ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿತ್ತಗೊಟ್ಟು ಸಿರಿಕೃಷ್ಣ ಕಾಯಿ ಕಂಡ್ಯ ಪ ಮತ್ತೊಬ್ಬ ನಾನಲ್ಲ ನಿನ್ನ ಭೃತ್ಯರ ಭೃತ್ಯಅ.ಪ ಕಾಲನವರ ಮುನ್ನ ಮುಂಚೂಣಿ ದಾಳಿಗೆಕೀಳು ಮನಮಂತ್ರಿ ಮೂಲೆಯ ಪೊಗಲುಮೂಲ ಬಲದಾಳಿಗೆ ಮುರಿದು ನಾನೋಡಲುಕಾಲಗೆಟ್ಟು ನಾನಿಹ ಕಾಲದಲ್ಲಿ 1 ಪಿತ್ತವೆಂಬ ಕಿಚ್ಚು ವಾತಕೂಡ್ಹೆಚ್ಚಿತುಹತ್ತಿಕೊಂಡು ದೇಹಪುರ ಸುಡುವಾಗಮತ್ತೆ ಶ್ಲೇಷ್ಮವು ಕೂಡಿ ಸುತ್ತು ಮುತ್ತೆಳೆವಾಗಎತ್ತ ಹೋಗಲೆಂಬ ಸಂಕಟದೊಳಗೆ 2 ತಿಂದೋಡಿ ಬಂಧುಗಳೆಲ್ಲ ಕೈಬಿಟ್ಟರುಮುಂದೆಮದೂತರು ಬಂದು ನಿಂದಾಗಎಂದಿಗಾದರು ಒಮ್ಮೆ ನೆನೆದುದ ಕೈಗೊಂಡುಹಿಂದಿಟ್ಟುಕೊಂಡೆನ್ನ ಕಾಯಿ ಕಂಡ್ಯ ಕೃಷ್ಣ3
--------------
ವ್ಯಾಸರಾಯರು
ನೊಂದೆ ನಾನಾವಿಧದಲೀ ಬಂದ ಜನ್ಮಾವಧಿಯಲಿ ತಂದೆ ತಾಯಿ ಬಂಧು ಬಳಗ ಎಲ್ಲರೂ ನೀನೇ ಪ ಮಂದರಧರನೇ ಬೇಲೂರ ಚೆನ್ನಿಗರಾಯ ಹಿಂದಿಟ್ಟುಕೊ ಮುರಹರ ಸ್ವಾಮೀ ಅ.ಪ ಕುಕ್ಷಿಯೊಳೀರೇಳು ಲೋಕವನು ತಾಳ್ದನೇ ಪಕ್ಷಿವಾಹನಮೂರ್ತಿ ಮತ್ಸ್ಯಾವತಾರನೇ ಅಕ್ಷಯಾಗೆಂದು ದ್ರೌಪದಿಯ ಅಭಿಮಾನವನು ರಕ್ಷಿಸಿದ ಕೃಷ್ಣ ನೀನೆ ಸ್ವಾಮಿ 1 ಚಿಕ್ಕಂದು ಮೊದಲು ನಿನ್ನನು ನೆನೆವ ಬಾಲಕನಾ ಕಕ್ಕಸದ ಬಾಧೆಯಲಿ ಮೂದಲಿಪ ಹಿರಣ್ಯಕನಾ ಸೊಕ್ಕುಗಳ ಮುರಿದವನ ಕರುಳ ಮಾಲೆಯನಿಟ್ಟ ¨Àಕ್ತವತ್ಸಲನು ನೀನೇ ಸ್ವಾಮಿ 2 ಕರಿಕಂಠ ಹರನು ದಾನವನ ತಪಸಿಗೆ ಮೆಚ್ಚಿ ಅರಿತು ಅರಿಯದ ತೆರದಿ ಉರಿಹಸ್ತವನು ಕೊಡಲು ತರುಣಿ ರೂಪಿಲಿ ಪರಿಹರಿಸಿ ಭಸ್ಮಾಸುರನಾ [ಉರಿಸಿ]ಗೆಲಿದ ದೇವರದೇವಾ ಸ್ವಾಮಿ3 ಅಂದು ಮರೆಹೊಕ್ಕ ವಿಭೀಷಣಗೆ ರಾಜ್ಯವನು ಸಂದೇಹವಿಲ್ಲದಂದದಲಿ ಪಾಲಿಸಿ ನರನಾ ಮುಂದೆ ಸಾರಥಿಯಾಗಿ ರಥವ ನಡಸಿದ ಗೋ ವಿಂದ ಸಲಹಯ್ಯ ಯೆನ್ನನೂ [ಸ್ವಾಮಿ] 4 ದೇಶದೇಶದೊಳತ್ಯಧಿಕ ಕಾಶಿಗಿಂ ಮಿಗಿಲು ಭೂಸ್ವರ್ಗವೆನಿಪ ವೇಲಾಪುರವಾಸಾ ಕೇಶವ ಶ್ರೀವೈಕುಂಠ ಚೆನ್ನಿಗರಾಯಾ ಶೇಷಶಯನನೇ ಕರುಣಿಸೈ ಸ್ವಾಮೀ 5
--------------
ಬೇಲೂರು ವೈಕುಂಠದಾಸರು
ಬಂದನು ರಘುವೀರ ರಣಧೀರ ಪ ತಡೆ ಭರತನೆ ಮುಂದಡಿಯಿಡಬೇಡ ದುಡುಕಿ ಬೀಳದಿರು ಬಡಜನ ಮುಖಕೆ 1 ಸೀತಾನಾಥನ ದೂತನಾದೆನ್ನ ಮಾತನು ಕೇಳು ಆತುರಪಡದೆ 2 ಭ್ರಾತನ ನೋಡಲು ಕಾತರನಾಗಿ ವಾತವೇಗದೊಳು ಆತನು ಬರುತಿಹ 3 ಅದೊ ನೋಡದೊ ನೋಡದರ ದೆಶೆಯಲಿ ವಿದುಶತಕಿಲ್ಲದಗದಿರದದ್ಯುತಿಯ 4 ಅದೊ ಪುಷ್ಪಕವು ಅದರ ಪ್ರಭೆ ನೋಡು ಅದರಿರವ ನೋಡು ಒದಗಿ ಬರುತಿದೆ 5 ಧಾಮ ಮಧ್ಯೆ ನಿ ಸ್ಸೀಮ ನಿಮ್ಮಣ್ಣ ರಾಮನ ನೋಡು 6 ವಾಮದಿ ಸೀತಾಭಾಮೆ ಕುಳ್ಳಿಹಳು ಪ್ರೇಮದಿ ಲಕ್ಷ್ಮಣ ಚಾಮರ ಬೀಸುವ 7 ಬಲದಿ ಸುಗ್ರೀವ ನೆಲೆಸಿಹ ನೋಡು ಕೆಲದಿ ವಿಭೀಷಣ ನಲಿಯುತ ನಿಂತಿಹ8 ಅಂಗದ ತನ್ನಯ ಜಂಘೆಲಿ ದೇವನ ಮಂಗಳ ಚರಣವ ಹಿಂಗದೆ ಸೇವಿಪ 9 ವೃದ್ಧ ಜಾಂಬವ ಗದ್ದುಗೆ ಮುಂದಿಹ ಯುದ್ಧ ಪ್ರವೀಣರು ಸಿದ್ಧರಾಗಿಹರು 10 ಉಳಿದ ಕಪಿ ದನುಜ ದಳಗಳು ಹಿಂದೆ ಕಲಕಲ ಮಾಡುತ ಉಲಿಯುತಲಿಹವು 11 ಅರರೆ ವಿಮಾನವು ತಿರುಗಿತು ನೋಡು ಧರಣಿಗೆರಗುತಿದೆ ಭರದೊಳು ನೋಡು 12 ಭಳಿರೇ ರಾಮನು ಇಳಿದನು ನೋಡು ಕಳವಳವೆಲ್ಲವ ಕಳೆಯುತ ನೋಡು 13 ಬಂದನು ಅದಕೊ ಬಂದೇ ಬಂದನು ಇಂದುಮುಖಿಯ ತಾ ಹಿಂದಿಟ್ಟುಕೊಂಡು14 ಮುಂದೆ ಬರುವ ಕಪಿಯನು ಉಳಿದು ಸುಂದರ ಮುಖವು ಕುಂದಿದೆ ನೋಡು 15 ನಡೆದು ಬರುತಿಹ ಮಡದಿಯೊಡಗೂಡಿ ತಡಮಾಡದಿರು ಪೊಡಮಡು ಪೋಗು 16 ಇಂತು ನುಡಿದು ಧೀಮಂತನಾದ ಹನು- ಮಂತ ಚಿಗಿದು ಖಗನಂತೆ ಬಂದಿಳಿದ17 ವಾತಸುತನ ಸವಿಮಾತಲಿ ಭರತನು ಪ್ರೀತಿಲಿ ತಿರುಗಿದನಾತುರದಿಂದ 18 ನೋಡುತ ರಾಮನ ಓಡುತ ಬಂದೀ ಡಾಡಿದ ತನುವ ಬಾಡಿದ ಮುಖದಿ 19 ಅನುಜನ ನೋಡಿ ದನುಜಾರಿಯಾಗ ಮನ ಮರುಗಿದ ಬಲು ಕನಿಕರದಿಂದ 20 ರಂಗೇಶವಿಠಲ ಕಂಗಳ ಜಲದೊಳು ಮಂಗಳಯುತನಾಲಿಂಗನಗೈದ 21
--------------
ರಂಗೇಶವಿಠಲದಾಸರು
ಶ್ರೀಹರಿ ಸ್ತವನ ಅರ್ಜುನಗಾನಂದಾ ಮಾಡಿದ ಗೋವಿಂದಾ ಪ ರಥದಿ ಮಂಡಿಸಿ ಚತುರತನದಲಿಂದಾ ಚತುರ ಹಸ್ತದಿಂ ವಾಜಿಯಂ ಪಿಡಿದು ರಥಕನ ಬೆನ್ಹಿಂದಿಟ್ಟುಕೊಂಡು ಸಾ- ರಥಿಯು ತಾನೆ ಅಶ್ವವ ನಡಿಸುತಲಿ ರತಿಪತಿಪಿತನತಿಚಮತ್ಕಾರದಿಂ ಪೃಥಿವಿಯ ಮೇಲೆ ನರನಟನ ತೋರುತಲಿ ಪತಿತ ಪಾವನನು ಫಲ್ಗುಣ ಸಖನು ನುತಿಸಿದವರ ನೆರೆ ಪಾಲಿಸುತಿಹನು ಅತುಳ ಶಂಖದಿಂ ಭೌಂ ಭೌಂ ಎನಿಸುತ ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ ಗೋವಿಂದನು ರಭಸದಿ ಭಕ್ತನೂಳಿಗಾ1 ಮಂದಜಭವ ಮುಖ್ಯಾಮರ ವೃಂದವು ನಂದತನುಜನಾರಂದಲೀಲೆಯಂ ಛಂದದಿ ನೋಡುತ ನಭೋಮಾರ್ಗದೊಳ್ ಬಂದು ಕುಸುಮಗಳ ವೃಷ್ಟಿಯ ಸುರಿದು ಸಿಂಧುಶಯನ ನಾಮಾಮೃತ ಸುರಿದು ಬೃಂದಾರಕ ನಿಕರವು ಕೈಯೆತ್ತಿ ಇಂದುಕಲಾಧಿಪ ಪ್ರಾರ್ಥನೆ ಸೈ ಸೈ ಎಂದು ದೇವದುಂದುಭಿ ಧೋಂ ಧೋಂ ಕಂಸಾ- ಳದರವ ಖಿಣಿಖಿಣಿ ಖಿಣಿ ಭೇರಿ ನಾದ ಖಡ್ ಖಡ್ ಖಡಲ್ ಭಾರಿ ತಾ- ಹತಜಂತರಿಧೂಂ ನರ್ತನಗೈವುತ ತೆರಳುತ 2 ಮಂಗಳ ರವದಿಂ ಜಯಜಯ ಎನಿಸುತ ಮಂಗಳಾಂಗಿ ರುಕ್ಮಿಣಿ ವಲ್ಲಭನು ರಂಗಿನಿಂದ ರಥವಿಳಿದು ಗೆಳೆಯನ ಮುಂಗೈಯನೆ ಪಿಡಿದು ಅಂಗಜನಯ್ಯ ರಂಗುಮಣಿಯ ಉಂಗುರದಿ ಒಪ್ಪುತಲಿ ಭಂಗಾರಕೆ ಮಿಗಿಲೆನಿಪ ದುಕೂಲದಿ ಶೃಂಗರದಲ್ಲಿ ಉತ್ತುಂಗ ಪರಾಕ್ರಮ ಅಂಗಳದೋಳ್ ನಲಿದಾಡುತ ರಂಗನು ತಿಂಗಳ ಕುಲದೀಪನ್ನ ನೋಡುತಲಿ ರಂಗ ಕದರುಂಡಲಗೀಶನ ಒಡೆಯನು ತಾ 3
--------------
ಕದರುಂಡಲಗೀಶರು