ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಡೆದು ಬಾರೆ ಹರಿಯ ರಮಣಿ ನಡಮುಡೀಯ ಹಾಸುವೆ ನಡಮುಡೀಯ ಹಾಸಿ ನಿನಗೆ ಕರವ ಮುಗಿದು ಬೇಡುವೇ ಪ. ಚರಣಕೆ ಪಾದ್ಯವನಿತ್ತು ವರ ಕ್ಷೀರದಧಿ ಘೃತ ವರ ಮಧು ಶರ್ಕರಾದಿಂ ಹರುಷದುಡಿಗೆ ತೊಡಿಸುವೆ 1 ನಿನ್ನನರಿಶಿನ ಕುಂಕುಮ ಚನ್ನ ಗಂಧ ಪುಷ್ಪದಿಂದ ಸಂಪನ್ನೆ ನಿನ್ನ ಪೂಜಿಪೆ 2 ಘನ್ನ ನೈವೇದ್ಯವರ್ಪಿಸಿ ರನ್ನದಾರುತಿ ಬೆಳಗುವೆ ಇನ್ನು ಎನ್ನ ತಪ್ಪ ಮನ್ನಿಸೆ ನಿನ್ನ ರಮಣ ಶ್ರೀ ಶ್ರೀನಿವಾಸನರಸಿಯೇ ಇನ್ನು ತೋರಲು ಬೇಗದಿ 3
--------------
ಸರಸ್ವತಿ ಬಾಯಿ
ಬಂಟನಾಗಿ ಬಾಗಿಲ ಕಾಯ್ವೆ ಹರಿಯ ಪ ವೈಕುಂಠದ ಸೊಂಪಿನ ದಾಸರ ಮನೆಯ ಅ ಹೊರಸುತ್ತು ಪ್ರಾಕಾರ ನಾ ಸುತ್ತಿ ಬರುವೆಬರುವ ಹೋಗುವರ ವಿಚಾರಿಸುತಿರುವೆಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಶ್ರೀಹರಿಯ ಸಮ್ಮುಖದ ಓಲಗದೊಳಿರುವೆ 1 ತೊತ್ತು ತೊಂಡನಾಗಿ ಬಾಗಿಲ ಕಾಯ್ವೆಚಿತ್ರದ ಚಾವಡಿ ರಜವನು ಬಳಿವೆಮುತ್ತಿನ ರಂಗವಲ್ಲಿಯನಿಟ್ಟು ಬರೆವೆರತ್ನಗಂಬಳಿ ಹೊತ್ತು ಹಾಸುವೆನು 2 ವೇಳೆವೇಳೆಗೆ ನಾನೂಳಿಗವ ಮಾಡುವೆಆಲವಟ್ಟಿಗೆ ಚಾಮರವ ಬೀಸುವೆತಾಳದಂಡಿಗೆ ಭೃಂಗಿ ಮೇಳಗಳ ಕೂಡಿ ಶ್ರೀಲೋಲನ ಕೊಂಡಾಡಿ ಪಾಡುವೆನು 3 ಎಂಜಲ ಹರಿವಾಣಂಗಳ ಬೆಳಗುವೆಕಂಜನಾಭನ ಪಾದಕಮಲವ ತೊಳೆವೆರಂಜಿಪ ಕುಸುಮದ ಮಾಲೆ ತಂದಿಡುವೆಸಂಜೆಗೆ ಪಂಜಿನ ದಾಸನಾಗಿರುವೆ 4 ಮೀಸಲೂಳಿಗವ ನಾ ಮಾಡಿಕೊಂಡಿರುವೆಶೇಷ ಪ್ರಸಾದವ ಉಂಡುಕೊಂಡಿರುವೆಶೇಷಗಿರಿ ಕಾಗಿನೆಲೆಯಾದಿಕೇಶವನದಾಸರ ದಾಸರ ದಾಸರ ಮನೆಯ 5
--------------
ಕನಕದಾಸ
ಬಂದು ಹೃದಯಮಂದಿರದೊಳಗೆಕೂಡೋ ಕೇಶವಮಾಧವ ಪ ತಂದೆಯೆನಾಂ ವಂದಿಪೆನೋ ಕಂದನ ಕುಂದನೆಣಿಸದೆ ಅ.ಪ ಭ್ರಮರ ಕೀಟನ್ಯಾಯದಿ ಬೇಗದಿ ತಾನೆ ತಾ ತನ್ಮಯತೇ ದಿವ್ಯಮಂಗಳ ವಿಗ್ರಹನೇ 1 ನಾಲಗೆಯ ನಡೆಮುಡಿ ಹಾಸುವೆ ಪಾಲ ಸುಮೃದುಪದಾ ಶುಭದ ನೀನೊಲಿಯುತೆ ನಲಿದು 2 ಗಾತ್ರ ಮೂರ್ತಿ ಶ್ರೀಕರ ತಂಗದಿರಾ ಬೆಂಗದಿರಾ ಶಂಕಚಕ್ರ ಚತುರ್ಭುಜ 3 ಸಂಚಿತವೆಂತೋ ಸ್ವಾಮಿ ಹಂಚಿ ನಿನ್ನ ಸೇವೆಯ ಗೈಸುತ 4 ಮುನಿಜನಗಳ ಪೊರೆವುದು ಹೆಚ್ಚೇ ಚಿನುಮಯಾತ್ಮನೇ ಚೆನ್ನಿಗ ಅಣುಗನು ನಾನಜ್ಞಾನಿ ಕನಿಕರದೆನ್ನ ಕಾಯ್ದರೆ ಕೀರ್ತಿ 5 ಮಾಯಮುಚ್ಚಿ ಕಾಯನೆಚ್ಚಿ ನೋಯುತ್ತಿಹೆನೋ ನರಹರಿ ಜೀಯ ಜಾಜೀಶಹರಿ ರಾಮ ರಕ್ಷಿಸು ಶ್ರೇಯ ಕೊಟ್ಟು6
--------------
ಶಾಮಶರ್ಮರು
ನಿಲ್ಲಬೇಕಯ್ಯಾ ನೀನು ಕೃಷ್ಣಯ್ಯಾನಿಲ್ಲಬೇಕಯ್ಯಾ ನೀನು ಪನಿಲ್ಲಬೇಕಯ್ಯಾ ನೀಮಲ್ಲಮರ್ದನಸಿರಿವಲ್ಲಭಎನ್ನ ಹೃದಯದಲಿ ಸತತಅ.ಪಸುಪ್ಪಾಣಿಮುತ್ತಿಟ್ಟು ನೋಡುವೆ ನಿನ್ನಚಪ್ಪಾಳಿ ತಟ್ಟುತ ನಾ ಪಾಡುವೆ ||ಅಪ್ಪ ಶ್ರೀ ಕೃಷ್ಣ ನಿನ್ನನೆತ್ತಿ ಮುದ್ದಿಸಿಕೊಂಬೆಸರ್ಪಶಯನ ಕೃಪೆ ಮಾಡೆಂದು ಬೇಡುವೆ 1ಚೆಂದದ ಹಾಸಿಗೆ ಹಾಸುವೆಪುನಗುಗಂಧದ ಕಸ್ತೂರಿಯ ಪೂಸುವೆ ||ತಂದು ಮುದದಿ ಮುತ್ತಿನ ಹಾರ ಹಾಕುವೆಅಂದದಿಂದಲಿ ನಿನ್ನನೆತ್ತಿ ಮುದ್ದಿಸಿಕೊಂಬೆ 2ನೀಲದ ಕಿರೀಟವನಿಡುವೆ ಬಲುಬಾಲಲೀಲೆಗಳನು ಪಾಡುವೆ ||ಚೆಲ್ವ ಶ್ರೀಪುರಂದರವಿಟ್ಠಲರಾಯನೆನಿಲ್ಲು ಎನ್ನ ಮನದಲಿ ಒಂದೇ ಗಳಿಗೆ 3
--------------
ಪುರಂದರದಾಸರು
ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನನಾಗಶಯನ ನಾರದವಂದಿತನೆ ದೇವಾ ಪಮಂಗಳಾಭಿಷೇಕಕೆಉದಕತರುವೆನೆನೆಗಂಗೆಯ ಅಂಗುಟದಿ ಪಡೆದಿಹೆಯೊ ||ಸಂಗೀತ ಕೀರ್ತನೆ ಪಾಡುವೆನೆಂದರೆಹಿಂಗದೆ ತುಂಬುರ ನಾರದರು ಪಾಡುವರೊ 1ಪುಷ್ಪವ ತಂದು ನಿನಗರ್ಪಿಸುವೆನೆಂದರೆಪುಷ್ಪ ಫುಲ್ಲಯಿಸಿದೆ ಹೊಕ್ಕುಳಲಿ ||ಮುಪ್ಪತ್ತು ಮೂರ್ಕೋಟಿ ದೇವತೆಗಳು ನಿನಗೊಪ್ಪಯಿಸೆ ನೈವೇದ್ಯ ನಿತ್ಯತೃಪ್ತನು ನೀನು 2ಕೋಟಿಸೂರ್ಯರ ಕಾಂತಿ ಮಿಗಿಲಾದವನಿಗೊಂದುಮೋಟು ದೀವಿಗೆ ಬೆಳಗೆ ಬೆಳಕಹುದೆ? ||ಸಾಟಿಗಾಣದಸಿರಿಉರದೊಳು ನೆಲಸಿರೆಪೋಟುಗಾಸನು ಎಂತು ಕಾಣಿಕೆಯಿಡಲಯ್ಯ 3ಹಾಸಿಗೆಯನು ನಿನಗೆ ಹಾಸುವೆನೆಂದರೆಶೇಷನ ಮೈಮೇಲೆ ಪವಡಿಸಿಹೆ ||ಬೀಸಣಿಕೆಯ ತಂದು ಬೀಸುವೆನೆಂದರೆಆಸಮೀರಣ ಚಾಮರವ ಬೀಸುತಿಹನೋ4ನಿತ್ಯಗುಣಾರ್ಣವ ನಿಜಸುಖ ಪರಿಪೂರ್ಣಸತ್ತು ಚಿತ್ತಾನಂದ ಸನಕಾದಿ ವಂದ್ಯ ||ಮುಕ್ತಿದಾಯಕ ನಮ್ಮಪುರಂದರವಿಠಲನುಭಕ್ತಿಪ್ರಿಯನು ಎಂದು ಭಜಿಸಿ ಕೊಂಡಾಡುವೆ 5
--------------
ಪುರಂದರದಾಸರು