕೇಶನನುಜ ಮಂದಾರನತ ಜನವಿಶ್ವ|ಧರಣ ಶರೀರವ್ಯೋಮಸಂತ್ಪತಿ ನಘ ತು- ||ಷಾರ ಗಣ ವೈದುವರೊ ನಿನ್ನಯಾ |ಪಾರಮಹಿಮೆಯ ತಿಳಿಯಲಾರರುನೀರಜಾಕ್ಷ|| ಯ ||ಪಿತಾಮಾತಾ ಮಹಿಮಯ ||ಕ್ಕಾರಿಂದೊಶ ಅಗ್ನಿಭಯ ನಿವಾರಣ ||ಸಾರೆಗರೆದು ಪೂರೈಸಭಿಲಾಷೆಯ |ಘೋರಿಸುತಿಹ ತಾಪತ್ರಯ ಬಿಡಿಸೊ ರ- |ಮಾರಮಣನೇ ಪ್ರಣತಾರ್ಥಿ ಪರಿಹರ 2ವೇದೋದ್ಧರಕೂರ್ಮಈ ಕ್ಷಿತಿಯ ಮಾಯದಲೊ- |ಯ್ದದುರ್ಮತಿ ಭರ್ಮ ಲೋಚನರತರಳಪ್ರ- ||ಹ್ಲಾದ ವರದ ಸುಕರ್ಮಸ್ಥಿತ ಮಾತೃಹಿಂಸಕ |ನಾದ ನಿರಶ ಸುಶರ್ಮ ಪ್ರಮುಖರನ ಮರ್ಮ ||ಭೇದಿಸೇಳಿದ ಭೈಷ್ಮೀವಲ್ಲಭ|ಶ್ರೀದಬುದ್ಧಖಳಕುಲಭಂಜನ||ಬಾದರಾಯಣನಿಗಮವೇದ್ಯನೆ |ಮೋದಮಯ ಪ್ರಾಣೇಶ ವಿಠ್ಠಲ ||ಕಾದುಕೋ ನಿನ್ನವರನು ಎಂದಾದಿಮಧ್ಯ |ವಿದೂರ ಯನ್ನ ವಿಷಾದಗುಣಗಳೆಣಿಸದೆ ಕುಬುಜೆಗೆ ||ಮೋದತೋರಿದ ದೀನಬಂಧು |ಶ್ರೀಧರಕೌಸ್ತುಭವಕ್ಷಸ್ಥಳ ||ದ್ವಾದಶವಪು ಸನ್ನಿಭ ನಿನ್ನಯ ಕ್ರೋಧಿಗಳೊಳು ಸ್ನೇಹವ ಪುನರಪಿ |ಮೇದಿನಿಯೊಳು ಜನ್ಮವ ಕೊಡದಿರು 3
--------------
ಪ್ರಾಣೇಶದಾಸರು