ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡಿರ್ಯಾ ನೀವು ಕಂಡಿರ್ಯಾ ಮಂಡಲದೊಳು ನಿಜ ಕಂಡಿರ್ಯಾ ಧ್ರುವ ಮಂಡೆಯ ಮರೆಯಲ್ಯ ಖಂಡವಾಗಿಹುದು 1 ಪಿಂಡಬ್ರಹ್ಮಾಂಡಕೆ ಭೇದದೋರದಿದು 2 ಹಿಂಡದೈವಕ ತಾಪ್ರಚಂಡನಾಗಿಹುದು 3 ಕಂಡವರಾಶ್ರಯ ಪಂಡಿತರಿಗೆ ಪ್ರಿಯ 4 ಕಂಡವರಕಂಡು ಕೂಡಿಕೊಂಬುದಿದು 5 ನೋಡಿದವರ ಕೂಡ ನೋಟಮಾಳಾಹುದು6 ಮೂಢ ಮಹಿಪತಿ ಪ್ರಾಣದೊಡೆಯನಾಗಿಹ್ಯ ನಿಜ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಗುರು ಮೈಲಾರಿ ಮನಮೈಲ ಮರ್ದಿಸಿದಯ್ಯ ನೀನೆ ಅಸುರಾರಿ ಧ್ರುವ ಖಡ್ಗವ ಕರದಲಿ ಪಿಡಿದು ಖಂಡಿಸಿದಙÁ್ಞನ ಖಂಡೇರಾಯೆನಿಸಿಕೊಂಡು ಪ್ರಕಟಿಸಿದನುದಿನ ಹಿಂಡದೈವಕೆ ಪ್ರಚಂಡನಹುದೊ ಪರಿಪೂರ್ಣ ಮಂಡಲದೊಳು ನಿಮ್ಮ ಕೊಂಡಾಡುದು ತಾ ಸುರಜನ 1 ಮಲಹರಣ ಮಾಡಲು ಧರಿಸಿ ಅವತಾರ ಮೂಲೋಕ ಪಾವನಮಾಡುವ ಸಹಕಾರ ಸಲಹುವೆ ಭಕ್ತಜನರಿಗೆ ನೀ ಘನ ಮಂದಾರ ಮಲೆತಿಹ ದೈತ್ಯರ ಸಂಹರಿಸುವೆ ನೀ ಅತಿಶೂರ 2 ಪತಿ ಅಹದು ಶ್ರೀಗುರು ಭೂಪತಿ ಬಾಹ್ಯಾಂತ್ರಿ ಬೆಳಗುವೆ ಶ್ರೀಪಾದಕೆ ಆರ್ತಿ ಇಹಪರಕೆ ದಾತನಹುದೊ ಶ್ರೀಪತಿ ಜಯಜಯವೆಂದು ಬೆಳಗುವೆ ದಾಸ ಮಹಿಪತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಖದಕ್ಕಿತೇ | ಸುಖದಕ್ಕಿತು ಗುರುದಯ ಲೆಕ್ಕಾ ಪ ಕಂಡವರ ಮಾತಿಗೆ ಮನವಿಟ್ಟು ಜಗದೊಳು | ಹಿಂಡದೈವಕ ಬಾಯಿದೆರುತ್ತಿದ್ದೆನೆ | ಮಂಡಿಯ ಮ್ಯಾಲೆನ್ನಾ ಕರವಿಟ್ಟು ಹೊಳೆವಾ ಪಿಂಡಾಂಡದಿ ಗಂಡನ ತೋರಿದನಕ್ಕ 1 ಇಲ್ಲೆಂಬ ಸಂಶಯ ಹೋಯಿತು ಒಳಹೊರ | ಗೆಲ್ಲೆಲ್ಲಿ ನೋಡಲು ತಾನಾದನೇ | ಫುಲ್ಲನಾಭನ ಕೂಡಿ ತನುಭಾವ ಮರದು | ಕೈವಲ್ಯ ಮಂದಿರ ಸಾರಿದೆನಕ್ಕಾ 2 ಏನ ಹೇಳಲಿ ಆಡು ತಾಡುತಾ ಯಡಹಿನಿ | ಧಾನವ ಕಂಡಂತಾಯಿತೇ | ಮಾನುಭಾವರಸಾದ ತಂದೆ ಮಹಿಪತಿ | ತಾನೊಲಿದೆನ್ನನುದ್ಧರಿಸಿದನಕ್ಕಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು