ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಕರ್ಮವಿಲ್ಲ ಆವ ಧರ್ಮವಿಲ್ಲವೋ |ಕೇವಲಾನಂದಭಾವ ಬೋಧದಲ್ಲಿ ಬೆರೆಯಲು ಪ ತನುವು ಬೇರೆ ಮನವು ಬೇರೆ | ಮನದ ಒಳಗೆ ನೆನಹು ಬೇರೆ | ತನುವು ಮನವು ನೆನವಿಗಿನ್ನು | ಸಾಕ್ಷಿಯಾಗಿಹ | ಚಿನುಮಯಾತ್ಮ ತಾನೆ ತನಗೆ | ಜನನ ಮರಣ ಎಂಬುದೆಲ್ಲ | ಮನದ ಆಟವೆಂದು ತಿಳಿದು | ಉನ್ಮನದಿ ಘನದಿ ನಲಿವಗೆ 1 ಸತ್ಯ ಶರಣರಡಿಯ ಪಿಡಿದು | ತತ್ತ್ವ ಶಾಸ್ತ್ರವನ್ನು ತಿಳಿದು |ನಿತ್ಯಾನಿತ್ಯವನು ವಿವರಿಸುತಲಿ | ಭಕ್ತಿಯಿಂದಲಿ ||ನಿತ್ಯ ಪೂರ್ಣ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು |ಚಿತ್ತದಲ್ಲಿ ತಿಳಿದುಕೊಂಡು | ಮಿಥ್ಯವೆಲ್ಲ ಕಳೆದಗೆ 2 ಹಿಂದಾದುದ ನೆನಿಸಲಿಲ್ಲ | ಮುಂದೆ ಒಂದು ಬಯಸಲಿಲ್ಲ |ಬಂದುದೆಲ್ಲ ಸುಖವು ಎಂದು ಶಾಂತದಿಂದಲಿ ||ತಂದೆ ಭವತಾರಕನ | ಹೊಂದಿ ಪೂರ್ಣ ವಸ್ತುವಾಗಿ |ಬಂಧನವನು ಕಡಿದು ಕೊಂಡು | ಆನಂದದಲಿರುವವಗೆ 3
--------------
ಭಾವತರಕರು
ಎದ್ದರಾಳಲ್ಲೆಂದು ಬಿದ್ದಿರುವೆನೊ ನಾನು ಮಧ್ವರಮಣನೆ ದಯದಿ ಉದ್ಧರಿಸೆಲೊ ಪ ಏನು ಮಾಡಿದರೇನು ಮಾಡದಿದ್ದರೆ ಏನು ಕಾಣಲಾರೆನೊ ನೀನೆ ತಿಳಿಸಿ ಪೊರೆಯೊ ಕಾನನದಿ ತಿರುತಿರುಗಿ ತೊಳಲಿ ಬಳಲುತಲಿ ಬಲು ದೀನನಾದೆನೊ ಶಕುತಿಯುಕುತಿ ಹೋಗಿ1 ನುಡಿದೆ ನಾ ನೂರೆಂಟು ಅಡಿಯಿಡಲು ಬಲು ಕುಂಟು ಕಡೆಗಾಲದರಿವಾಗಿ ಬಳಲುತಿಹೆನೊ ಸಡಲಿತೆನ್ನಯ ದೇಹ ಸಿಡಿಯಿತೆನ್ನಯ ಮೋಹ ನಡೆಯಾಟವೆನಗಿನ್ನು ಸಾಧ್ಯವಿಲ್ಲವು ದೇವ 2 ಕೊಟ್ಟರೆ ಹೊಗಳುವರು ಕೊಡದಿರಲು ಬೊಗಳುವರು ಕೊಟ್ಟೆನ್ನ ಕರವೆರಡು ಬೆಂಡಾದವೊ ಸುಟ್ಟಿತೆನ್ನಯ ಕೋಪ ನಿಷ್ಠುರದಿ ಬೇಸತ್ತು ಇಷ್ಟು ಜೀವನ ಸಾಕೊ ಕೃಷ್ಣ ಮೂರುತಿಯೇ3 ಗುಣವಿಲ್ಲ ಧನವಿಲ್ಲ ತನುವಿಲ್ಲ ಮನವಿಲ್ಲ ಹೊಣೆ ಹೊರೆವುದೆಂತೆಂದು ಕೈ ಬಿಡದಿರೊ ತೃಣ ಗಿರಿಯನೊದೆಯುವುದು ಒನಕೆ ತಾ ಚಿಗುರುವುದು ವನಜನಾಭನೆ ನಿನ್ನ ಮನಕೆ ಬರಲು 4 ನಾನೇನು ಬಲ್ಲೆ ನಿನಗೇನು ರುಚಿಯೆಂಬುದನು ನಾನರಿತರೂ ನಿನಗೆ ಕೊಡಬಲ್ಲನೆ ನಾನೇಕೆ ಜನಿಸಿದೆನೋ ನೀ ಬಲ್ಲೆ ನಾನರಿಯೆ ಏನೆಂದು ಕೋರದೆಲೆ ಪೊರೆಯಬೇಕೊ 5 ಸಾಯುವರ ನೋಡಿ ಮನ ನೋಯುವುದು ಮೂರುಕ್ಷಣ ಮಾಯಾಪಾಶವು ಮುಸುರೆ ಮರೆವುದೆಲ್ಲ ಪ್ರಾಯದವನಂತೆ ಬಲು ಹೇಯ ಕೃತ್ಯಗಳಾಸೆ ನಾಯಿಬಾಲದ ಡೊಂಕು ತಿದ್ದಿ ಪೊರೆಯೊ 6 ನಂಬಿದವರೆಲ್ಲ ಬಲು ಸಂಭ್ರಮದಲಿರುವರೊ ಅಂಬಿಗನ ತೆರನಾದೆ ನದಿ ದಾಟಿಸಿ ತುಂಬಿರುವ ಮನದಾಸೆ ಹಂಬಲಿಕೆ ನೀಡಿ ತಿರಿ ದುಂಬುವನ ಕನಸಿನಂತಾದವೆನಗೆÀ7 ಇಂದು ನಾನಿಟ್ಟಿಲ್ಲ ಮುಂದೆ ಎನಗೇನು ಬೇಕೆಂದರಿಯೆನೊ ಹಿಂದಾದುದಂತಿರಲಿ ಇಂದಿರುವದಿರಲಿ ಮನ ಮಂದಿರದ ದಾನವರ್ಪಿಸುವೆ ನಿನಗೆ 8 ಮನೆಗೆ ತಾ ಯಜಮಾನ ಕೆಣಕೆ ಬದುಕುವರುಂಟೆ ಕುಣಿಯುತಿದ್ದರು ಜನರು ನುಡಿದ ತೆರದಿ ತನುಸಡಲಿ ಬೀಳಲದ ಕೊನೆಗಾಲವೆಂದರಿತು ಮನೆ ಹೊರಗೆ ಕಸದಂತೆ ಬಿಸುಡುವುದ ನೋಡಿ9 ತುಂಬು ಸಂಸಾರದಲಿ ಸಂಭ್ರಮವನೇಕಗಳು ಸಂಭ್ರಮದಿ ನಿನ್ನ ಹಂಬಲವೇತಕೆ ಕಂಬ ಸಡಲಿದ ಮನೆಯ ತೆರದಿ ದೇಹವು ಸಡಲೆ ಡೊಂಬನಾಟವನಾಡಿ ಚಂಬು ಪಿಡಿದಂತೆ 10 ಕೆಲಸವಿರುವಾಗ ಬಲು ಹೊಲಸು ನಿದ್ರೆಯ ಮಾಡಿ ಹೊಲಸು ವಿಷಯದಿ ಬಹಳ ಎಚ್ಚೆತ್ತೆನೊ ಕಲಿಯು ಕರೆದೌತಣವನಿತ್ತೆ ನಾ ಬಹುವಿಧದಿ ಬಲಿಕೊಡುವ ಕುರಿಯಂತೆ ಬಳಲುತಿರುವೆನೊ ದೇವ 11 ಮರೆವು ಜನತೆಗೆ ದೊಡ್ಡವರವೆಂದು ನೀ ಕೊಟ್ಟೆ ಗಿರಿಯಂಥ ಕಷ್ಟಗಳ ಮರೆಯಲಾಯ್ತೊ ಅರಿವು ಕೊಡದಂತೆ ನಾ ಮರೆತೆನೆಂಬಪರಾಧ ಸರಿತೂಗುವುದೆ ಇದಕೆ ಗುರಿ ಯಾರೊ ದೇವ 12 ಸಾಧು ಜನರಿರುವರೊ ಮೇಧಾವಿಗಳು ಇಹರೊ ಮಾದರಿಯ ಜೀವನವ ತೋರ್ಪರಿಹರೊ ಸಾಧುವಲ್ಲವೊ ನಾನು ಮೇಧಾವಿಯಲ್ಲ ಹೊಸ ಮಾದರಿಯ ತಿರುಕನೆಂದರಿತು ಪೊರೆಯೊ13 ಅರೆಕ್ಷಣವು ನಿನ್ನನು ಸ್ಮರಿಸಲಾರದ ಜನರು ಅರಮನೆಗಳಲ್ಲಿ ವಾಸಿಸುವುದೇಕೊ ಕರಚರಣವಿಲ್ಲದ ಕಪೋತಿಕ ನಿನ್ನಯ ನಾಮ ಕಿರಿಚುತಿರುವುದ ನೋಡಿ ಹರುಷವದೇಕೊ 14 ಗಿಣಿಯಂತೆ ರಾಮ ರಾಮ ಎಂದರೇನು ಫಲ ಫಣಿಯಂತೆ ಸಾಷ್ಟಾಂಗ ನಮಿಸಲೇನು ಋಣಿಯಂತೆ ಧನಿಕನಲ್ಲಿ ಹಲ್ಲುಗಳ ಕಿರಿದರೇನು ಮನವಿಟ್ಟು ಕೆಲಸ ಮಾಡುವುದರಿಯದೆ 15 ಮನಕೆ ಬಂದುದನೆಲ್ಲ ಮಾಡÀುವವರಿರುವರೊ ಮನಕೆ ಶಾಂತಿಯ ಮಾಡುವವರ ಕಾಣೆ ಕನಕವೆರಿಚಿದರಿಲ್ಲ ವನವ ಸೇರಿದರಿಲ್ಲ ಮನಮಂದಿರದಲಿ ನೀ ಇಣಿಕಿನೋಡುವ ತನಕ 16 ಲಂಚಗಳ ಕೊಟ್ಟು ಫಲಗಳ ಬೇಡುವವನಲ್ಲ ಸಂಚುಮಾಡಲು ಶಕುತಿ ಯುಕುತಿಯಿಲ್ಲ ವಂಚಕರ ಬಹುಮತ ಪ್ರಪಂಚದಲಿ ನೀನೊಬ್ಬ ಹೊಂಚು ಕಾಯುತಲಿರುವ ಎಂಬುದರಿತು 17 ರೈಲು ಬಂಡಿಗಳಲಿ ಐಲುಪೈಲುಗಳನ್ನು ಮೌಲ್ಯವಿಲ್ಲದೆ ಸಾಗಿಸುವುದನರಿತು ಕಾಲು ಕಣ್ಣೆಲ್ಲದ ಕಪೋತಿಯೊ ನಾನೊಂದು ಮೂಲೆಯಲಿ ಕುಳಿತು ಬರಲವಕಾಶವೀಯೊ 18 ನಿನ್ನ ಗುಣಗಳನರಿಯೆ ನಿನ್ನ ವರ್ಣಿಸಲರಿಯೆ ನಿನ್ನ ಸೇರಲು ಎನಗುಪಾಯವಿಲ್ಲ ಕನ್ನ ಕತ್ತರಿಯ ಕಾಣಿಕೆಯೊಂದೆ ಸಾಧ್ಯವೊ ಇನ್ನು ತಲೆ ಎತ್ತಿನೊ ಪ್ರಸನ್ನನಾಗುವ ತನಕ 19
--------------
ವಿದ್ಯಾಪ್ರಸನ್ನತೀರ್ಥರು
ಏಳು ಏಳೆನುತ ಭಾನು ಬರುತಿಹ |ಹೇಳುವರ್ಯಾರಿಲ್ಲ ನಿಮಗೆ ಜ್ಞಾನವ ಪ ಇರುಳೆಲ್ಲ ನೀವಿನ್ನು ವಿಷಯಕೆ ಮರುಳಾಗಿ |ಹರಟಿಯೊಳಗೆ ಸೊರಗುತಿಹರೀ ||ತರಳಾಕ್ಷಿಯರ ಅಂಗಸಂಗಕೆ ಬೆಂಡಾಗಿ |ಬರದ ಆಯುಷ್ಯ ಬರಿದೇ ಕಳೆವಿರೀ 1 ಮಾಡಲಿಲ್ಲವು ಧ್ಯಾನ ಯೋಗ ಜಪ ತಪ |ನೀಡಲಿಲ್ಲವು ದಾನ ಧರ್ಮವ ||ನೋಡಲಿಲ್ಲವು ಸಾಧುಸಂತರ ನಡತೆಯ |ಕೇಡ ಬಂದಿತು ಮುಂದೆ ನೋಡಲು 2 ತಂದೆ ಭವತಾರಕನೆ ಹಿಂದಾದುದಾಗಲಿ |ಮುಂದಾರ ನೀವಿನ್ನು ಒಂದು ನಿಮಿಷವು |ಗೊಂದಲ ಬಿಟ್ಟು ಅರಿತು ಕೊಂಡು | ಹೊಂದಿರಿ ಪೂರ್ಣ ಆನಂದವನೆಂದು 3
--------------
ಭಾವತರಕರು
ಬುದ್ಧಿಯ ನಾನೇ ಹೇಳುವೆ ಎಲೆ ಎಂಗರವಟ್ಟೆಬುದ್ಧಿಯ ನಾನು ಹೇಳುವೆಬುದ್ಧಿಯ ನಾನು ಹೇಳುವೆ ಶುದ್ಧ ಬ್ರಹ್ಮನು ನೀನು ಎಲೆ ಎಂಗರವಟ್ಟೆ ಪ ಸತಿ ಎಲ್ಲಿ ಹಿಂದಣ ಸುತರೆಲ್ಲಿಹಿಂದಾದುದನು ಬಿಟ್ಟು ಇಂದಿದು ನನ್ನದೆಂಬೆ ಎಲೆ ಎಂಗರವಟ್ಟಿ 1 ಮುಂದಾವ ಜನ್ಮ ಭೋಗಿಪೆಯೋ ಎಲೆ ಎಂಗರವಟ್ಟೆಮುಂದಾರ ಮದುವೆಯಹೆ ಎಲೆ ಎಂಗರವಟ್ಟೆಮುಂದಣ ತಾಯಿ ಯಾರು ಮುಂದಣ ತಂದೆ ಯಾರುಮುಂದಣ ಹಿಂದಣದರಿಯೆ ಇಂದಿನದು ಎನ್ನದೆಂಬೆ ಎಲೆ ಎಂಗರವಟ್ಟಿ2 ಭಿಕ್ಷವ ಹಾಕಲಾರಿ ಎಲೆ ಎಂಗರವಟ್ಟೆ ಕುಕ್ಷಿಗೆ ತಿನ್ನಲಾರಿಲಕ್ಷ ಹೊನ್ನುಗಳನ್ನು ನೆತ್ತಿಗೆ ಇಟ್ಟುಕೊಂಬೆಯಾ ಎಲೆ ಎಂಗರವಟ್ಟೆ 3 ತನುವಿದು ತನ್ನದೆಂಬೆ ಎಲೆ ಎಂಗರವಟ್ಟೆ ತನುವನು ನೋಡಿಕೊಂಬೆನಿನ್ನ ಮುಂದೆಯೇ ತನು ತಾನು ಹೋಗುವುದುತನುವದು ನಿನಗಿಲ್ಲ ತನು ಸಂಬಂಧವೆಂತೋ ಎಲೆ ಎಂಗರವಟ್ಟೆ4 ಹಿಡಿಯೋ ಗುರುಪಾದವನು ಎಲೆ ಎಂಗರವಟ್ಟೆ ಪಡೆಯೋ ಕಟಾಕ್ಷವನುಸಡಿಲದೇ ದೃಷ್ಟಿಯನು ತಿರುಹಿ ನಿನ್ನೊಳಗಿಟ್ಟುಒಡೆಯ ಚಿದಾನಂದನು ನೀನಾಗಿ ನೀನಿರು 5
--------------
ಚಿದಾನಂದ ಅವಧೂತರು
ಶ್ರೀ ಪ್ರಹ್ಲಾದ ಚರಿತ್ರೆ ಅಧ್ಯಾಯ ಒಂದು ಪದ ಆದಿಯಲಿ ಲಕ್ಷ್ಮೀಸಹಿತ ಪ್ರಹ್ಲಾದವರದನ ಪಾದಕೊಂದಿಸಿ ಬೋಧನಿಧಿ ಮಧ್ವಾದಿ ಗುರುಗಳ ಪಾದಕೊಂದಿಸುತಾ ಕೇಳುವರ ಮನಕಾ ಲ್ಹಾದ ಕೊಡುತಿರುವಂಥ ಶ್ರೀ ಪಹ್ಲಾದ ಚರಿತವನು 1 ಸಹಿತಾಗಿ ಪರಮಾ ನಂದದಿಂದ ವಿಹಾರ ಮಾಡುತ ಚಂದದಿಂದಿರಲು ಬಂದರಾ ಕಾಲದಲಿ ಸನಕ ಸನಂದನಾದಿಗಳಲ್ಲೆ ಬೇಡೆಂ ತೆಂದು ಆ ಜಯವಿಜಯರವನು ಹಿಂದುಕೊತ್ತಿದರು 2 ಮೂರುಜನ್ಮದೊ ಳಸುರರಾಗಿರಿ ನೀವು ಹೀಗೆಂತೆಂದು ಶಾಪಿಸಲು ಅಸುರರಾಘ್ಯುಟ್ಟಿದರು ಶಾಪದಿ ಹುಸಿಯದಾಗದು ದೊಡ್ಡವರು ಕೋಪಿಸುತ ನುಡಿದದ್ದು 3 ದಿತಿಯ ಸುತರಾಗ್ಯವರು ಮುಂದಕೆ ಪ್ರಥಿತರಾದರು ದ್ವಿತೀಯ ಹಿರಣ್ಯಾಕ್ಷಾ ಪೃಥಿವಿಯನು ಮುಣುಗಿಸಿದ ಕಾರಣ ಅತಿರಭಸದಲೆ ಕೊಂದು ಮತ್ತಾ ಪೃಥಿವಿಯನು ತಂದಾ 4 ತನ್ನ ಅನುಜನ ನಾಶವನು ಕೇಳುತಲೆ ಮನದಲಿ ಕ್ಲೇಶವನು ಪಟ್ಟು ಶ್ರೀಸುರೇಶನ ಮೇಲೆ ಬಹಳಾಕ್ರೋಶದಿಂದಲೆ ನಡೆದ ತಪಸಿಗೆ ದೋಷ ರಹಿತಾನಂತಾದ್ರೀ±ನÀ ದ್ವೇಷಿತಾನಾಗಿ5 ವಚನ ಸುರರು ಆ ಸಂಧಾನ ಯುದ್ಧವ ಮಾಡಿ ಕೊಂದುಹಾಕಿದರು ಆ ಇಂದ್ರನಾ ಕಂಡು ಒಂದು ನೋಡದೆ ಪ್ರಾಣ ಒಂದು ಉಳಿದರೆ ಸಾಕು ಯೆಂದು ಓಡಿದರು 1 ಅಡಗಿರಲು ದೇವೇಂದ್ರ ಬಂದು ನಡತೆ ಕಂಡವನ ಬಿಡು ಬೇಗ ಈಕೆಯ ನಿಮಗೆ ಕೆಡಕು ಕೊಡುತೆಲ್ಲರ ಮುಂದೆ ನುಡಿದನಾ ರಾಜನ ಮಡದಿಗೀಪರಿಯು 2 ರಾಗ ಅಂಜಿಕೆಯ ಬಿಡಿಸುವೆನಮ್ಮಾ ಪ ಪುಟ್ಟುವನಮ್ಮಾ ಸಂದರ್ಭವನು ತಿಳಿಸುವೆನಮ್ಮಾ 1 ಸ್ಮರಿಸುವನು ಹರಿಗುಣಗಳಮ್ಮಾ ಗಭಯ ಕಾಣಮ್ಮಾ 2 ಅಭಯದಾನಂತಾದ್ರೀಶನ ಭಕ್ತನಮ್ಮಾ ನಿಶ್ಚಿಂತೆಯಿಂದಲಿ ನೀನಿರಮ್ಮಾ 3 ರಾಗ ಕೇಳಿ ಅರ್ಭಾಟವು ಗರ್ಭಿಣಿಯುದರದಲಿರುವಾ ನಡೆದರು ಅರ್ಭಕನಾ ಸ್ಮರಿಸಿ 1 ಕೊಟ್ಟು ತಂದೆಯ ಪರಿ ಮುಂದಾಕೆಯು ನಾರದನ ಬೇಡಿದಳು ವಂದಿಸಿ ವರಗಳನ್ನು2 ಭೋ ಮಹಾ ಮುನಿಯೇ ಮಾತನು ಕೇಳುತಲೆ ಆ ಮಹಾ ಮುನಿ ನಾರದನು ಪ್ರೇಮದಿ ನುಡಿದನು ಕೊಟ್ಟಕಾಮಿತ ವರಗಳನ್ನು 3 ನಿನಗಿನ್ನು ಪರತತ್ವವÀ ನೀ ಕೇಳಮ್ಮಾ ಹರಿಮಹಿಮೆಯ ಹರುಷವ ಕೊಡುತಿಹುದು 4 ಪರಿ ಗರ್ಭದಲಿ ಇರುವನೆ ವರದಾನಂತಾದ್ರೀಶನ ಸ್ಮರಿಸುತ ಪರಮೇಷ್ಠಿಯ ಸುತನು 5 ವಚನ ತಪವನು ಮಾಡಿ ಮನಸಿನೊಳಗಿಟ್ಟು ಪಾದದುಂಗುಷ್ಠವನು ನೆಟ್ಟನೆ ಮೇಲೆತ್ತಿ ಘಟ್ಯಾಗಿ ನಿಂತಾ 1 ಸುಡತಲೆ ಸಕಲ ಕಣವಿದು ಮುಚ್ಚಿತು ಅವನ ಭಯದಲಿ ತಮ್ಮ ಭವನ ಅವನ ಮುಂದು ಸುರಿದರು ಅವನ ಕಥೆಯಾ ಸಕಲ ಭುವನ ಪಾಲಕರೂ 2 ರಾಗ ಮೊರೆಯ ಕೇಳೋ ನೀನುಪ ಹಿರಣ್ಯ ಕಶಿಪು ಮೂಜಗ ಸಂಹರಿಸುವನಯ್ಯ ಅ.ಪ ದಿಟ್ಟ ಕೇಳವನ ವಿಶಿಷ್ಟ ಕಥೆಯ ಪಾದಾಂಗುಷ್ಟದಿಂದಲಿ ಭೂಮಿ ಮೆಟ್ಟಿನಿಂತಿ- ಮಂದರಾದ್ರಿಯಲ್ಲಿರುವಾ 1 ಉಪವಾಸದಿಂದುಗ್ರ ತಪಸಿ ಲೋಕಗಳನೆಲ್ಲ ಸುಡುವಾ 2 ರೋಷದಿ ಮಾಡುವಾ ದ್ಷೇಷ ನಮ್ಮಲ್ಲೆ ನಿತ್ಯದಲ್ಲೆ ನಿತ್ಯದಲ್ಲೆ ಅನಂತಾದ್ರೀಶನಲ್ಲೆ 3 ವಚನ ಮಾಡುವ ಚರ್ಯಾ ಹತ್ತಿತಾ ಹಂಸವನು ಸತ್ವರದಿ ಕಂಡು ನೆತ್ತಿಯಾ ಮೇಲಗ್ನಿ ಬೆಳದಿಹದಲ್ಲೆ ಸುತ್ತಲೆ ನುಡಿದನು ಬ್ರಹ್ಮದೈತ್ಯ ಗೀಪರಿಯ 1 ರಾಗ ಹಿರಣ್ಯ ಕಶಿಪು ಏಳು ಏಳು ಏಳು ಬೇಗನೇ ಪ ಮಾತು ನಿನ್ನ ಭಾಳ ತಪಸಿಗಾಗಿ ನಾನು ಭಾಳ ಮೆಚ್ಚಿದೆನೋ ಇನ್ನು ಅ.ಪ ಹೋದುವಯ್ಯಾ ಮತ್ತು ತಪಸಿ ನಲ್ಲಿ ನೀನು ಚಿತ್ತಮಾಡಬೇಡ ಬಿಟ್ಟು 1 ಕೊಡುವೆನು ವರಗಳನ್ನು ದಾನವೇಶ ಎನ್ನ ನೋಡು ಮೌನಬಿಟ್ಟು ಮಾತನಾಡು 2 ಬಲ್ಲಿದವನೋ ನೀನು ಬೇಡಿ ದ್ದೆಲ್ಲ ನಾನು ಕೊಡುವೆ ನಿನಗೆ 3 ವಚನ ಮನ್ನಿಸಿದನಾ ದೇಹವನ್ನು ಘನ್ನದಿವ್ಯೋದಕದಿ ಚೆನ್ನಾಗಿ ಘನ್ನ ದೈತ್ಯನು ಎದ್ದು ಮುನ್ನನತಿ ಸ್ತುತಿಮಾಡಿ ಹಿರಣ್ಯ ಕಶಿಪಿಂತು 1 ರಾಗ ಮರಣ ಬೇಡಾ ಧರೆಯೊಳು ನಿನ್ನಿಂದ್ಹುಟ್ಟಿರುವ ಪ್ರಾಣಿಗಳಿಂದ ಮರಣಬೇಡಾ 1 ಮರಣ ಬೇಡ ಇಳೆ ಯೊಳೆನಗಾಕಾಶದೊಳೆನಗೆ ಮತ್ತು ಮರಣ ಬೇಡಾ 2 ಮರಣ ಬೇಡಾ ಮೃಗಗಳೊಗ್ಹೆಚ್ಚಿನ ಮೃಗಗಳಿಂದಾದದರು ಮರಣ ಬೇಡಾ 3 ಮರಣಬೇಡಾ ನರರಿಂದ ವಿಷವುಳ್ಳ ಹರಿವ ಹಾವುಗಳಿಂದ ಮರಣ ಬೇಡಾ 4 ವಿಸ್ತಾರವಾದ ದೇ ವಾಸ್ತ್ರಗಳಿಂದಲಿ ಮರಣಬೇಡಾ 5 ಮರಣಬೇಡಾ ಅಂತಕ ನಾದ ಅನಂತಾದ್ರೀಶನ ಮುಂಚೆ ಸ್ಮರಣೆ ಬೇಡಾ 6 ರಾಗ ಹಾಗೆ ಆಗಲಿ ಎಂದು ಸಾಗಿದತಾನು ಆಗೆದ್ದು ಮದವೇರಿದ ನಾಗೇಂದ್ರನಂತೆ ಬೇಗ ಮನೆಯಲಿ ಬಂದಸಾಗಿ ದೈತ್ಯೇಂದ್ರಾ 1 ತಂದು ಒಪ್ಪಿಸಿದಾತಗೆ ಚಂದಾಗಿ ಮುನಿಯು ಹಿಂದಾದುದೆಲ್ಲಾತನ ಮುಂದೆ ತಿಳಿಸಿದನು ಮುಂದಾ ಸ್ಥಳವನು ಬಿಟ್ಟು ಬಂದಾ ಸ್ವಸ್ಥಳಕೆ
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀರಮಾಧವಾಶ್ರೀತಜನಪಾಲಿತ ಮಾರಕೋಟಿರೂಪ ವಾರಿಧಿಶಯನ ಮುರಾರಿ ಕೇಶವ ಶ್ರೀಮ- ನ್ನಾರಾಯಣ ನೀರಜದಳಲೋಚನಪ. ಮಾನುಷತ್ವವಾಂತ ಸಮಯದಿ ಹೀನ ಭೋಗದ ಚಿಂತೆ ನಾನು ನೀನೆಂಬಾಭಿಮಾನದಿ ಮನಸು ನಿ- ಧಾನವಿಲ್ಲದೆ ಅನುಮಾನದಿಂದಿಹುದೈ ಏನು ಕಾರಣ ಹೃದಯನಳಿದೊಳು ನೀನೆ ನೆಲಸಿಕೊಂಡೀ ನರಯೋನಿಗೆ ನೀನೆ ಬರಿಸಿಯವಮಾನ ಬಡಿಸುವದು ಊನವಲ್ಲವೆ ಪದದಾಣೆ ಸತ್ಯವಿದು1 ಬಾಲಕತನದೊಳಗೆ ಕಾವ್ಯದ ಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನ ಬಾಲಭೂಷಿತಂಗಳ ಕೇಳೈ ಶ್ರೀಲಕ್ಷ್ಮೀಲೋಲ ವೆಂಕಟರಾಯ ಕಾಲಕಾಲಪ್ರಿಯ ಪಾಲಿಸೊಲಿದು ಕರು- ಣಾಲವಾಲ ನತಪಾಲಶೀಲ ಮುನಿ ಜಾಲವಂದ್ಯ ವನಮಾಲದಾರಿ ಜಗ ಮೂಲಸ್ವರೂಪ ವಿಶಾಲ ಗುಣಾರ್ಣವ2 ಹಿಂದಾದುದನರಿಯೆ ಇದರಿಂ ಮುಂದಾಗುವುದು ತಿಳಿಯೆ ಹಿಂದು ಮುಂದಿಲ್ಲದೆ ಬಂಧನದೊಳು ಬಲು ನೊಂದೆನೈ ನಿನಗಿದು ಚಂದವೆ ಶ್ರೀಹರಿ ತಂದೆ ತಾಯಿ ಬಂದು ಬಾಂಧವ ಬಳಗ ನೀ ನೆಂದು ನಿನ್ನಯ ಪದದ್ವಂದ್ವವ ಭಜಿಪಾ ನಂದಸುಜ್ಞಾನದಿಂದೆಂದಿಗೂ ಸುಖ ದಿಂದಿರುವಂದದಿ ತಂದೆ ನೀ ಪಾಲಿಸು3 ಧಾರಿಣಿಗಧಿಕವಾದ ಮೆರೆವ ಕು ಮಾರಧಾರೆಯ ತಟದ ಚಾರುನೇತ್ರಾವತಿ ತೀರ ಪಶ್ಚಿಮ ಭಾಗ ಸಾರಿ ತೋರುವ ವಟಪುರದೊಳು ನೆಲಸಿಹ ವೀರ ವೆಂಕಟಪತಿ ವಾರಿಜನಾಭ ಖ- ರಾರಿ ತ್ರಿದಶಗಣವಾರವಂದ್ಯ ಭಾ- ಗೀರಥೀಪಿತ ದುರಿತಾರಿ ದೈತ್ಯಸಂ- ಹಾರಿ ಶ್ರೀಲಕ್ಷ್ಮೀನಾರಾಯಣ ಹರಿ4
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀರಮಾಧವಾಶ್ರೀತಜನಪಾಲಿತಮಾರಕೋಟಿರೂಪ ವಾರಿಧಿಶಯನಮುರಾರಿ ಕೇಶವ ಶ್ರೀಮ-ನ್ನಾರಾಯಣ ನೀರಜದಳಲೋಚನ ಪ.ಮಾನುಷತ್ವವಾಂತ ಸಮಯದಿಹೀನ ಭೋಗದ ಚಿಂತೆ ನಾನುನೀನೆಂಬಾಭಿಮಾನದಿ ಮನಸು ನಿ-ಧಾನವಿಲ್ಲದೆ ಅನುಮಾನದಿಂದಿಹುದೈಏನು ಕಾರಣ ಹೃದಯನಳಿದೊಳುನೀನೆ ನೆಲಸಿಕೊಂಡೀ ನರಯೋನಿಗೆನೀನೆ ಬರಿಸಿಯವಮಾನ ಬಡಿಸುವದುಊನವಲ್ಲವೆ ಪದದಾಣೆ ಸತ್ಯವಿದು 1ಬಾಲಕತನದೊಳಗೆ ಕಾವ್ಯದಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನಬಾಲಭೂಷಿತಂಗಳ ಕೇಳೈಶ್ರೀಲಕ್ಷ್ಮೀಲೋಲ ವೆಂಕಟರಾಯಕಾಲಕಾಲಪ್ರಿಯ ಪಾಲಿಸೊಲಿದು ಕರು-ಣಾಲವಾಲ ನತಪಾಲಶೀಲ ಮುನಿಜಾಲವಂದ್ಯ ವನಮಾಲದಾರಿ ಜಗಮೂಲಸ್ವರೂಪ ವಿಶಾಲ ಗುಣಾರ್ಣವ 2ಹಿಂದಾದುದನರಿಯೆ ಇದರಿಂಮುಂದಾಗುವುದು ತಿಳಿಯೆ ಹಿಂದುಮುಂದಿಲ್ಲದೆ ಬಂಧನದೊಳು ಬಲುನೊಂದೆನೈ ನಿನಗಿದು ಚಂದವೆ ಶ್ರೀಹರಿತಂದೆ ತಾಯಿ ಬಂದು ಬಾಂಧವ ಬಳಗ ನೀನೆಂದು ನಿನ್ನಯ ಪದದ್ವಂದ್ವವ ಭಜಿಪಾನಂದಸುಜ್ಞಾನದಿಂದೆಂದಿಗೂ ಸುಖದಿಂದಿರುವಂದದಿ ತಂದೆ ನೀ ಪಾಲಿಸು 3ಧಾರಿಣಿಗಧಿಕವಾದ ಮೆರೆವ ಕುಮಾರಧಾರೆಯ ತಟದ ಚಾರುನೇತ್ರಾವತಿತೀರ ಪಶ್ಚಿಮ ಭಾಗ ಸಾರಿತೋರುವ ವಟಪುರದೊಳು ನೆಲಸಿಹವೀರ ವೆಂಕಟಪತಿವಾರಿಜನಾಭಖ-ರಾರಿ ತ್ರಿದಶಗಣವಾರವಂದ್ಯ ಭಾ-ಗೀರಥೀಪಿತ ದುರಿತಾರಿ ದೈತ್ಯಸಂ-ಹಾರಿ ಶ್ರೀಲಕ್ಷ್ಮೀನಾರಾಯಣಹರಿ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ